ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಷ್ಯಾ ಕಪ್ 2022: ರಿಷಭ್ ಪಂತ್‌ಗೆ ಹೊಸ ಬ್ಯಾಟಿಂಗ್ ಕ್ರಮಾಂಕ ನೀಡಿದ ಶ್ರೀಲಂಕಾ ಮಾಜಿ ನಾಯಕ

Asia Cup 2022: Former Sri Lanka Captain Mahela Jayawardene Gives New Batting Order To Rishabh Pant

ಭಾರತೀಯ ಕ್ರಿಕೆಟ್ ತಂಡದ ಮ್ಯಾನೇಜ್‌ಮೆಂಟ್ 2022ರ ಏಷ್ಯಾ ಕಪ್‌ಗೆ ಬ್ಯಾಕ್‌ಅಪ್ ಓಪನರ್ ಆಗಿಯೂ ಇಶಾನ್ ಕಿಶನ್ ಅವರನ್ನು ಆಯ್ಕೆ ಮಾಡಲಿಲ್ಲ. ಬದಲಿಗೆ, ಅವರು ರಿಷಭ್ ಪಂತ್ ಮತ್ತು ಸೂರ್ಯಕುಮಾರ್ ಯಾದವ್‌ನಂತಹ ಆಟಗಾರರಿಗೆ ಬ್ಯಾಟಿಂಗ್ ತೆರೆಯಲು ಅವಕಾಶವನ್ನು ನೀಡಿದರು.

"ಸದ್ಯ ತಂಡದ ಓಪನರ್ ಬ್ಯಾಟ್ಸ್‌ಮನ್‌ಗಳಾಗಿ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಇದ್ದಾರೆ. ಅವರಲ್ಲಿ ಯಾರಾದರೂ ಗಾಯಗೊಂಡು ವಿಶ್ರಾಂತಿ ಪಡೆದಲ್ಲಿ ರಿಷಭ್ ಪಂತ್ ಅಥವಾ ಸೂರ್ಯಕುಮಾರ್ ಆಡಬಹುದು. ಆದಾಗ್ಯೂ, ಶ್ರೀಲಂಕಾ ತಂಡದ ಮಾಜಿ ನಾಯಕ ಮಹೇಲಾ ಜಯವರ್ಧನೆ ಅವರು ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರು ಭಾರತದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಬೇಕು," ಎಂದು ಸಲಹೆ ನೀಡಿದ್ದಾರೆ.

Asia Cup 2022: ದಿನೇಶ್ ಕಾರ್ತಿಕ್ ಉತ್ತಮ ಫಿನಿಶರ್ ಆದರೆ, ನಿಜವಾದ ಫಿನಿಶರ್‌ಗಳು ಬೇರೆ; ಕ್ರಿಸ್ ಶ್ರೀಕಾಂತ್Asia Cup 2022: ದಿನೇಶ್ ಕಾರ್ತಿಕ್ ಉತ್ತಮ ಫಿನಿಶರ್ ಆದರೆ, ನಿಜವಾದ ಫಿನಿಶರ್‌ಗಳು ಬೇರೆ; ಕ್ರಿಸ್ ಶ್ರೀಕಾಂತ್

