Breaking News: ಅಜಿಂಕ್ಯ ರಹಾನೆಗೆ ಗಾಯ, ಐಪಿಎಲ್‌ 2022ನಿಂದ ಔಟ್

ಕೊಲ್ಕತ್ತಾ ನೈಟ್‌ ರೈಡರ್ಸ್‌ ತಂಡದ ಓಪನಿಂಗ್ ಬ್ಯಾಟರ್ ಅಜಿಂಕ್ಯ ರಹಾನೆ ಇಂಡಿಯನ್ ಪ್ರೀಮಿಯರ್ ಲೀಗ್‌ 15ನೇ ಸೀಸನ್‌ನ ಉಳಿದ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಐಪಿಎಲ್ ಸೀಸನ್‌ ಅಷ್ಟೇ ಅಲ್ಲದೆ ಮುಂಬರುವ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸದಿಂದಲೂ ರಹಾನೆ ಹೊರಬಿದ್ದಿದ್ದಾರೆ.

ಗ್ರೇಡ್ 3 ಹ್ಯಾಮ್‌ಸ್ಟ್ರಿಂಗ್ ಗಾಯದಿಂದ ಬಳಲುತ್ತಿರುವ ಹಿರಿಯ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಕೇವಲ ಐಪಿಎಲ್‌ನಷ್ಟೇ ಮಿಸ್ ಮಾಡಿಕೊಳ್ಳುತ್ತಿಲ್ಲ. ಭಾರತದ ದೀರ್ಘ ಇಂಗ್ಲೆಂಡ್ ಪ್ರವಾಸದಿಂದ ಹೊರಗುಳಿಯಲಿದ್ದಾರೆ. ಪೂರ್ಣ ಪ್ರಮಾಣದ ಸರಣಿಗಾಗಿ ಟೀಂ ಇಂಡಿಯಾ ಜೂನ್ ಮಧ್ಯಭಾಗದಲ್ಲಿ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಲಿದೆ.

ಸೈಮಂಡ್ಸ್‌ ಕಾರು ಅಪಘಾತದಲ್ಲಿ ಬದುಕುಳಿದ ಪ್ರೀತಿಯ ನಾಯಿ: ತನ್ನ ಮಾಲೀಕನನ್ನ ಬಿಟ್ಟು ಹೋಗಲು ಹಿಂದೇಟುಸೈಮಂಡ್ಸ್‌ ಕಾರು ಅಪಘಾತದಲ್ಲಿ ಬದುಕುಳಿದ ಪ್ರೀತಿಯ ನಾಯಿ: ತನ್ನ ಮಾಲೀಕನನ್ನ ಬಿಟ್ಟು ಹೋಗಲು ಹಿಂದೇಟು

ಕಳೆದ ವರ್ಷ ಕೋವಿಡ್‌ ಕಾರಣದಿಂದ ನಡೆಯದ ಸರಣಿಯ ಐದನೇ ಹಾಗೂ ಅಂತಿಮ ಟೆಸ್ಟ್‌ನಿಂದ ಪ್ರವಾಸ ಆರಂಭವಾಗಲಿದೆ. ಕೋವಿಡ್-19 ಕಾರಣದಿಂದಾಗಿ ಐದನೇ ಟೆಸ್ಟ್ ಅನ್ನು ಮುಂದೂಡಬೇಕಾಯಿತು. ಭಾರತ ಸರಣಿಯಲ್ಲಿ 2-1ರಿಂದ ಮುನ್ನಡೆ ಸಾಧಿಸಿದ್ದು, ಸ್ಮರಣೀಯ ಸರಣಿ ಗೆಲುವನ್ನು ಪಡೆಯಲು ಡ್ರಾ ಸಾಧಿಸಿದ್ರೆ ಸಾಕು.

ಇತ್ತೀಚಿನ ಗಾಯದ ಹಿನ್ನಡೆಯು ರಹಾನೆ ಕೆರಿಯರ್‌ಗೆ ದೊಡ್ಡ ಹೊಡೆತವಾಗಿದೆ. ಬಲಗೈ ಬ್ಯಾಟ್ಸ್‌ಮನ್ ಈಗಾಗಲೇ ಟೆಸ್ಟ್ ತಂಡದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಈ ವರ್ಷದ ಆರಂಭದಲ್ಲಿ, ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಸರಣಿಯಲ್ಲಿ ಅವರನ್ನು ಟೆಸ್ಟ್ ತಂಡದಿಂದ ಕೈಬಿಡಲಾಯಿತು. ತಂಡದಿಂದ ಹೊರಹಾಕಲ್ಪಟ್ಟ ರಹಾನೆ ದೇಶೀಯ ಕ್ರಿಕೆಟ್‌ಗೆ ಮರಳಿದರು. ಕ್ರಿಕ್‌ಬಜ್ ಪ್ರಕಾರ, ಮುಂಬರುವ ಪ್ರವಾಸಕ್ಕಾಗಿ ರಹಾನೆ ಟೆಸ್ಟ್ ತಂಡಕ್ಕೆ ಮರಳಲು ಆಶಿಸುತ್ತಿದ್ದರು, ಆದರೆ ಈಗ ಅದು ಅಸಂಭವವಾಗಿದೆ.

ಹೀಗಾಗಿ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ರಹಾನೆ ಕಠಿಣ ಫಿಟ್ನೆಸ್ ತರಬೇತಿಗೆ ಒಳಗಾಗಲಿದ್ದಾರೆ. ರಹಾನೆಗೆ ನಾಲ್ಕು ವಾರಗಳಿಗಿಂತ ಹೆಚ್ಚು ತರಬೇತಿ ಬೇಕಾಗಬಹುದು ಎಂದು ವರದಿ ತಿಳಿಸಿದೆ. ಐಪಿಎಲ್ 2022 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ ತಂಡಕ್ಕೆ ಮೂಲ ಬೆಲೆ 1 ಕೋಟಿ ರೂಪಾಯಿಗೆ ಬಿಕರಿಯಾಗಿದ್ದರು. ಆದ್ರೆ ಈ ಸೀಸನ್‌ನಲ್ಲಿ ಮಿಂಚಲು ವಿಫಲರಾಗಿದ್ದು, ಕೇವಲ 133ರನ್ ಕಲೆಹಾಕಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Monday, May 16, 2022, 16:45 [IST]
Other articles published on May 16, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X