ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಂದಿನ ಸರಣಿಯಲ್ಲಿ ಆತ ಭಾರತ ತಂಡಕ್ಕೆ ಆಯ್ಕೆ ಆಗೋದು ಅನುಮಾನ ಎಂದ ದಿನೇಶ್ ಕಾರ್ತಿಕ್

Dinesh Karthik Predicts That Shikhar Dhawan Can Be Dropped For Sri Lanka Series

ಬಾಂಗ್ಲಾದೇಶದ ವಿರುದ್ಧದ ಸರಣಿಯಲ್ಲಿ ವೈಫಲ್ಯ ಅನುಭವಿಸಿದ ಶಿಖರ್ ಧವನ್ ಶ್ರೀಲಂಕಾ ವಿರುದ್ಧದ ಸರಣಿಗೆ ತಂಡಕ್ಕೆ ಆಯ್ಕೆಯಾಗುವುದು ಅನುಮಾನ ಎಂದು ಭಾರತದ ಹಿರಿಯ ವಿಕೆಟ್‌ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ಪಂದ್ಯಗಳಲ್ಲಿ ಶುಭಮನ್ ಗಿಲ್ ಅಥವಾ ಇಶಾನ್ ಕಿಶಾನ್ ಶಿಖರ್ ಧವನ್‌ಗಿಂತ ಮೊದಲ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ. 37 ವರ್ಷದ ಹಿರಿಯ ಆಟಗಾರ ಶಿಖರ್ ಧವನ್ ಆಡಿದ ಕೊನೆಯ ಐದು ಇನ್ನಿಂಗ್ಸ್‌ಗಳಲ್ಲಿ ನಾಲ್ಕು ಬಾರಿ ಎರಡಂಕಿ ರನ್ ಗಳಿಸಲು ಕೂಡ ವಿಫಲರಾಗಿದ್ದಾರೆ.

FIFA World Cup 2022: ಆಂಗ್ಲರಿಗೆ ಆಘಾತ ನೀಡಿ ಸೆಮಿಫೈನಲ್ ಪ್ರವೇಶಿಸಿದ ಹಾಲಿ ಚಾಂಪಿಯನ್ ಫ್ರಾನ್ಸ್FIFA World Cup 2022: ಆಂಗ್ಲರಿಗೆ ಆಘಾತ ನೀಡಿ ಸೆಮಿಫೈನಲ್ ಪ್ರವೇಶಿಸಿದ ಹಾಲಿ ಚಾಂಪಿಯನ್ ಫ್ರಾನ್ಸ್

ಮತ್ತೊಂದೆಡೆ, ಶನಿವಾರ ಛತ್ತೋಗ್ರಾಮ್‌ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಬದಲಿಗೆ ತಂಡದಲ್ಲಿ ಅವಕಾಶ ಪಡೆದ ಯುವ ಕ್ರಿಕೆಟಿಗ ಇಶಾನ್ ಕಿಶನ್ 131 ಎಸೆತಗಳಲ್ಲಿ 210 ರನ್ ಗಳಿಸಿದರು. ಇದು ಶಿಖರ್ ಧವನ್ ಅವಕಾಶವನ್ನು ಮತ್ತಷ್ಟು ಕಡಿಮೆಮಾಡಿದೆ.

ಟೀಮ್ ಇಂಡಿಯಾದ ಮುಂದಿನ ಏಕದಿನ ಸರಣಿಯು ಜನವರಿ 2023 ರಲ್ಲಿ ಸ್ವದೇಶದಲ್ಲಿ ಶ್ರೀಲಂಕಾ ವಿರುದ್ಧ ನಡೆಯಲಿದೆ. ಕೆಲವೇ ದಿನಗಳಲ್ಲಿ ಈ ಸರಣಿಗಾಗಿ ಭಾರತ ತಂಡವನ್ನು ಘೋಷಿಸಲಾಗುತ್ತದೆ.