"ಭಾರತವು ಯಾವಾಗಲೂ ಮುಂದಿನ ಪೀಳಿಗೆಯ ಕ್ರಿಕೆಟಿಗರನ್ನು ತರಲು ಪ್ರಯತ್ನಿಸುತ್ತಿದೆ' ಎಂದು ಐಸಿಸಿ ರಿವ್ಯೂ ಪಾಡ್‌ಕ್ಯಾಸ್ಟ್‌ನಲ್ಲಿ ಮಹೇಲಾ ಜಯವರ್ಧನೆ ಹೇಳಿದರು. "ಜಿಂಬಾಬ್ವೆ ಪ್ರವಾಸವು ಭಾರತದ ಹುಡುಗರಿಗೆ ಅಲ್ಲಿ ಹಿಟ್ ಪಡೆಯಲು ಉತ್ತಮ ಅವಕಾಶವಾಗಿದೆ. (ರಿಷಭ್ ಪಂತ್ ಇನ್ನಿಂಗ್ಸ್ ಆರಂಭಿಸಿದ ಮೇಲೆ) ಅವರು ದೇಶೀಯ ಕ್ರಿಕೆಟ್‌ನಲ್ಲಿ ಹೆಚ್ಚಿನ ಸಾಧನೆ ಮಾಡದಿದ್ದರೂ ಇದು ಒಂದು ಆಯ್ಕೆಯಾಗಿದೆ. ಆದರೆ ಅದನ್ನು ಮುಂದುವರೆಸುವ ಸಾಮರ್ಥ್ಯ ಪಂತ್‌ಗಿದೆ," ಎಂದರು.

ವಿರಾಟ್ ಕೊಹ್ಲಿ ಫಾರ್ಮ್ ದುರದೃಷ್ಟಕರ

ವಿರಾಟ್ ಕೊಹ್ಲಿ ಫಾರ್ಮ್ ದುರದೃಷ್ಟಕರ

ಇನ್ನು ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಭಾರತೀಯ ತಂಡಕ್ಕೆ ಮರಳಿದ್ದು, ವಿರಾಟ್ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯನ್ನು ಕಳೆದುಕೊಂಡ ನಂತರ ಈಗ ಪ್ರತಿಷ್ಠಿತ ಏಷ್ಯಾಕಪ್‌ಗೆ ಮರಳಿದ್ದಾರೆ. ಕಳೆದ ಎರಡು ವರ್ಷಗಳಿಂದ ಫಾರ್ಮ್ ಇಲ್ಲದ ಕಾರಣ ವಿರಾಟ್ ಕೊಹ್ಲಿ ಅವರನ್ನು ಭಾರತ ತಂಡದಿಂದ ಕೈಬಿಡಬಹುದು ಎಂಬ ಊಹಾಪೋಹಗಳಿದ್ದವು. ಆದಾಗ್ಯೂ, ಭಾರತ ತಂಡದ ಮ್ಯಾನೇಜ್‌ಮೆಂಟ್ ಸ್ಟಾರ್ ಆಟಗಾರನಿಗೆ ಬೆಂಬಲ ನೀಡುವುದನ್ನು ಮುಂದುವರೆಸಿದೆ.

"ಈ ಸಮಯದಲ್ಲಿ ವಿರಾಟ್ ಕೊಹ್ಲಿ ಅನುಭವಿಸುತ್ತಿರುವ ಕಳಪೆ ಫಾರ್ಮ್ ದುರದೃಷ್ಟಕರ. ಆದರೆ ಅವರು ಗುಣಮಟ್ಟದ ಆಟಗಾರ ಎಂದು ನಾನು ಭಾವಿಸುತ್ತೇನೆ. ಇದು ರಾಹುಲ್ ದ್ರಾವಿಡ್ ಮತ್ತು ಮ್ಯಾನೇಜ್‌ಮೆಂಟ್ ವಿರಾಟ್ ಕೊಹ್ಲಿ ಜೊತೆ ನಡೆಸಬಹುದಾದ ಸಂಭಾಷಣೆಯಾಗುತ್ತಿತ್ತು. ಕೆಲವು ಸಕಾರಾತ್ಮಕ ಸಂಭಾಷಣೆಗಳು ನಡೆದಿವೆ ಎಂದು ನಾನು ಭಾವಿಸುತ್ತೇನೆ," ಎಂದು ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ ಹೇಳಿದರು.

