ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Aus Vs WI 2nd Test: ಎರಡನೇ ಟೆಸ್ಟ್‌ನಲ್ಲಿ 419 ರನ್‌ಗಳ ಬೃಹತ್ ಜಯ, ಸರಣಿ ಕ್ಲೀನ್ ಸ್ವೀಪ್ ಮಾಡಿದ ಆಸ್ಟ್ರೇಲಿಯಾ

Australia Vs West Indies 2nd Test: Australia Thrash West Indies By 419 Runs, Clean Sweep The Series

ಅಡಿಲೇಡ್‌ನಲ್ಲಿ ನಡೆದ ಆಸ್ಟ್ರೇಲಿಯಾ ವೆಸ್ಟ್‌ಇಂಡೀಸ್ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಆತಿಥೇಯ ಕಾಂಗರೂ ಪಡೆ 419 ರನ್‌ಗಳ ಬೃಹತ್ ಜಯ ಸಾಧಿಸುವ ಮೂಲಕ, ಸರಣಿ ಕ್ಲೀನ್ ಸ್ವೀಪ್ ಮಾಡಿದರು.

ವೆಸ್ಟ್ ಇಂಡೀಸ್ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 77 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲನುಭವಿಸಿತು. ಪರ್ತ್‌ನಲ್ಲಿ ನಡೆದ ಮೊದಲನೇ ಟೆಸ್ಟ್‌ನಲ್ಲಿ ಕೂಡ ವೆಸ್ಟ್ ಇಂಡೀಸ್ ತಂಡವನ್ನು ಆಸ್ಟ್ರೇಲಿಯಾ 164 ರನ್‌ಗಳಿಂದ ಸೋಲಿಸಿತ್ತು.

ಎರಡನೇ ಟೆಸ್ಟ್‌ನ ಮೊದಲನೇ ಇನ್ನಿಂಗ್ಸ್‌ನಲ್ಲಿ ಮಾರ್ಕಸ್ ಲಾಬುಸ್ಚಾಗ್ನೆ 163 ಮತ್ತು ಟ್ರಾವಿಡ್‌ ಹೆಡ್ 175 ಭರ್ಜರಿ ಶತಕದ ನೆರವಿನಿಂದ 7 ವಿಕೆಟ್‌ ನಷ್ಟಕ್ಕೆ 511 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು.

IPL 2023: ಇದೇ ಕಾರಣಕ್ಕೆ ತಡವಾಗಿ ಆರಂಭವಾಗಲಿದೆ 2023ರ ಐಪಿಎಲ್!IPL 2023: ಇದೇ ಕಾರಣಕ್ಕೆ ತಡವಾಗಿ ಆರಂಭವಾಗಲಿದೆ 2023ರ ಐಪಿಎಲ್!

ನಂತರ ತನ್ನ ಮೊದಲ ಇನ್ನಿಂಗ್ಸ್ ಆಡಿದ ವೆಸ್ಟ್ ಇಂಡೀಸ್ 214 ರನ್‌ ಗಳಿಸುವಷ್ಟರಲ್ಲಿ ಆಲೌಟ್ ಆಗುವ ಮೂಲಕ 297 ರನ್‌ಗಳ ಹಿನ್ನಡೆ ಅನುಭವಿಸಿತ್ತು. ನಾಥನ್ ಲಿಯಾನ್ 3 ವಿಕೆಟ್ ಪಡೆದು ಮಿಂಚಿದರು. ಮಿಚೆಲ್ ಸ್ಟಾರ್ಕ್ ಮತ್ತು ಮೈಕೆಲ್ ನೇಸರ್ ತಲಾ ಎರಡು ವಿಕೆಟ್ ಪಡೆದುಕೊಂಡಿದ್ದರು.

297 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ 6 ವಿಕೆಟ್ ಕಳೆದುಕೊಂಡು 199 ರನ್‌ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಳ್ಳುವ ಮೂಲಕ, ವೆಸ್ಟ್ ಇಂಡೀಸ್ ಗೆಲುವಿಗೆ 497 ರನ್‌ಗಳ ಬೃಹತ್ ಗುರಿ ನೀಡಿತು.

77 ರನ್‌ಗಳಿಗೆ ವೆಸ್ಟ್ ಇಂಡೀಸ್ ಆಲೌಟ್

77 ರನ್‌ಗಳಿಗೆ ವೆಸ್ಟ್ ಇಂಡೀಸ್ ಆಲೌಟ್

ಈ ಬೃಹತ್ ಗುರಿಯನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್, ಕೇವಲ 77 ರನ್‌ ಗಳಿಸುವಷ್ಟರಲ್ಲಿ ಆಲೌಟ್ ಆಗುವ ಮೂಲಕ 419 ರನ್‌ಗಳ ಬೃಹತ್ ಸೋಲನುಭವಿಸಿತು. ವೇಗಿ ಮಿಚೆಲ್ ಸ್ಟಾರ್ಕ್, ಸ್ಕಾಟ್ ಬೊಲಾಂಡ್ ಮತ್ತು ಮೈಕಲ್ ನೇಸರ್ ತಲಾ 3 ವಿಕೆಟ್ ಪಡೆದರು. ನಾಥನ್ ಲಿಯಾನ್ ಒಂದು ವಿಕೆಟ್ ಪಡೆದರು.

