ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Asia Cup 2022: 15 ಏಷ್ಯಾಕಪ್ ಪೈಕಿ ಎಲ್ಲಾ ಬಾರಿಯೂ ಕಣಕ್ಕಿಳಿದಿರುವುದು ಈ ಒಂದು ತಂಡ ಮಾತ್ರ!

Asia Cup 2022: Sri Lanka is the only team which played all the 15 Asia Cup seasons

ಸದ್ಯ ಯುಎಇ ನೆಲದಲ್ಲಿ ಬಹುನಿರೀಕ್ಷಿತ ಏಷ್ಯಾಕಪ್ ಟೂರ್ನಿಯ ಪಂದ್ಯಗಳು ಜರುಗುತ್ತಿವೆ. ಈ ಬಾರಿ ನಡೆಯುತ್ತಿರುವ ಏಷ್ಯಾಕಪ್ ಟೂರ್ನಿ ಹದಿನೈದನೇ ಆವೃತ್ತಿಯಾಗಿದ್ದು, ಟೂರ್ನಿಯಲ್ಲಿ ಒಟ್ಟು 6 ತಂಡಗಳು ಭಾಗವಹಿಸಿವೆ. ಇನ್ನು ಈ ಬಾರಿಯ ಏಷ್ಯಾಕಪ್ ಟೂರ್ನಿಯ ಕ್ವಾಲಿಫೈಯರ್ ಸುತ್ತಿನಲ್ಲಿ ಗೆದ್ದ ಹಾಂಗ್ ಕಾಂಗ್ ಟೂರ್ನಿಯಲ್ಲಿ ಆರನೇ ತಂಡವಾಗಿ ಕಣಕ್ಕಿಳಿದಿದೆ.

ಅತಿ ಹೆಚ್ಚು ಟಿ20 ಗೆಲುವು: ಕೊಹ್ಲಿಯನ್ನು ಹಿಂದಿಕ್ಕಿ ಬೆಸ್ಟ್ ಕ್ಯಾಪ್ಟನ್ ಎನಿಸಿಕೊಂಡ ರೋಹಿತ್ ಶರ್ಮಾ!ಅತಿ ಹೆಚ್ಚು ಟಿ20 ಗೆಲುವು: ಕೊಹ್ಲಿಯನ್ನು ಹಿಂದಿಕ್ಕಿ ಬೆಸ್ಟ್ ಕ್ಯಾಪ್ಟನ್ ಎನಿಸಿಕೊಂಡ ರೋಹಿತ್ ಶರ್ಮಾ!

ವಿವಿಧ ಏಷ್ಯಾಕಪ್ ಟೂರ್ನಿಗಳಲ್ಲಿ ವಿವಿಧ ತಂಡಗಳು ಅರ್ಹತೆಯನ್ನು ಪಡೆದುಕೊಂಡು ಕಣಕ್ಕಿಳಿದಿದ್ದು ಹೆಚ್ಚಾಗಿ ಭಾರತ, ಶ್ರೀಲಂಕಾ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಭಾಗವಹಿಸಿವೆ. ಹಾಂಕಾಂಗ್ ಹಾಗೂ ಯುಎಇ ತಂಡಗಳು ಕೆಲ ಆವೃತ್ತಿಗಳಲ್ಲಿ ಕ್ವಾಲಿಫೈಯರ್ ಸುತ್ತನ್ನು ಗೆದ್ದು ಟೂರ್ನಿಗೆ ಲಗ್ಗೆ ಇಟ್ಟಿವೆ. ಇನ್ನುಳಿದ ತಂಡಗಳಾದ ಜಪಾನ್, ಕುವೈತ್, ನೇಪಾಳ, ಮಲೇಷಿಯಾ, ಒಮನ್ ಮತ್ತು ಸಿಂಗಪುರ ತಂಡಗಳು ಕೆಲ ಟೂರ್ನಿಗಳಲ್ಲಿ ಕ್ವಾಲಿಫೈಯರ್ ಆಡಿದರೂ ಸಹ ಅರ್ಹತೆ ಗಿಟ್ಟಿಸಿಕೊಳ್ಳಲು ಯಶಸ್ವಿಯಾಗದೇ ಹಿನ್ನಡೆ ಅನುಭವಿಸಿವೆ.

Asia Cup 2022: ಅತಿಹೆಚ್ಚು ಡಕ್ಔಟ್ ಕೆಟ್ಟ ದಾಖಲೆಯಲ್ಲಿ ರೋಹಿತ್, ರಾಹುಲ್ ನಾ ಮುಂದು ತಾ ಮುಂದು!Asia Cup 2022: ಅತಿಹೆಚ್ಚು ಡಕ್ಔಟ್ ಕೆಟ್ಟ ದಾಖಲೆಯಲ್ಲಿ ರೋಹಿತ್, ರಾಹುಲ್ ನಾ ಮುಂದು ತಾ ಮುಂದು!

