ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಆರ್‌ಸಿಬಿಗೆ ಸತತ 3ನೇ ಗೆಲುವು ತಂದಿತ್ತ ಎಬಿಡಿ, ಉಮೇಶ್ ಯಾದವ್

RCB ಪರ ಭೇಟೆ ಶುರುಮಾಡಿದ್ದು ಇವರೆ..!? | Oneindia Kannada
Bangalore vs Punjab, 42nd Match - Live Cricket Score

ಬೆಂಗಳೂರು, ಏಪ್ರಿಲ್ 24: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬುಧವಾರ (ಏಪ್ರಿಲ್ 24) ನಡೆದ ಐಪಿಎಲ್ 42ನೇ ಪಂದ್ಯದಲ್ಲಿ ಕಿಂಗ್ಸ್ XI ಪಂಜಾಬ್‌ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 17 ರನ್ ಜಯಗಳಿಸಿದೆ. ಎಬಿ ಡಿ ವಿಲಿಯರ್ಸ್ ಸ್ಫೋಟಕ ಬ್ಯಾಟಿಂಗ್ ಮತ್ತು ಉಮೇಶ್ ಯಾದವ್ ಮಾರಕ ಬೌಲಿಂಗ್‌ನಿಂದಾಗಿ ಆರ್‌ಸಿಬಿ ಸತತ 3ನೇ ಗೆಲುವು ಮತ್ತು ಒಟ್ಟಾರೆ 4ನೇ ಗೆಲುವು ದಾಖಲಿಸಿತು.

ಐಪಿಎಲ್ ಸ್ಟೋರಿಗಳು, ಪಾಯಿಂಟ್ ಟೇಬಲ್ ಇನ್ನಿತರ ಕುತೂಹಲಕಾರಿ ಅಂಕಿ-ಅಂಶಗಳು 'ಮೈಖೇಲ್ ಕನ್ನಡ-ಐಪಿಎಲ್ ವಿಶೇಷ ಮುಖಪುಟ'ದಲ್ಲಿದೆ

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬೆಂಗಳೂರಿಗೆ ಆರಂಭಿಕ ಆಟಗಾರ ಪಾರ್ಥಿವ್ ಪಟೇಲ್ 43 (24 ಎಸೆತ), ವಿರಾಟ್ ಕೊಹ್ಲಿ 13, ಎಬಿಡಿ ಅಜೇಯ 82 (44), ಸ್ಟೋಯ್ನಿಸ್ 46 (34) ರನ್‌ ಸೇರಿಸಿದ್ದರಿಂದ ತಂಡ 20 ಓವರ್‌ಗೆ 4 ವಿಕೆಟ್ ನಷ್ಟದಲ್ಲಿ 202 ರನ್ ಕಲೆ ಹಾಕಿತು.

ಬೆಂಗಳೂರು vs ಪಂಜಾಬ್ ಪಂದ್ಯದ ಸ್ಕೋರ್‌ಕಾರ್ಡ್ ಕೆಳಗಿದೆ

1
45918

ರಾಯಲ್ ಚಾಲೆಂಜರ್ಸ್ ಬೆಂಗಳೂರು ನೀಡಿದ್ದ 203 ರನ್ ಗುರಿ ಬೆನ್ನತ್ತಿದ ಪಂಜಾಬ್ ಕೆಎಲ್ ರಾಹುಲ್ 42, ಮಯಾಂಕ್ ಅಗರ್ವಾಲ್ 35, ನಿಕೋಲಸ್ ಪೂರನ್ 46 ರನ್‌ ಸೇರ್ಪಡೆಯೊಂದಿಗೆ 20 ಓವರ್‌ಗೆ 7 ವಿಕೆಟ್ ಕಳೆದು 185 ರನ್ ಬಾರಿಸಿ ಶರಣಾಯಿತು. ಅಂತೂ ಈ ಗೆಲುವಿನೊಂದಿಗೆ ಆರ್‌ಸಿಬಿ ಪ್ಲೇ ಆಫ್ ಹುಮ್ಮಸ್ಸೂ, ಕಪ್ಪಿನ ಕನಸೂ ಜೀವಂತವಾಗಿದೆ.

