Asia Cup 2022: ಟಿವಿ, ಮೊಬೈಲ್ ಮಾತ್ರವಲ್ಲ, ಈ ಚಿತ್ರಮಂದಿರಗಳಲ್ಲೂ ಭಾರತ vs ಪಾಕ್ ಪಂದ್ಯದ ನೇರಪ್ರಸಾರ! ಟಿಕೆಟ್ ದರವೆಷ್ಟು?

ಬಹುನಿರೀಕ್ಷಿತ ಏಷ್ಯಾಕಪ್ ಕ್ರಿಕೆಟ್ ಟೂರ್ನಮೆಂಟ್ ಇಂದಿನಿಂದ ಆರಂಭಗೊಳ್ಳುತ್ತಿದೆ. ಇಂದು ( ಆಗಸ್ಟ್ 27 ) ಸಂಜೆ 7.30ಕ್ಕೆ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶ್ರೀಲಂಕಾ ಮತ್ತು ಆಫ್ಘಾನಿಸ್ತಾನ ತಂಡಗಳು ಟೂರ್ನಿಯ ಪ್ರಥಮ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಇನ್ನು ಈ ಪಂದ್ಯ ಟೂರ್ನಿಯ ಚೊಚ್ಚಲ ಪಂದ್ಯವಾಗಿದ್ದರೂ ಸಹ ಇದಕ್ಕಿಂತ ಹೆಚ್ಚಿನ ಕುತೂಹಲ ಹಾಗೂ ನಿರೀಕ್ಷೆಯನ್ನು ಹುಟ್ಟುಹಾಕಿರುವ ಪಂದ್ಯವೆಂದರೆ ಅದು ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆಯಲಿರುವ ಪಂದ್ಯ.

Asia Cup 2022: 10 ವರ್ಷಗಳಲ್ಲಿ ಮೊದಲ ಬಾರಿಗೆ 1 ತಿಂಗಳು ಬ್ಯಾಟ್ ಮುಟ್ಟಿಲ್ಲ; ವಿರಾಟ್ ಕೊಹ್ಲಿAsia Cup 2022: 10 ವರ್ಷಗಳಲ್ಲಿ ಮೊದಲ ಬಾರಿಗೆ 1 ತಿಂಗಳು ಬ್ಯಾಟ್ ಮುಟ್ಟಿಲ್ಲ; ವಿರಾಟ್ ಕೊಹ್ಲಿ

ಹೌದು, ಟೂರ್ನಿಯ ಎರಡನೇ ದಿನ ಅಂದರೆ ಆಗಸ್ಟ್ 28ರ ಭಾನುವಾರದಂದು ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ಇದೇ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಜರುಗಲಿದೆ. ಐಸಿಸಿ ಆಯೋಜಿಸುವ ಟೂರ್ನಿಗಳನ್ನು ಹೊರತುಪಡಿಸಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿರುವ ಏಕೈಕ ಟೂರ್ನಿ ಇದಾಗಿದ್ದು, ಈ ಬದ್ಧವೈರಿಗಳ ಕಾದಾಟವನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.

Asia Cup 2022: ಭಾರತದ ಈ ಸ್ಟಾರ್ ಏಷ್ಯಾ ಕಪ್‌ನಲ್ಲಿ ಹೆಚ್ಚು ರನ್ ಗಳಿಸಬಹುದು; ರಶೀದ್ ಖಾನ್Asia Cup 2022: ಭಾರತದ ಈ ಸ್ಟಾರ್ ಏಷ್ಯಾ ಕಪ್‌ನಲ್ಲಿ ಹೆಚ್ಚು ರನ್ ಗಳಿಸಬಹುದು; ರಶೀದ್ ಖಾನ್

