AUS vs SA: ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಸಾಧನೆಗೈದ ದಕ್ಷಿಣ ಆಫ್ರಿಕಾದ 8ನೇ ಕ್ರಿಕೆಟಿಗ ಡೀನ್ ಎಲ್ಗರ್

ದಕ್ಷಿಣ ಆಫ್ರಿಕಾ ತಂಡದ ಟೆಸ್ಟ್ ನಾಯಕ ಡೀನ್ ಎಲ್ಗರ್ ಸೋಮವಾರ ಟೆಸ್ಟ್ ಕ್ರಿಕೆಟ್‌ನಲ್ಲಿ 5,000 ರನ್ ಪೂರೈಸಿದರು. ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಡೀನ್ ಎಲ್ಗರ್ ಈ ಮೈಲುಗಲ್ಲನ್ನು ಮುಟ್ಟಿದರು.

ಎರಡನೇ ಟೆಸ್ಟ್‌ ಪಂದ್ಯದಲ್ಲಿ ಎಲ್ಗರ್ ಮೊದಲ ಇನ್ನಿಂಗ್ಸ್‌ನಲ್ಲಿ 68 ಎಸೆತಗಳಲ್ಲಿ ಎರಡು ಬೌಂಡರಿಗಳೊಂದಿಗೆ 26 ರನ್ ಗಳಿಸಿ ಔಟಾದರು. ಇದೀಗ ಡೀನ್ ಎಲ್ಗರ್ 81 ಟೆಸ್ಟ್ ಮತ್ತು 142 ಇನ್ನಿಂಗ್ಸ್‌ಗಳಲ್ಲಿ 38.18ರ ಸರಾಸರಿಯಲ್ಲಿ 5,002 ರನ್ ಗಳಿಸಿದ್ದಾರೆ. ಇದರಲ್ಲಿ 13 ಟೆಸ್ಟ್ ಶತಕ ಮತ್ತು 22 ಅರ್ಧ ಶತಕಗಳನ್ನು ಬಾರಿಸಿದ್ದಾರೆ.

IPL 2023: ಆರ್ಚರ್, ಗ್ರೀನ್ ಉಪಸ್ಥಿತಿ; ಮುಂಬೈ ಇಂಡಿಯನ್ಸ್ ತಂಡದ ಬಲಿಷ್ಠ ಆಡುವ 11ರ ಬಳಗ ಹೀಗಿರಲಿದೆIPL 2023: ಆರ್ಚರ್, ಗ್ರೀನ್ ಉಪಸ್ಥಿತಿ; ಮುಂಬೈ ಇಂಡಿಯನ್ಸ್ ತಂಡದ ಬಲಿಷ್ಠ ಆಡುವ 11ರ ಬಳಗ ಹೀಗಿರಲಿದೆ

5,000 ರನ್ ಪೂರೈಸುವುದರೊಂದಿಗೆ ಡೀನ್ ಎಲ್ಗರ್ ದಕ್ಷಿಣ ಆಫ್ರಿಕಾ ತಂಡದ ಪರ ಟೆಸ್ಟ್‌ನಲ್ಲಿ ಎಂಟನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ. ದಕ್ಷಿಣ ಆಫ್ರಿಕಾ ಪರ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ಆಲ್‌ರೌಂಡರ್ ಜಾಕ್ವೆಸ್ ಕಾಲಿಸ್ 165 ಟೆಸ್ಟ್‌ಗಳಲ್ಲಿ 55.25 ಸರಾಸರಿಯಲ್ಲಿ 13,206 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ. ಅವರು 45 ಶತಕಗಳು ಮತ್ತು 58 ಅರ್ಧ ಶತಕಗಳನ್ನು ಗಳಿಸಿದ್ದು, 224ರ ಅತ್ಯುತ್ತಮ ಸ್ಕೋರ್ ಆಗಿದೆ.

ಜಾಕ್ವೆಸ್ ಕಾಲಿಸ್ ನಂತರದ ಸ್ಥಾನದಲ್ಲಿ ಹಾಶಿಮ್ ಆಮ್ಲಾ (9,282), ಗ್ರೇಮ್ ಸ್ಮಿತ್ (9,253), ಎಬಿ ಡಿವಿಲಿಯರ್ಸ್ (8,765), ಗ್ಯಾರಿ ಕರ್ಸ್ಟನ್ (7,289), ಹರ್ಷಲ್ ಗಿಬ್ಸ್ (6,167) ಮತ್ತು ಮಾರ್ಕ್ ಬೌಚರ್ (5,498) ಇದ್ದಾರೆ.

ಸೋಮವಾರ ಮೆಲ್ಬೋರ್ನ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯದ ಮೊದಲ ದಿನ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದರು ಮತ್ತು ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್‌ಗಳು ಆಸ್ಟ್ರೇಲಿಯಾದ ಮಾರಕ ಬೌಲಿಂಗ್ ದಾಳಿಗೆ ಸಿಲುಕಿದರು. ಯುವ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ 27 ರನ್‌ಗೆ 5 ವಿಕೆಟ್ ಪಡೆಯುವ ಮೂಲಕ ವೃತ್ತಿಜೀವನದ ಅತ್ಯುತ್ತಮ ಸಾಧನೆ ಮಾಡಿದರು.

ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ 189 ರನ್‌ಗಳಿಗೆ ಆಲೌಟ್ ಆದ ನಂತರ, ಆಸ್ಟ್ರೇಲಿಯಾದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಆಕ್ರಮಣಕಾರಿ ಡೇವಿಡ್ ವಾರ್ನರ್ ತಮ್ಮ 100ನೇ ಟೆಸ್ಟ್‌ ಪಂದ್ಯದಲ್ಲಿ ಅಜೇಯ 32 ಮತ್ತು ಮಾರ್ನಸ್ ಲ್ಯಾಬುಸ್ಚಾಗ್ನೆ ಅಜೇಯ 5 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಆತಿಥೇಯ ಆಸ್ಟ್ರೇಲಿಯಾ ಮೊದಲ ದಿನದಾಂತ್ಯಕ್ಕೆ 45 ರನ್‌ಗೆ 1 ವಿಕೆಟ್ ಕಳೆದುಕೊಂಡಿದೆ.

ಕಳೆದ ವಾರ ಬ್ರಿಸ್ಬೇನ್‌ನ ಗಬ್ಬಾ ಪಿಚ್‌ನಲ್ಲಿ ಎರಡು ದಿನಗಳ ಒಳಗೆ ಆಸ್ಟ್ರೇಲಿಯಾ ಮೂರು ಟೆಸ್ಟ್‌ಗಳ ಮೊದಲ ಪಂದ್ಯವನ್ನು ಆರು ವಿಕೆಟ್‌ಗಳಿಂದ ಗೆದ್ದುಕೊಂಡು, 1-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Monday, December 26, 2022, 16:01 [IST]
Other articles published on Dec 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X