ಗೌತಮ್ ಗಂಭೀರ್ ಮುಂದೆಯೇ 'ಮಾಹಿ ಭಾಯ್‌'ನಿಂದ ಸಾಕಷ್ಟು ಕಲಿತಿದ್ದೇನೆ ಎಂದ ಹಾರ್ದಿಕ್ ಪಾಂಡ್ಯ

ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಸೂಪರ್ ಫೈಟ್‌ನಲ್ಲಿ ಭಾರತದ ಗೆಲುವಿನ ರೂವಾರಿ ಹಾರ್ದಿಕ್ ಪಾಂಡ್ಯ ಅವರನ್ನ ಇಡೀ ಕ್ರಿಕೆಟ್ ವಲಯವೇ ಕೊಂಡಾಡುತ್ತಿದೆ. ಕಳೆದ ವರ್ಷದ ಟಿ20 ವಿಶ್ವಕಪ್ ವೇಳೆ ಫಿಟ್ನೆಸ್ ಕೊರತೆಯಿಂದ ಸಾಕಷ್ಟು ಅಪಹಾಸ್ಯ ಹಾಗೂ ಟೀಕೆಗಳನ್ನು ಎದುರಿಸಿದ್ದ ಪಾಂಡ್ಯ, ಟೀಂ ಇಂಡಿಯಾ ಗೆಲುವಿನ ರೂವಾರಿಯಾಗಿದ್ದಾರೆ.

ಒಂದು ವರ್ಷದ ಹಿಂದೆ ಟಿ20 ವಿಶ್ವಕಪ್‌ನಲ್ಲಿ ತನ್ನ ಕಳಪೆ ಫಾರ್ಮ್‌ನಿಂದಲೇ ಟೀಕೆಗೆ ಗುರಿಯಾಗಿದ್ದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ಸದ್ಯ ಟೀಂ ಇಂಡಿಯಾದ ಕೀ ಪ್ಲೇಯರ್ ಆಗಿ ಬದಲಾಗಿದ್ದಾರೆ. ಒಂದು ವರ್ಷದೊಳಗೆ ಸೂಪರ್ ಸ್ಟಾರ್ ಆಲ್‌ರೌಂಡರ್ ಆಗಿ ಮಿಂಚುತ್ತಿರುವ ಹಾರ್ದಿಕ್ ಪಾಂಡ್ಯ 2.0 ಎಂದೇ ಕರೆಸಿಕೊಂಡಿದ್ದಾರೆ. ತನ್ನ ಮೇಲಿನ ಎಲ್ಲಾ ಟೀಕೆಗಳಿಗೆ ಹಾರ್ದಿಕ್ ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಉತ್ತರ ನೀಡಿದ್ದಾರೆ. ಐದು ವಿಕೆಟ್ ಗಳಿಂದ ಗೆದ್ದ ಟೀಂ ಇಂಡಿಯಾ ಪರ ಹಾರ್ದಿಕ್ ಬೌಲಿಂಗ್ ಹಾಗೂ ಬ್ಯಾಟಿಂಗ್ ನಲ್ಲಿ ಎರಡರಲ್ಲೂ ಮಿಂಚು ಹರಿಸಿದ್ದು, ಪಂದ್ಯ ಶ್ರೇಷ್ಠರಾಗಿ ಆಯ್ಕೆಯಾಗಿದ್ದಾರೆ.

ಅದ್ಭುತ ಚೇಸ್ ಮಾಡಿದ ಹಾರ್ದಿಕ್ ಪಾಂಡ್ಯ

ಅದ್ಭುತ ಚೇಸ್ ಮಾಡಿದ ಹಾರ್ದಿಕ್ ಪಾಂಡ್ಯ

ಟೀಂ ಇಂಡಿಯಾ 148ರನ್‌ಗಳ ಬೆನ್ನತ್ತಿದಾಗ ಟೀಂ ಇಂಡಿಯಾಗೆ ಕೊನೆಯ ಕ್ಷಣದಲ್ಲಿ ಆಧಾರವಾಗಿದ್ದು, ರವೀಂದ್ರ ಜಡೇಜಾ ಮತ್ತು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ. ವೀಂದ್ರ ಜಡೇಜಾ ಜೊತೆಗೂಡಿ ಐದನೇ ವಿಕೆಟ್‌ಗೆ 52ರನ್‌ಗಳ ಜೊತೆಯಾಟವಾಡಿದ ಹಾರ್ದಿಕ್ ಪಾಕ್‌ನಿಂದ ಸುಲಭವಾಗಿ ಗೆಲುವನ್ನ ಕಸಿದುಕೊಂಡರು.

