ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

PAK vs NED: ನೆದರ್ಲೆಂಡ್ಸ್‌ ವಿರುದ್ಧ ವಿಶ್ವದಾಖಲೆ ಮಾಡಿದ ಬಾಬರ್ ಅಜಮ್

Babar azam

ನೆದರ್ಲೆಂಡ್ಸ್‌ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ತಂಡವು 16 ರನ್‌ಗಳಿಂದ ಪಂದ್ಯವನ್ನ ಗೆದ್ದು ಬೀಗಿದ್ದು, ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಪಾಕ್ ನೀಡಿದ್ದ 315 ರನ್ ಗುರಿ ಬೆನ್ನತ್ತಲಾಗದೆ ನೆದರ್ಲೆಂಡ್ಸ್‌ 298ರನ್‌ಗಳಿಗೆ ಇನ್ನಿಂಗ್ಸ್‌ ಮುಕ್ತಾಯಗೊಳಿಸಿದ್ದು, ಬಾಬರ್ ಅಜಮ್ ಟೀಂ ಪಂದ್ಯವನ್ನ ತನ್ನದಾಗಿಸಿಕೊಂಡಿದೆ.

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ ಪರ ನಾಯಕ ಬಾಬರ್ ಅಜಮ್ ತಂಡಕ್ಕೆ ಆಧಾರವಾಗಿದ್ದಲ್ಲದೆ ವೈಯಕ್ತಿಕ ವಿಶ್ವ ದಾಖಲೆಯನ್ನು ಮಾಡಿದ್ದಾರೆ. ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬಾಬರ್ ಅಜಮ್ ಹೊಸ ದಾಖಲೆ ಬರೆದಿದ್ದಾರೆ.

ಮುಂಬೈ ತೊರೆಯಲು ರೆಡಿಯಾದ ಮತ್ತೊಬ್ಬ ಪ್ಲೇಯರ್: NOCಗಾಗಿ ಕಾಯುತ್ತಿರುವ ಸಿದ್ದೇಶ್ ಲಾಡ್‌ಮುಂಬೈ ತೊರೆಯಲು ರೆಡಿಯಾದ ಮತ್ತೊಬ್ಬ ಪ್ಲೇಯರ್: NOCಗಾಗಿ ಕಾಯುತ್ತಿರುವ ಸಿದ್ದೇಶ್ ಲಾಡ್‌

ಆರಂಭಿಕ ಬ್ಯಾಟರ್ ಇಮಾಮ್-ಉಲ್-ಹಕ್ 19 ಎಸೆತಗಳಲ್ಲಿ 2 ರನ್ ಗಳಿಸಿ ಔಟಾದ ಬಳಿಕ ಕ್ರೀಸ್‌ಗಿಳಿದ ಬಾಬರ್ ಅಜಮ್ ಓಪನರ್ ಫಖರ್ ಜಮಾನ್ ಜೊತೆಗೆ ಉತ್ತಮ ಜೊತೆಯಾಟವಾಡಿ ತಂಡವನ್ನು ಕುಸಿತದಿಂದ ಪಾರು ಮಾಡಿದರು. ಇಬ್ಬರೂ ಸತತವಾಗಿ ಅರ್ಧಶತಕ ದಾಟಿದರು. ಬಾಬರ್ ಅಜಮ್ 74 ರನ್ ಗಳಿಸಿ ಔಟಾದ್ರೆ, ಇನ್ನೊಂದು ತುದಿಯಲ್ಲಿ ಫಖರ್ ಜಮಾನ್ ಶತಕ ಬಾರಿಸಿದರು. ಫಖರ್ ಜಮಾನ್ 109 ಎಸೆತಗಳಲ್ಲಿ 109ರನ್ ಗಳಿಸಿ ಔಟಾದರು.

ಮೊಹಮ್ಮದ್ ರಿಜ್ವಾನ್ 14 ರನ್ ಗಳಿಸಿ ಔಟಾದರು ಮತ್ತು ಕುಸ್ದಿಲ್ ಶಾ 21 ರನ್ ಗಳಿಸಿ ವಿಕೆಟ್‌ ಒಪ್ಪಿಸಿದ್ರು. ಆದ್ರೆ ಅಂತಿಮವಾಗಿ ಶದಾಬ್ ಖಾನ್ ಅಜೇಯ 48ರನ್, ಅಘಾ ಸಲ್ಮಾನ್ ಅಜೇಯ 27 ರನ್ ಕಲೆಹಾಕಿ ತಂಡಕ್ಕೆ ಆಧಾರವಾದ್ರು. ಪಾಕಿಸ್ತಾನ ನಿಗದಿತ 50 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 314 ರನ್ ಕಲೆಹಾಕಿತು.