ಈ ಹಿಂದೆಯೇ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಸ್ಟೇಡಿಯಂ ಟಿಕೆಟ್ ಮಾರಾಟವಾದಾಗ ಗಂಟೆಗಳಲ್ಲಿ ಸೋಲ್ಡ್ ಔಟ್ ಆಗಿತ್ತು. ಇನ್ನು ಈ ಪಂದ್ಯವನ್ನು ವಿಶ್ವದಾದ್ಯಂತ ಕ್ರಿಕೆಟ್ ಪ್ರೇಮಿಗಳು ವೀಕ್ಷಿಸುವ ಕಾರಣ ಸುಮಾರು 130ಕ್ಕೂ ಹೆಚ್ಚಿನ ದೇಶಗಳಲ್ಲಿ ಪಂದ್ಯದ ನೇರ ಪ್ರಸಾರವನ್ನು ಮಾಡಲಾಗುತ್ತಿದ್ದು, ಡಿಸ್ನೆ ಪ್ಲಸ್ ಹಾಟ್‌ಸ್ಟಾರ್ ಮೊಬೈಲ್ ಅಪ್ಲಿಕೇಷನ್ ಮೂಲಕವೂ ಸಹ ಪಂದ್ಯದ ನೇರ ಪ್ರಸಾರವನ್ನು ವೀಕ್ಷಿಸಬಹುದಾಗಿದೆ. ಹೀಗೆ ದೂರದರ್ಶನ ಹಾಗೂ ಮೊಬೈಲ್ ಮೂಲಕ ಮಾತ್ರವಲ್ಲದೆ ನಿಮ್ಮ ಸಮೀಪದ ಚಿತ್ರಮಂದಿರಗಳಲ್ಲಿಯೂ ಸಹ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದ ನೇರ ಪ್ರಸಾರವನ್ನು ವೀಕ್ಷಿಸುವ ಅವಕಾಶವಿದೆ. ಹೌದು, ಭಾರತದ ಪ್ರಮುಖ ನಗರಗಳಲ್ಲಿನ ಚಿತ್ರಮಂದಿರಗಳಲ್ಲಿ ಈ ಅವಕಾಶವಿದ್ದು, ಕರ್ನಾಟಕದಲ್ಲಿ ಯಾವ ನಗರಗಳಲ್ಲಿ, ಯಾವ ಚಿತ್ರಮಂದಿರಗಳಲ್ಲಿ ಪಂದ್ಯದ ನೇರಪ್ರಸಾರ ಲಭ್ಯವಿದೆ ಹಾಗೂ ಟಿಕೆಟ್ ದರವೆಷ್ಟು ಎಂಬುದರ ಕುರಿತಾದ ಮಾಹಿತಿ ಕೆಳಕಂಡಂತಿದೆ.

ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಪಂದ್ಯದ ನೇರಪ್ರಸಾರ

ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಪಂದ್ಯದ ನೇರಪ್ರಸಾರ

ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿರುವ ಪಿವಿಆರ್, ಸಿನಿಪೊಲಿಸ್ ಹಾಗೂ ಐನಾಕ್ಸ್ ತೆರೆಗಳ ಮೇಲೆ ಭಾರತ ಮತ್ತು ಪಾಕಿಸ್ತಾನ ಪಂದ್ಯದ ನೇರಪ್ರಸಾರ ಪ್ರದರ್ಶನವಾಗಲಿದೆ, 28ರ ಭಾನುವಾರ ಸಂಜೆ 6.45ಕ್ಕೆ ವೀಕ್ಷಕರು ಚಿತ್ರಮಂದಿರಗಳಿಗೆ ಪ್ರವೇಶ ಪಡೆದುಕೊಳ್ಳಬಹುದು ಹಾಗೂ 6.45ರಿಂದಲೇ ಪಂದ್ಯದ ನೇರಪ್ರಸಾರವೂ ಸಹ ಆರಂಭಗೊಳ್ಳಲಿದೆ. ಬೆಂಗಳೂರಿನ ವಿವಿಧ ಪಿವಿಆರ್, ಐನಾಕ್ಸ್ ಮತ್ತು ಸಿನಿಪೊಲಿಸ್ ಮಾಲ್‌ಗಳಲ್ಲಿ ಪಂದ್ಯದ ನೇರಪ್ರಸಾರವಿದ್ದರೆ, ಮೈಸೂರಿನ ನೆಕ್ಸಸ್ ಮಾಲ್‌ನ ಪಿವಿಆರ್‌ನಲ್ಲಿ ಪಂದ್ಯದ ನೇರ ಪ್ರಸಾರವಿರಲಿದೆ. ಮಂಗಳೂರಿನ ಪಿವಿಆರ್ ಹಾಗೂ ಸಿನಿಪೊಲಿಸ್ ತೆರೆಗಳ ಮೇಲೆ ಸಹ ಪಂದ್ಯದ ನೇರ ಪ್ರಸಾರವಿರಲಿದೆ. ಕರ್ನಾಟಕದ ಎಲ್ಲಾ ಚಿತ್ರಮಂದಿರಗಳಲ್ಲಿಯೂ ಇಂಗ್ಲಿಷ್ ಕಾಮೆಂಟರಿಯ ಪಂದ್ಯಗಳು ಪ್ರಸಾರವಾಗಲಿವೆ.