ಚೆನ್ನೈ-ಹೈದರಾಬಾದ್‌ ಪಂದ್ಯಕ್ಕೆ ಬೆಟ್ಟಿಂಗ್‌, ನಾಲ್ವರ ಬಂಧನಚೆನ್ನೈ-ಹೈದರಾಬಾದ್‌ ಪಂದ್ಯಕ್ಕೆ ಬೆಟ್ಟಿಂಗ್‌, ನಾಲ್ವರ ಬಂಧನ

ಪಂಜಾಬ್ ಇನ್ನಿಂಗ್ಸ್ ವೇಳೆ ಬೆಂಗಳೂರು ವೇಗಿ ಉಮೇಶ್ ಯಾದವ್ 36 ರನ್‌ಗೆ 3, ನವದೀಪ್ ಸೈನಿ 33 ರನ್‌ಗೆ 2 ವಿಕೆಟ್‌ ಕೆಡವಿದ್ದರಿಂದ ಕೆXIಪಿ ಒತ್ತಡಕ್ಕೊಳಗಾಯಿತು. ಪಂದ್ಯಾರಂಭದಲ್ಲಿ ಪಂಜಾಬ್ ವೇಗದ ರನ್‌ ಗಳಿಸಿ ಗೆಲ್ಲುವ ಸೂಚನೆ ನೀಡಿತ್ತಾದರೂ ಅಂತಿಮ ಓವರ್‌ಗಳಲ್ಲಿ ಸಾಲಾಗಿ ವಿಕೆಟ್ ಪತನ ಕಂಡಿದ್ದರಿಂದ ಗುರಿ ತಲುಪಲಾಗದೆ ಮುಖಭಂಗ ಅನುಭವಿಸಿತು.

ಕೊಹ್ಲಿ, ಎಬಿಡಿಯ ಹಾಗೆ ನಾನೂ ರನ್ ಗಳಿಸಬಲ್ಲೆ: ಆರ್‌ಸಿಬಿ ಆಲ್ ರೌಂಡರ್ಕೊಹ್ಲಿ, ಎಬಿಡಿಯ ಹಾಗೆ ನಾನೂ ರನ್ ಗಳಿಸಬಲ್ಲೆ: ಆರ್‌ಸಿಬಿ ಆಲ್ ರೌಂಡರ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ಪಾರ್ಥಿವ್ ಪಟೇಲ್ (ವಿಕೆ), ವಿರಾಟ್ ಕೊಹ್ಲಿ (ಸಿ), ಎಬಿ ಡಿ ವಿಲಿಯರ್ಸ್, ಮಾರ್ಕಸ್ ಸ್ಟೊಯಿನಿಸ್, ಅಕ್ಷದೀಪ್ ನಾಥ್, ಮೊಯೀನ್ ಅಲಿ, ವಾಷಿಂಗ್ಟನ್ ಸುಂದರ್, ಟಿಮ್ ಸೌಥಿ, ನವದೀಪ್ ಸೈನಿ, ಉಮೇಶ್ ಯಾದವ್, ಯುಜುವೇಂದ್ರ ಚಾಹಲ್

ಕಿಂಗ್ಸ್ XI ಪಂಜಾಬ್ ತಂಡ: ಲೋಕೇಶ್ ರಾಹುಲ್ (ವಿಕೆ), ಕ್ರಿಸ್ ಗೇಲ್, ಮಯಾಂಕ್ ಅಗರ್ವಾಲ್, ಡೇವಿಡ್ ಮಿಲ್ಲರ್, ಮನ್ದೀಪ್ ಸಿಂಗ್, ನಿಕೋಲಸ್ ಪೂರಾನ್, ರವಿಚಂದ್ರನ್ ಅಶ್ವಿನ್ (ಸಿ), ಹಾರ್ದಸ್ ವಿಲ್ಜೊಯೆನ್, ಮುರುಗನ್ ಅಶ್ವಿನ್, ಅಂಕಿತ್ ರಜಪೂತ್, ಮೊಹಮ್ಮದ್ ಶಮಿ.

Story first published: Thursday, April 25, 2019, 0:11 [IST]
Other articles published on Apr 25, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X