ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Border-Gavaskar Trophy: ಭಾರತ vs ಆಸ್ಟ್ರೇಲಿಯಾ ಅತಿ ಹೆಚ್ಚು ರನ್, ಹೆಚ್ಚು ವಿಕೆಟ್ ಗಳಿಸಿದ ಆಟಗಾರರ ಪಟ್ಟಿ

Border-Gavaskar Trophy: India vs Australia Highest Run Scorers, Most Wicket Takers List

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಮೊದಲ ಪಂದ್ಯ ಫೆಬ್ರವರಿ 9ರಂದು ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ನಡೆಯಲಿದೆ.

ಬಾರ್ಡರ್- ಗವಾಸ್ಕರ್ ಟ್ರೋಫಿಯು ಭಾರತ ಮತ್ತು ಆಸ್ಟ್ರೇಲಿಯಾ ಎರಡು ಬಲಿಷ್ಠ ತಂಡಗಳ ನಡುವಿನ ವಾರ್ಷಿಕ ದ್ವಿಪಕ್ಷೀಯ ಹೈ-ವೋಲ್ಟೇಜ್ ಟೆಸ್ಟ್ ಸರಣಿಯಾಗಿದೆ. ಎರಡು ತಂಡಗಳ ನಡುವೆ ಇರುವ ತೀವ್ರವಾದ ಸ್ಪರ್ಧೆಯು ಆಟಗಾರರನ್ನು ಉತ್ತೇಜಿಸುತ್ತದೆ ಮತ್ತು ಮೈದಾನದಲ್ಲಿ 100ಕ್ಕೆ 120ರಷ್ಟು ಪ್ರಯತ್ನ ಹಾಕಲು ಎದುರು ನೋಡುತ್ತಾರೆ.

Asia Cup 2023: ಪಾಕ್‌ನಲ್ಲಿ ಭಾರತ ಏಷ್ಯಾಕಪ್ ಆಡದಿದ್ದರೆ, ವಿಶ್ವಕಪ್ ಆಡಲ್ಲ; ಎಚ್ಚರಿಕೆ ನೀಡಿದ ಪಿಸಿಬಿAsia Cup 2023: ಪಾಕ್‌ನಲ್ಲಿ ಭಾರತ ಏಷ್ಯಾಕಪ್ ಆಡದಿದ್ದರೆ, ವಿಶ್ವಕಪ್ ಆಡಲ್ಲ; ಎಚ್ಚರಿಕೆ ನೀಡಿದ ಪಿಸಿಬಿ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ ಕಳೆದ 3 ಆವೃತ್ತಿಗಳಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಗೆದ್ದುಕೊಂಡಿತ್ತು. ಆದರೆ, ವಿರಾಟ್ ಕೊಹ್ಲಿ ತಂದೆಯಾದ ಕಾರಣ ರಜೆ ಪಡೆದು ವಾಪಸ್ ಬಂದಿದ್ದರಿಂದ ಕಳೆದ ಸರಣಿಯಲ್ಲಿ ಅಜಿಂಕ್ಯ ರಹಾನೆ ಭಾರತವನ್ನು 3 ಟೆಸ್ಟ್ ಪಂದ್ಯಗಳಲ್ಲಿ ಮುನ್ನಡೆಸಿದ್ದರು ಮತ್ತು ಆಸೀಸ್ ನೆಲದಲ್ಲಿಯೇ 3-1 ಅಂತರದಲ್ಲಿ ಗೆಲುವು ಭಾರತ ಸರಣಿ ಗೆಲುವು ಸಾಧಿಸಿತ್ತು.

