ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Asia Cup 2022: ಪಾಕ್ ವಿರುದ್ಧ ಸೋತ ನಂತರ ಭಾರತಕ್ಕೆ ಫೈನಲ್ ಪ್ರವೇಶಿಸಲು ಉಳಿದಿರುವ ಮಾರ್ಗಗಳೇನು?

Asia Cup 2022: How can India qualify to final after lost the Super 4 match against Pakistan?

ಸದ್ಯ ಯುಎಇ ನೆಲದಲ್ಲಿ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಏಷ್ಯಾಕಪ್ ಟೂರ್ನಿಯ ಗ್ರೂಪ್ ಹಂತದ ಪಂದ್ಯಗಳು ಮುಕ್ತಾಯವಾಗಿದ್ದು, ಸೂಪರ್ 4 ಹಂತದ ಪಂದ್ಯಗಳು ಆರಂಭಗೊಂಡಿವೆ. ಸೆಪ್ಟೆಂಬರ್ 3ರಂದು ನಡೆದ ಈ ಹಂತದ ಪ್ರಥಮ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಶ್ರೀಲಂಕಾ ಜಯ ಸಾಧಿಸಿದರೆ, ನಿನ್ನೆ ( ಸೆಪ್ಟೆಂಬರ್ 4 ) ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಮುಖಾಮುಖಿ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಪಾಕಿಸ್ತಾನ 5 ವಿಕೆಟ್‍ಗಳ ರೋಚಕ ಜಯವನ್ನು ಸಾಧಿಸಿದೆ.

IND vs PAK: 181 ಬಾರಿಸಿಯೂ ಸೋತೆವು; ಪಾಕ್ ವಿರುದ್ಧದ ಸೋಲಿಗೆ ಕಾರಣ ಬಿಚ್ಚಿಟ್ಟ ರೋಹಿತ್ ಶರ್ಮಾ!IND vs PAK: 181 ಬಾರಿಸಿಯೂ ಸೋತೆವು; ಪಾಕ್ ವಿರುದ್ಧದ ಸೋಲಿಗೆ ಕಾರಣ ಬಿಚ್ಚಿಟ್ಟ ರೋಹಿತ್ ಶರ್ಮಾ!

ಹೀಗೆ ಸೂಪರ್ 4 ಹಂತದ ಮೊದಲೆರಡು ಪಂದ್ಯಗಳು ಮುಕ್ತಾಯವಾದ ನಂತರ ಅಂಕಪಟ್ಟಿಯಲ್ಲಿ ಶ್ರೀಲಂಕಾ ಅಗ್ರ ಸ್ಥಾನ ಪಡೆದುಕೊಂಡಿದ್ದರೆ ಪಾಕಿಸ್ತಾನ ದ್ವಿತೀಯ ಸ್ಥಾನದಲ್ಲಿದೆ ಹಾಗೂ ಮೂರನೇ ಸ್ಥಾನದಲ್ಲಿ ಭಾರತ ಮತ್ತು ನಾಲ್ಕನೇ ಸ್ಥಾನದಲ್ಲಿ ಅಫ್ಘಾನಿಸ್ತಾನ ತಂಡಗಳಿವೆ. ಹೀಗೆ ಪಾಕ್ ವಿರುದ್ಧ ಸೋಲನ್ನು ಅನುಭವಿಸಿರುವ ಟೀಮ್ ಇಂಡಿಯಾ ಅಂಕಪಟ್ಟಿಯಲ್ಲಿ ತೃತೀಯ ಸ್ಥಾನದಲ್ಲಿದ್ದು, ನಾಳೆ ( ಸೆಪ್ಟೆಂಬರ್ 6 ) ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲಿದೆ ಹಾಗೂ ಸೆಪ್ಟೆಂಬರ್ 8ರಂದು ಅಫ್ಘಾನಿಸ್ತಾನದ ವಿರುದ್ಧ ಸೆಣಸಾಟವನ್ನು ನಡೆಸಲಿದೆ.

IND vs PAK: ಎಲ್ಲಾ ಕೈಕೊಟ್ಟಾಗ ಆತ ಕೈಹಿಡಿದ; ಸೋತರೂ ತಂಡದ ಉತ್ತಮ ಆಟಗಾರನನ್ನು ಹೊಗಳಿದ ರೋಹಿತ್!IND vs PAK: ಎಲ್ಲಾ ಕೈಕೊಟ್ಟಾಗ ಆತ ಕೈಹಿಡಿದ; ಸೋತರೂ ತಂಡದ ಉತ್ತಮ ಆಟಗಾರನನ್ನು ಹೊಗಳಿದ ರೋಹಿತ್!

