2023ರ ಏಕದಿನ ವಿಶ್ವಕಪ್‌ಗಾಗಿ 20 ಆಟಗಾರರ ಹೆಸರು ಶಾರ್ಟ್‌ಲಿಸ್ಟ್ ಮಾಡಿದ ಬಿಸಿಸಿಐ

ಬಿಸಿಸಿಐನ ಮಹತ್ವದ ಪರಿಶೀಲನಾ ಸಭೆ ಮುಕ್ತಾಯವಾಗಿದೆ. ಅನೇಕ ಚರ್ಚೆಗಳು ನಡೆದಿದ್ದರೂ, ಕೆಲವು ಮಾಹಿತಿಗಳನ್ನು ಮಾತ್ರ ಬಹಿರಂಗಪಡಿಸಲಾಗಿದೆ. ಅಕ್ಟೋಬರ್‌ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ 2023ಕ್ಕೆ ಬಿಸಿಸಿಐ 20 ಆಟಗಾರರನ್ನು ಶಾರ್ಟ್‌ಲಿಸ್ಟ್ ಮಾಡಿದೆ.

ಆಟಗಾರರನ್ನು ಗಾಯದಿಂದ ರಕ್ಷಿಸಲು, ಐಪಿಎಲ್‌ ತಂಡಗಳ ಜೊತೆ ಕೆಲಸದ ಒತ್ತಡವನ್ನು ನಿರ್ವಹಿಸುವ ಕೆಲಸ ಮಾಡಲು ಎನ್‌ಸಿಎಗೆ ಸೂಚನೆ ನೀಡಿದೆ. ಗಾಯಗೊಂಡ ಯಾವುದೇ ಆಟಗಾರ ಮತ್ತೆ ತಂಡಕ್ಕೆ ಮರಳಬೇಕಾದರೆ ಯೋ-ಯೋ ಟೆಸ್ಟ್ ಹೊರತಾಗಿ, ಡೆಕ್ಸಾ ಪರೀಕ್ಷೆಯನ್ನು ಬಿಸಿಸಿಐ ಕಡ್ಡಾಯಗೊಳಿಸಿದೆ. ಯುವ ಆಟಗಾರರು ಭಾರತ ತಂಡಕ್ಕೆ ಆಯ್ಕೆಗೆ ಅರ್ಹರಾಗಲು ಗಣನೀಯ ಪ್ರಮಾಣದ ದೇಶೀಯ ಆಟಗಳನ್ನು ಆಡಬೇಕಾಗುತ್ತದೆ.

"ಬಿಸಿಸಿಐ ಭಾನುವಾರ ಮುಂಬೈನಲ್ಲಿ ಟೀಮ್ ಇಂಡಿಯಾ ಪರಿಶೀಲನಾ ಸಭೆಯನ್ನು ನಡೆಸಿದೆ. ಸಭೆಯಲ್ಲಿ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಗೌರವ ಕಾರ್ಯದರ್ಶಿ ಜಯ್ ಶಾ, ಭಾರತೀಯ ನಾಯಕ ರೋಹಿತ್ ಶರ್ಮಾ, ಟೀಮ್ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಎನ್‌ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್, ಆಯ್ಕೆ ಸಮಿತಿಯ ಅಧ್ಯಕ್ಷ ಚೇತನ್ ಶರ್ಮಾ ಸಭೆಯಲ್ಲಿ ಭಾಗವಹಿಸಿದ್ದರು." ಎಂದು ಬಿಸಿಸಿಐ ತಿಳಿಸಿದೆ.

Ind vs SL : ಹಾರ್ದಿಕ್ ಪಾಂಡ್ಯ ಮತ್ತು ರಾಹುಲ್ ದ್ರಾವಿಡ್‌ಗೆ ತಲೆನೋವಾದ ಪ್ಲೇಯಿಂಗ್ XI ಆಯ್ಕೆInd vs SL : ಹಾರ್ದಿಕ್ ಪಾಂಡ್ಯ ಮತ್ತು ರಾಹುಲ್ ದ್ರಾವಿಡ್‌ಗೆ ತಲೆನೋವಾದ ಪ್ಲೇಯಿಂಗ್ XI ಆಯ್ಕೆ

ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರ ಮಾರ್ಗಸೂಚಿಯೊಂದಿಗೆ ಆಟಗಾರರ ಲಭ್ಯತೆ, ಕೆಲಸದ ಹೊರೆ ನಿರ್ವಹಣೆ ಮತ್ತು ಫಿಟ್‌ನೆಸ್ ಪ್ಯಾರಾಮೀಟರ್‌ಗಳ ವಿಷಯಗಳ ಕುರಿತು ಸಭೆಯಲ್ಲಿ ಸಾಕಷ್ಟು ಚರ್ಚೆ ಮಾಡಲಾಗಿದೆ.

