ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆರನ್ ಫಿಂಚ್ ತಮ್ಮ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ನಾಳೆ ನೀವೃತ್ತಿ ಘೋಷಣೆ ಸಾಧ್ಯತೆ

ವರದಿಗಳ ಪ್ರಕಾರ ಆಸ್ಟ್ರೇಲಿಯಾ ತಂಡದ ನಾಯಕ ಆರನ್ ಫಿಂಚ್‌ ಸೆಪ್ಟೆಂಬರ್ 10ರಂದು ಶನಿವಾರ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆ ಎನ್ನಲಾಗಿದೆ. ಟೆಲಿಗ್ರಾಫ್ ವರದಿ ಮಾಡಿದಂತೆ ಹಿರಿಯ ಕ್ರಿಕೆಟಿಗ ಆರನ್‌ ಫಿಂಚ್‌ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದ ಕುರಿತು ಶನಿವಾರ ಘೋಷಣೆ ಮಾಡುವ ಸಾಧ್ಯತೆ ಇದೆ, ಇದು ಅನೇಕರಿಗೆ ಆಶ್ಚರ್ಯವನ್ನುಂಟು ಮಾಡಿದೆ.

ಆರನ್ ಫಿಂಚ್ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಆರಂಭಿಕ ಬ್ಯಾಟರ್ ಗಳಲ್ಲಿ ಒಬ್ಬರು. ಆರಂಭದಿಂದಲೇ ಅದ್ಭುತವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಫಿಂಚ್, ಆಸ್ಟ್ರೇಲಿಯಾದ ಬ್ಯಾಟಿಂಗ್‌ ವಿಭಾಗದ ಪ್ರಮುಖ ಶಕ್ತಿಯಾಗಿದ್ದರು.

ವಿರಾಟ್ ಕೊಹ್ಲಿ 71ನೇ ಅಂತರಾಷ್ಟ್ರೀಯ ಶತಕ: 6 ವಿಶೇಷ ದಾಖಲೆಗಳುವಿರಾಟ್ ಕೊಹ್ಲಿ 71ನೇ ಅಂತರಾಷ್ಟ್ರೀಯ ಶತಕ: 6 ವಿಶೇಷ ದಾಖಲೆಗಳು

ಟಿ20 ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆಲ್ಲಲು ವಿಚಾರದಲ್ಲಿ ಆಸ್ಟ್ರೇಲಿಯಾವನ್ನು ದೀರ್ಘಕಾಲ ಟೀಕಿಸಲಾಗಿತ್ತು. ಆಸ್ಟ್ರೇಲಿಯಾ ತಂಡ ಆರನ್ ಫಿಂಚ್ ನಾಯಕತ್ವದಲ್ಲಿ ನ್ಯೂಜಿಲೆಂಡ್ ಅನ್ನು ಫೈನಲ್‌ನಲ್ಲಿ ಸೋಲಿಸುವ ಮೂಲಕ ಚೊಚ್ಚಲ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದು ಟೀಕಾಕಾರರ ಬಾಯಿ ಮುಚ್ಚಿಸಿದ್ದರು.

ದೇಶೀಯ ಕ್ರಿಕೆಟ್‌ನತ್ತ ಗಮನಹರಿಸಲು ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಹೊರಗುಳಿಯಬಹುದು ಎಂದು ನಿರೀಕ್ಷಿಸಲಾಗಿದೆ. ಫಿಂಚ್ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದರೆ, ಆಸ್ಟ್ರೇಲಿಯಾ ತಂಡಕ್ಕೆ ಹೊಸ ನಾಯಕನನ್ನು ಆಯ್ಕೆ ಮಾಡಬೇಕಾಗುತ್ತದೆ.

