ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗಾಯದ ಕಾರಣ ತಂಡದಿಂದ ಸ್ಥಾನ ಕಳೆದುಕೊಂಡ 4 ದುರದೃಷ್ಟವಂತ ಕ್ರಿಕೆಟರ್‌ಗಳು

These 4 Indian cricketers lost their place in Indian squad because of injuries

ಭಾರತ ಕ್ರಿಕೆಟ್ ತಂಡ ಪ್ರಸ್ತುತ ಸಾಕಷ್ಟು ಪ್ರಮಾಣದಲ್ಲಿ ಪ್ರತಿಭಾನ್ವಿತ ಆಟಗಾರರನ್ನು ಹೊಂದಿದ್ದು ಹಲವರು ಆಡುವ ಬಳಗದಲ್ಲಿ ಸ್ಥಾನವನ್ನು ಪಡೆದುಕೊಳ್ಳುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ತಂಡವನ್ನ ಪ್ರತಿನಿಧಿಸುವ ಸಾಮರ್ಥ್ಯ ಹೊಂದಿರುವ ಸಾಕಷ್ಟು ಪ್ರಮಾಣದ ಕ್ರಿಕೆಟರ್‌ಗಳು ಭಾರತದಲ್ಲಿದ್ದಾರೆ. ಆದರೆ ದುರದೃಷ್ಟವಶಾತ್ ಎಲ್ಲರಿಗೂ ಆಡುವ ಅವಕಾಶಗಳು ಸಿಗುವುದಿಲ್ಲ.

ಇನ್ನು ಕೆಲ ಆಟಗಾರರಿದ್ದಾರೆ. ಅವರ ಪ್ರತಿಭೆ, ಸಾಮರ್ಥ್ಯಗಳು ಆಯ್ಕೆಗಾರರಿಗೆ ತೃಪ್ತಿ ನೀಡಿ ತಂಡಕ್ಕೆ ಆಯ್ಕೆಯಾಗಿರುತ್ತಾರೆ. ಹಾಗಿದ್ದರೂ ದುರದೃಷ್ಟ ಇಂಥಾ ಆಟಗಾರರ ಬೆನ್ನ ಹಿಂದೆಯೇ ಇರುತ್ತದೆ. ಗಾಯದ ಕಾರಣದಿಂದಾಗಿ ಸಿಕ್ಕ ಅವಕಾಶಗಳನ್ನು ಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವೇ ಆಗುವುದಿಲ್ಲ.

ಮಹಾರಾಜ ಟ್ರೋಫಿ: ಅರ್ಧ ಟೂರ್ನಿ ಮುಕ್ತಾಯದ ನಂತರ ಶಿವಮೊಗ್ಗಕ್ಕೆ ಕೊನೆಯ ಸ್ಥಾನ; ನಂಬರ್ 1 ಯಾರು?ಮಹಾರಾಜ ಟ್ರೋಫಿ: ಅರ್ಧ ಟೂರ್ನಿ ಮುಕ್ತಾಯದ ನಂತರ ಶಿವಮೊಗ್ಗಕ್ಕೆ ಕೊನೆಯ ಸ್ಥಾನ; ನಂಬರ್ 1 ಯಾರು?

ಭಾರತ ತಂಡದಲ್ಲಿ ಗಾಯದ ಕಾರಣದಿಂದಾಗಿ ಅವಕಾಶ ಕಳೆದುಕೊಂಡ ನಾಲ್ವರು ಕ್ರಿಕೆಟಿಗರು ಯಾರು ಎಂಬುದನ್ನು ಮುಂದೆ ಓದಿ..

ಆಲ್‌ರೌಂಡರ್ ವಾಶಿಂಗ್ಟನ್ ಸುಂದರ್

ಆಲ್‌ರೌಂಡರ್ ವಾಶಿಂಗ್ಟನ್ ಸುಂದರ್

ಐಸಿಸಿ ಟಿ20 ಶ್ರೇಯಾಂಕದಲ್ಲಿ ಭಾರತದ ಪರ ಅಗ್ರ ಶ್ರೇಯಾಂಕವನ್ನು ಹೊಂದಿದ್ದರು ವಾಶಿಂಗ್ಟನ್ ಸುಂದರ್. ಆದರೆ ಕಳೆದ ಒಂದು ವರ್ಷದಿಂದೀಚೆಗೆ ಪದೇ ಪದೇ ವಾಶಿಂಗ್ಟನ್ ಸುಂದರ್‌ಗೆ ಗಾಯದ ಸಮಸ್ಯೆ ಕಾಡುತ್ತಿದ್ದು ತಂಡದಲ್ಲಿ ಸ್ಥಿರವಾಗಿ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ. ಅದರಲ್ಲೂ ಹೆಚ್ಚಾಗಿ ಅಭ್ಯಾಸ ಪಂದ್ಯಗಳನ್ನು ಆಡುತ್ತಿದ್ದಾಗಲೇ ಹೆಚ್ಚಿನ ಬಾರಿ ಗಾಯಕ್ಕೆ ತುತ್ತಾಗಿದ್ದಾರೆ ವಾಶಿಂಗ್ಟನ್ ಸುಂದರ್. ಜಿಂಬಾಬ್ವೆ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದ ವಾಶಿಂಗ್ಟನ್ ಸುಂದರ್ ಸರಣಿಗೆ ಮುನ್ನ ಇಂಗ್ಲೆಂಡ್‌ನಲ್ಲಿ ರಾಯಲ್ ಲಂಡನ್ ಏಕದಿನ ಕಪ್ ಟೂರ್ನಿಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಎಡ ಭುಜಕ್ಕೆ ಗಾಯಮಾಡಿಕೊಂಡು ಜಿಂಬಾಬ್ವೆ ಪ್ರವಾಸದಿಂದ ಹೊರಬಿದ್ದಿದ್ದಾರೆ.