ಏಕದಿನ ವಿಶ್ವಕಪ್‌ಗೆ ಹೆಚ್ಚಿನ ಮಹತ್ವ

2023ರಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್ ಆಯೋಜನೆ ಮಾಡಲಾಗುತ್ತದೆ. ಭಾರತ ತಂಡವನ್ನು ಈಗಿನಿಂದಲೇ ಅಣಿಗೊಳಿಸಲು ಬಿಸಿಸಿಐ ಯೋಜನೆ ರೂಪಿಸಿದೆ. 20 ಆಟಗಾರರನ್ನು ಶಾರ್ಟ್‌ಲಿಸ್ಟ್ ಮಾಡಿದ್ದು, ವಿಶ್ವಕಪ್‌ ಆರಂಭಕ್ಕೆ ಮುನ್ನ ಭಾರತ ಆಡಲಿರುವ 35 ಏಖದಿನ ಪಂದ್ಯಗಳಲ್ಲಿ 20 ಆಟಗಾರರು ನಿಯಮಿತವಾಗಿ ಆಡಲಿದ್ದಾರೆ.

ಎಲ್ಲಾ ಮಾದರಿಯ ಕ್ರಿಕೆಟ್ ಆಡುವ ಆಟಗಾರರ ಫಿಟ್ನೆಸ್ ಮೇಲೆ ಹೆಚ್ಚಿನ ಗಮನ ನೀಡಲಾಗುತ್ತದೆ. ಆಟಗಾರರ ಫಿಟ್‌ನೆಸ್ ಮೇಲ್ವಿಚಾರಣೆ ಮಾಡಲು, ಐಪಿಎಲ್ ಫ್ರಾಂಚೈಸಿಗಳೊಂದಿಗೆ ಕೆಲಸ ಮಾಡಲು ವಿವಿಎಸ್ ಲಕ್ಷ್ಮಣ್ ನೇತೃತ್ವದ ಎನ್‌ಸಿಎಗೆ ಬಿಸಿಸಿಐ ಸೂಚನೆ ನೀಡಿದೆ.

ಐಪಿಎಲ್‌ನಲ್ಲಿ ಆಡುವ ಆಟಗಾರರಿಗೆ ಸೂಚನೆ

ಸಂಪೂರ್ಣವಾಗಿ ಫಿಟ್ ಆಗದ ಹೊರತು ಅಥವಾ ಗಾಯದ ಭಯ ಹೊಂದಿರುವ ಹಿರಿಯ ಆಟಗಾರರಿಗೆ ಐಪಿಎಲ್‌ನಲ್ಲಿ ಆಡದಂತೆ ಬಿಸಿಸಿಐ ಸೂಚನೆ ನೀಡಿದೆ. ಐಪಿಎಲ್‌ನಿಂದಾಗಿ ಹಿರಿಯ ಆಟಗಾರರಿಗೆ ಒತ್ತಡ ಹೆಚ್ಚಾಗದಂತೆ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ.

ಬಿಸಿಸಿಐ ಶಾರ್ಟ್‌ಲಿಸ್ಟ್ ಮಾಡಿರುವ 20 ಆಟಗಾರರ ಹೆಸರನ್ನು ಇನ್ನೂ ಬಹಿರಂಗ ಮಾಡಿಲ್ಲ. ಏಕದಿನ ವಿಶ್ವಕಪ್‌ವರೆಗೆ ಭಾರತ ತಂಡ ಸಾಕಷ್ಟು ಸರಣಿಗಳನ್ನು ಆಯೋಜನೆ ಮಾಡಿದೆ, ಗಾಯದ ಇತಿಹಾಸ ಹೊಂದಿರುವ ಹಲವು ಕ್ರಿಕೆಟಿಗರಿಗೆ ಇದು ಹೆಚ್ಚಿನ ಒತ್ತಡ ಉಂಟು ಮಾಡುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಹಲವು ಸೂಚನೆಗಳನ್ನು ನೀಡಿದೆ.

For Quick Alerts
ALLOW NOTIFICATIONS
For Daily Alerts
Story first published: Sunday, January 1, 2023, 17:24 [IST]
Other articles published on Jan 1, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X