ಹೀಗೆ ಟೀಮ್ ಇಂಡಿಯಾ ಈ ಸೂಪರ್ 4 ಹಂತದಲ್ಲಿ ಇನ್ನೂ 2 ಪಂದ್ಯಗಳಲ್ಲಿ ಕಣಕ್ಕಿಳಿಯಲಿದ್ದು, ಪಾಕ್ ವಿರುದ್ಧ ಸೋತ ನಂತರ ಫೈನಲ್ ಪ್ರವೇಶಿಸಲು ಈ ಪಂದ್ಯಗಳಲ್ಲಿ ಹೇಗೆ ಗೆಲ್ಲಬೇಕು ಮತ್ತು ಭಾರತ ಫೈನಲ್ ಪ್ರವೇಶಿಸಲು ಇರುವ ಮಾರ್ಗವೇನು ಎಂಬುದರ ಕುರಿತಾದ ಮಾಹಿತಿ ಕೆಳಕಂಡಂತಿದೆ.

ಮುಂದಿನ ಎರಡೂ ಪಂದ್ಯಗಳನ್ನು ಟೀಮ್ ಇಂಡಿಯಾ ಕಡ್ಡಾಯವಾಗಿ ಗೆಲ್ಲಬೇಕು

ಮುಂದಿನ ಎರಡೂ ಪಂದ್ಯಗಳನ್ನು ಟೀಮ್ ಇಂಡಿಯಾ ಕಡ್ಡಾಯವಾಗಿ ಗೆಲ್ಲಬೇಕು

ಭಾರತ ಸೂಪರ್ 4 ಹಂತದಲ್ಲಿ ಆಡಲಿರುವ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ವಿರುದ್ಧದ ಪಂದ್ಯಗಳಲ್ಲಿ ಕಡ್ಡಾಯವಾಗಿ ಗೆಲ್ಲಲೇಬೇಕಿದೆ. ಹೀಗೆ ಟೀಮ್ ಇಂಡಿಯಾ ಈ ಎರಡೂ ಪಂದ್ಯಗಳನ್ನು ಗೆಲ್ಲುವುದರಿಂದ ಈಗಾಗಲೇ ಪಂದ್ಯವೊಂದರಲ್ಲಿ ಸೋತಿರುವ ಅಫ್ಘಾನಿಸ್ತಾನ ಟೂರ್ನಿಯಿಂದ ಎಲಿಮಿನೇಟ್ ಆಗಲಿದೆ.

ಟೀಮ್ ಇಂಡಿಯಾ ಮುಂದಿನ 2 ಪಂದ್ಯ ಗೆದ್ದು ಪಾಕ್ ಶ್ರೀಲಂಕಾ ವಿರುದ್ಧ ಗೆದ್ದರೆ ಫೈನಲ್ ಸುಲಭ

ಟೀಮ್ ಇಂಡಿಯಾ ಮುಂದಿನ 2 ಪಂದ್ಯ ಗೆದ್ದು ಪಾಕ್ ಶ್ರೀಲಂಕಾ ವಿರುದ್ಧ ಗೆದ್ದರೆ ಫೈನಲ್ ಸುಲಭ

ಇನ್ನು ಮೊದಲೇ ಹೇಳಿದಂತೆ ಟೀಮ್ ಇಂಡಿಯಾ ತನ್ನ ಮುಂದಿನ ಎರಡೂ ಪಂದ್ಯಗಳನ್ನು ಗೆದ್ದು, ಪಾಕಿಸ್ತಾನ ಶ್ರೀಲಂಕಾ ತಂಡವನ್ನು ಸೋಲಿಸಿದರೆ, ನೆಟ್ ರನ್ ರೇಟ್ ಮೇಲೆ ಅವಲಂಬಿತವಾಗದೇ ಟೀಮ್ ಇಂಡಿಯಾ ಪಾಕಿಸ್ತಾನದ ಜತೆ ಫೈನಲ್ ಸುತ್ತಿಗೆ ಲಗ್ಗೆ ಇಡಲಿದೆ.

ಶ್ರೀಲಂಕಾ ಎರಡೂ ಪಂದ್ಯ ಗೆದ್ದು, ಪಾಕ್ ಅಫ್ಘಾನ್ ವಿರುದ್ಧ ಸೋತರೆ ತಲೆನೋವು!

ಶ್ರೀಲಂಕಾ ಎರಡೂ ಪಂದ್ಯ ಗೆದ್ದು, ಪಾಕ್ ಅಫ್ಘಾನ್ ವಿರುದ್ಧ ಸೋತರೆ ತಲೆನೋವು!