ಸದ್ಯ ಕಳಪೆ ಫಾರ್ಮ್‌ನಲ್ಲಿರುವ ಆರನ್ ಫಿಂಚ್‌

ಸದ್ಯ ಕಳಪೆ ಫಾರ್ಮ್‌ನಲ್ಲಿರುವ ಆರನ್ ಫಿಂಚ್‌

ಆಸ್ಟ್ರೇಲಿಯಾ ತಂಡದ ಏಕದಿನ ಮತ್ತು ಟಿ20 ತಂಡಗಳ ನಾಯಕರಾಗಿರುವ ಆರನ್ ಫಿಂಚ್ ಸದ್ಯ ಕಳಪೆ ಫಾರ್ಮ್‌ನಲ್ಲಿದ್ದಾರೆ. ಸತತವಾಗಿ ರನ್ ಗಳಿಸಲು ವಿಫಲವಾಗುತ್ತಿರುವುದು ಟೀಕೆಗೆ ಗುರಿಯಾಗಿದೆ. ಆರನ್ ಫಿಂಚ್‌ ತಮ್ಮ ಕೊನೆಯ 7 ಏಕದಿನ ಪಂದ್ಯಗಳಲ್ಲಿ ಕೇವಲ 26 ರನ್ ಮಾತ್ರ ಗಳಿಸಿದ್ದಾರೆ. ಇದರಲ್ಲಿ ಮೂರು ಬಾರಿ ಡಕ್‌ಔಟ್‌ ಆಗಿರುವುದು ಕೂಡ ಸೇರಿದೆ.

ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಆಸೀಸ್ ಸರಣಿಯಲ್ಲಿ ಅವರು ವಿಫಲರಾಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯ ಮೊದಲನೇ ಏಕದಿನ ಪಂದ್ಯದಲ್ಲಿ ಐದು ರನ್ ಗಳಿಸಿದ ನಂತರ ಟ್ರೆಂಟ್ ಬೌಲ್ಟ್‌ಗೆ ವಿಕೆಟ್ ಒಪ್ಪಿಸಿದ್ದರು. ಎರಡನೇ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಆದರೆ, ಇಲ್ಲಿಯವರೆಗಿನ ಎರಡೂ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿದೆ.

IND vs AFG: ಅನುಷ್ಕಾ ಕಬ್ಬಿಣ ಮಹಿಳೆ, ಕೊಹ್ಲಿ ಉಕ್ಕಿನ ಮನುಷ್ಯ; ಹೀಗಂದಿದ್ಯಾಕೆ ಪಾಕ್ ಕ್ರಿಕೆಟಿಗ?

ಟಿ20 ಮಾದರಿಯಲ್ಲಿ ಆಡುವ ಸಾಧ್ಯತೆ

ಟಿ20 ಮಾದರಿಯಲ್ಲಿ ಆಡುವ ಸಾಧ್ಯತೆ

ಕೆಲವು ಮೂಲಗಳ ಪ್ರಕಾರ ಆರನ್ ಫಿಂಚ್‌ ಏಕದಿನ ಮಾದರಿಗೆ ಮಾತ್ರ ವಿದಾಯ ಹೇಳಲಿದ್ದಾರೆ. ಆದರೆ, ಟಿ20 ಮಾದರಿಯಲ್ಲಿ ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾವನ್ನು ಮುನ್ನಡೆಸಲಿದ್ದಾರೆ ಎಂದು ಹೇಳಲಾಗಿದೆ. ಟಿ20 ಮಾದರಿಯಲ್ಲಿ ಆಟದ ಗಡೆ ಮಾತ್ರ ಗಮನ ನೀಡಲು ಏಕದಿನ ಮಾದರಿಯಿಂದ ದೂರವಾಗಲು ಬಯಸಿದ್ದಾರೆ ಎನ್ನಲಾಗಿದೆ.

ಕಳೆದ ವರ್ಷ ಯುಎಇಯಲ್ಲಿ ನಡೆದ ಟೂರ್ನಿಯಲ್ಲಿ ಆರನ್ ಫಿಂಚ್ ನೇತೃತ್ವದ ಆಸ್ಟ್ರೇಲಿಯಾ ತಂಡ ಚಾಂಪಿಯನ್ ಆಗಿತ್ತು. ಫಿಂಚ್ ಏಕದಿನ ಮಾದರಿ ಕ್ರಿಕೆಟ್‌ಗೆ ವಿದಾಯ ಘೋಷಿಸಿದರೆ, ಆಸ್ಟ್ರೇಲಿಯಾ ತಂಡ ನೂತನ ನಾಯಕನನ್ನು ನೇಮಕ ಮಾಡಬೇಕಾಗುತ್ತದೆ.