ಭಾರತ ಫುಟ್‌ಬಾಲ್‌ ಫೆಡರೇಶನ್ ಅಮಾನತುಗೊಳಿಸಿದ ಫಿಫಾ; ಭಾರತಕ್ಕೆ ಭಾರೀ ಮುಖಭಂಗ

ವೇಗದ ಬೌಲರ್ ಟಿ ನಟರಾಜನ್

ವೇಗದ ಬೌಲರ್ ಟಿ ನಟರಾಜನ್

2020ರಲ್ಲಿ ಭಾರತದ ಪರವಾಗಿ ಮ್ಯಾಚ್ ವಿನ್ನಿಂಗ್ ಬೌಲರ್ ಆಗಿ ಮಿಂಚಿದ್ದರು ಟಿ ನಟರಾಜನ್. ಐಪಿಎಲ್‌ನಲ್ಲಿ ನೀಡಿದ ಮಾಓಘ ಪ್ರದರ್ಶನದಿಂದಾಗಿ ಭಾರತ ತಂಡಕ್ಕೆ ಆಯ್ಕೆಯಾದ ನಟರಾಜನ್ ಆಸ್ಟ್ರೇಲಿಯಾ ಪ್ರವಾಸದಲ್ಲಿ ನೀಡಿದ ಪ್ರದರ್ಶನದಿಂದಾಗಿ ಭಾರತೀಯ ಕ್ರಿಕೆಟ್ ಪ್ರೇಮಿಗಳ ಹೃದಯದಲ್ಲಿ ಸ್ಥಾನ ಪಡೆದುಕೊಂಡರು. ಆದರೆ ನಂತರ ಮೊಣಕಾಲಿನ ಗಾಯಕ್ಕೆ ತುತ್ತಾದ ನಟ್ಟು ಮತ್ತೆ ಭಾರತ ತಂಡದಲ್ಲಿ ಸ್ಥಾನವನ್ನು ಪಡೆಯಲು ವಿಫಲವಾಗಿದ್ದಾರೆ.

ಆಲ್‌ರೌಂಡರ್ ವಿಜಯ್ ಶಂಕರ್

ಆಲ್‌ರೌಂಡರ್ ವಿಜಯ್ ಶಂಕರ್

2019ರ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡದ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಂಡಿದ್ದ ಆಲ್‌ರೌಂಡರ್ ಆಟಗಾರ ವಿಜಯ್ ಶಂಕರ್. ಏಕದಿನ ಕ್ರಿಕೆಟ್ ಮಾದರಿಯಲ್ಲಿ ಭಾರತ ತಂಡದಲ್ಲಿ ಸಿಕ್ಕ ಅವಕಾಶವನ್ನು ದೊಡ್ಡ ಮಟ್ಟದಲ್ಲಿ ಉಪಯೋಗಿಸಿಕೊಳ್ಳಲು ವಿಫಲವಾಗಿದ್ದರು ತಮಿಳುನಾಡಿನ ಈ ಆಟಗಾರ. ಏಕದಿನ ವಿಶ್ವಕಪ್‌ನಲ್ಲಿ ಗಾಯದ ಕಾರಣದಿಂದಾಗಿ ಸ್ಥಾನವನ್ನು ಕಳೆದುಕೊಂಡ ಬಳಿಕ ಮತ್ತೆ ತಂಡಕ್ಕೆ ಸೇರ್ಪಡೆಯಾಗಲು ವಿಫಲವಾಗಿದ್ದಾರೆ.

ಕುಮಾರ ಸಂಗಕ್ಕಾರ ದಾಖಲೆಯನ್ನ ಮುರಿದ ಚೇತೇಶ್ವರ ಪೂಜಾರ: ಗರಿಷ್ಠ ರನ್ ಕಲೆಹಾಕಿದ ಏಷ್ಯಾದ ಕ್ರಿಕೆಟರ್‌

ಹಿರಿಯ ಕ್ರಿಕೆಟಿಗ ಮನೋಜ್ ತಿವಾರಿ

ಹಿರಿಯ ಕ್ರಿಕೆಟಿಗ ಮನೋಜ್ ತಿವಾರಿ

ಹಿರಿಯ ಆಟಗಾರ ಮನೋಜ್ ತಿವಾರಿ ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚುತ್ತಿದ್ದಾರೆ. ಈ ಮುನ್ನ ಭಾರತೀಯ ತಂಡದಲ್ಲಿ ಆಡುವ ಅವಕಾಶವನ್ನು ಪಡೆದುಕೊಂಡಿದ್ದ ಮನೋಜ್ ತಿವಾರಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕವನ್ನು ಕೂಡ ಬಾರಿಸಿದ್ದರು. ಆದರೆ ಗಾಯದ ಸಮಸ್ಯೆ ಮನೋಜ್ ತಿವಾರಿ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಹಿನ್ನಡೆಯುಂಟು ಮಾಡಿತು. ದೇಶೀಯ ಕ್ರಿಕೆಟ್‌ನಲ್ಲಿ ಮನೋಜ್ ತಿವಾರಿ ಈಗಲೂ ಆಡುತ್ತಿದ್ದು ಉತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮತ್ತೆ ಸ್ಥಾನವನ್ನು ಪಡೆಯುವ ಸಾಧ್ಯತೆ ತೀರಾ ವಿರಳ.

Story first published: Tuesday, August 16, 2022, 19:34 [IST]
Other articles published on Aug 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X