IND vs PAK: ಸೂಪರ್ 4 ಪಂದ್ಯದಿಂದ ಡಿಕೆ ಔಟ್; ಇದಕ್ಕಿಂತ ಅನ್ಯಾಯ ಮತ್ತೊಂದಿಲ್ಲ!

ಪ್ರಸ್ತುತ ನಡೆಯುತ್ತಿರುವ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಎರಡನೇ ಬಾರಿಗೆ ಮುಖಾಮುಖಿಯಾಗಿವೆ. ಉಭಯ ತಂಡಗಳ ನಡುವಿನ ಈ ಮುಖಾಮುಖಿ ಈ ಬಾರಿಯ ಏಷ್ಯಾಕಪ್ ಟೂರ್ನಿಯ ಸೂಪರ್ 4 ಸುತ್ತಿನ ಮುಖಾಮುಖಿಯಾಗಿದ್ದು, ಪಂದ್ಯ ಇಂದು ( ಸೆಪ್ಟೆಂಬರ್ 4 ) ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಜರುಗುತ್ತಿದೆ.

Asia Cup 2022: ಭಾರತ vs ಪಾಕ್ ಸೂಪರ್ 4 ಪಂದ್ಯವನ್ನು ಮೊಬೈಲ್‌ನಲ್ಲಿ ವೀಕ್ಷಿಸುವುದು ಹೇಗೆ?Asia Cup 2022: ಭಾರತ vs ಪಾಕ್ ಸೂಪರ್ 4 ಪಂದ್ಯವನ್ನು ಮೊಬೈಲ್‌ನಲ್ಲಿ ವೀಕ್ಷಿಸುವುದು ಹೇಗೆ?

ಉಭಯ ತಂಡಗಳ ನಡುವೆ ನಡೆದಿದ್ದ ಟೂರ್ನಿಯ ಪ್ರಥಮ ಪಂದ್ಯದಲ್ಲಿ ಭಾರತದ ವಿರುದ್ಧ ಸೋಲನ್ನು ಅನುಭವಿಸಿದ್ದ ಪಾಕಿಸ್ತಾನ ಈ ಪಂದ್ಯದಲ್ಲಿ ಜಯ ಸಾಧಿಸುವತ್ತ ಕಣ್ಣಿಟ್ಟಿದ್ದರೆ, ಟೀಮ್ ಇಂಡಿಯಾ ಈ ಪಂದ್ಯದಲ್ಲಿಯೂ ಗೆದ್ದು ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರಿಸುವ ಯೋಜನೆಯಲ್ಲಿದೆ. ಇನ್ನು ಈ ಪಂದ್ಯದಲ್ಲಿ ಕಣಕ್ಕಿಳಿದಿರುವ ಉಭಯ ತಂಡಗಳ ಆಡುವ ಬಳಗಗಳಲ್ಲಿಯೂ ಪ್ರಮುಖ ಬದಲಾವಣೆಗಳಾಗಿದ್ದು, ಇಡೀ ಟೂರ್ನಿಯಿಂದಲೇ ಹೊರ ಬಿದ್ದಿರುವ ರವೀಂದ್ರ ಜಡೇಜಾ ಬದಲಾಗಿ ದೀಪಕ್ ಹೂಡಾ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದರೆ, ಹಾಂಗ್ ಕಾಂಗ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದ ಹಾರ್ದಿಕ್ ಪಾಂಡ್ಯ ತಂಡಕ್ಕೆ ಮರಳಿದ್ದಾರೆ ಹಾಗೂ ಈ ಪಂದ್ಯದಲ್ಲಿ ರವಿ ಬಿಷ್ಣೋಯಿ ಅವರಿಗೂ ಕೂಡ ತಂಡದ ಆಡುವ ಬಳಗದಲ್ಲಿ ಸ್ಥಾನ ನೀಡಲಾಗಿದೆ.

IND vs PAK: ಸೂಪರ್‌ 4ನಲ್ಲಿ ಈ ಇಬ್ಬರಲ್ಲಿ ಯಾರಿಗೆ ಸ್ಥಾನ? ದ್ರಾವಿಡ್, ರೋಹಿತ್‌ಗಿದು ತಲೆನೋವು!IND vs PAK: ಸೂಪರ್‌ 4ನಲ್ಲಿ ಈ ಇಬ್ಬರಲ್ಲಿ ಯಾರಿಗೆ ಸ್ಥಾನ? ದ್ರಾವಿಡ್, ರೋಹಿತ್‌ಗಿದು ತಲೆನೋವು!

ಹೀಗೆ ಈ ಮೂವರು ತಂಡ ಪ್ರವೇಶಿಸಿದ್ದರೆ, ಟೂರ್ನಿಯಿಂದ ಹೊರಬಿದ್ದಿರುವ ರವೀಂದ್ರ ಜಡೇಜಾ ಜತೆ ದಿನೇಶ್ ಕಾರ್ತಿಕ್ ಹಾಗೂ ಆವೇಶ್ ಖಾನ್ ಆಡುವ ಬಳಗದಿಂದ ಸ್ಥಾನ ಕಳೆದುಕೊಂಡಿದ್ದಾರೆ. ಅವೇಶ್ ಖಾನ್ ಕಳಪೆ ಪ್ರದರ್ಶನ ನೀಡಿದ್ದಕ್ಕೆ ಆಡುವ ಬಳಗದಿಂದ ಕೈಬಿಟ್ಟದ್ದು ಸರಿ ಆದರೆ ದಿನೇಶ್ ಕಾರ್ತಿಕ್ ಅವರನ್ನು ಯಾವ ಆಧಾರದ ಮೇಲೆ ಕೈ ಬಿಟ್ಟಿರಿ ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡುತ್ತಿದ್ದಾರೆ.