ಏಕದಿನ ಮಾದರಿಯಲ್ಲಿ 5401 ರನ್ ಗಳಿಕೆ

ಏಕದಿನ ಮಾದರಿಯಲ್ಲಿ 5401 ರನ್ ಗಳಿಕೆ

ಆರನ್ ಫಿಂಚ್ 2013 ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ರಾಷ್ಟ್ರೀಯ ತಂಡಕ್ಕೆ ಪಾದಾರ್ಪಣೆ ಮಾಡಿದರು. ಅಂದಿನಿಂದ, ಅವರು 144 ಏಕದಿನ ಪಂದ್ಯಗಳನ್ನಾಡಿದ್ದಾರೆ. 39.42 ಸರಾಸರಿಯಲ್ಲಿ 5401 ರನ್ ಗಳಿಸಿದ್ದಾರೆ. ಇದರಲ್ಲಿ 30 ಅರ್ಧಶತಕ ಮತ್ತು 17 ಶತಕಗಳು ಸೇರಿವೆ.

2018 ರಲ್ಲಿ ಟಿಮ್ ಪೈನ್ ಬದಲಿಗೆ ಆರನ್ ಫಿಂಚ್ ಅವರನ್ನು ಏಕದಿನ ತಂಡದ ನಾಯಕರಾಗಿ ನೇಮಿಸಲಾಯಿತು. 52 ಏಕದಿನ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿರುವ ಫಿಂಚ್ ತನ್ನ ನಾಲ್ಕು ವರ್ಷಗಳ ಅಧಿಕಾರಾವಧಿಯಲ್ಲಿ 52.08 ರ ಗೆಲುವಿನ ಶೇಕಡಾವಾರು ಪ್ರಮಾಣ ಹೊಂದಿದ್ದರು. ಅವರು 2019 ರ ಏಕದಿನ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ಗೆ ಆಸ್ಟ್ರೇಲಿಯಾವನ್ನು ಮುನ್ನಡೆಸಿದರು.

Virat Kohli ಇಷ್ಟೊಂದು ಕಾಮ್ ಆಗಿದ್ದದ್ದು ಯಾಕೆ ಗೊತ್ತಾ | *Cricket | OneIndia Kannada
ಶನಿವಾರ ನ್ಯೂಜಿಲೆಂಡ್ ವಿರುದ್ಧ ಸರಣಿಯ ಕೊನೆ ಪಂದ್ಯ

ಶನಿವಾರ ನ್ಯೂಜಿಲೆಂಡ್ ವಿರುದ್ಧ ಸರಣಿಯ ಕೊನೆ ಪಂದ್ಯ

ನ್ಯೂಜಿಲೆಂಡ್ ವಿರುದ್ಧದ ಚಾಪೆಲ್-ಹ್ಯಾಡ್ಲಿ ಸರಣಿಯ ಮುಂಬರುವ ಮೂರನೇ ಪಂದ್ಯ ಆರನ್ ಫಿಂಚ್‌ರ ಅಂತಿಮ ಅಂತಾರಾಷ್ಟ್ರೀಯ ಏಕದಿನ ಪಂದ್ಯವಾಗುವ ಸಾಧ್ಯತೆ ಇದೆ. ಮೂರು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ ಈಗಾಗಲೇ ಮೊದಲ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿಯಲ್ಲಿ ಗೆಲುವು ಸಾಧಿಸಿದೆ.

ಭಾರತದಲ್ಲಿ ನಡೆಯಲಿರುವ 2023ರ ಏಕದಿನ ವಿಶ್ವಕಪ್‌ಗೆ ಇನ್ನು ಕೇವಲ ಒಂದು ವರ್ಷ ಮಾತ್ರ ಬಾಕಿ ಇರುವ ಕಾರಣ ಆರನ್ ಫಿಂಚ್‌ ನಿರ್ಧಾರವು ಮಹತ್ವದ ನಿರ್ಧಾರವಾಗಲಿದೆ.

Story first published: Friday, September 9, 2022, 17:48 [IST]
Other articles published on Sep 9, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X