ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಗೆ ಭಾರತ ಮಹಿಳಾ ತಂಡ ಪ್ರಕಟ

Posted By:
BCCI announced Indian women team for Australia series

ನವ ದೆಹಲಿ, ಮಾರ್ಚ್‌ 06: ಮೂರು ಏಕದಿನ ಪಂದ್ಯಗಳ ಸರಣಿಗೆ ಭಾರತಕ್ಕೆ ಆಗಮಿಸುತ್ತಿರುವ ಆಸ್ಟ್ರೇಲಿಯಾ ತಂಡ ವಿರುದ್ಧ ಆಡಲಿರುವ ಮಹಿಳಾ ತಂಡವನ್ನು ಬಿಸಿಸಿಐ ಆಯ್ಕೆ ಮಾಡಿ ಪ್ರಕಟಿಸಿದೆ.

ಇತ್ತೀಚೆಗೆ ದ.ಆಫ್ರಿಕಾದಲ್ಲಿ ಆಡಿ ಭರ್ಜರಿ ವಿಜಯ ಸಾಧಿಸಿದ ತಂಡವನ್ನೇ ಉಳಿಸಿಕೊಂಡಿರುವ ಬಿಸಿಸಿಐ ಹೆಚ್ಚಿನ ಬದಲಾವಣೆ ಮಾಡಿಲ್ಲ.
ವಿಶ್ವಕಪ್ ಫೈನಲ್ ಸೋತರು ತಮ್ಮ ಭರ್ಜರಿ ಫಾರ್ಮ್‌ನಿಂದ ದ.ಆಫ್ರಿಕಾ ಪ್ರವಾಸದಲ್ಲಿ ಏಕದಿನ ಹಾಗೂ ಟಿ20 ಎರಡೂ ಗೆದ್ದು ಇತಿಹಾಸ ನಿರ್ಮಿಸಿರುವ ಭಾರತದ ವನಿತೆಯರು ಇದೇ ಮಾರ್ಚ್‌ 12 ರಿಂದ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದ್ದಾರೆ.

ಮೂರು ಏಕದಿನ ಪಂದ್ಯಗಳೂ ವಡೋದರಾನಲ್ಲಿಯೇ ನಡೆಯಲಿದ್ದು, ಮಾರ್ಚ್‌ 18 ಕ್ಕೆ ಕೊನೆಯ ಪಂದ್ಯ ನಡೆಯಲಿದೆ. ಏಕದಿನ ಸರಣಿ ನಂತರ ಟಿ20 ಸರಣಿ ಪ್ರಾರಂಭವಾಗಲಿದ್ದು ಆ ಸರಣಿಗೆ ಮತ್ತೊಮ್ಮೆ ತಂಡವನ್ನು ಆಯ್ಕೆ ಮಾಡಲಾಗುವುದು ಎಂದು ಬಿಸಿಸಿಐ ಹೇಳಿದೆ.

ಆಟಗಾರ್ತಿಯರ ಪಟ್ಟಿ
1) ಮಿಥಾಲಿ ರಾಜ್ (ನಾಯಕಿ)
2) ಹರ್ಮನ್‌ಪ್ರೀತ್ ಕೌರ್ (ಉಪನಾಯಕಿ)
3) ಸ್ಮೃತಿ ಮಂದಾನ
4) ಪೂನಂ ರೌತ್
5) ಜಿಮ್ಮಿ ರೋಡ್ರಿಗ್ಯೂಸ್
6) ವೇದಾ ಕೃಷ್ಣಮೂರ್ತಿ
7) ಮೋನಾ ಮಿಶ್ರಂ
8) ಸುಷ್ಮಾ ವರ್ಮಾ (ಕೀಪರ್)
9) ಏಕ್ತಾ ಬಿಷ್ತ್‌
10) ಪೂನಂ ಯಾದವ್
11) ರಾಜೇಶ್ವರಿ ಗಾಯಕ್‌ವಾಡ್
12) ಶಿಖಾ ಪಾಂಡೆ
13) ಸುಖನ್ಯಾ ಫರೀದಾ
14) ಪೂಜಾ ವಸ್ತ್ರಾಕರ್
15) ದೀಪ್ತಿ ಶರ್ಮಾ

Story first published: Tuesday, March 6, 2018, 17:27 [IST]
Other articles published on Mar 6, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