ಸರಿಯಾದ ಅವಕಾಶ ನೀಡದಿದ್ದರೂ ಡಿಕೆ ಡ್ರಾಪ್!

ಸರಿಯಾದ ಅವಕಾಶ ನೀಡದಿದ್ದರೂ ಡಿಕೆ ಡ್ರಾಪ್!

ದಿನೇಶ್ ಕಾರ್ತಿಕ್ ಅವರಿಗೆ ಪಾಕಿಸ್ತಾನ ವಿರುದ್ಧದ ಆಡುವ ಬಳಗದಲ್ಲಿ ಹಾಗೂ ಹಾಂಕಾಂಗ್ ವಿರುದ್ಧದ ಆಡುವ ಬಳಗದಲ್ಲಿ ಅವಕಾಶ ನೀಡಲಾಗಿತ್ತು. ಆದರೆ ಈ ಎರಡೂ ಪಂದ್ಯಗಳ ಪೈಕಿ ದಿನೇಶ್ ಕಾರ್ತಿಕ್ ಎದುರಿಸಿದ್ದು ಕೇವಲ ಒಂದೇ ಒಂದು ಎಸೆತವನ್ನು ಮಾತ್ರ. ಹೀಗೆ ಕಣಕ್ಕಿಳಿದು ಆಡುವ ಅವಕಾಶ ಸಿಗದಂತಹ ದಿನೇಶ್ ಕಾರ್ತಿಕ್ ಅವರನ್ನು ದಿಢೀರನೆ ಆಡುವ ಬಳಗದಿಂದ ಕೈಬಿಡುವ ಅಗತ್ಯವೇನಿತ್ತು,ಇದರಂತ ಅನ್ಯಾಯ ಮತ್ತೊಂದಿಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಹೀಗಾದರೆ ಸಾಮರ್ಥ್ಯ ಹೇಗೆ ತಿಳಿಯಲಿದೆ?

ಹೀಗಾದರೆ ಸಾಮರ್ಥ್ಯ ಹೇಗೆ ತಿಳಿಯಲಿದೆ?

ಇನ್ನು ದಿನೇಶ್ ಕಾರ್ತಿಕ್ ಬದಲು ರಿಷಬ್ ಪಂತ್ ಅವರಿಗೆ ಸ್ಥಾನ ನೀಡಿರುವುದರ ಕುರಿತು ಪ್ರತಿಕ್ರಿಯಿಸಿರುವ ಕೆಲ ನೆಟ್ಟಿಗರು ಈ ಆಯ್ಕೆ ಹಲವು ಗೊಂದಲಗಳಿಂದ ಕೂಡಿದೆ ಎಂದಿದ್ದಾರೆ. ಪಾಕ್ ವಿರುದ್ಧದ ಪ್ರಥಮ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಬದಲಾಗಿ ಪಂತ್ ಅವರಿಗೆ ಸ್ಥಾನ ನೀಡಲಾಗಿತ್ತು ಹಾಗೂ ಇದೀಗ ದಿನೇಶ್ ಕಾರ್ತಿಕ್ ಅವರಿಗೆ ಹೆಚ್ಚು ಆಡುವ ಅವಕಾಶವನ್ನು ನೀಡದೇ ಇಷ್ಟು ಬೇಗ ತಂಡದಿಂದ ಹೊರಗಿಡಲಾಗಿದೆ. ಹೀಗಿದ್ದರೆ ಯಾವ ಆಟಗಾರನ ಸಾಮರ್ಥ್ಯ ತಾನೇ ಸರಿಯಾಗಿ ತಿಳಿಯಲಿದೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಆಡುವ ಬಳಗಗಳು

ಆಡುವ ಬಳಗಗಳು

ಭಾರತ ಆಡುವ ಬಳಗ: ಕೆಎಲ್ ರಾಹುಲ್, ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ರವಿ ಬಿಷ್ಣೋಯ್, ಯುಜ್ವೇಂದ್ರ ಚಾಹಲ್, ಅರ್ಷ್ದೀಪ್ ಸಿಂಗ್

ಬೆಂಚ್: ದಿನೇಶ್ ಕಾರ್ತಿಕ್, ಅವೇಶ್ ಖಾನ್, ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್

ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಬಾಬರ್ ಅಜಮ್ (ನಾಯಕ), ಫಖರ್ ಜಮಾನ್, ಖುಶ್ದಿಲ್ ಶಾ, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಆಸಿಫ್ ಅಲಿ, ಮೊಹಮ್ಮದ್ ನವಾಜ್, ಹಾರಿಸ್ ರೌಫ್, ಮೊಹಮ್ಮದ್ ಹಸ್ನೇನ್, ನಸೀಮ್ ಶಾ

ಬೆಂಚ್: ಉಸ್ಮಾನ್ ಖಾದಿರ್, ಹೈದರ್ ಅಲಿ, ಹಸನ್ ಅಲಿ

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Sunday, September 4, 2022, 22:18 [IST]
Other articles published on Sep 4, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X