ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಷ್ಯಾ ಕಪ್ 2022: ಈ ಸ್ಟಾರ್ ಆಟಗಾರನ ಅಭ್ಯಾಸದ ಕೊರತೆ ಭಾರತಕ್ಕೆ ಕಳವಳಕಾರಿ; ಜಯವರ್ಧನೆ

Asia Cup 2022: KL Rahuls Lack Of Cricket Practice Is A Concern For Team India Says Mahela Jayawardene

ಸೋಮವಾರ (ಆಗಸ್ಟ್ 8)ದಂದು 2022ರ ಏಷ್ಯಾ ಕಪ್‌ಗಾಗಿ ಪ್ರಕಟಿಸಿದ 15 ಸದಸ್ಯರ ಭಾರತ ತಂಡಕ್ಕೆ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಗಾಯದಿಂದ ಚೇತರಿಸಿಕೊಂಡಿರುವ ಉಪ ನಾಯಕ ಕೆಎಲ್ ರಾಹುಲ್ ಮರಳಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿನ ಬ್ಯಾಟಿಂಗ್ ಫಾರ್ಮ್‌ನ ಕುಸಿತದಿಂದ ಹೊರಬರಲು ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಬಳಿ ಬೇಕಾದ ತಂತ್ರಗಳಿವೆ ಎಂದು ಹೇಳಿರುವ ಶ್ರೀಲಂಕಾ ತಂಡದ ಮಾಜಿ ನಾಯಕ ಮಹೇಲಾ ಜಯವರ್ಧನೆ, ಉಪ ನಾಯಕ ಕೆಎಲ್ ರಾಹುಲ್ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ.

Asia Cup 2022: ಕಳಪೆ ಫಾರ್ಮ್‌ನಿಂದ ಹೊರಬರಲು ವಿರಾಟ್ ಕೊಹ್ಲಿ ಬಳಿ ತಂತ್ರಗಳಿವೆ; ಜಯವರ್ಧನೆAsia Cup 2022: ಕಳಪೆ ಫಾರ್ಮ್‌ನಿಂದ ಹೊರಬರಲು ವಿರಾಟ್ ಕೊಹ್ಲಿ ಬಳಿ ತಂತ್ರಗಳಿವೆ; ಜಯವರ್ಧನೆ

ಭಾರತ ತಂಡದ ಉಪ ನಾಯಕ ಕೆಎಲ್ ರಾಹುಲ್ ಅವರ ಫಾರ್ಮ್ ಬಗ್ಗೆ ಮಹೇಲಾ ಜಯವರ್ಧನೆ ಚಿಂತಿತರಾಗಿದ್ದಾರೆ ಮತ್ತು ಮುಂಬರುವ ಏಷ್ಯಾ ಕಪ್‌ನಲ್ಲಿ ಉನ್ನತ ಮಟ್ಟದಲ್ಲಿ ಕ್ರಿಕೆಟ್ ಕೊರತೆಯು ಭಾರತಕ್ಕೆ ಕಳವಳಕಾರಿಯಾಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಐಪಿಎಲ್‌ನಲ್ಲಿ 616 ರನ್ ಗಳಿಸಿ ಉತ್ತಮ ಫಾರ್ಮ್‌

ಐಪಿಎಲ್‌ನಲ್ಲಿ 616 ರನ್ ಗಳಿಸಿ ಉತ್ತಮ ಫಾರ್ಮ್‌

ಕೆಎಲ್ ರಾಹುಲ್ 2022ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್‌ಗಾಗಿ 616 ರನ್ ಗಳಿಸಿ ಉತ್ತಮ ಫಾರ್ಮ್‌ನಲ್ಲಿದ್ದರು. ಅಂದಿನಿಂದ, ಅವರು ಗಾಯಗಳ ವಿರುದ್ಧದ ಹೋರಾಟ ಮತ್ತು ಕೋವಿಡ್-19ರ ಕಾರಣದಿಂದಾಗಿ ಕೆಎಲ್ ರಾಹುಲ್ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಅನ್ನು ಆಡಲಿಲ್ಲ, ಏಷ್ಯಾ ಕಪ್‌ಗಾಗಿ ತಂಡಕ್ಕೆ ಪುನರಾಗಮನ ಮಾಡಲಿದ್ದಾರೆ.