ಶ್ರೀಲಂಕಾ ವಿರುದ್ಧದ ಸರಣಿಗೆ ಆಯ್ಕೆ ಕಷ್ಟ

ಶ್ರೀಲಂಕಾ ವಿರುದ್ಧದ ಸರಣಿಗೆ ಆಯ್ಕೆ ಕಷ್ಟ

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಕೆಲವೇ ದಿನಗಳಲ್ಲಿ ಭಾರತ ತಂಡವನ್ನು ಘೋಷಿಸುವ ಸಾಧ್ಯತೆ ಇದೆ. ಈ ಸರಣಿಯಲ್ಲಿ ಭಾರತ ತಂಡದಲ್ಲಿ ಶಿಖರ್ ಧವನ್ ಆಯ್ಕೆ ಅನುಮಾನವಾಗಿದೆ.

ಈ ಬಗ್ಗೆ ಮಾತನಾಡಿದ ದಿನೇಶ್ ಕಾರ್ತಿಕ್, "ಶ್ರೀಲಂಕಾ ವಿರುದ್ಧದ ಸರಣಿಗೆ ಧವನ್ ಆಯ್ಕೆಯಾಗುವುದು ಅನುಮಾನವಾಗಿದೆ. ಇಶಾನ್ ಕಿಶಾನ್ ಉತ್ತಮ ಪ್ರದರ್ಶನ ನೀಡುತ್ತಿದ್ದು ಅವರನ್ನು ಕೈಬಿಡುವುದು ಸುಲಭವಲ್ಲ. ಶುಭಮನ್ ಗಿಲ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ರೋಹಿತ್ ಶರ್ಮಾ ತಂಡಕ್ಕೆ ವಾಪಸಾದ ನಂತರ ಯಾರಾದರೂ ಒಬ್ಬರು ತಂಡದಿಂದ ಹೊರಗುಳಿಯಬೇಕಾಗುತ್ತದೆ. ಅದು ಶಿಖರ್ ಧವನ್ ಆಗಿರಬಹುದು" ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.

PKL 2022: ಯು ಮುಂಬಾ ವಿರುದ್ಧ ಸೋತ ಗೂಳಿಗಳಿಗೆ ಪ್ಲೇ ಆಫ್‌ನಲ್ಲಿ ದಬಾಂಗ್ ಡೆಲ್ಲಿ ಸವಾಲು

ಶ್ರೀಲಂಕಾ ಟಿ20 ಮತ್ತು ಏಕದಿನ ಸರಣಿ

ಶ್ರೀಲಂಕಾ ಟಿ20 ಮತ್ತು ಏಕದಿನ ಸರಣಿ

ಬಾಂಗ್ಲಾದೇಶದ ವಿರುದ್ಧದ ಏಕದಿನ ಸರಣಿಯ ನಂತರ ಟೀಂ ಇಂಡಿಯಾ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಲಿದೆ. ಅದಾದ ನಂತರ ಆಟಗಾರರು ಕೆಲದಿನಗಳ ವಿಶ್ರಾಂತಿ ಪಡೆಯಲಿದ್ದು, ಜನವರಿಯಲ್ಲಿ ಮತ್ತೆ ಶ್ರೀಲಂಕಾ ವಿರುದ್ಧ ಏಕದಿನ ಮತ್ತು ಟಿ20 ಸರಣಿಯಲ್ಲಿ ಆಡಲಿದೆ.

ಶ್ರೀಲಂಕಾ ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯಗಳ ಸರಣಿ ಆಡಲು ಭಾರತಕ್ಕೆ ಪ್ರವಾಸ ಮಾಡಲಿದೆ. ಮೂರು ಟಿ20 ಪಂದ್ಯಗಳು ಜನವರಿ 3 ರಿಂದ 7 ರವರೆಗೆ ನಡೆಯಲಿದ್ದು, ಏಕದಿನ ಪಂದ್ಯಗಳು ಜನವರಿ 10 ರಿಂದ 15 ರವರೆಗೆ ನಡೆಯಲಿದೆ. ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ ಸರಣಿಯ ನಂತರ ಶ್ರೀಲಂಕಾ ವಿರುದ್ಧದ ಸರಣಿಗೆ ಭಾರತ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ.

