ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs PAK: ಮೊದಲ ಪಂದ್ಯದಲ್ಲಿ ಹೀರೊ ಆಗಿ ಮೆರೆದ ಭಾರತದ ಇಬ್ಬರು ದ್ವಿತೀಯ ಪಂದ್ಯದಲ್ಲಿ ವಿಲನ್ಸ್!

Asia Cup 2022: Hardik Pandya Bhuvneshwar Kumar both turned as villains in super 4 against Pakistan

ಪ್ರಸ್ತುತ ಯುಎಇ ದೇಶದಲ್ಲಿ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದ ಪಂದ್ಯಗಳು ಆರಂಭಗೊಂಡಿವೆ. ಈ ಹಂತದ ದ್ವಿತೀಯ ಪಂದ್ಯದಲ್ಲಿ ನಿನ್ನೆ ( ಸೆಪ್ಟೆಂಬರ್ 4 ) ಭಾರತ ಮತ್ತು ಪಾಕಿಸ್ತಾನ ತಂಡಗಳು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿದ್ದವು.

IND vs PAK: ಸೂಪರ್ 4 ಸೋಲಿಗೆ ಅರ್ಷ್‌ದೀಪ್ ಕ್ಯಾಚ್ ಬಿಟ್ಟದ್ದೇ ಕಾರಣ; ಕೊಹ್ಲಿ ಹೇಳಿದ್ದಿಷ್ಟು!IND vs PAK: ಸೂಪರ್ 4 ಸೋಲಿಗೆ ಅರ್ಷ್‌ದೀಪ್ ಕ್ಯಾಚ್ ಬಿಟ್ಟದ್ದೇ ಕಾರಣ; ಕೊಹ್ಲಿ ಹೇಳಿದ್ದಿಷ್ಟು!

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ ಬಳಗ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ ವಿರಾಟ್ ಕೊಹ್ಲಿ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ 181 ರನ್ ಕಲೆಹಾಕಿ ಎದುರಾಳಿ ಪಾಕಿಸ್ತಾನ ತಂಡಕ್ಕೆ ಗೆಲ್ಲಲು 182 ರನ್‌ಗಳ ಕಠಿಣ ಗುರಿಯನ್ನು ನೀಡಿತ್ತು. ಆದರೆ ತಂಡದ ಕಳಪೆ ಬೌಲಿಂಗ್ ಪ್ರದರ್ಶನದ ಕಾರಣ ಪಾಕಿಸ್ತಾನ 19.5 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 182 ರನ್ ಕಲೆಹಾಕಿ 5 ವಿಕೆಟ್‍ಗಳ ರೋಚಕ ಜಯವನ್ನು ಸಾಧಿಸಿತು.

Asia Cup 2022: ಪಾಕ್ ವಿರುದ್ಧದ ಪಂದ್ಯದ ಬೆನ್ನಲ್ಲೇ ಅರ್ಷ್‌ದೀಪ್ ಭಾರತೀಯನಲ್ಲ ಎಂದ ವಿಕಿಪಿಡಿಯಾ!Asia Cup 2022: ಪಾಕ್ ವಿರುದ್ಧದ ಪಂದ್ಯದ ಬೆನ್ನಲ್ಲೇ ಅರ್ಷ್‌ದೀಪ್ ಭಾರತೀಯನಲ್ಲ ಎಂದ ವಿಕಿಪಿಡಿಯಾ!