ಇನ್ನು ಮೇಲ್ಕಂಡ ರೀತಿಯಲ್ಲಿ ಪಂದ್ಯಗಳು ಜರುಗಿದರೆ ಟೀಂ ಇಂಡಿಯಾ ಸುಲಭವಾಗಿ ಫೈನಲ್ ಪಂದ್ಯಕ್ಕೆ ಲಗ್ಗೆ ಇಡಲಿದೆ, ಒಂದುವೇಳೆ ಶ್ರೀಲಂಕಾ ತನ್ನ ಮುಂದಿನ 2 ಪಂದ್ಯಗಳನ್ನು ಗೆದ್ದರೆ ನೆಟ್ ರನ್ ರೇಟ್ ಮೇಲೆ ಅವಲಂಬಿತವಾಗಬೇಕಾಗುತ್ತದೆ. ಹೌದು, ಶ್ರೀಲಂಕಾ ಭಾರತ ಮತ್ತು ಪಾಕಿಸ್ತಾನ ತಂಡಗಳ ವಿರುದ್ಧದ ಪಂದ್ಯದಲ್ಲಿ ಗೆದ್ದು, ಪಾಕಿಸ್ತಾನ ಅಫ್ಘಾನಿಸ್ತಾನದ ವಿರುದ್ಧ ಸೋತು, ಭಾರತ ಅಫ್ಘಾನಿಸ್ತಾನದ ವಿರುದ್ಧ ಜಯ ಸಾಧಿಸಿದರೆ ಮಾತ್ರ ಅಂಕಪಟ್ಟಿಯಲ್ಲಿ ಶ್ರೀಲಂಕಾ ಅಗ್ರ ಸ್ಥಾನವನ್ನು ಆಕ್ರಮಿಸಿಕೊಳ್ಳಲಿದೆ ಹಾಗೂ ಎರಡನೇ ಸ್ಥಾನಕ್ಕಾಗಿ ಪಾಕಿಸ್ತಾನ ಮತ್ತು ಭಾರತದ ನಡುವೆ ಪೈಪೋಟಿ ಏರ್ಪಡಲಿದೆ. ಈ ರೀತಿಯ ಸಂದರ್ಭವೇನಾದರೂ ನಿರ್ಮಾಣವಾದರೆ ಭಾರತ ಅಫ್ಘಾನಿಸ್ತಾನದ ವಿರುದ್ಧ ದೊಡ್ಡ ಅಂತರದಲ್ಲಿ ಗೆದ್ದು ಪಾಕಿಸ್ತಾನಕ್ಕಿಂತ ಉತ್ತಮ ನೆಟ್ ರನ್ ರೇಟ್ ಕಾಪಾಡಿಕೊಳ್ಳಲೇಬೇಕಾಗುತ್ತದೆ.

ಲಂಕಾ ಎಲ್ಲಾ ಪಂದ್ಯ ಗೆದ್ದು, ಪಾಕ್ ಪಂದ್ಯ ಗೆದ್ದರೆ ಭಾರತ ಔಟ್!

ಲಂಕಾ ಎಲ್ಲಾ ಪಂದ್ಯ ಗೆದ್ದು, ಪಾಕ್ ಪಂದ್ಯ ಗೆದ್ದರೆ ಭಾರತ ಔಟ್!

ಇನ್ನು ಶ್ರೀಲಂಕಾ ಉಳಿದಿರುವ ಎರಡೂ ಪಂದ್ಯಗಳನ್ನು ಗೆದ್ದು, ಪಾಕಿಸ್ತಾನ ಅಫ್ಘಾನಿಸ್ತಾನದ ವಿರುದ್ಧ ಜಯ ಸಾಧಿಸಿದರೆ, ಟೀಮ್ ಇಂಡಿಯಾ ಟೂರ್ನಿಯಿಂದ ಹೊರ ಬೀಳಲಿದೆ. ಹೀಗಾಗಿ ಟೀಮ್ ಇಂಡಿಯಾ ತನ್ನ ಫೈನಲ್ ಪ್ರವೇಶವನ್ನು ಜೀವಂತವಾಗಿರಿಸಿಕೊಳ್ಳಬೇಕಿದ್ದರೆ ಉಳಿದಿರುವ ಎರಡೂ ಪಂದ್ಯಗಳನ್ನು ಕಡ್ಡಾಯವಾಗಿ ಗೆಲ್ಲಬೇಕಿದೆ.

ಅತಂತ್ರವಾಗುವ ಸಾಧ್ಯತೆ ಇದೆಯಾ?

ಅತಂತ್ರವಾಗುವ ಸಾಧ್ಯತೆ ಇದೆಯಾ?

ಇನ್ನು ಭಾರತ, ಪಾಕಿಸ್ತಾನ ಹಾಗೂ ಶ್ರೀಲಂಕಾ ಮೂರು ತಂಡಗಳೂ ಸಹ ತಲಾ ಎರಡು ಪಂದ್ಯಗಳನ್ನು ಗೆದ್ದರೆ ಮೂರು ತಂಡಗಳ ನಡುವೆ ಫೈನಲ್ ಪ್ರವೇಶಕ್ಕೆ ಪೈಪೋಟಿ ಏರ್ಪಡಲಿದೆ. ಹೀಗಾಗಬೇಕೆಂದರೆ ಭಾರತ ಉಳಿದ ಪಂದ್ಯಗಳೆರಡರಲ್ಲೂ ಗೆಲ್ಲಬೇಕು, ಶ್ರೀಲಂಕಾ ಪಾಕ್ ವಿರುದ್ಧ ಗೆಲ್ಲಬೇಕು ಹಾಗೂ ಪಾಕ್ ಲಂಕಾ ವಿರುದ್ಧ ಸೋತು ಅಫ್ಘಾನ್ ವಿರುದ್ಧ ಗೆಲ್ಲಬೇಕು.

Story first published: Monday, September 5, 2022, 11:32 [IST]
Other articles published on Sep 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X