ಸದ್ಯ ಜಸ್ಪ್ರೀತ್ ಬುಮ್ರಾಗೆ ಸರಿಯಾಟಿಯೇ ಇಲ್ಲ: ಆತನೇ ವಿಶ್ವದ ಬೆಸ್ಟ್‌ ಬೌಲರ್ ಎಂದ ಮೈಕಲ್ ವಾನ್

ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್‌ನಲ್ಲಿ ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಬುಮ್ರಾ ದಾಳಿಗೆ ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್ ನೆಲಕಚ್ಚಿತು. ಜಸ್ಪ್ರೀತ್ ಬುಮ್ರಾ ಮಾರಕ ಬೌಲಿಂಗ್ ದಾಳಿಗೆ ನಲುಗಿದ ದಕ್ಷಿಣ ಆಫ್ರಿಕಾ ಭಾರತದೆದುರು ಮುನ್ನಡೆ ಸಾಧಿಸುವ ಕನಸಿನಿಂದ ಹಿಂದೆ ಸರಿಯಿತು.

ಟೆಸ್ಟ್ ಕ್ರಿಕೆಟ್‌ನಲ್ಲಿ ಏಳನೇ ಬಾರಿಗೆ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಬಾರಿಗೆ ಐದು ವಿಕೆಟ್ ಪಡೆದ ಬುಮ್ರಾ ಆಫ್ರಿಕನ್ನರ ಬ್ಯಾಟಿಂಗ್ ಬಲವನ್ನ ಅಡಗಿಸಿದ್ರು. ಬುಮ್ರಾಗೆ ವಿಕೆಟ್ ಒಪ್ಪಿಸಿದ ಐವರು ಆಪ್ರಿಕನ್ ಬ್ಯಾಟರ್‌ಗಳ ಪೈಕಿ ನಾಯಕ ಡೀನ್ ಎಲ್ಗರ್, ಏಡನ್ ಮಾರ್ಕ್ರಮ್ ಹಾಗೂ ಕೀಗನ್ ಪೀಟರ್ಸನ್ ಕೂಡ ಸೇರಿದ್ದಾರೆ. ಉಳಿದಂತೆ ಉಮೇಶ್ ಯಾದವ್ ಹಾಗೂ ಮೊಹಮ್ಮದ್ ಶಮಿ ತಲಾ ಎರಡು ವಿಕೆಟ್ ಕಿತ್ತು ಮಿಂಚಿದರು. ಶಾರ್ದೂಲ್ ಠಾಕೂರ್‌ಗೆ ಒಂದು ವಿಕೆಟ್ ಲಭಿಸಿದೆ.

ಬುಮ್ರಾ ಅಟ್ಯಾಕ್‌ನಿಂದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತವು 13 ರನ್‌ಗಳ ಪ್ರಮುಖ ಮುನ್ನಡೆ ಸಾಧಿಸಲು ಸಹಾಯವಾಗಿದೆ. ಜಸ್ಪ್ರೀತ್ ಬುಮ್ರಾರ ಈ ದಾಳಿಯನ್ನ ಗಮನಿಸಿದ ಇಂಗ್ಲೆಂಡ್ ನಾಯಕ ಮೈಕೆಲ್ ವಾನ್, ಬುಮ್ರಾ ಕುರಿತಾಗಿ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಜಸ್ಪ್ರೀತ್ ಸ್ಪೆಲ್ ಅನ್ನು ಸೂಕ್ಷ್ಮವಾಗಿ ಗಮನಿಸಿದ ಮೈಕಲ್ ವಾನ್ ವಿಶ್ವ ಕ್ರಿಕೆಟ್‌ನಲ್ಲಿ ಸದ್ಯ ಎಲ್ಲಾ ಫಾರ್ಮೆಟ್‌ ಅನ್ನು ಗಮನಿಸಿದ್ರೆ ಬುಮ್ರಾ ಬೆಸ್ಟ್ ಬೌಲರ್ ಎಂದು ಪ್ರಶಂಸಿದ್ದಾರೆ.

