'ಸಚಿನ್, ದ್ರಾವಿಡ್‌ನಂತ ದೊಡ್ಡ ಆಟಗಾರರಿಂದಾಗಿ ನಾನೂ ಯುವಿ ಹೆಚ್ಚು ಟೆಸ್ಟ್ ಆಡಿಲ್ಲ'

ನವದೆಹಲಿ, ಜೂನ್ 17: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ಗ್ರೇಟ್ ವಾಲ್ ರಾಹುಲ್ ದ್ರಾವಿಡ್, ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಅವರಂತ ದೊಡ್ಡ ಆಟಗಾರರು ಇದ್ದಿದ್ದರಿಂದ ನಾನು ಮತ್ತು ಯುವರಾಜ್ ಸಿಂಗ್ ಹೆಚ್ಚು ಟೆಸ್ಟ್ ಪಂದ್ಯಗಳನ್ನಾಡಲಾಗಲಿಲ್ಲ ಎಂದು ಭಾರತದ ಜಾಂಟಿ ರೋಡ್ಸ್ ಖ್ಯಾತಿಯ ಮೊಹಮ್ಮದ್ ಕೈಫ್ ಹೇಳಿದ್ದಾರೆ.
2002ರಲ್ಲಿ ಇಂಗ್ಲೆಂಡ್‌ನ ಲಾರ್ಡ್ಸ್‌ನಲ್ಲಿ ನಡೆದಿದ್ದ ನ್ಯಾಟ್‌ವೆಸ್ಟ್ ಸೀರೀಸ್ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಮೊಹಮ್ಮದ್ ಕೈಫ್ ಮತ್ತು ಯುವರಾಜ್ ಸಿಂಗ್ ಮ್ಯಾಚ್ ವಿನ್ನಿಂಗ್ ಪಾರ್ಟ್ನರ್‌ಶಿಪ್ ನೀಡಿದ್ದನ್ನು ಕ್ರಿಕೆಟ್ ಪ್ರೇಮಿಗಳು ಸದಾ ನೆನಪಿಸಿಕೊಳ್ಳಬಲ್ಲರು. ಇಬ್ಬರ ಅಧ್ಬುತ ಆಟದಿಂದಲೇ ಆವತ್ತು ಭಾರತ 326 ರನ್ ಗುರಿ ತಲುಪಿ ಇಂಗ್ಲೆಂಡ್‌ಗೆ ಸೋಲುಣಿಸಿತ್ತು.
ಆವತ್ತು ಒಂದೇ ರಾತ್ರಿ ಬೆಳಗಾಗುವುದರೊಳಗೆ ಕೈಫ್-ಯುವಿ ಇಂಡಿಯನ್ ಕ್ರಿಕೆಟ್‌ನ ಹೀರೋ ಅನ್ನಿಸಿದ್ದರು. ಆದರೆ ಭಾರತ ತಂಡದಲ್ಲಿ ಆಗಲೇ ಇದ್ದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ವೀರೇಂದ್ರ ಸೆಹ್ವಾಗ್, ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್ ಅವರಂತ ದಿಗ್ಗಜರಿಂದಾಗಿ ಯುವಿ, ಕೈಫ್‌ಗೆ ಭಾರತ ಟೆಸ್ಟ್ ತಂಡದಲ್ಲಿ ನಿಯಮಿತವಾಗಿ ಕಾಣಿಸಿಕೊಳ್ಳಲಾಗುತ್ತಿರಲಿಲ್ಲ.
ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ಕೈಫ್, 'ಭಾರತ ತಂಡದಲ್ಲಿ ಆಗಲೇ ಸಚಿನ್, ದ್ರಾವಿಡ್, ಸೆಹ್ವಾಗ್‌ರಂತ ದೊಡ್ಡ ಆಟಗಾರರಿದ್ದರು. ಹೀಗಾಗಿ ನಾನು ಮತ್ತು ಯುವರಾಜ್‌ಗೆ ಟೆಸ್ಟ್‌ನಲ್ಲಿ ಹೆಚ್ಚು ಅವಕಾಶ ಸಿಗಲಿಲ್ಲ,' ಎಂದಿದ್ದಾರೆ. ಕೈಫ್ 13 ಟೆಸ್ಟ್ ಪಂದ್ಯಗಳಲ್ಲಿ 624 ರನ್ ಗಳಿಸಿದ್ದರೆ, ಯುವಿ 40 ಟೆಸ್ಟ್ ಪಂದ್ಯಗಳಲ್ಲಿ 1900 ರನ್ ಗಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications