ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಕಕಾಲದಲ್ಲಿ ಕಣಕ್ಕಿಳಿಯಲಿವೆ ಭಾರತದ 2 ತಂಡಗಳು? ಹೆಚ್ಚುವರಿ 3 ವಿದೇಶಿ ಸರಣಿಗಳನ್ನ ಸೇರಿಸಿದ BCCI

Team india

ಭಾರತೀಯ ಕ್ರಿಕೆಟಿಗರು ಈ ವರ್ಷ ಬ್ಯುಸಿಯಾಗಿರುತ್ತಾರೆ. ಈ ಹಿಂದೆ ನಿಗದಿಯಾಗಿದ್ದ ಸರಣಿಗಳು ಮತ್ತು ಪಂದ್ಯಾವಳಿಗಳ ಜೊತೆಗೆ, ಬಿಸಿಸಿಐ ಈ ವರ್ಷ ತನ್ನ ಕ್ಯಾಲೆಂಡರ್‌ಗೆ ಇನ್ನೂ ಮೂರು ಸರಣಿಗಳನ್ನು ಸೇರಿಸಿದೆ. ಇದರಿಂದ ಆಟಗಾರರು ಗೊಂದಲಕ್ಕೀಡಾಗುವುದರಲ್ಲಿ ಸಂಶಯವಿಲ್ಲ. ಅಂತಾರಾಷ್ಟ್ರೀಯ ವೇಳಾಪಟ್ಟಿಯ ಹೊರತಾಗಿ ಎರಡು ತಿಂಗಳ ಅವಧಿಯ ಐಪಿಎಲ್ ಕೂಡ ಆಟಗಾರರ ಮುಂದಿದೆ.

ಬಿಡುವಿಲ್ಲದ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಭಾರತ ವಿವಿಧ ಸರಣಿಗಳಲ್ಲಿ ಒಂದೇ ಸಮಯದಲ್ಲಿ ಎರಡು ತಂಡಗಳನ್ನು ಕಣಕ್ಕಿಳಿಸುವ ಪ್ರಯೋಗವನ್ನು ಪುನರಾವರ್ತಿಸಲು ಹೊರಟಿದೆ ಎಂದು ತಿಳಿದುಬಂದಿದೆ. ಬಿಸಿಸಿಐ ಇಂತಹ ಪ್ರಯೋಗ ಮಾಡಿರುವುದು ಇತಿಹಾಸದಲ್ಲಿ ಇದು ಮೂರನೇ ಬಾರಿ.

ಭಾರತ-ಶ್ರೀಲಂಕಾ ಮೊದಲ ಟಿ20 ಪಂದ್ಯ: ಟೀಂ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ 11ಭಾರತ-ಶ್ರೀಲಂಕಾ ಮೊದಲ ಟಿ20 ಪಂದ್ಯ: ಟೀಂ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ 11

ಈ ವರ್ಷದ ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ 20 ವಿಶ್ವಕಪ್‌ಗೆ ಮುಂಚಿತವಾಗಿ, ಭಾರತವು ದೇಶ ಮತ್ತು ವಿದೇಶದಲ್ಲಿ ತಮ್ಮ ಮುಂದೆ ಬೆರಳೆಣಿಕೆಯ ಸರಣಿಗಳನ್ನು ಹೊಂದಿದೆ. ಅಲ್ಲದೆ, ಏಷ್ಯಾಕಪ್‌ನಲ್ಲಿ ಭಾರತ ಬದಲಾವಣೆಗಳನ್ನು ಮಾಡುತ್ತಿದೆ.

ವಿಶ್ವಕಪ್‌ಗೆ ಮುನ್ನ ಬಿಸಿಸಿಐ ತನ್ನ ಕ್ರಿಕೆಟ್ ಕ್ಯಾಲೆಂಡರ್‌ಗೆ ಮೂರು ಹೊಸ ವಿದೇಶಿ ಪ್ರವಾಸಗಳನ್ನು ಸೇರಿಸಿದೆ. ಇವು ಜುಲೈ ಮತ್ತು ಅಕ್ಟೋಬರ್ ನಡುವೆ ಇರುತ್ತವೆ. ಟೈಮ್ಸ್ ಆಫ್ ಇಂಡಿಯಾದ ಪ್ರಕಾರ, ಭಾರತವು ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆಯಲ್ಲಿ ಪಂದ್ಯಗಳನ್ನು ಆಡಲಿದೆ.

ಐರ್ಲೆಂಡ್ ಪ್ರವಾಸದಲ್ಲಿ ಭಾರತ ಕೇವಲ ಒಂದು ಟಿ20 ಪಂದ್ಯವನ್ನಾಡಲಿದೆ. ಐರ್ಲೆಂಡ್ ಪ್ರವಾಸದಂತೆಯೇ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಳ್ಳುತ್ತಿದೆ. ಟೈಮ್ಸ್ ಆಫ್ ಇಂಡಿಯಾದ ಪ್ರಕಾರ, ಐರ್ಲೆಂಡ್ ವಿರುದ್ಧದ T20 ಪಂದ್ಯದ ಸಮಯದಲ್ಲೇ, ಹಿರಿಯ ಆಟಗಾರರ ತಂಡ ಇಂಗ್ಲೆಂಡ್ ಪ್ರವಾಸದಲ್ಲಿ ಏಕೈಕ ಟೆಸ್ಟ್ ಆಡಲಿದೆ.

ಆದ್ದರಿಂದ, ಇಂಗ್ಲೆಂಡ್ ಮತ್ತು ಐರ್ಲೆಂಡ್ ವಿರುದ್ಧ ಭಾರತ ಎರಡು ವಿಭಿನ್ನ ತಂಡಗಳನ್ನು ಪರೀಕ್ಷಿಸುವ ಸೂಚನೆಗಳಿವೆ. ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ಪ್ರವಾಸಗಳ ಸಮಯದಲ್ಲಿ ಏಷ್ಯಾ ಕಪ್ ಕೂಡ ನಡೆಯುತ್ತದೆ. ಏಷ್ಯಾಕಪ್‌ನಲ್ಲಿ ಭಾರತ ಪ್ರಮುಖ ಆಟಗಾರರ ಬಲಿಷ್ಠ ತಂಡವನ್ನು ಕಣಕ್ಕಿಳಿಸಲಿದೆ. ಇದರೊಂದಿಗೆ ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ಪ್ರವಾಸಕ್ಕೆ ಮತ್ತೊಂದು ತಂಡವನ್ನು ಕಳುಹಿಸಬೇಕಾಗಿದೆ.

ಏಕಕಾಲಕ್ಕೆ ಎರಡು ತಂಡಗಳನ್ನು ಕಣಕ್ಕಿಳಿಸುವ ಭಾಗವಾಗಿ ಆಟಗಾರರ ದೊಡ್ಡ ತಂಡವನ್ನು ಸಿದ್ಧಪಡಿಸುವುದು ಬಿಸಿಸಿಐನ ಕ್ರಮವಾಗಿದೆ. 35 ಜನರ ತಂಡವನ್ನು ಬಿಸಿಸಿಐ ಸಿದ್ಧಪಡಿಸುತ್ತಿದೆ. ಬಯೋ ಬಬಲ್ ಬ್ರೇಕ್ ಕುರಿತು ಚರ್ಚೆಗಳು ಈಗಾಗಲೇ ಪ್ರಾರಂಭವಾಗಿವೆ. ಬಿಡುವಿಲ್ಲದ ಪ್ರವಾಸಗಳ ಬಗ್ಗೆ ಪ್ರತಿ ಸ್ಟಾರ್ ತಿಳಿಸಲಾಗಿದೆ.
ಅವರಿಗೆ ಯಾವಾಗ ವಿಶ್ರಾಂತಿ ಬೇಕು ಎಂದು ಯೋಚಿಸಲು ಸಮಯಾವಕಾಶವನ್ನೂ ನೀಡಲಾಗಿದೆ.

ಸಹ ಆಟಗಾರನಿಗೆ ಕಪಾಳ ಮೋಕ್ಷ ಮಾಡಿದ ರೌಫ್ | Oneindia Kannada

ಮೊದಲಿಗೆ ಭಾರತದ ಎರಡನೇ ಹಂತದ ತಂಡ ಜಿಂಬಾಬ್ವೆಗೆ ತೆರಳುವ ಸಾಧ್ಯತೆಯಿದೆ. ಏಷ್ಯಾ ಕಪ್ ಪ್ರಮುಖ ತಂಡವನ್ನು ಇಳಿಸಲು ಪರಿಪೂರ್ಣ ಪಂದ್ಯಾವಳಿಯಾಗಿದೆ. ಇದು ಟಿ20 ವಿಶ್ವಕಪ್‌ಗೆ ಮುನ್ನ ಸರಿಯಾದ ತಂಡದ ಸಂಯೋಜನೆಯನ್ನು ಕಂಡು ಕೊಳ್ಳಲು ಸಹಾಯ ಮಾಡುತ್ತದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

Story first published: Thursday, February 24, 2022, 9:40 [IST]
Other articles published on Feb 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X