ಕರ್ನಾಟಕದ ಚಿತ್ರಮಂದಿರಗಳಲ್ಲಿ ಟಿಕೆಟ್ ದರವೆಷ್ಟು?

ಕರ್ನಾಟಕದ ಚಿತ್ರಮಂದಿರಗಳಲ್ಲಿ ಟಿಕೆಟ್ ದರವೆಷ್ಟು?

• ಮೈಸೂರಿನ ನೆಕ್ಸಸ್ ಮಾಲ್‌ನಲ್ಲಿರುವ ಪಿವಿಆರ್ ನಲ್ಲಿ 300ರಿಂದ 500 ರೂಪಾಯಿಗಳು

• ಮಂಗಳೂರಿನ ನೆಕ್ಸಸ್ ಮಾಲ್‌ನಲ್ಲಿರುವ ಪಿವಿಆರ್ ನಲ್ಲಿ 200ರಿಂದ 350 ರೂಪಾಯಿಗಳು

• ಮಂಗಳೂರಿನ ಸಿನೆಪೊಲಿಸ್ - 300 ರೂಪಾಯಿಗಳು

• ಹುಬ್ಬಳ್ಳಿಯ ಪಿವಿಆರ್ - 250ರಿಂದ 400 ರೂಪಾಯಿಗಳು

• ಬೆಂಗಳೂರಿನ ಪಿವಿಆರ್, ಐನಾಕ್ಸ್ ಹಾಗೂ ಸಿನಿಪೊಲಿಸ್ ವಿವಿಧ ಶಾಖೆಗಳಲ್ಲಿ ಪಂದ್ಯದ ನೇರಪ್ರಸಾರ ಲಭ್ಯವಿದ್ದು, 300ರಿಂದ 750ರವರೆಗಿನ ಟಿಕೆಟ್‌ಗಳು ಲಭ್ಯ.

ಹೈದರಾಬಾದ್ ಮತ್ತು ಚೆನ್ನೈನಲ್ಲಿ ಇಲ್ಲ ನೇರ ಪ್ರಸಾರ!

ಹೈದರಾಬಾದ್ ಮತ್ತು ಚೆನ್ನೈನಲ್ಲಿ ಇಲ್ಲ ನೇರ ಪ್ರಸಾರ!

ಕರ್ನಾಟಕದ ಬಹುತೇಕ ನಗರಗಳು ಹಾಗೂ ಭಾರತದ ಪ್ರಮುಖ ನಗರಗಳಾದ ಮುಂಬೈ, ದೆಹಲಿ, ಕೋಲ್ಕತ್ತಾ ಮತ್ತು ಮುಂತಾದ ನಗರಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ಪಂದ್ಯಗಳ ನೇರ ಪ್ರಸಾರವನ್ನು ಚಿತ್ರಮಂದಿರಗಳಲ್ಲಿ ಆಯೋಜಿಸಲಾಗುತ್ತಿದ್ದರೆ ಹೈದರಾಬಾದ್ ಮತ್ತು ಚೆನ್ನೈ ನಗರಗಳಲ್ಲಿ ಮಾತ್ರ ಪಂದ್ಯದ ಯಾವುದೇ ಪ್ರದರ್ಶನವನ್ನು ಆಯೋಜಿಸಲಾಗಿಲ್ಲ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Read more about: mykhel original asia cup 2022
Story first published: Saturday, August 27, 2022, 16:30 [IST]
Other articles published on Aug 27, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X