ಇನ್ನು ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ನಡೆದ ಉಭಯ ತಂಡಗಳ ನಡುವಿನ ಎರಡನೇ ಮುಖಾಮುಖಿಯ ಪಂದ್ಯ ಇದಾಗಿದ್ದು, ಇದಕ್ಕೂ ಮುನ್ನ ನಡೆದಿದ್ದ ಗ್ರೂಪ್ ಹಂತದ ಪಂದ್ಯದಲ್ಲಿ ಇತ್ತಂಡಗಳ ನಡುವೆ ನಡೆದಿದ್ದ ಪ್ರಥಮ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಟೀಮ್ ಇಂಡಿಯಾ ಸೋಲುಣಿಸಿತ್ತು. ಅಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಉತ್ತಮ ಪ್ರದರ್ಶನ ನೀಡಿ ನಾಯಕರಾಗಿ ಮಿಂಚಿದ್ದ ಇಬ್ಬರು ದ್ವಿತೀಯ ಪಂದ್ಯದಲ್ಲಿ ತಂಡಕ್ಕೆ ಖಳನಾಯಕರಾಗಿ ಪರಿಣಮಿಸಿದರು. ಆ ಆಟಗಾರರು ಯಾರು ಮತ್ತು ಅಂದು ಅವರು ನೀಡಿದ ಪ್ರದರ್ಶನಕ್ಕೂ ಈ ಪಂದ್ಯದಲ್ಲಿ ನೀಡಿದ ಪ್ರದರ್ಶನಕ್ಕೂ ಇರುವ ವ್ಯತ್ಯಾಸವೇನು ಎಂಬುದರ ಕುರಿತ ವಿವರ ಕೆಳಕಂಡಂತಿದೆ.

ಹಾರ್ದಿಕ್ ಪಾಂಡ್ಯ

ಹಾರ್ದಿಕ್ ಪಾಂಡ್ಯ

ಪಾಕಿಸ್ತಾನದ ವಿರುದ್ಧ ಗ್ರೂಪ್ ಹಂತದಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತದ ಗೆಲುವಿನ ರೂವಾರಿಯಾಗಿ ಗುರುತಿಸಿಕೊಂಡು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದ ಹಾರ್ದಿಕ್ ಪಾಂಡ್ಯ ಆ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿ 25 ರನ್ ನೀಡಿ 3 ವಿಕೆಟ್ ಪಡೆಯುವುದರ ಜತೆಗೆ 17 ಎಸೆತಗಳಲ್ಲಿ ಅಜೇಯ 33 ರನ್ ಕಲೆಹಾಕಿ ವಿನ್ನಿಂಗ್ ಸಿಕ್ಸರ್ ಬಾರಿಸಿ ಮಿಂಚಿದ್ದರು. ಹೀಗೆ ಪಾಕ್ ವಿರುದ್ಧದ ಪ್ರಥಮ ಪಂದ್ಯದಲ್ಲಿ ಮಿಂಚಿದ್ದ ಹಾರ್ದಿಕ್ ಪಾಂಡ್ಯ ಪಾಕ್ ವಿರುದ್ಧದ ಸೂಪರ್ 4 ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿ ಕೇವಲ ಒಂದೇ ಒಂದು ವಿಕೆಟ್ ಪಡೆದು 44 ರನ್ ನೀಡಿ ಪಂದ್ಯದಲ್ಲಿ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ಬೌಲರ್ ಎನಿಸಿಕೊಂಡರು ಹಾಗೂ ಬ್ಯಾಟಿಂಗ್‌ನಲ್ಲೂ ಮಕಾಡೆ ಮಲಗಿದ ಪಾಂಡ್ಯ 2 ಎಸೆತಗಳಲ್ಲಿ ಯಾವುದೇ ರನ್ ಕಲೆಹಾಕದೇ ಶೂನ್ಯ ಸುತ್ತಿದರು.