ಟಗೆನರೈನ್ ಚಂದ್ರಪಾಲ್ ಹೊರತು ಪಡಿಸಿದರೆ ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ ಉಳಿದ ಯಾವ ಆಟಗಾರ ಕೂಡ ಉತ್ತಮವಾಗಿ ಆಡಲಿಲ್ಲ. ವೆಸ್ಟ್ ಇಂಡೀಸ್‌ ಟೆಸ್ಟ್ ಕ್ರಿಕೆಟ್‌ ತೀರಾ ಕಳಪೆಯಾಗಿದೆ. ಸರಣಿಯ ಎರಡೂ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ಕನಿಷ್ಠ ಹೋರಾಟವನ್ನು ಕೂಡ ನೀಡದೆ ಸೋಲೊಪ್ಪಿಕೊಂಡಿದೆ.

ಮುಂದಿನ ಸರಣಿಯಲ್ಲಿ ಆತ ಭಾರತ ತಂಡಕ್ಕೆ ಆಯ್ಕೆ ಆಗೋದು ಅನುಮಾನ ಎಂದ ದಿನೇಶ್ ಕಾರ್ತಿಕ್

ಮಾರ್ಕಸ್ ಲಾಬುಸ್ಚಾಗ್ನೆ ಅಮೋಘ ಆಟ

ಮಾರ್ಕಸ್ ಲಾಬುಸ್ಚಾಗ್ನೆ ಅಮೋಘ ಆಟ

ಮೊದಲನೇ ಟೆಸ್ಟ್‌ನಲ್ಲಿ ಒಂದು ದ್ವಿಶತಕ ಮತ್ತು ಶತಕ ಸಿಡಿಸಿ ಮಿಂಚಿದ್ದ ಮಾರ್ಕಸ್ ಲಾಬುಸ್ಚಾಗ್ನೆ ಎರಡನೇ ಟೆಸ್ಟ್‌ನ ಮೊದಲನೇ ಇನ್ನಿಂಗ್ಸ್‌ನಲ್ಲಿ ಕೂಡ ಶತಕ ಸಿಡಿಸಿ ಮಿಂಚಿದರು. ಸರಣಿಯಲ್ಲಿ ಅವರ ಅಮೋಘ ಪ್ರದರ್ಶನಕ್ಕಾಗಿ ಸರಣಿಯ ಆಟಗಾರ ಪ್ರಶಸ್ತಿ ಪಡೆದರು. ಎರಡನೇ ಟೆಸ್ಟ್‌ನ ಮೊದಲನೇ ಇನ್ನಿಂಗ್ಸ್‌ನಲ್ಲಿ 175 ರನ್‌ ಗಳಿಸಿದ್ದ ಟ್ರಾವಿಸ್ ಹೆಡ್ ಪಂದ್ಯದ ಆಟಗಾರ ಪ್ರಶಸ್ತಿ ಪಡೆದರು.

ಈ ಸರಣಿಯಲ್ಲಿ ಗೆಲುವು ಸಾಧಿಸುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಆಸ್ಟ್ರೇಲಿಯಾ ಅಗ್ರಸ್ಥಾನವನ್ನು ಕಾಪಾಡಿಕೊಂಡಿದೆ. ಆಸ್ಟ್ರೇಲಿಯಾ ತನ್ನ ಮುಂದಿನ ಟೆಸ್ಟ್ ಸರಣಿಯನ್ನು ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಆಡಲಿದೆ. ದಕ್ಷಿಣ ಆಫ್ರಿಕಾ ಕೂಡ ವಿಶ್ವಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ರೇಸ್‌ನಲ್ಲಿದ್ದು, ಆಸ್ಟ್ರೇಲಿಯಾ ತಂಡಕ್ಕೆ ಕಠಿಣ ಸವಾಲೊಡ್ಡುವ ಸಾಧ್ಯತೆ ಇದೆ.

ಉಭಯ ತಂಡಗಳ ಆಡುವ ಬಳಗ

ಉಭಯ ತಂಡಗಳ ಆಡುವ ಬಳಗ

ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್ (ನಾಯಕ), ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ, ಮೈಕೆಲ್ ನೆಸರ್, ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್

ವೆಸ್ಟ್ ಇಂಡೀಸ್ : ಕ್ರೈಗ್ ಬ್ರಾಥ್‌ವೈಟ್ (ನಾಯಕ), ಟಗೆನರೈನ್ ಚಂದ್ರಪಾಲ್, ಶಮರ್ ಬ್ರೂಕ್ಸ್, ಜೆರ್ಮೈನ್ ಬ್ಲಾಕ್‌ವುಡ್, ಡೆವೊನ್ ಥಾಮಸ್, ಜೇಸನ್ ಹೋಲ್ಡರ್, ಜೋಶುವಾ ಡಾ ಸಿಲ್ವಾ, ರೋಸ್ಟನ್ ಚೇಸ್, ಅಲ್ಜಾರಿ ಜೋಸೆಫ್, ಆಂಡರ್ಸನ್ ಫಿಲಿಪ್, ಮಾರ್ಕ್ವಿನೋ ಮಿಂಡ್ಲಿ

Story first published: Sunday, December 11, 2022, 12:54 [IST]
Other articles published on Dec 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X