ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈತ ನಮ್ಮ ಹುಡುಗ, ಹುಷಾರಾಗಿ ನೋಡ್ಕೊಳಿ: ಜಡೇಜಾ ಬಗ್ಗೆ ಧೋನಿಗೆ ತಿಳಿಸಿದ್ದ ನರೇಂದ್ರ ಮೋದಿ!

Ravindra jadeja

ಟೀಂ ಇಂಡಿಯಾ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ, ಭಾರತ ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ಸಂಭಾಷಣೆಯೊಂದನ್ನ ಹಂಚಿಕೊಂಡಿದ್ದಾರೆ. 2010ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಮುನ್ನಡೆಯುತ್ತಿದ್ದ ಸಂದರ್ಭದಲ್ಲಿ ಧೋನಿ, ತನ್ನ ಸಹ ಆಟಗಾರರನ್ನು ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಪರಿಚಯ ಮಾಡಿಕೊಟ್ಟಿದ್ದ ಸಂದರ್ಭವನ್ನು ಮೆಲುಕು ಹಾಕಿದ್ದಾರೆ.

ಪ್ರಸ್ತುತ ರವೀಂದ್ರ ಜಡೇಜಾ ಪತ್ನಿ ರಿವಾಬಾ, ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಜಾಮನಗರ ಉತ್ತರ ಪ್ರದೇಶದ ಬಿಜೆಪಿ ಟಿಕೆಟ್ ಪಡೆದಿದ್ದಾರೆ.

IND vs NZ T20: ಈ ವಿಚಾರಗಳಲ್ಲಿ ಟೀಂ ಇಂಡಿಯಾ ಇನ್ನೂ ಸುಧಾರಿಸಬೇಕಿದೆIND vs NZ T20: ಈ ವಿಚಾರಗಳಲ್ಲಿ ಟೀಂ ಇಂಡಿಯಾ ಇನ್ನೂ ಸುಧಾರಿಸಬೇಕಿದೆ

2010ರಲ್ಲಿ ದಕ್ಷಿಣ ಆಫ್ರಿಕಾ ತಂಡವು ಭಾರತದ ಪ್ರವಾಸ ಕೈಗೊಂಡಿದ್ದ ವೇಳೆಯಲ್ಲಿ ಅಹಮದಾಬಾದ್‌ನಲ್ಲಿ ಪಂದ್ಯವೊಂದನ್ನ ಆಯೋಜಿಸಲಾಗಿತ್ತು. ಈ ಪಂದ್ಯಕ್ಕೂ ಮುನ್ನ ಮೊದಲ ಬಾರಿಗೆ ಜಡ್ಡು ನರೇಂದ್ರ ಮೋದಿಯನ್ನು ಮುಖಾಮುಖಿ ಬೇಟಿಯಾದರು.

'' 2010ರಲ್ಲಿ ನರೇಂದ್ರ ಮೋದಿಯವರನ್ನು ಅಹಮದಾಬಾದ್‌ನಲ್ಲಿ ಮೊದಲ ಬಾರಿಗೆ ಬೇಟಿ ಮಾಡಿದೆ. ಆ ಸಮಯದಲ್ಲಿ ಅವರು ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದರು. ಮೊಟೆರಾ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಮ್ಮ ಪಂದ್ಯವಿತ್ತು. ಈ ವೇಳೆಯಲ್ಲಿ ನಮ್ಮ ನಾಯಕನಾಗಿದ್ದ ಮಾಹಿ ಬಾಯ್, ಎಲ್ಲರನ್ನೂ ಮೋದಿಯವರಿಗೆ ಪರಿಚಯ ಮಾಡಿಕೊಡುತ್ತಿದ್ದರು. ಈ ವೇಳೆಯಲ್ಲಿ ಸ್ವತಃ ಅವರೇ(ಮೋದಿ) ಈತ ನಮ್ಮ ಹುಡುಗ, ಹುಷಾರಾಗಿ ನೋಡ್ಕೊಳಿ' ಎಂದು ನಗುತ್ತಾ ಹೇಳಿದ್ದರು'' ಎಂದು ರವೀಂದ್ರ ಜಡೇಜಾ ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ.

'' ಈ ರೀತಿಯಾಗಿ ಅಷ್ಟು ದೊಡ್ಡ ವ್ಯಕ್ತಿ ನಮ್ಮ ಬಗ್ಗೆ ಹೇಳಿದಾಗ, ನನಗೆ ತುಂಬಾನೆ ಸಂತೋಷವಾಯಿತು'' ಎಂದು ಜಡೇಜಾ ಹೇಳಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಡೇಜಾ ಪತ್ನಿ ರಿವಾಬಾ ಮತ್ತು ಆತನ ಸಹೋದರಿ ನಯ್ನಾಬ ಮುಖಾಮುಖಿಯಾಗಿದ್ದಾರೆ. ಜಡೇಜಾ ಪತ್ನಿ ರಿವಾಬಾ ಬಿಜೆಪಿ ಟಿಕೆಟ್ ಪಡೆದಿದ್ದು, ಸಹೋದರಿ ನಯ್ನಾಬ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲಿದ್ದಾರೆ. ನೈನಾ ಅವರು ಹೋಟೆಲ್ ನಡೆಸುತ್ತಿದ್ದು, ಜಾಮ್‌ನಗರದಲ್ಲಿ ಹೆಸರು ಗಳಿಸಿದ್ದಾರೆ. ಅವರು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದು, ಬಹಳ ಸಕ್ರಿಯವಾಗಿದ್ದಾರೆ.

ಈಗಾಗಲೇ ಚುನಾವಣಾ ಪೂರ್ವ ಪತ್ರಿಕಾಗೋಷ್ಟಿಯಲ್ಲಿ ಜಡೇಜಾ ಪತ್ನಿಯೊಂದಿಗೆ ಕಾಣಿಸಿಕೊಂಡಿದ್ದು, ಚುನಾವಣಾ ಪ್ರಚಾರದಲ್ಲಿ ಕೂಡ ಭಾಗಿದ್ದರು.

ವೀಡಿಯೋದಲ್ಲಿ ರವೀಂದ್ರ ಜಡೇಜಾ ನರೇಂದ್ರ ಮೋದಿ ಕುರಿತು ಮತ್ತಷ್ಟು ಮಾತನಾಡಿದ್ದು, ನರೇಂದ್ರ ಮೋದಿ ಗುಜರಾತಿ ಆಗಿ ಹೇಗೆ ವಿಶ್ವದಲ್ಲೇ ತನ್ನ ಪ್ರಭಾವ ಬೀರಿದ್ದಾರೆ ಎಂಬುದನ್ನು ತಿಳಿಸಿದ್ದಾರೆ.

Story first published: Tuesday, November 22, 2022, 11:47 [IST]
Other articles published on Nov 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X