ಕಳಪೆ ಫಾರ್ಮ್‌ನಿಂದ ಹೊರಬರಲು ಕೊಹ್ಲಿ ಬಳಿ ತಂತ್ರಗಳಿವೆ

ಕಳಪೆ ಫಾರ್ಮ್‌ನಿಂದ ಹೊರಬರಲು ಕೊಹ್ಲಿ ಬಳಿ ತಂತ್ರಗಳಿವೆ

"ಆಟಗಾರನ ಕ್ಲಾಸ್ ಶಾಶ್ವತವಾದದ್ದು, ಫಾರ್ಮ್ ತಾತ್ಕಾಲಿಕ. ಅದರಿಂದ ಹೊರಬರಲು ವಿರಾಟ್ ಕೊಹ್ಲಿ ಬಳಿ ತಂತ್ರಗಳಿವೆ ಎಂಬುದು ನನ್ನ ನಂಬಿಕೆ. ಈ ಹಿಂದೆಯೂ ಅದನ್ನೇ ಮಾಡಿದ್ದಾರೆ. ಕೊಹ್ಲಿ ಬ್ಯಾಟಿಂಗ್‌ನಲ್ಲಿ ಉತ್ತಮ ಫಾರ್ಮ್‌ಗೆ ಮರಳುತ್ತಾನೆ ಎಂದು ನನಗೆ ಖಾತ್ರಿಯಿದೆ," ಎಂದು 45 ವರ್ಷ ವಯಸ್ಸಿನ ಶ್ರೀಲಂಕಾ ಮಾಜಿ ಕ್ರಿಕೆಟಿಗ ಮಹೇಲಾ ಜಯವರ್ಧನೆ ಆಶಯ ವ್ಯಕ್ತಪಡಿಸಿದರು.

2022ರ ಏಷ್ಯಾಕಪ್ ಗೆಲ್ಲಲು ಶ್ರೀಲಂಕಾ, ಪಾಕಿಸ್ತಾನ ಮತ್ತು ಭಾರತ ನಡುವೆ ಪೈಪೋಟಿ ಏರ್ಪಡಲಿದೆ ಎಂದು ಜಯವರ್ಧನೆ ಹೇಳಿದ್ದು, "ಆ ಎರಡರಲ್ಲಿ ಒಬ್ಬರು (ಭಾರತ ಅಥವಾ ಪಾಕಿಸ್ತಾನ) ಫೈನಲ್‌ಗೆ ಬರುತ್ತಾರೆ. ಅನುಕೂಲವೆಂದರೆ ಬಹುಶಃ ಭಾರತ, ಶ್ರೀಲಂಕಾ ಮತ್ತು ಪಾಕಿಸ್ತಾನದ ನಡುವೆ ತೀವ್ರ ಸ್ಪರ್ಧೆ ಏರ್ಪಡಲಿದೆ. ನನ್ನ ಪ್ರಕಾರ ಈ ಮೂರು ತಂಡಗಳಲ್ಲಿ ಒಂದು ಏಷ್ಯಾ ಕಪ್ ಗೆಲ್ಲುವ ತಂಡವಾಗಲಿದೆ," ಎಂದು ಮಹೇಲಾ ಜಯವರ್ಧನೆ ತಿಳಿಸಿದರು.

ಶಸ್ತ್ರ ಚಿಕಿತ್ಸೆ ನಂತರ ಟೆಂಪಲ್ ರನ್ ಮಾಡುತ್ತಿರುವ KL Rahul !! | *Cricket | OneIndia Kannada
ಏಷ್ಯಾ ಕಪ್ 2022ಗೆ ಭಾರತದ ಪೂರ್ಣ ತಂಡ

ಏಷ್ಯಾ ಕಪ್ 2022ಗೆ ಭಾರತದ ಪೂರ್ಣ ತಂಡ

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್, ರಿಷಭ್ ಪಂತ್ (ವಿಕೆಟ್ ಕೀಪರ್), ದೀಪಕ್ ಹೂಡಾ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜುವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್.

ಬ್ಯಾಕ್ ಅಪ್: ಶ್ರೇಯಸ್ ಅಯ್ಯರ್, ದೀಪಕ್ ಚಾಹರ್, ಅಕ್ಷರ್ ಪಟೇಲ್.

Story first published: Wednesday, August 10, 2022, 21:22 [IST]
Other articles published on Aug 10, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X