ಜಸ್ಪ್ರೀತ್ ಬುಮ್ರಾ, ರಿಷಭ್ ಪಂತ್, ಶ್ರೇಯಸ್ ಅಯ್ಯರ್ ಗೈರು

ಜಸ್ಪ್ರೀತ್ ಬುಮ್ರಾ, ರಿಷಭ್ ಪಂತ್, ಶ್ರೇಯಸ್ ಅಯ್ಯರ್ ಗೈರು

ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳು ಪ್ರಸ್ತುತ ಐಸಿಸಿ ಟೆಸ್ಟ್ ತಂಡಗಳ ಶ್ರೇಯಾಂಕದಲ್ಲಿ ಅಗ್ರ ಎರಡು ಸ್ಥಾನಗಳನ್ನು ಹೊಂದಿವೆ. ಅಲ್ಲದೇ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕ ಪಟ್ಟಿಯಲ್ಲಿಯೂ ಮೊದಲೆರಡು ಸ್ಥಾನದಲ್ಲಿದ್ದಾರೆ. ಜೂನ್‌ನಲ್ಲಿ ನಡೆಯುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ತಲುಪಲು ಇತ್ತಂಡಗಳು ಹೋರಾಡುತ್ತಿವೆ.

ತವರಿನಲ್ಲಿ ಆಡುತ್ತಿರುವುದರಿಂದ ಭಾರತ ಫೇವರಿಟ್ ತಂಡವಾಗಿದೆ. ಆದರೆ, ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಗಾಯದ ಸಮಸ್ಯೆ ಎದುರಿಸುತ್ತಿದ್ದು, ಕೆಲವು ಸ್ಟಾರ್ ಅಟಗಾರರ ಸೇವೆಯಿಂದ ವಂಚಿತವಾಗಿದೆ.

ಈ ಬಾರಿಯ ಸರಣಿಯಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ, ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಗಾಯದಿಂದ ಹೊರಗುಳಿದಿದ್ದಾರೆ. ಇದೇ ವೇಳೆ, ಕೊನೆಯ 2 ಟೆಸ್ಟ್ ಪಂದ್ಯಗಳಿಗೆ ಜಸ್ಪ್ರೀತ್ ಬುಮ್ರಾ ಪುನರಾಗಮನ ಮಾಡುವ ನಿರೀಕ್ಷೆ ಇದೆ.

ಮೊದಲ ಟೆಸ್ಟ್ ಪಂದ್ಯ: ಫೆಬ್ರವರಿ 9ರಿಂದ ಫೆಬ್ರವರಿ 13ರವೆರೆಗೆ

ಮೊದಲ ಟೆಸ್ಟ್ ಪಂದ್ಯ: ಫೆಬ್ರವರಿ 9ರಿಂದ ಫೆಬ್ರವರಿ 13ರವೆರೆಗೆ

ಮೊದಲ ಟೆಸ್ಟ್ ಪಂದ್ಯ: ಫೆಬ್ರವರಿ 9ರಿಂದ ಫೆಬ್ರವರಿ 13ರವೆರೆಗೆ - ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣ, ನಾಗ್ಪುರ.

ಎರಡನೇ ಟೆಸ್ಟ್ ಪಂದ್ಯ: ಫೆಬ್ರವರಿ 17ರಿಂದ ಫೆಬ್ರವರಿ 21ರವೆರೆಗೆ - ಅರುಣ್ ಜೇಟ್ಲಿ ಸ್ಟೇಡಿಯಂ, ದೆಹಲಿ.

ಮೂರನೇ ಟೆಸ್ಟ್ ಪಂದ್ಯ: ಮಾರ್ಚ್ 1ರಿಂದ ಮಾರ್ಚ್ 5ರವೆರೆಗೆ - ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ, ಧರ್ಮಶಾಲಾ.

ನಾಲ್ಕನೇ ಟೆಸ್ಟ್ ಪಂದ್ಯ: ಮಾರ್ಚ್ 9ರಿಂದ ಮಾರ್ಚ್ 13ರವರೆಗೆ - ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್.

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುವ ಬಾರ್ಡರ್- ಗವಾಸ್ಕರ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರು, ಅತಿ ಹೆಚ್ಚು ವಿಕೆಟ್ ಪಡೆದವರ ಕೆಲವು ಅಂಕಿಅಂಶಗಳನ್ನು ತಿಳಿದುಕೊಳ್ಳೋಣ.