ಪಾಕಿಸ್ತಾನದ ಈ ಇನ್ನಿಂಗ್ಸ್‌ನಲ್ಲಿ ಬಾಬರ್ ಅಜಮ್ 3 ದಾಖಲೆಗಳನ್ನು ಮಾಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಆಡಿದ ಕೊನೆಯ 8 ಇನ್ನಿಂಗ್ಸ್‌ಗಳಲ್ಲಿ ಬಾಬರ್ ಅಜಮ್ 7 ಅರ್ಧಶತಕಗಳನ್ನು ದಾಟಿದ್ದಾರೆ. ಇದು 4 ಶತಕಗಳನ್ನು ಸಹ ಒಳಗೊಂಡಿದೆ. 158, 57, 114, 105, 103, 77, 1, 74 ರನ್ ಇದು ಕಳೆದ 8 ಇನಿಂಗ್ಸ್‌ಗಳಲ್ಲಿ ಬಾಬರ್ ಅಜಮ್ ಗಳಿಸಿದ ಸ್ಕೋರ್‌ಗಳಾಗಿವೆ. ಇದಲ್ಲದೆ ಏಕದಿನ ಕ್ರಿಕೆಟ್‌ನಲ್ಲಿ ಬಾಬರ್ ಅಜಮ್ ಬ್ಯಾಟಿಂಗ್ ಸರಾಸರಿ 60 ಆಗಿದೆ.

ಇದರ ಜೊತೆಗೆ ಏಕದಿನ ಕ್ರಿಕೆಟ್‌ನಲ್ಲಿ ಬಾಬರ್ ಅಜಮ್ ಹೊಸ ದಾಖಲೆ ಬರೆದಿದ್ದಾರೆ. ಬಾಬರ್ ಅಜಮ್ 88 ಇನ್ನಿಂಗ್ಸ್‌ಗಳಲ್ಲಿ 4481 ರನ್ ಗಳಿಸಿದ್ದಾರೆ. ಈ ಹಿಂದೆ 88 ಇನ್ನಿಂಗ್ಸ್‌ಗಳಲ್ಲಿ 4473 ರನ್ ಗಳಿಸಿದ್ದ ದಕ್ಷಿಣ ಆಫ್ರಿಕಾದ ಆಟಗಾರ ಹಶೀಮ್ ಆಮ್ಲಾ ಈ ದಾಖಲೆಯನ್ನ ಹೊಂದಿದ್ದರು. ಆದ್ರೆ ಬಾಬರ್ ಅಜಮ್ ಈ ದಾಖಲೆ ಮುರಿದು ಹೊಸ ವಿಶ್ವದಾಖಲೆ ಮಾಡಿದ್ದಾರೆ. ಜೊತೆಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಕಿಸ್ತಾನ 1-0 ಮುನ್ನಡೆ ಪಡೆದುಕೊಂಡಿದೆ.

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್

ನೆದರ್ಲೆಂಡ್ಸ್‌
ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಓಡೌಡ್, ಟಾಮ್ ಕೂಪರ್, ಬಾಸ್ ಡಿ ಲೀಡ್, ಸ್ಕಾಟ್ ಎಡ್ವರ್ಡ್ಸ್ (ನಾಯಕ ಮತ್ತು ವಿಕೆಟ್ ಕೀಪರ್), ತೇಜಾ ನಿಡಮನೂರು, ಲೋಗನ್ ವ್ಯಾನ್ ಬೀಕ್, ಟಿಮ್ ಪ್ರಿಂಗಲ್, ಆರ್ಯನ್ ದತ್, ವೆಸ್ಲಿ ಬ್ಯಾರೆಸಿ, ವಿವಿಯನ್ ಕಿಂಗ್ಮಾ

ಬೆಂಚ್ : ಮೂಸಾ ಅಹ್ಮದ್, ಶರ್ನಾಜ್ ಅಹ್ಮದ್, ಶರ್ನಾಜ್ ಕ್ಲೇನ್

ಪಾಕಿಸ್ತಾನ
ಫಖಾರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಆಜಮ್ (ನಾಯಕ),ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ಖುಷ್ದಿಲ್ ಶಾ, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಮ್ ಜೂನಿಯರ್, ಹಾರಿಸ್ ರೌಫ್, ನಸೀಮ್ ಶಾ

ಬೆಂಚ್: ಶಹೀನ್ ಅಫ್ರಿದಿ, ಮೊಹಮ್ಮದ್ ಮಹಮ್ಮದ್ ಹಾರಿಸ್, ಜಹಿದ್ ಶಹನವಾಜ್ ದಹಾನಿ, ಅಬ್ದುಲ್ಲಾ ಶಫೀಕ್

Story first published: Wednesday, August 17, 2022, 16:05 [IST]
Other articles published on Aug 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X