ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಷ್ಯಾ ಕಪ್ 2022 ಟೂರ್ನಿ ಗೆಲ್ಲಲು ರೋಹಿತ್ ಬಳಗಕ್ಕೆ ಪ್ರಮುಖ ಸಲಹೆ ನೀಡಿದ ಸೌರವ್ ಗಂಗೂಲಿ!

Asia cup 2022: Sourav Ganguly important advice to Rohit Sharma led Team India

ಏಷ್ಯಾ ಕಪ್ ಟೂರ್ನಿಯ ಆರಂಭಕ್ಕೆ ದಿನಗಣನೆ ಆರಂಬವಾಗಿದ್ದು ಈ ತಿಂಗಳಾಂತ್ಯದಲ್ಲಿ ಪ್ರತಿಷ್ಠಿತ ಟೂರ್ನಿ ಆರಂಭಗೊಳ್ಳಲಿದೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಬಿಸಿಸಿಐನ ಹಾಲಿ ಅಧ್ಯಕ್ಷ ಸೌರವ್ ಗಂಗೂಲಿ ಭಾರತ ತಂಡಕ್ಕೆ ಪ್ರಮುಖ ಸಲಹೆ ನೀಡಿದ್ದಾರೆ. ಈ ಏಷ್ಯಾಕಪ್‌ನಲ್ಲಿ ಗೆಲುವು ಸಾಧಿಸಲು ಯಾವ ರೀತಿಯ ರಣತಂತ್ರವನ್ನು ಹೊಂದಿರಬೇಕು ಎಂಬುದನ್ನು ಸೌರವ್ ಗಂಗೂಲಿ ಉಲ್ಲೇಖಿಸಿದ್ದಾರೆ.

ಏಷ್ಯಾ ಕಪ್ ಟೂರ್ನಿ ಪ್ರಮುಖವಾಗಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಸೆಣೆಸಾಟದ ಹಿನ್ನಲೆಯಲ್ಲಿ ಸುದ್ದಿಯಾಗುತ್ತಿದೆ. ಈ ಬಾರಿಯ ಟೂರ್ನಿಯಲ್ಲಿ ಈ ಎರಡು ತಂಡಗಳು ಒಂದಲ್ಲ ಎರಡಲ್ಲ ಗರಿಷ್ಠ ಮೂರು ಬಾರಿ ಮುಖಾಮುಖಿಯಾಗುವ ಅವಕಾಶವನ್ನು ಹೊಂದಿದೆ. ಇದು ಇತ್ತಂಡಗಳ ಅಭಿಮಾನಿಗಳಿಗೆ ಖುಷಿಯುಂಟು ಮಾಡಿದೆ. ಆದರೆ ಭಾರತ ತಂಡ ಈ ಟೂರ್ನಿಯಲ್ಲಿ ಗೆಲುವು ಸಾಧಿಸಬೇಕಾದರೆ ಮಾಡಬೇಕಿರುವುದು ಏನು ಎಂಬುದನ್ನು ಮಾಜಿ ನಾಯಕ ಸೌರವ್ ಗಂಗೂಲಿ ಸಲಹೆ ನೀಡಿದ್ದಾರೆ.

PAK vs NED: ನೆದರ್ಲೆಂಡ್ಸ್‌ ವಿರುದ್ಧ ವಿಶ್ವದಾಖಲೆ ಮಾಡಿದ ಬಾಬರ್ ಅಜಮ್PAK vs NED: ನೆದರ್ಲೆಂಡ್ಸ್‌ ವಿರುದ್ಧ ವಿಶ್ವದಾಖಲೆ ಮಾಡಿದ ಬಾಬರ್ ಅಜಮ್

ಭಾರತ vs ಪಾಕಿಸ್ತಾನ ಮುಖಾಮುಖಿ ಎಂದು ನೋಡಬೇಡಿ!

ಭಾರತ vs ಪಾಕಿಸ್ತಾನ ಮುಖಾಮುಖಿ ಎಂದು ನೋಡಬೇಡಿ!

ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ರೋಹಿತ್ ಶರ್ಮಾ ಪಡೆಗೆ ಏಷ್ಯಾ ಕಪ್ ಟೂರ್ನಿಯನ್ನು ಕೇವಲ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಹಣಾಹಣಿ ಎಂಬುದಷ್ಟನ್ನೇ ನೊಡಬೇಡಿ. ಈ ಎರಡು ತಂಡಗಳ ಮುಖಾಮುಖಿಯ ಮೇಲಷ್ಟೇ ಗಮನ ನೀಡುವ ಬದಲಿಗೆ ಇಡೀ ಟೂರ್ನಿಯನ್ನು ಗೆಲ್ಲುವತ್ತ ಚಿತ್ತ ಹರಿಸಬೇಕಿದೆ ಹಾಗಿದ್ದಾಗ ತಂಡಕ್ಕೆ ಖಂಡಿತಾ ಯಶಸ್ಸು ದೊರೆಯಲಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಸೌರವ್ ಗಂಗೂಲಿ.

