ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ರಾಹುಲ್ ದ್ರಾವಿಡ್ ನನ್ನ ಪಾಲಿಗೆ ಏನಾಗಿದ್ದರು ಅನ್ನೋದನ್ನು ವಿವರಿಸಲಾಗದು'

Can’t explain what Rahul Dravid means to me says Cheteshwar Pujara

ಬೆಂಗಳೂರು, ಜೂನ್ 27: ಟೆಸ್ಟ್ ಕ್ರಿಕೆಟ್‌ನಲ್ಲಿ ಐಸಿಸಿ ವಿಶ್ವರ್ಯಾಂಕಿಂಗ್‌ನಲ್ಲಿ ನಂ.3ನೇ ಶ್ರೇಯಾಂಕದಲ್ಲಿರುವ ಭಾರತದ ಚೇತೇಶ್ವರ ಪೂಜಾರ, ರಾಹುಲ್ ದ್ರಾವಿಡ್ ರೀತಿಯಲ್ಲೇ ಬ್ಯಾಟಿಂಗ್ ಮಾಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಟೆಸ್ಟ್‌ ಸ್ಪೆಷಾಲಿಸ್ಟ್ ಪೂಜಾರ ಅವರನ್ನು ದ್ರಾವಿಡ್‌ಗೆ ಹೋಲಿಸಲಾಗದು. ಆದರೆ ಟೆಸ್ಟ್ ವಿಚಾರದಲ್ಲಿ ಪೂಜಾರ ಕೂಡ ದ್ರಾವಿಡ್ ಹಾದಿಯಲ್ಲೇ ಸಾಗುತ್ತಿದ್ದಾರೆ ಎಂದರೆ ತಪ್ಪಿಲ್ಲ.

'ಆತ ಬೆಸ್ಟ್, ಶ್ರೇಷ್ಠ ಮನುಷ್ಯ': ಭಾರತೀಯನ ಶ್ಲಾಘಿಸಿದ ಮೊಹಮ್ಮದ್ ನಬಿ'ಆತ ಬೆಸ್ಟ್, ಶ್ರೇಷ್ಠ ಮನುಷ್ಯ': ಭಾರತೀಯನ ಶ್ಲಾಘಿಸಿದ ಮೊಹಮ್ಮದ್ ನಬಿ

ಟೆಸ್ಟ್ ಕ್ರಿಕೆಟ್‌ ವೇಳೆ ರಾಹುಲ್ ದ್ರಾವಿಡ್ ಅವರಲ್ಲಿ ಕಾಣಸಿಗುತ್ತಿದ್ದ ತಾಳ್ಮೆ, ತಂತ್ರಗಾರಿಕೆ, ಕೈಗಳ ಮೃದುತ್ವ, ರಿಸ್ಟ್ ವರ್ಕ್ ಇತ್ಯಾದಿಗಳು ಪೂಜಾರ ಬ್ಯಾಟಿಂಗ್‌ನಲ್ಲೂ ಕಾಣಸಿಗುತ್ತಿದೆ. ಇದಕ್ಕೆ ಕಾರಣವೂ ಇದೆ. ಪೂಜಾರಗೆ ಈ ಕೌಶಲಗಳ ಬಗ್ಗೆ ಅರಿವು ಮೂಡಿಸಿದ್ದು, ಮಾರ್ಗದರ್ಶನ ನೀಡಿದ್ದು ದ್ರಾವಿಡ್ ಅವರೇ. ಹೀಗೆಂದು ಸ್ವತಃ ಪೂಜಾರ ಅವರೇ ಹೇಳಿಕೊಂಡಿದ್ದಾರೆ.

2020-21ರ ಸೀಸನ್‌ಗೆ ಪಾಕ್ ಕ್ರಿಕೆಟ್ ಆಟಗಾರರ ಗ್ರೇಡ್ ಪಟ್ಟಿ ಹೀಗಿದೆ2020-21ರ ಸೀಸನ್‌ಗೆ ಪಾಕ್ ಕ್ರಿಕೆಟ್ ಆಟಗಾರರ ಗ್ರೇಡ್ ಪಟ್ಟಿ ಹೀಗಿದೆ

ಇಎಸ್‌ಪಿಎನ್ ಜೊತೆ ಮಾತನಾಡಿದ ಪೂಜಾರ, 'ರಾಹುಲ್ ದ್ರಾವಿಡ್ ನನ್ನ ಪಾಲಿಗೆ ಏನಾಗಿದ್ದರು ಅನ್ನೋದನ್ನು ನಾನು ಬರೀ ಒಂದೇ ಸಾಲಿನಲ್ಲಿ ಹೇಳಲು ಸಾಧ್ಯವಿಲ್ಲ. ಅವರು ಯಾವತ್ತಿಗೂ ನನ್ನ ಪಾಲಿನ ಸ್ಫೂರ್ತಿ. ದ್ರಾವಿಡ್ ಯಾವತ್ತಿಗೂ ಹೋಲಿಕೆಗೆ ನಿಲುಕದೆ ಇಬ್ಬರೇ ನಿಲ್ಲುತ್ತಾರೆ,' ಎಂದಿದ್ದಾರೆ.