"ಕೆಎಲ್ ರಾಹುಲ್ ಅವರ ಕ್ರಿಕೆಟ್ ಅಭ್ಯಾಸದ ಕೊರತೆ ಭಾರತ ತಂಡಕ್ಕೆ ಕಳವಳಕಾರಿಯಾಗಿದೆ' ಎಂದು ಐಸಿಸಿ ವಿಮರ್ಶೆಯ ಇತ್ತೀಚಿನ ಸಂಚಿಕೆಯಲ್ಲಿ ಮಹೇಲಾ ಜಯವರ್ಧನೆ ತಿಳಿಸಿದರು. ""ಅವರು ಐಪಿಎಲ್‌ನಿಂದ ಸ್ವಲ್ಪ ಸಮಯದವರೆಗೆ ಹೊರಗಿದ್ದಾರೆ, ಆದ್ದರಿಂದ ಆಟದ ಸಮಯವನ್ನು ಹೊಂದಿರುವುದು ವಿಶೇಷವಾಗಿ ಮಧ್ಯದಲ್ಲಿ ಸಾಕಷ್ಟು ನಿರ್ಣಾಯಕವಾಗಿದೆ. ಅವರು ಎಷ್ಟು ಬೇಗ ಸ್ವಲ್ಪ ಸಮಯವನ್ನು ಪಡೆದುಕೊಳ್ಳಬಹುದು ಮತ್ತು ಆ ಆತ್ಮವಿಶ್ವಾಸವನ್ನು ಮರಳಿ ಪಡೆಯಬಹುದು, ರಾಷ್ಟ್ರೀಯ ತಂಡವಾಗಿ ಯಾವಾಗಲೂ ಅವರಿಗೆ ಸಹಾಯ ಮಾಡಲು ಹೋಗುತ್ತಾರೆ," ಎಂದರು.

ಕೆಎಲ್ ರಾಹುಲ್ ವಿಫಲವಾದರೆ ರಿಷಭ್ ಪಂತ್ ಇನ್ನಿಂಗ್ಸ್ ಆರಂಭ

ಕೆಎಲ್ ರಾಹುಲ್ ವಿಫಲವಾದರೆ ರಿಷಭ್ ಪಂತ್ ಇನ್ನಿಂಗ್ಸ್ ಆರಂಭ

ಏಷ್ಯಾಕಪ್‌ನಲ್ಲಿ ಕೆಎಲ್ ರಾಹುಲ್ ತನ್ನ ಸಂಪೂರ್ಣ ಅತ್ಯುತ್ತಮ ಫಾರ್ಮ್‌ಗೆ ಮರಳಲು ವಿಫಲವಾದರೆ, ಟಿ20 ವಿಶ್ವಕಪ್‌ನಲ್ಲಿ ವಿಕೆಟ್‌ಕೀಪರ್-ಬ್ಯಾಟರ್ ರಿಷಭ್ ಪಂತ್ ಅವರನ್ನು ಆರಂಭಿಕ ಆಟಗಾರನಾಗಿ ಭಾರತೀಯ ಆಯ್ಕೆಗಾರರು ಪರಿಗಣಿಸಬೇಕು ಎಂದು ಮಹೇಲಾ ಜಯವರ್ಧನೆ ಸಲಹೆ ನೀಡಿದರು.