ಟೀಂ ಇಂಡಿಯಾ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರು ದಕ್ಷಿಣ ಆಫ್ರಿಕಾದ ಪಿಚ್‌ಗಳಿಗೆ ಹೊಂದಿಕೊಂಡು ಅತ್ಯುತ್ತಮ ಬೌಲಿಂಗ್ ಮಾಡಿದ್ದಾರೆ. ಬುಮ್ರಾ ತನ್ನ ಅನುಕೂಲಕ್ಕಾಗಿ ಪೇಸ್ ಮತ್ತು ಬೌನ್ಸ್ ಅನ್ನು ಬಳಸಿಕೊಂಡರು. ಈ ಪ್ರದರ್ಶನವನ್ನು ಗಮನಕ್ಕೆ ತೆಗೆದುಕೊಂಡು ಮಾಜಿ ಆಶಸ್ ವಿಜೇತ ಇಂಗ್ಲೆಂಡ್ ನಾಯಕ ಮೈಕೆಲ್ ವಾನ್ ಮೂರು ಫಾರ್ಮೆಟ್‌ನಲ್ಲಿ ಬುಮ್ರಾ ಬೆಸ್ಟ್ ಎಂದು ಹೊಗಳಿದ್ದಾರೆ.

'' ನನ್ನ ಪ್ರಕಾರ ಮೂರು ಫಾರ್ಮೆಟ್ ಗಮನಿಸಿದ್ರೆ ಬುಮ್ರಾ ವಿಶ್ವದ ಅತ್ತುತ್ತಮ ಬೌಲರ್'' ಎಂದು ಮೈಕಲ್ ವಾನ್ ಹೇಳಿದ್ದಾರೆ. 2018ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಬುಮ್ರಾ ಏಳು ಬಾರಿ ಐದು ವಿಕೆಟ್ ಗೊಂಚಲು ಪಡೆದಿದ್ದಾರೆ.

ಭಾರತ-ದಕ್ಷಿಣ ಆಫ್ರಿಕಾ ಅಂತಿಮ ಟೆಸ್ಟ್: ದಕ್ಷಿಣ ಆಫ್ರಿಕಾ ಗೆಲುವಿಗೆ 212 ರನ್ ಟಾರ್ಗೆಟ್ಭಾರತ-ದಕ್ಷಿಣ ಆಫ್ರಿಕಾ ಅಂತಿಮ ಟೆಸ್ಟ್: ದಕ್ಷಿಣ ಆಫ್ರಿಕಾ ಗೆಲುವಿಗೆ 212 ರನ್ ಟಾರ್ಗೆಟ್

ಆದಾಗ್ಯೂ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮ ರನ್ ಕಲೆಹಾಕಲು ವಿಫಲಗೊಂಡಿದೆ. ಎರಡನೇ ಇನ್ನಿಂಗ್ಸ್ 198 ರನ್‌ಗಳಿಗೆ ಆಲೌಟ್ ಆಗಿದ್ದು, 211 ರನ್‌ಗಳ ಲೀಡ್‌ ಪಡೆದುಕೊಂಡಿದೆ. ರಿಷಭ್ ಪಂತ್ ಭರ್ಜರಿ ಅಜೇಯ ಶತಕದ ನೆರವಿನಿಂದ ಭಾರತದ ಲೀಡ್ 200 ರನ್‌ಗಳ ಗಡಿ ದಾಟಲು ಸಾಧ್ಯವಾಗಿದೆ. ದಕ್ಷಿಣ ಆಫ್ರಿಕಾ ಗೆಲುವಿಗೆ ಭಾರತ 212ರನ್ ಗುರಿ ನೀಡಿದೆ.

ಭಾರತದ ಪರ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅಜೇಯ 100 ರನ್ ಕಲೆಹಾಕಿ ಏಕಾಂಗಿ ಹೋರಾಟ ನಡೆಸಿದ್ರು.

For Quick Alerts
ALLOW NOTIFICATIONS
For Daily Alerts
Story first published: Thursday, January 13, 2022, 20:06 [IST]
Other articles published on Jan 13, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X