ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನ ಪ್ರವಾಸಕ್ಕೆ ಆಸಿಸ್ ಆಟಗಾರರ ಅಪಸ್ವರ: ಜೋಶ್ ಹ್ಯಾಜಲ್‌ವುಡ್ ಹೇಳಿದ್ದಿಷ್ಟು!

Australia Tour Of Pakistan: Pacer Josh Hazlewood said players availability for tour Wouldnt Be Surprised

ಕಳೆದ ಟಿ20 ವಿಶ್ವಕಪ್‌ಗೆ ಮುನ್ನ ಪಾಕಿಸ್ತಾನ ಪ್ರವಾಸ ಕೈಗೊಂಡು ಸರಣಿಯಲ್ಲಿ ಭಾಗಿಯಾಗಬೇಕಿದ್ದ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ತಂಡಗಳು ಪಾಕಿಸ್ತಾನಕ್ಕೆ ಶಾಕ್ ನೀಡಿತ್ತು. ಸರಣಿ ಆರಂಭಕ್ಕೆ ಕೆಲವೇ ಕ್ಷಣಗಳಿರುವಾಗ ನ್ಯೂಜಿಲೆಂಡ್ ಭಧ್ರತಾ ಕಾರಣವನ್ನು ಮುಂದಿಟ್ಟು ವಾಪಾಸಾದ ನಂತರ ಇಂಗ್ಲೆಂಡ್ ಕೂಡ ಆಟಗಾರರ ಸುರಕ್ಷತೆಯ ನೆಪವೊಡ್ಡಿ ಸರಣಿಯಿಂದ ಹಿಂದಕ್ಕೆ ಸರಿದಿತ್ತು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಭಾರೀ ಮುಜುಗರ ಹಾಗೂ ಹಿನ್ನಡೆಯುಂಟು ಮಾಡಿತ್ತು.

ಇದೀಗ ಆಸ್ಟ್ರೇಲಿಯಾ ತಂಡ ಪಾಕಿಸ್ತಾನ ಪ್ರವಾಸದ ಯೋಜನೆಯನ್ನು ಹಾಕಿಕೊಂಡಿದೆ. ಮೂರು ಟೆಸ್ಟ್ ಮೂರು ಏಕದಿನ ಹಾಗೂ ಒಂದು ಟಿ20 ಪಂದ್ಯದಲ್ಲಿ ಎರಡು ತಂಡಗಳ ಮುಖಾಮುಖಿ ನಡೆಯಲಿದೆ. ಮುಂಬರುವ ಮಾರ್ಚ್ ಹಾಗೂ ಏಪ್ರಿಲ್ ಅವಧಿಯಲ್ಲಿ ಈ ಸರಣಿಗೆ ಯೋಜನೆಗಳು ಸಿದ್ಧವಾಗಿದೆ.

ಭಾರತ v/s ವಿಂಡೀಸ್ ಏಕದಿನ ಸರಣಿ: ಅಹಮದಾಬಾದ್‌ಗೆ ಆಗಮಿಸಿದ ವೆಸ್ಟ್ ಇಂಡೀಸ್ ತಂಡಭಾರತ v/s ವಿಂಡೀಸ್ ಏಕದಿನ ಸರಣಿ: ಅಹಮದಾಬಾದ್‌ಗೆ ಆಗಮಿಸಿದ ವೆಸ್ಟ್ ಇಂಡೀಸ್ ತಂಡ

ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಕಳೆದ 24 ವರ್ಷಗಳಿಂದ ಪಾಕಿಸ್ತಾನಕ್ಕೆ ಪ್ರವಾಸವನ್ನು ಕೈಗೊಂಡಿಲ್ಲ. 1998ರಲ್ಲಿ ಕೊನೇಯ ಬಾರಿಗೆ ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು ಆಸ್ಟ್ರೇಲಿಯಾ. ಇದೀಗ ಸುದೀರ್ಘ ಕಾಲದ ಬಳಿಕ ಆಸಿಸ್ ತಂಡ ಪಾಕ್ ಪ್ರವಾಸವನ್ನು ಕೈಗೊಳ್ಳಲು ಅಲ್ಲಿನ ಮಂಡಳಿ ಸಿದ್ಧವಾಗಿದೆ. ಆದರೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರರಿಂದ ಈಗಾಗಲೇ ಭಿನ್ನರಾಗ ವ್ಯಕ್ತವಾಗುವ ಲಕ್ಷಗಳು ಕಂಡುಬರುತ್ತಿದೆ. ಇದಕ್ಕೆ ಆಸ್ಟ್ರೇಲಿಯಾ ತಂಡದ ವೇಗಿ ಜೋಶ್ ಹ್ಯಾಜಲ್‌ವುಡ್ ನೀಡಿದ ಹೇಳಿಕೆ ಪುಷ್ಠಿ ನೀಡಿದೆ.

ಆಸ್ಟ್ರೇಲಿಯಾ ತಂಡದ ಪಾಕಿಸ್ತಾನ ಪ್ರವಾಸದ ಬಗ್ಗೆ ಮಾತನಾಡಿರುವ ವೇಗಿ ಜೋಶ್ ಹ್ಯಾಜಲ್‌ವುಡ್ ಈ ಪ್ರವಾಸದ ಬಗ್ಗೆ ಆಸಿಸ್ ಆಟಗಾರರ ವೈಯಕ್ತಿಕ ನಿಲುವುಗಳ ಬಗ್ಗೆ ಮಾತನಾಡಿದ್ದಾರೆ. ಆಟಗಾರರು ಈ ಪ್ರವಾಸದಲ್ಲಿ ಭಾಗಿಯಾಗುವ ಬಗ್ಗೆ ತಮ್ಮ ಕುಟುಂಬಸ್ಥರಲ್ಲಿ ಮಾತನಾಡಲಿದ್ದು ಅದಾದ ಬಳಿಕ ತಮ್ಮ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ ಎಂದಿದ್ದಾರೆ.

ಅಂಡರ್-19 ವಿಶ್ವಕಪ್‌: ಫೈನಲ್ ಪ್ರವೇಶಿಸಿದ ಇಂಗ್ಲೆಂಡ್, ಅಫ್ಘಾನಿಸ್ತಾನದ ಕನಸು ನುಚ್ಚುನೂರುಅಂಡರ್-19 ವಿಶ್ವಕಪ್‌: ಫೈನಲ್ ಪ್ರವೇಶಿಸಿದ ಇಂಗ್ಲೆಂಡ್, ಅಫ್ಘಾನಿಸ್ತಾನದ ಕನಸು ನುಚ್ಚುನೂರು

" ವಿಚಾರವಾಗಿ ಸಾಕಷ್ಟು ಸಂಗತಿಗಳು ಮುಖ್ಯವಾಗುತ್ತದೆ. ಸಿಎ ಹಾಗೂ ಎಸಿಎ ಈ ವಿಚಾರವಾಗಿ ಹಿಂದಿನಿಂದ ಸಾಕಷ್ಟು ಕೆಲಸವನ್ನು ನಿರ್ವಹಿಸುತ್ತಿದೆ. ಹಾಗಾಗಿ ಆಟಗಾರರಿಗೆ ನಂಬಿಕೆಗಳು ಹೆಚ್ಚಾಗಿದೆ. ಹಾಗಿದ್ದರು ಕೂಡ ಆಟಗಾರರಲ್ಲಿ ಕೆಲವೊಂದು ಕಳವಳಗಳು ಉಳಿದುಕೊಂಡಿದೆ. ಹಾಗಾಗಿ ಕೆಲ ಆಟಗಾರರು ಈ ಪ್ರವಾಸದಿಂದ ಹಿಂದಕ್ಕೆ ಸರಿಯುವ ನಿರ್ಧಾರ ತೆಗೆದುಕೊಂಡರೂ ಅಚ್ಚರಿಯಿಲ್ಲ. ಆಟಗಾರರು ತಮ್ಮ ಕುಟುಂಬದ ಜೊತೆಗೆ ಈ ಕುರಿತಾಗಿ ಚರ್ಚಿಸಲಿದ್ದಾರೆ. ಅದಾದ ಬಳಿಕ ತಮ್ಮ ನಿರ್ಧಾರವನ್ನು ತೀಳಿಸಲಿದ್ದಾರೆ. ಆ ನಿರ್ಧಾರಗಳನ್ನು ಎಲ್ಲರೂ ಗೌರವಿಸಲಿದ್ದಾರೆ" ಎಂದು ಜೋಶ್ ಹ್ಯಾಜಲ್‌ವುಡ್ ಹೇಳಿದ್ದಾರೆ. ಈ ಹೇಳಿಕೆ ಪಾಕಿಸ್ತಾನಕ್ಕೆ ಮತ್ತೊಂದು ಹಿನ್ನಡೆಯುಂಟು ಮಾಡುವ ಬೆಳವಣಿಗೆಗೆ ಪೂರಕವಾಗಿರುವಂತಿದೆ.

