ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಿಸಿಸಿಐ ವಿರುದ್ಧ ಅಸಮಾಧಾನ ಹೊರಹಾಕಿದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್

Bcci Treated Me Unprofessionally Says Yuvraj Singh

ಟೀಮ್ ಇಂಡಿಯಾದ ಮಾಜಿ ಸ್ಪೋಟಕ ಆಟಗಾರ ಯುವರಾಜ್ ಸಿಂಗ್ ಬಿಸಿಸಿಐ ನಡವಳಿಕೆಯ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಟೀಮ್ ಇಂಡಿಯಾಗೆ ಮ್ಯಾಚ್ ವಿನ್ನರ್‌ಗಳಾಗಿ ಬಹುದೊಡ್ಡ ಕೊಡುಗೆ ನೀಡಿದ ಆಟಗಾರರನ್ನು ಬಿಸಿಸಿಐ ಸರಿಯಾಗಿ ನಡೆಸಿಕೊಂಡಿಲ್ಲ ಎಂದು ಹೇಳಿದ್ದಾರೆ.

ಭವಿಷ್ಯದಲ್ಲಾದರೂ ಬಿಸಿಸಿಐ ಭಾರತ ಕ್ರಿಕೆಟ್ ತಂಡಕ್ಕೆ ದೊಡ್ಡ ಕೊಡುಗೆ ನೀಡಿದ ಆಟಗಾರರನ್ನು ಗೌರವಯುತವಾಗಿ ಕಾಣಬೇಕು ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ. ತನ್ನ ಸಹ ಆಟಗಾರರಾದ ಹರ್ಭಜನ್ ಸಿಂಗ್, ವೀರೇಂದ್ರ ಸೆಹ್ವಾಗ್, ಮತ್ತು ಜಹೀರ್ ಖಾನ್ ಉತ್ತಮ ರೀತಿಯಲ್ಲಿ ತಮ್ಮ ವೃತ್ತಿ ಜೀವನವನ್ನು ಅಂತ್ಯಗೊಳಿಸಬಹುದಿತ್ತು ಎಂದಿದ್ದಾರೆ.

ಐಸಿಸಿ ಟೆಸ್ಟ್ ಚಾಂಪಿಯನ್‌ಷಿಪ್‌: ಭಾರತ ನಂ.1 ತಂಡ, ಬ್ರಾಡ್ ನಂ.1 ಬೌಲರ್!ಐಸಿಸಿ ಟೆಸ್ಟ್ ಚಾಂಪಿಯನ್‌ಷಿಪ್‌: ಭಾರತ ನಂ.1 ತಂಡ, ಬ್ರಾಡ್ ನಂ.1 ಬೌಲರ್!

ವಿದಾಯ ಪಂದ್ಯದ ಗೌರವ ಸಿಗಲಿಲ್ಲ

ವಿದಾಯ ಪಂದ್ಯದ ಗೌರವ ಸಿಗಲಿಲ್ಲ

ಟೀಮ್ ಇಂಡಿಯಾದಲ್ಲಿ 19 ವರ್ಷಗಳ ಕಾಲ ಪ್ರಮುಖ ಆಟಗಾರನಾಗಿದ್ದ ಯುವರಾಜ್ ಸಿಂಗ್ ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಹೇಳಿದ್ದರು. ಆದರೆ ಯುವರಾಜ್ ಸಿಂಗ್‌ಗೂ ಕೂಡ ಜಹೀರ್ ಖಾನ್ ಅಥವಾ ವೀರೇಂದ್ರ ಸೆಹ್ವಾಗ್ ಅವರಂತೆಯೆ ವಿದಾಯ ಪಂದ್ಯವನ್ನಾಡುವ ಅವಕಾಶವೇ ದೊರೆಯಲಿಲ್ಲ. ಇದಕ್ಕೂ ಯುವರಾಜ್ ಪ್ರತಿಕ್ರಿಯಿಸಿದ್ದು ತನ್ನನ್ನು ವೃತ್ತಿಜೀವನದ ಅಂತ್ಯದಲ್ಲಿ ಬಿಸಿಸಿಐ ವೃತ್ತಿಪರವಾಗಿ ನಡೆಸಿಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬಿಸಿಸಿಐಗೆ ಬಿಟ್ಟ ವಿಚಾರ