ರಿಷಭ್ ಪಂತ್ ಟಿ20 ಪಂದ್ಯದಲ್ಲಿ ಭಾರತಕ್ಕಾಗಿ ಕೇವಲ ಎರಡು ಬಾರಿ ಆರಂಭಿಕನಾಗಿ ಬ್ಯಾಟಿಂಗ್ ತೆರೆದಿದ್ದಾರೆ, ಆದರೆ ಪಂತ್ ಆರಂಭಿಕರಾಗಿ ಉತ್ತಮವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆಂದು ಶ್ರೀಲಂಕಾ ಮಾಜಿ ಕ್ರಿಕೆಟಿಗ ಮಹೇಲಾ ಜಯವರ್ಧನೆ ಅಭಿಪ್ರಾಯಪಟ್ಟಿದ್ದಾರೆ. ಇಂಗ್ಲೆಂಡ್ ವಿರುದ್ಧದ ಎರಡನೇ ಮತ್ತು ಮೂರನೇ ಟಿ20 ಪಂದ್ಯಗಳಲ್ಲಿ ನಾಯಕ ರೋಹಿತ್ ಶರ್ಮಾ ಜೊತೆ ರಿಷಭ್ ಪಂತ್ ಓಪನಿಂಗ್ ಮಾಡಿದ್ದರು.

ಪಂತ್‌ಗೆ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸುವ ಸಾಮರ್ಥ್ಯವಿದೆ

ಪಂತ್‌ಗೆ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸುವ ಸಾಮರ್ಥ್ಯವಿದೆ

"ರಿಷಭ್ ಪಂತ್ ದೇಶೀಯ ಕ್ರಿಕೆಟ್‌ನಲ್ಲಿ ಹೆಚ್ಚು ಬ್ಯಾಟಿಂಗ್ ತೆರೆಯದಿದ್ದರೂ, ಅವರು ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸುವ ಸಾಮರ್ಥ್ಯ ಹೊಂದಿದ್ದಾರೆ. ಅವರು ಎಲ್ಲಿ ಬೇಕಾದರೂ ಬ್ಯಾಟ್ ಮಾಡುತ್ತಾರೆ, ನೀವು ಅವರ ಆಟವನ್ನು ಬದಲಾಯಿಸಲು ಹೋಗುವುದಿಲ್ಲ. ಅವರು ತುಂಬಾ ನ್ಯಾಚುರಲ್ ಆಟಗಾರ ಆದ್ದರಿಂದ, ಪಂತ್ ಇನ್ನಿಂಗ್ಸ್ ತೆರೆಯುವುದು ಒಂದು ಆಯ್ಕೆಯಾಗಿದೆ".

2022ರ ಏಷ್ಯಾ ಕಪ್ ಟೂರ್ನಿ ಯುಎಇಯಲ್ಲಿ ಆಗಸ್ಟ್ 27ರಂದು ಪ್ರಾರಂಭವಾಗಲಿದೆ. ಭಾರತ ತಂಡ ಆಗಸ್ಟ್ 28ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.

Sanju , DK ಹಾಗು Ashwin ಅಭಿಮಾನಿಗಳಿಗೆ ಮನರಂಜನೆ ಕೊಟ್ಟಿದ್ದು ಹೀಗೆ | *Cricket |OneIndia Kannada
ಏಷ್ಯಾ ಕಪ್ 2022ಗೆ ಭಾರತದ ಪೂರ್ಣ ತಂಡ

ಏಷ್ಯಾ ಕಪ್ 2022ಗೆ ಭಾರತದ ಪೂರ್ಣ ತಂಡ

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್, ರಿಷಭ್ ಪಂತ್ (ವಿಕೆಟ್ ಕೀಪರ್), ದೀಪಕ್ ಹೂಡಾ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜುವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್.

ಬ್ಯಾಕ್ ಅಪ್: ಶ್ರೇಯಸ್ ಅಯ್ಯರ್, ದೀಪಕ್ ಚಾಹರ್, ಅಕ್ಷರ್ ಪಟೇಲ್.

Story first published: Wednesday, August 10, 2022, 16:18 [IST]
Other articles published on Aug 10, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X