ಫಿನಿಷರ್, ಓಪನರ್ ಎಲ್ಲವೂ ಸುಳ್ಳು: ಕೊಹ್ಲಿ ಪರ ಮಾತನಾಡಿ ರೋಹಿತ್, ಧೋನಿಗೆ ಟಾಂಗ್ ಕೊಟ್ಟ ಗಂಭೀರ್!ಫಿನಿಷರ್, ಓಪನರ್ ಎಲ್ಲವೂ ಸುಳ್ಳು: ಕೊಹ್ಲಿ ಪರ ಮಾತನಾಡಿ ರೋಹಿತ್, ಧೋನಿಗೆ ಟಾಂಗ್ ಕೊಟ್ಟ ಗಂಭೀರ್!

ಇನ್ನು ಆಸ್ಟ್ರೇಲಿಯಾ ತಂಡದ ಪ್ರಮುಖ ಸ್ಟಾರ್ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಪಾಕಿಸ್ತಾನ ಪ್ರವಾಸವನ್ನು ಕೈಗೊಳ್ಳುವುದು ಅನುಮಾನವಾಗಿದೆ. ಈ ಪ್ರವಾಸದ ಅವಧಿಯಲ್ಲಿಯೇ ಗ್ಲೆನ್ ಮ್ಯಾಕ್ಸ್‌ವೆಲ್ ವೈವಾಹಿಕ ಜೀವನಕ್ಕೆ ಕಾಲಿಡುವ ಸಾಧ್ಯತೆಯಿದೆ. ಬಹು ಕಾಲದ ಗೆಳತಿ ಭಾರತ ಮೂಲದ ವಿನಿ ರಾಮನ್ ಜೊತೆಗೆ ಈಗಾಗಲೇ ನಿಶ್ಚಿತಾರ್ಥ ಮಾಡಿಕೊಂಡಿರುವ ಮ್ಯಾಕ್ಸ್‌ವೆಲ್ ಮುಂದಿನ ತಿಂಗಳು ಮದುವೆಯಾಗಲಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ಸರಣಿಯಿಂದ ಸಂಪೂರ್ಣವಾಗಿ ಹೊರಗುಳಿಯುವ ಸಾಧ್ಯತೆಯಿದೆ. ಇನ್ನು ಇಂಗ್ಲೆಂಡ್ ವಿರುದ್ಧದ ಆಶಸ್ ಸರಣಿಯ ಅಂತಿಮ ಪಂದ್ಯಕ್ಕೂ ಮುನ್ನ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್ ಪ್ರತಿಕ್ರಿಯಿಸಿದ್ದು ಪಾಕಿಸ್ತಾನ ಪ್ರವಾಸಕ್ಕೆ ತನ್ನ ಲಭ್ಯತೆಯ ಬಗ್ಗೆ ಸ್ಪಷ್ಟತೆಯಿಲ್ಲ ಎಂದು ಹೇಳಿದ್ದಾರೆ.

Story first published: Wednesday, February 2, 2022, 17:25 [IST]
Other articles published on Feb 2, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X