ಬಾರ್ಡರ್- ಗವಾಸ್ಕರ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರು

ಬಾರ್ಡರ್- ಗವಾಸ್ಕರ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರು

1) ಸಚಿನ್ ತೆಂಡೂಲ್ಕರ್ - ಭಾರತ - 1821 ರನ್

2) ವಿವಿಎಸ್ ಲಕ್ಷ್ಮಣ್ - ಭಾರತ - 1198 ರನ್

3) ಮ್ಯಾಥ್ಯೂ ಹೇಡನ್ - ಆಸ್ಟ್ರೇಲಿಯಾ - 1027 ರನ್

4) ರಾಹುಲ್ ದ್ರಾವಿಡ್ - ಭಾರತ - 1000 ರನ್

5) ಮೈಕೆಲ್ ಕ್ಲಾರ್ಕ್ - ಆಸ್ಟ್ರೇಲಿಯಾ - 972 ರನ್

ಬಾರ್ಡರ್- ಗವಾಸ್ಕರ್ ಟ್ರೋಫಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರು

ಬಾರ್ಡರ್- ಗವಾಸ್ಕರ್ ಟ್ರೋಫಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರು

1) ಹರ್ಭಜನ್ ಸಿಂಗ್ - ಭಾರತ - 86 ವಿಕೆಟ್

2) ಅನಿಲ್ ಕುಂಬ್ಳೆ - ಭಾರತ - 62 ವಿಕೆಟ್

3) ರಿಚಿ ಬೆನಾಡ್ - ಆಸ್ಟ್ರೇಲಿಯಾ - 52 ವಿಕೆಟ್

4) ರವಿಚಂದ್ರನ್ ಅಶ್ವಿನ್ - ಭಾರತ - 50 ವಿಕೆಟ್

5) ರವೀಂದ್ರ ಜಡೇಜಾ - ಭಾರತ - 49 ವಿಕೆಟ್

ಬ್ಯಾಟರ್‌ನಿಂದ ವೈಯಕ್ತಿಕ ಗರಿಷ್ಠ ಸ್ಕೋರ್ - ವಿವಿಎಸ್ ಲಕ್ಷ್ಮಣ್ - ಭಾರತ - 281 ರನ್ (2001)

ಬೌಲರ್‌ನಿಂದ ವೈಯಕ್ತಿಕ ಅತ್ಯುತ್ತಮ ಬೌಲಿಂಗ್ ಅಂಕಿಅಂಶ - ಜಸುಭಾಯ್ ಮೋತಿಭಾಯ್ ಪಟೇಲ್- ಭಾರತ - 69 ರನ್‌ಗಳಿಗೆ 9 ವಿಕೆಟ್ (1959)

ಭಾರತ ಮತ್ತು ಆಸ್ಟ್ರೇಲಿಯಾ ಪೂರ್ಣ ತಂಡಗಳು

ಭಾರತ ಮತ್ತು ಆಸ್ಟ್ರೇಲಿಯಾ ಪೂರ್ಣ ತಂಡಗಳು

ಮೊದಲ ಎರಡು ಟೆಸ್ಟ್‌ಗಳಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶುಭ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾದ್ಕಟ್, ಸೂರ್ಯಕುಮಾರ್ ಯಾದವ್.

ಆಸ್ಟ್ರೇಲಿಯಾ: ಪ್ಯಾಟ್ ಕಮ್ಮಿನ್ಸ್ (ನಾಯಕ), ಆಶ್ಟನ್ ಅಗರ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಪೀಟರ್ ಹ್ಯಾಂಡ್ಸ್‌ಕಾಂಬ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್‌ಚಾಗ್ನೆ, ನಾಥನ್ ಲಿಯಾನ್, ಲ್ಯಾನ್ಸ್ ಮೋರಿಸ್, ಟಾಡ್ ಮರ್ಫಿ, ಮ್ಯಾಥ್ಯೂ ರೆನ್‌ಶಾ, ಸ್ಟೀವ್, ಸ್ಟೀವ್ ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್, ಡೇವಿಡ್ ವಾರ್ನರ್.

Story first published: Monday, February 6, 2023, 14:04 [IST]
Other articles published on Feb 6, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X