ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಹೃದಯವನ್ನು ಗೆದ್ದು ಬನ್ನಿ' ಎಂದು ಹರಸಿದ್ದ ಅಟಲ್ ಸ್ಮರಿಸಿದ ಕ್ರಿಕೆಟರ್ಸ್

By Mahesh
Cricket world Pay tribute to Atal Bihari Vajpayees Death

'ಬರೀ ಆಟವನ್ನಷ್ಟೇ ಅಲ್ಲ, ಹೃದಯವನ್ನು ಗೆದ್ದು ಬನ್ನಿ' ಎಂದು ಪಾಕಿಸ್ತಾನದ ಪ್ರವಾಸ ಕೈಗೊಂಡಿದ್ದ ಸೌರವ್ ಗಂಗೂಲಿ ನಾಯಕತ್ವದ ತಂಡಕ್ಕೆ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಶುಭ ಹಾರೈಸಿದ್ದು ಹೀಗೆ...

ಮೂರು ಬಾರಿ ಭಾರತದ ಪ್ರಧಾನಿಯಾಗಿದ್ದ ವಾಜಪೇಯಿ ಅವರು ಕಾಂಗ್ರೆಸ್ಸೇತರ ಸರ್ಕಾರವನ್ನು ಪೂರ್ಣವಧಿ ಪೂರೈಸಿದ ಸೂಪರ್ ಕ್ಯಾಪ್ಟನ್. ಹತ್ತಿಪ್ಪತ್ತು ಮಿತ್ರ ಪಕ್ಷಗಳನ್ನು ಒಟ್ಟುಗೂಡಿಸಿ, ಭಾರತದ ತುಂಬು ಕುಟುಂಬವನ್ನು ನೆನಪಿಸುವಂಥ ಕಲ್ಪನೆ ಹುಟ್ಟಿಹಾಕಿದರು. ಮೈತ್ರಿ ಸರ್ಕಾರವನ್ನು ನಿಭಾಯಿಸಿ, ವಿಪಕ್ಷಗಳು ಬೆರಗಿನಿಂದ ನೋಡುವಂಥ ಆಡಳಿತ ನೀಡಿದರು.

ಭಾರತೀಯ ಕ್ರಿಕೆಟ್ ಪ್ರೇಮಿಗಳ ಹೃದಯದಲ್ಲಿ ವಾಜಪೇಯಿ ಅವರಿಗೆ ಸದಾ ಸ್ಮರಣೀಯ ಸ್ಥಾನ ಇರುತ್ತದೆ. ಇದಕ್ಕೆ ಕಾರಣ, 2004ರಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಕ್ರಿಕೆಟ್ ಸರಣಿ ಸಾಧ್ಯವಾಗಲು ಕಾರಣರಾದರು. ಪಾಕಿಸ್ತಾನ ಪ್ರವಾಸ ಕೈಗೊಂಡ ಟೀಂ ಇಂಡಿಯಾವು ಟೆಸ್ಟ್ ಹಾಗೂ ಏಕದಿನ ಸರಣಿ ಆಡಿತ್ತು.

ಪ್ರವಾಸಕ್ಕೆ ಹೊರಟು ನಿಂತ ಟೀಂ ಇಂಡಿಯಾವನ್ನು ಭೇಟಿ ಮಾಡಿದ ವಾಜಪೇಯಿ ಅವರು, ನಾಯಕ ಸೌರವ್ ಗಂಗೂಲಿ ಅವರಿಗೆ 'ಆಟವನ್ನಷ್ಟೇ ಅಲ್ಲದೆ, ಹೃದಯವನ್ನು ಗೆದ್ದು ಬನ್ನಿ' ಎಂದು ಹಾರೈಸಿದ್ದರು.

ಆಟದ ಜತೆಗೆ ಹೃದಯವನ್ನು ಗೆಲ್ಲಿ

ಸಚಿನ್ ತೆಂಡೂಲ್ಕರ್

ರೋಹಿತ್ ಶರ್ಮ

ಆರ್ ಪಿ ಸಿಂಗ್

ವಿವಿಎಸ್ ಲಕ್ಷ್ಮಣ್

ಮಾಜಿ ಕ್ರಿಕೆಟರ್ ಮೊಹಮ್ಮ ಕೈಫ್ ಅವರು ತಮ್ಮನ್ನು ಹೊಗಳಿದ್ದು, ಚುನಾವಣೆ ಸಮಾವೇಶದಲ್ಲಿ ಹೆಸರು ಪ್ರಸ್ತಾಪಿಸಿದ್ದ ಸುದ್ದಿಯನ್ನು ಉಲ್ಲೇಖಿಸಿ, ಅಟಲ್ ಅವರನ್ನು ದೇಶ ಮಿಸ್ ಮಾಡಿಕೊಳ್ಳುತ್ತಿದೆ ಎಂದಿದ್ದಾರೆ

ಅಯಾಜ್ ಮೆನನ್ ಅವರಿಂದ ಹಳೆ ಘಟನೆ ಮೆಲುಕು

Story first published: Friday, August 17, 2018, 0:33 [IST]
Other articles published on Aug 17, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X