 ಗಿಲ್ ಇದ್ದಿದ್ದರೆ ಅವರೇ ಇನ್ನಿಂಗ್ಸ್ ಆರಂಭಿಸುತ್ತಿದ್ದರು

ಗಿಲ್ ಇದ್ದಿದ್ದರೆ ಅವರೇ ಇನ್ನಿಂಗ್ಸ್ ಆರಂಭಿಸುತ್ತಿದ್ದರು

ಬಾಂಗ್ಲಾದೇಶದ ವಿರುದ್ಧದ ಸರಣಿಗೆ ಶುಭಮನ್ ಗಿಲ್ ಆಯ್ಕೆಯಾಗದೆ ಇರುವುದರಿಂದ ರೋಹಿತ್ ಶರ್ಮಾ ಬದಲಿಗೆ ಇಶಾನ್ ಕಿಶನ್‌ಗೆ ಅವಕಾಶ ಸಿಕ್ಕಿತು ಎಂದು ದಿನೇಶ್ ಕಾರ್ತಿಕ್ ಹೇಳಿದರು.

ಈ ಮೊದಲು ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಶುಭಮನ್ ಗಿಲ್‌ ಆರಂಭಿಕರಾಗಿ ಕಣಕ್ಕಿಳಿಯುವ ಅವಕಾಶ ಪಡೆದಿದ್ದಾರೆ. ಒಂದು ವೇಳೆ ಗಿಲ್‌ಗೆ ಬಾಂಗ್ಲಾದೇಶದ ವಿರುದ್ಧದ ಸರಣಿಗೆ ವಿಶ್ರಾಂತಿ ನೀಡದಿದ್ದರೆ, ಇಶಾನ್ ಕಿಶನ್‌ಗೆ ಅವಕಾಶ ಸಿಗುವುದು ಕಷ್ಟವಾಗುತ್ತಿತ್ತು ಎಂದು ಅಭಿಪ್ರಾಯಪಟ್ಟರು. ಆದರೆ, ಇಶಾನ್ ಕಿಶನ್ ತಮಗೆ ಸಿಕ್ಕ ಅವಕಾಶವನ್ನು ಅತ್ಯುತ್ತಮವಾಗಿ ಬಳಸಿಕೊಂಡಿದ್ದಾರೆ. ಇದು, ಶಿಖರ್ ಧವನ್ ಆಯ್ಕೆ ಮೇಲೆ ಮತ್ತಷ್ಟು ಪರಿಣಾಮ ಬೀರುತ್ತದೆ ಎಂದು ಹೇಳಿದರು.

ಇಶಾನ್ ಕಿಶನ್ 300 ರನ್ ಗಳಿಸಬಹುದಿತ್ತು

ಇಶಾನ್ ಕಿಶನ್ 300 ರನ್ ಗಳಿಸಬಹುದಿತ್ತು

ಇಶಾನ್ ಕಿಶನ್ ದ್ವಿಶತಕ ಬಾರಿಸಿದ ಬಗ್ಗೆ ದಿನೇಶ್ ಕಾರ್ತಿಕ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆತ ತನಗೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುವ ಮೂಲಕ ನಾನು ಆಡಲು ಸಿದ್ದವಿದ್ದೇನೆ ಎಂದು ಆಯ್ಕೆದಾರರಿಗೆ ಸಂದೇಶ ನೀಡಿದ್ದಾನೆ ಎಂದು ಹೇಳಿದರು.

ಪಂದ್ಯ ಮುಗಿದ ನಂತರ ಮಾತನಾಡಿದ್ದ ಇಶಾನ್ ಕಿಶನ್, "ನಾನು 300 ರನ್ ಗಳಿಸುವ ಅವಕಾಶವನ್ನು ಕಳೆದುಕೊಂಡೆ" ಎಂದಿದ್ದರು. ಇದು ಆಟಗಾರನ ರನ್ ಹಸಿವೆಯನ್ನು ತೋರಿಸುತ್ತದೆ. ಇಶಾನ್ ಕಿಶನ್ ತಮ್ಮ ಆಟದ ಬಗ್ಗೆ ಸಾಕಷ್ಟು ವಿಶ್ವಾಸ ಹೊಂದಿದ್ದಾರೆ ಎಂದು ಶ್ಲಾಘಿಸಿದರು.

Story first published: Sunday, December 11, 2022, 10:00 [IST]
Other articles published on Dec 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X