ಕೇವಲ 17 ಎಸೆತಗಳಲ್ಲಿ 194.12ರ ಸ್ಟ್ರೈಕ್‌ರೇಟ್‌ನಲ್ಲಿ ಅಜೇಯ 33ರನ್ ಕಲೆಹಾಕಿದ ಹಾರ್ದಿಕ್ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಮತ್ತು 1 ಅಮೋಘ ಸಿಕ್ಸರ್ ಒಳಗೊಂಡಿತ್ತು.

ಪಂತ್ ಬದಲಾಗಿ ದಿನೇಶ್ ಕಾರ್ತಿಕ್‌ಗೆ ಅವಕಾಶ ನೀಡಿದ್ದು ಉತ್ತಮ ನಿರ್ಧಾರ ಎಂದ ಹರ್ಭಜನ್ ಸಿಂಗ್

ಎಂಎಸ್ ಧೋನಿಯನ್ನ ನೆನೆದ ಬರೋಡಾ ಆಲ್‌ರೌಂಡರ್

ರನ್ ಚೇಸ್ ನಲ್ಲಿ ಭಾರತ ತತ್ತರಿಸಿದಾಗ, ಕೂಲ್ ಆಗಿ ಬ್ಯಾಟ್ ಬೀಸಿದ ಹಾರ್ದಿಕ್ ಎರಡು ಎಸೆತಗಳು ಬಾಕಿ ಇರುವಂತೆಯೇ ಸಿಕ್ಸರ್ ಸಿಡಿಸಿ ತಂಡದ ಗೆಲುವಿನ ರೂವಾರಿ ಎನಿಸಿದರು. ಈ ಇನ್ನಿಂಗ್ಸ್‌ನಲ್ಲಿ ಭಾರತದ ಮಾಜಿ ದಿಗ್ಗಜ ನಾಯಕ ಎಂಎಸ್ ಧೋನಿ ಅವರ ಪಾತ್ರವೂ ಇದೆ ಎಂದು ಅವರು ಬಹಿರಂಗಪಡಿಸಿದ್ದಾರೆ. ಪಂದ್ಯದ ನಂತರ ಮಾತನಾಡಿದ ಹಾರ್ದಿಕ್, ಲೆಜೆಂಡರಿ ಆಟಗಾರ ಮಹೇಂದ್ರ ಸಿಂಗ್ ಧೋನಿ ಎಷ್ಟರ ಮಟ್ಟಿಗೆ ತನ್ನ ಮೇಲೆ ಪ್ರಭಾವ ಬೀರಿದ್ದಾರೆ ಎಂಬುದನ್ನ ತಿಳಿಸಿದರು.

''ನಾನು ಸಾಧ್ಯವಾದಷ್ಟು ವಿಷಯಗಳನ್ನು ಸರಳೀಕರಿಸಲು ಪ್ರಯತ್ನಿಸುತ್ತೇನೆ. ಈ ಇನ್ನಿಂಗ್ಸ್‌ನಲ್ಲಿ ಮಹಿ ಭಾಯಿ (ಎಂಎಸ್ ಧೋನಿ) ಪ್ರಭಾವ ಖಂಡಿತವಾಗಿಯೂ ಇತ್ತು. ಅವರೊಂದಿಗೆ ಆಡುವಾಗ ನಾನು ಅನೇಕ ವಿಷಯಗಳನ್ನು ನೋಡಿದ್ದೇನೆ ಮತ್ತು ಅರ್ಥಮಾಡಿಕೊಂಡಿದ್ದೇನೆ. ಮಾಹಿ ಭಾಯಿಗೆ ಹೆಚ್ಚಿನ ಪ್ರಶ್ನೆಗಳನ್ನು ಕೇಳಲಿಲ್ಲ'' ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.

Ind vs Pak: ಹಾರ್ದಿಕ್‌ಗೆ ತಲೆಬಾಗಿ ನಮಸ್ಕರಿಸಿದ ದಿನೇಶ್ ಕಾರ್ತಿಕ್, ಕಾರಣ ಏನು?