ಕ್ಯಾಪ್ಶನ್ ಕೊಡಿ ಅಂದಿದ್ದೆ ತಡ, ಕರ್ನಾಟಕ ರಣಜಿ ಚಿತ್ರಕ್ಕೆ ಬಂತು ತರ್ಲೆ ರಿಪ್ಲೆಗಳು!ಕ್ಯಾಪ್ಶನ್ ಕೊಡಿ ಅಂದಿದ್ದೆ ತಡ, ಕರ್ನಾಟಕ ರಣಜಿ ಚಿತ್ರಕ್ಕೆ ಬಂತು ತರ್ಲೆ ರಿಪ್ಲೆಗಳು!

ದ್ರಾವಿಡ್ ಬಗ್ಗೆ ಅನಿಸಿಕೆ ಹಂಚಿಕೊಂಡ ಪೂಜಾರ, ಕ್ರಿಕೆಟ್‌ನಿಂದ ಹೊರಗುಳಿಯುವ ಪ್ರಾಮುಖ್ಯತೆಯನ್ನು ಕಲಿಸಿದ್ದಕ್ಕಾಗಿ ದ್ರಾವಿಡ್‌ಗೆ ತಾನು ಯಾವಾಗಲೂ ಕೃತಜ್ಞರಾಗಿರುತ್ತೇನೆ ಎಂದಿದ್ದಾರೆ. ದ್ರಾವಿಡ್ 164 ಟೆಸ್ಟ್ ಪಂದ್ಯಗಳಲ್ಲಿ 13288 ರನ್, 344 ಏಕದಿನ ಪಂದ್ಯಗಳಲ್ಲಿ 10889 ರನ್ ಗಳಿಸಿದ್ದಾರೆ. ಅಲ್ಲದೆ ದ್ರಾವಿಡ್ 79 ಏಕದಿನ ಪಂದ್ಯಗಳಲ್ಲಿ ಭಾರತದ ನಾಯಕತ್ವ ವಹಿಸಿದ್ದರು. ಇದರಲ್ಲಿ 42 ಪಂದ್ಯಗಳನ್ನು ಭಾರತ ಗೆದ್ದಿತ್ತು.

ಕೆಲಸ ಕಳೆದುಕೊಂಡಿದ್ದ ಜೂನಿಯರ್ ಸಚಿನ್‌ ತೆಂಡೂಲ್ಕರ್‌ಗೆ ಕೊರೊನಾ ಪಾಸಿಟಿವ್ಕೆಲಸ ಕಳೆದುಕೊಂಡಿದ್ದ ಜೂನಿಯರ್ ಸಚಿನ್‌ ತೆಂಡೂಲ್ಕರ್‌ಗೆ ಕೊರೊನಾ ಪಾಸಿಟಿವ್

ವೈಯಕ್ತಿಕ ಬದುಕು ಮತ್ತು ವೃತ್ತಿ ಬದುಕು ಇವನ್ನು ಹೇಗೆ ನಿಭಾಯಿಸಬೇಕೆನ್ನುವ ಬಗ್ಗೆ ದ್ರಾವಿಡ್ ಸಲಹೆ ಕೊಟ್ಟಿದ್ದಾರೆ ಎಂದಿರುವ ಪೂಜಾರ, 'ಕ್ರಿಕೆಟ್‌ನಿಂದ ಹೊರಗುಳಿಯುವುದ ಪ್ರಮುಖ್ಯತೆಯನ್ನು ದ್ರಾವಿಡ್ ನನಗೆ ಅರ್ಥ ಮಾಡಿಸಲು ಸಹಾಯ ಮಾಡಿದ್ದಾರೆ. ಬಹಳ ಗೊಂದಲದಲ್ಲಿದ್ದೆ. ಆದರೆ ದ್ರಾವಿಡ್ ಜೊತೆ ಮಾತನಾಡಿದ ಬಳಿಕ ನಾನು ಏನು ಮಾಡಬೇಕ್ನೋದು ಸ್ಪಷ್ಟವಾಗಿ ಗೊತ್ತಾಯಿತು,' ಎಂದು ಪೂಜಾರ ವಿವರಿಸಿದ್ದಾರೆ.

Story first published: Saturday, June 27, 2020, 18:06 [IST]
Other articles published on Jun 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X