ಭುವನೇಶ್ವರ್ ಕುಮಾರ್

ಭುವನೇಶ್ವರ್ ಕುಮಾರ್

ಪಾಕ್ ವಿರುದ್ಧದ ಪ್ರಥಮ ಪಂದ್ಯದಲ್ಲಿ ಮಿಂಚಿ ದ್ವಿತೀಯ ಪಂದ್ಯದಲ್ಲಿ ಫ್ಲಾಪ್ ಆದ ಮತ್ತೋರ್ವ ಆಟಗಾರನೆಂದರೆ ಅದು ಭುವನೇಶ್ವರ್ ಕುಮಾರ್. ಅಂದಿನ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿ 26 ರನ್ ನೀಡಿ 4 ವಿಕೆಟ್ ಪಡೆದಿದ್ದ ಭುವನೇಶ್ವರ್ ಕುಮಾರ್ ಪಾಕ್ ವಿರುದ್ಧದ ಸೂಪರ್ 4 ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿ 40 ರನ್ ಬಿಟ್ಟುಕೊಟ್ಟು ಕೇವಲ 1 ವಿಕೆಟ್ ಪಡೆದರು. ಅದರಲ್ಲಿಯೂ ಪಾಕ್ ತಂಡಕ್ಕೆ ಗೆಲ್ಲಲು ಅಂತಿಮ 2 ಓವರ್‌ನಲ್ಲಿ 26 ರನ್ ಬೇಕಿದ್ದಾಗ 19ನೇ ಓವರ್ ಬೌಲಿಂಗ್ ಮಾಡಿದ ಭುವನೇಶ್ವರ್ ಕುಮಾರ್ 1 ಸಿಕ್ಸರ್ ಮತ್ತು 2 ಬೌಂಡರಿ ಚಚ್ಚಿಸಿಕೊಂಡು 6 ಎಸೆತಗಳಲ್ಲಿಯೇ 19 ರನ್ ಬಿಟ್ಟುಕೊಟ್ಟು ಪಂದ್ಯ ತಿರುವು ಪಡೆದುಕೊಳ್ಳುವಂತೆ ಮಾಡಿದರು. ಒಂದುವೇಳೆ ಭುವನೇಶ್ವರ್ ಕುಮಾರ್ ಈ ಓವರ್‌ನಲ್ಲಿ ರನ್ ನಿಯಂತ್ರಣ ಮಾಡಿದ್ದೇ ಆಗಿದ್ದರೆ ಪಂದ್ಯ ಭಾರತದ ಪರ ಇರುತ್ತಿತ್ತು.

Pakistanದ ವಿರುದ್ಧ ಸೇಡು ತೀರಿಸಿಕೊಳ್ಳೋದಕ್ಕೆ ಟೀಂ ಇಂಡಿಯಾಗಿದೆ ಮತ್ತೊಂದು ಚಾನ್ಸ್ *Cricket |Oneindia Kannada
ಚಾಹಲ್ ಎರಡೂ ಪಂದ್ಯಗಳಲ್ಲಿಯೂ ವಿಫಲ

ಚಾಹಲ್ ಎರಡೂ ಪಂದ್ಯಗಳಲ್ಲಿಯೂ ವಿಫಲ

ಇನ್ನು ಸ್ಪಿನ್ನರ್ ಯುಜುವೇಂದ್ರ ಚಾಹಲ್ ಈ ಪಂದ್ಯದಲ್ಲಿ ಮಾತ್ರವಲ್ಲದೆ ಪ್ರಥಮ ಪಂದ್ಯದಲ್ಲಿಯೂ ಕೂಡ ವಿಫಲರಾಗಿದ್ದರು. ಅಂದು 4 ಓವರ್ ಬೌಲಿಂಗ್ ಮಾಡಿ ಯಾವುದೇ ವಿಕೆಟ್ ಪಡೆಯದೇ 32 ರನ್ ಬಿಟ್ಟುಕೊಟ್ಟಿದ್ದರು ಹಾಗೂ ಈ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿ 1 ವಿಕೆಟ್ ಪಡೆದು 43 ರನ್ ಬಿಟ್ಟುಕೊಟ್ಟರು. ಹೀಗೆ ಚಾಹಲ್ ಮಾತ್ರ ಎರಡೂ ಪಂದ್ಯಗಳಲ್ಲಿಯೂ ಕಳಪೆ ಪ್ರದರ್ಶನ ನೀಡಿದರು.

Story first published: Monday, September 5, 2022, 15:44 [IST]
Other articles published on Sep 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X