ಇನ್ನು ಏಷ್ಯಾಕಪ್ ಟೂರ್ನಿ ಪ್ರಪ್ರಥಮ ಬಾರಿಗೆ 1984ರಲ್ಲಿ ಜರುಗಿತು ಹಾಗೂ ಆ ಚೊಚ್ಚಲ ಆವೃತ್ತಿಯಲ್ಲಿ ಭಾರತ, ಶ್ರೀಲಂಕಾ ಹಾಗೂ ಪಾಕಿಸ್ತಾನ ತಂಡಗಳು ಭಾಗವಹಿಸಿದ್ದವು ಹಾಗೂ 1986ರಲ್ಲಿ ಬಾಂಗ್ಲಾದೇಶ ಚೊಚ್ಚಲ ಬಾರಿಗೆ ಏಷ್ಯಾಕಪ್ ಟೂರ್ನಿಯಲ್ಲಿ ಕಣಕ್ಕಿಳಿದಿತ್ತು. ಹೀಗೆ 1984ರಲ್ಲಿ ಆರಂಭವಾದ ಏಷ್ಯಾ ಕಪ್ ಟೂರ್ನಿ 2014ರವರೆಗೂ ಏಕದಿನ ಮಾದರಿಯಲ್ಲಿ ನಡೆದಿತ್ತು ಹಾಗೂ 2015ರ ಏಷ್ಯಾಕಪ್ ಕೌನ್ಸಿಲ್ ವಿಶೇಷ ಸಭೆಯಲ್ಲಿ ಟೂರ್ನಿಯನ್ನು ಒಂದು ಆವೃತ್ತಿಯನ್ನು ಟಿ ಟ್ವೆಂಟಿ ಮಾದರಿಯಲ್ಲಿ ಹಾಗೂ ನಂತರದ ಆವೃತ್ತಿಯನ್ನು ಏಕದಿನ ಮಾದರಿಯಲ್ಲಿ ನಡೆಸಲು ತೀರ್ಮಾನಿಸಲಾಯಿತು. ಹೀಗಾಗಿ ನಂತರದ ಆವೃತ್ತಿಗಳು ಟಿ ಟ್ವೆಂಟಿ ಹಾಗೂ ಏಕದಿನ ಎರಡೂ ಮಾದರಿಗಳಲ್ಲಿಯೂ ನಡೆಯುತ್ತಾ ಬಂದಿದೆ. ಈ ಬಾರಿ ನಡೆಯುತ್ತಿರುವ ಏಷ್ಯಾಕಪ್ ಟೂರ್ನಿಯು ಸೇರಿದಂತೆ ಇಲ್ಲಿಯವರೆಗೂ ಒಟ್ಟು 15 ಏಷ್ಯಾ ಕಪ್ ಟೂರ್ನಿಗಳು ನಡೆದಿದ್ದು, ಎಲ್ಲಾ ಬಾರಿಯೂ ಕೇವಲ ಒಂದು ತಂಡ ಮಾತ್ರ ಕಣಕ್ಕಿಳಿದಿದೆ.

ಎಲ್ಲಾ ಏಷ್ಯಾಕಪ್ ಆವೃತ್ತಿಗಳನ್ನು ಆಡಿರುವುದು ಈ ತಂಡ ಮಾತ್ರ

ಎಲ್ಲಾ ಏಷ್ಯಾಕಪ್ ಆವೃತ್ತಿಗಳನ್ನು ಆಡಿರುವುದು ಈ ತಂಡ ಮಾತ್ರ

1984ರಿಂದ 2022ರವರೆಗೂ ನಡೆದಿರುವ ಒಟ್ಟು 15 ಏಷ್ಯಾಕಪ್ ಆವೃತ್ತಿಗಳಲ್ಲಿ 15 ಬಾರಿಯೂ ಆಡಿರುವ ಏಕೈಕ ತಂಡವೆಂದರೆ ಅದು ಶ್ರೀಲಂಕಾ. ಶ್ರೀಲಂಕಾ ಎಲ್ಲಾ ಬಾರಿಯೂ ಏಷ್ಯಾಕಪ್ ಟೂರ್ನಿಯನ್ನು ಆಡಿದ್ದರೆ, ಭಾರತ ಮತ್ತು ಪಾಕಿಸ್ತಾನ ತಂಡಗಳು ತಲಾ ಒಂದೊಂದು ಆವೃತ್ತಿಯಲ್ಲಿ ಕಣಕ್ಕಿಳಿಯದೇ ಉಳಿದಿದ್ದವು.