ಬೇರೆ ಕ್ರಿಕೆಟಿಗರನ್ನ ನೋಡಿ ಕಲಿಯುತ್ತೇನೆ ಎಂದ ಹಾರ್ದಿಕ್

ಬೇರೆ ಕ್ರಿಕೆಟಿಗರನ್ನ ನೋಡಿ ಕಲಿಯುತ್ತೇನೆ ಎಂದ ಹಾರ್ದಿಕ್

''ನಾನು ಅವರಿಂದ ಮತ್ತು ನಾನು ಆಡಿದ ಇತರ ಕ್ರಿಕೆಟಿಗರಿಂದ ಸಾಕಷ್ಟು ವಿಷಯಗಳನ್ನು ತೆಗೆದುಕೊಳ್ಳುತ್ತೇನೆ. ಜೀವನದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಶಾಂತವಾಗಿ ಮಾಡುವುದು ಉತ್ತಮ ಎಂದು ಭಾವಿಸುತ್ತೇನೆ'' ಎಂದು ಹಾರ್ದಿಕ್ ಪಾಂಡ್ಯ ವಿವರಿಸಿದರು.

''ನಾನು ಬ್ಯಾಟಿಂಗ್‌ನಲ್ಲಿಯೂ ಅದೇ ವಿಧಾನವನ್ನು ಅನುಸರಿಸುತ್ತೇನೆ. ನನಗೆ ಯಾವ ಆಯ್ಕೆಗಳಿವೆ ಎಂಬುದನ್ನು ನಾನು ಮೊದಲು ಪರಿಶೀಲಿಸುತ್ತೇನೆ. ಪಾಕಿಸ್ತಾನ ವಿರುದ್ಧದ ಈ ಪಂದ್ಯಕ್ಕೆ ಬಂದ ನನಗೆ 15ನೇ ಓವರ್‌ನಲ್ಲಿ ಆಟ ಶುರುವಾಯಿತು. ಒಬ್ಬ ಬೌಲರ್ ಪಾಕಿಸ್ತಾನಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ ಎಂದು ನನಗೆ ತಿಳಿದಿತ್ತು''

''ರನ್ ಗಳಿಸುವ ವಿಷಯದಲ್ಲಿ ಏರಿಳಿತಗಳಿರುತ್ತವೆ ಎಂದು ನನಗೆ ತಿಳಿದಿತ್ತು. ಡಾಟ್ ಬಾಲ್ ಕೂಡ ಉತ್ತಮವಾಗಿತ್ತು. ಏಕೆಂದರೆ ಅವರ ಸಾಲಿನಲ್ಲಿ ಒಬ್ಬ ಎಡಗೈ ಸ್ಪಿನ್ನರ್ ಉಳಿದಿದ್ದಾರೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಕೊನೆಯವರೆಗೂ ಕ್ರೀಸ್‌ನಲ್ಲಿ ಉಳಿಯಲು ನಿರ್ಧರಿಸಿದ್ದೆ'' ಎಂದು ಹಾರ್ದಿಕ್ ಪಾಂಡ್ಯ ಬಹಿರಂಗಪಡಿಸಿದರು.

ಬ್ಯಾಟಿಂಗ್ ಅಷ್ಟೇ ಅಲ್ಲದೆ ಬೌಲಿಂಗ್ ಮೂಲಕವೂ ಪಾಕ್ ಬ್ಯಾಟ್ಸ್‌ಮನ್‌ಗಳ ಚಿತ್ತಕೆಡಿಸಿದ ಹಾರ್ದಿಕ್ ಪಾಂಡ್ಯ ಎದುರಾಳಿ ಪಾಕ್‌ ಬ್ಯಾಟಿಂಗ್ ವಿಭಾಗಕ್ಕೆ ಬಲವಾದ ಪೆಟ್ಟು ನೀಡಿದರು. 4 ಓವರ್‌ಗಳಲ್ಲಿ 25 ರನ್ ನೀಡಿದ ಪಾಂಡ್ಯ 3 ಪ್ರಮುಖ ವಿಕೆಟ್ ಕಬಳಿಸಿದ್ರು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Monday, August 29, 2022, 23:03 [IST]
Other articles published on Aug 29, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X