ಬಿಸಿಸಿಐಗೆ ಬಿಟ್ಟ ವಿಚಾರ

ವಿದಾಯ ಪಂದ್ಯದಲ್ಲಿ ಆಡಿಸುವುದು ನನ್ನ ನಿರ್ಧಾರವಲ್ಲ. ಅದು ಬಿಸಿಸಿಐಗೆ ಬಿಟ್ಟ ವಿಚಾರ. ಆದರೆ ನನ್ನ ವೃತ್ತಿ ಜೀವನದ ಅಂತ್ಯವನ್ನು ನಿರ್ವಹಿಸಿದ ರೀತಿ ಅದು ತುಂಬಾ ಅನ್‌ಪ್ರೊಫೆಷನಲ್ ಆಗಿತ್ತು ಎಂದು ಸ್ಪೋರ್ಟ್ಸ್ ಕೀಡಾಗೆ ನೀಡಿದ ಸಂದರ್ಶನದಲ್ಲಿ ಯುವರಾಜ್ ಸಿಂಗ್ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಭಾರತೀಯ ಕ್ರಿಕೆಟ್‌ನ ಭಾಗ

ಭಾರತೀಯ ಕ್ರಿಕೆಟ್‌ನ ಭಾಗ

ಹಾಗಂತ ಸ್ವಲ್ಪ ಹಿಂದಿರುಗಿ ನೋಡಿದರೆ ಭಾರತದ ಶ್ರೇಷ್ಠ ಆಟಗಾರರತ್ತ ನೋಡಿದರೆ ಅವರ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಹರ್ಭಜನ್ ಸಿಂಗ್, ವೀರೇಂದ್ರ ಸೆಹ್ವಾಗ್ ಮತ್ತು ಜಹೀರ್ ಖಾನ್ ಅವರನ್ನು ಕೂಡ ತುಂಬಾ ಕೆಟ್ಟ ರೀತಿಯಲ್ಲಿ ನಿರ್ವಹಿಸಿದರು. ಭಾರತೀಯ ಕ್ರಿಕೆಟ್‌ನಲ್ಲಿ ಇದೊಂದು ಭಾಗವೇ ಆಗಿದೆ. ಹಾಗಾಗಿ ನಾನು ಈ ಬಗ್ಗೆ ಬೇಸರವನ್ನು ಹೊಂದಿಲ್ಲ ಎಂದು ಪರೋಕ್ಷವಾಗಿ ಛಾಟಿಬೀಸಿದರು.

2017ರಲ್ಲಿ ಯುವಿ ಅಂತಿಮ ಪಂದ್ಯ

2017ರಲ್ಲಿ ಯುವಿ ಅಂತಿಮ ಪಂದ್ಯ

ಯುವರಾಜ್ ಸಿಂಗ್ ಟೀಮ್ ಇಂಡಿಯಾ ಪರವಾಗಿ ತಮ್ಮ ಅಂತಿಮ ಪಂದ್ಯವನ್ನು 2017ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಡಿದ್ದರು. ಈ ಸರಣಿಗೂ ಮುನ್ನ ಜನವರಿಯಲ್ಲಿ ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾಗೆ ತಮ್ಮ ಅಂತಿಮ ಕಮ್‌ಬ್ಯಾಕ್ ಮಾಡಿದ್ದರು. ಈ ಸರಣಿಯಲ್ಲಿ ಕಟಕ್‌ನಲ್ಲಿ ನಡೆದ ಪಂದ್ಯದಲ್ಲಿ ಯುವ ತಮ್ಮ ಜೀವನಶ್ರೇಷ್ಠ 150 ರನ್‌ಗಳ ಕೊಡುಗೆಯನ್ನು ನೀಡಿದ್ದರು.

Story first published: Tuesday, July 28, 2020, 10:00 [IST]
Other articles published on Jul 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X