ಈ ಆವೃತ್ತಿಗಳಲ್ಲಿ ಭಾರತ ಮತ್ತು ಪಾಕ್ ಗೈರು

ಈ ಆವೃತ್ತಿಗಳಲ್ಲಿ ಭಾರತ ಮತ್ತು ಪಾಕ್ ಗೈರು

ಶ್ರೀಲಂಕಾದಲ್ಲಿ 1986ರಲ್ಲಿ ನಡೆದಿದ್ದ ಎರಡನೇ ಆವೃತ್ತಿಯ ಏಷ್ಯಾಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಭಾಗವಹಿಸಿರಲಿಲ್ಲ. ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಜತೆ ಬಿಸಿಸಿಐನ ಸಂಬಂಧ ಹಳಸಿದ್ದ ಕಾರಣ ಟೀಮ್ ಇಂಡಿಯಾ ಅಂದು ಏಷ್ಯಾಕಪ್ ಟೂರ್ನಿಯನ್ನು ಆಡಲು ಶ್ರೀಲಂಕಾ ಪ್ರವಾಸ ಕೈಗೊಳ್ಳದೇ ಟೂರ್ನಿಯಿಂದ ಹಿಂದೆ ಸರಿದಿತ್ತು.

ಇನ್ನು ಪಾಕಿಸ್ತಾನ ತಂಡ 1990ರಲ್ಲಿ ಭಾರತದಲ್ಲಿ ನಡೆದಿದ್ದ ನಾಲ್ಕನೇ ಆವೃತ್ತಿಯ ಏಷ್ಯಾಕಪ್ ಟೂರ್ನಿಯಲ್ಲಿ ಭಾಗವಹಿಸಿರಲಿಲ್ಲ. ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವಿನ ರಾಜಕೀಯ ವೈಮನಸ್ಸಿನ ಕಾರಣದಿಂದಾಗಿ ಪಾಕಿಸ್ತಾನ ಭಾರತ ಪ್ರವಾಸವನ್ನು ಕೈಗೊಳ್ಳದೆಯೇ ಟೂರ್ನಿಯಿಂದ ಹಿಂದೆ ಸರಿದಿತ್ತು.

ಹೀಗಾಗಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಇಲ್ಲಿಯವರೆಗೂ ನಡೆದಿರುವ ಒಟ್ಟು 15 ಏಷ್ಯಾಕಪ್ ಆವೃತ್ತಿಗಳಲ್ಲಿ 14 ಬಾರಿ ಮಾತ್ರ ಕಣಕ್ಕಿಳಿದಿವೆ.

ಪ್ರಥಮ ಆವೃತ್ತಿಯಲ್ಲಿ ಕಣಕ್ಕಿಳಿದಿರಲಿಲ್ಲ ಬಾಂಗ್ಲಾ

ಪ್ರಥಮ ಆವೃತ್ತಿಯಲ್ಲಿ ಕಣಕ್ಕಿಳಿದಿರಲಿಲ್ಲ ಬಾಂಗ್ಲಾ

ಇನ್ನು ಬಾಂಗ್ಲಾದೇಶ ಏಷ್ಯಾಕಪ್ ಚೊಚ್ಚಲ ಆವೃತ್ತಿಯಲ್ಲಿ ಭಾಗವಹಿಸಿರಲಿಲ್ಲ. 1984ರಲ್ಲಿ ಯುಎಇಯಲ್ಲಿ ನಡೆದಿದ್ದ ಚೊಚ್ಚಲ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಮಾತ್ರ ಭಾಗವಹಿಸಿದ್ದವು. ಹಾಗೂ ಈ ಆವೃತ್ತಿಯಲ್ಲಿ ಭಾರತ ಟ್ರೋಫಿಯನ್ನು ಗೆದ್ದಿತ್ತು. ಈ ಮೂಲಕ ಬಾಂಗ್ಲಾದೇಶ ಸಹ ಇಲ್ಲಿಯವರೆಗೂ ನಡೆದಿರುವ ಒಟ್ಟು 15 ಏಷ್ಯಾಕಪ್ ಆವೃತ್ತಿಗಳಲ್ಲಿ 14 ಬಾರಿ ಮಾತ್ರ ಭಾಗವಹಿಸಿದೆ.

Story first published: Friday, September 2, 2022, 22:23 [IST]
Other articles published on Sep 2, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X