ಏಷ್ಯಾ ಕಪ್ ಎಂದಷ್ಟೇ ನಾನು ನೊಡುತ್ತೇನೆ

ಏಷ್ಯಾ ಕಪ್ ಎಂದಷ್ಟೇ ನಾನು ನೊಡುತ್ತೇನೆ

ಇಂಡಿಯಾ ಟುಡೇಗೆ ನೀಡಿದ ಸಂದರ್ಶನದ ಸಂದರ್ಭದಲ್ಲಿ ಮಾಜಿ ನಾಯಕ ಸೌರವ್ ಗಂಗೂಲಿ ಏಷ್ಯಾ ಕಪ್ ಟೂರ್ನಿ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. "ನಾನು ಈ ಟೂರ್ನಮೆಂಟ್‌ಅನ್ನು ಏಷ್ಯಾ ಕಪ್ ಟೂರ್ನಿಯಾಗಿಯೇ ನೊಡುತ್ತೇನೆ. ಯಾವುದೇ ಟೂರ್ನಮೆಂಟ್‌ಅನ್ನು ಭಾರತ ಹಾಗೂ ಪಾಕಿಸ್ತಾನಗಳ ಟೂರ್ನಿ ಎಂಬುದಾಗಿ ನೋಡುವುದಿಲ್ಲ. ನಾನು ಆಡುತ್ತಿದ್ದ ದಿನಗಳಲ್ಲಿಯೂ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ನನಗೆ ಇತರ ಪಂದ್ಯಗಳಂತೆಯೇ ಮತ್ತೊಂದು ಪಂದ್ಯ. ನಾನು ಯಾವಾಗಲೂ ಟೂರ್ನಿಯನ್ನು ಗೆಲ್ಲಲು ಬಯಸುತ್ತೇನೆ" ಎಂದಿದ್ದಾರೆ ಸೌರವ್ ಗಂಗೂಲಿ.

PAK vs NED: ನೆದರ್ಲೆಂಡ್ಸ್‌ ವಿರುದ್ಧ ವಿಶ್ವದಾಖಲೆ ಮಾಡಿದ ಬಾಬರ್ ಅಜಮ್

ಏಷ್ಯಾ ಕಪ್‌ನಲ್ಲಿ ಭಾರತದ ಪ್ರದರ್ಶನದ ಬಗ್ಗೆ ಗಂಗೂಲಿ ವಿಶ್ವಾಸ

ಏಷ್ಯಾ ಕಪ್‌ನಲ್ಲಿ ಭಾರತದ ಪ್ರದರ್ಶನದ ಬಗ್ಗೆ ಗಂಗೂಲಿ ವಿಶ್ವಾಸ

ಇನ್ನು ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ತಂಡ ಅದ್ಭುತವಾದ ಪ್ರದರ್ಶನವನ್ನು ನಿಡುವ ವಿಶ್ವಾಸವಿದೆ ಎಂದಿದ್ದಾರೆ ಸೌರವ್ ಗಂಗೂಲಿ. "ಭಾರತ ಉತ್ತಮವಾದ ತಂಡವಾಗಿದ್ದು ಇತ್ತೀಚಿನ ದಿನಗಳಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ಈ ತಂಡ ಏಷ್ಯಾ ಕಪ್ ಟೂರ್ನಿಯಲ್ಲಿಯೂ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ" ಎಂದಿದ್ದಾರೆ ಭಾರತ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಅದ್ಯಕ್ಷ ಸೌರವ್ ಗಂಗೂಲಿ.

ಗಾಯದ ಕಾರಣ ತಂಡದಿಂದ ಸ್ಥಾನ ಕಳೆದುಕೊಂಡ 4 ದುರದೃಷ್ಟವಂತ ಕ್ರಿಕೆಟರ್‌ಗಳು

Ravindra Jadeja CSK ಬಿಟ್ಟು ಹೋಗುವುದು ಪಕ್ಕಾ | *Cricket | OneIndia Kannada
ಗ್ರೂಪ್ ಹಂತದಲ್ಲಿ ಮುಖಾಮುಖಿಯಾಗಲಿದೆ ಭಾರತ ಹಾಗೂ ಪಾಕಿಸ್ತಾನ

ಗ್ರೂಪ್ ಹಂತದಲ್ಲಿ ಮುಖಾಮುಖಿಯಾಗಲಿದೆ ಭಾರತ ಹಾಗೂ ಪಾಕಿಸ್ತಾನ

ಈ ಬಾರಿಯ ಏಷ್ಯಾ ಕಪ್ ಟೂರ್ನಿ ಆಗಸ್ಟ್ 27ರಿಂದ ಆರಂಭವಾಗಲಿದ್ದು ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ತಂಡಗಳ ಮುಖಾಮುಖಿಯೊಂದಿಗೆ ಟೂರ್ನಿಗೆ ಚಾಲನೆ ದೊರೆಯಲಿದೆ. ಆಗಸ್ಟ್ 28ರಂದು ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುವ ಮೂಲಕ ತಮ್ಮ ಅಭಿಯಾನವನ್ನು ಆರಂಭಿಸಲಿದೆ. ಇನ್ನು ಆರು ತಂಡಗಳು ಭಾಗವಹಿಸುವ ಮುಖ್ಯ ಟೂರ್ನಿ ಆರಂಭಕ್ಕೂ ಮುನ್ನ ಆರ್ಹತಾ ಸುತ್ತು ನಡೆಯಲಿದ್ದು ನಂತರ ಆರು ತಂಡಗಳು ಎರಡು ಗುಂಪುಗಳಾಗಿ ಏಷ್ಯಾ ಕಪ್ ಟೂರ್ನಿಯ ಲೀಗ್ ಹಂತದಲ್ಲಿ ಸೆಣೆಸಾಟ ನಡೆಸಲಿದೆ.

Story first published: Wednesday, August 17, 2022, 14:22 [IST]
Other articles published on Aug 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X