ಶ್ರೀದೇವಿ ನಿಧನಕ್ಕೆ ಕಂಬನಿ ಮಿಡಿದ ಕ್ರಿಕೆಟರ್ಸ್!

Posted By:

ಬೆಂಗಳೂರು, ಫೆಬ್ರವರಿ 25: ನಟಿ ಶ್ರೀದೇವಿ ಅವರ ಅಕಾಲಿಕ ನಿಧನದ ಸುದ್ದಿಯಿಂದ ಚಿತ್ರರಂಗ ಮಾತ್ರ ದುಃಖಿಸುತ್ತಿಲ್ಲ. ಕ್ರಿಕೆಟ್ ಲೋಕ ಕೂಡಾ ದುಃಖದಲ್ಲಿ ಮುಳುಗಿದೆ.

ಮಾಜಿ ಕ್ರಿಕೆಟರ್ಸ್, ಕಾಮೆಂಟೆಟರ್ಸ್, ಹಾಲಿ ಕ್ರಿಕೆಟರ್ಸ್ ಗಳು ಶ್ರೀದೇವಿ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಚಿತ್ರರಂಗದ ಸೂಪರ್ ಸ್ಟಾರ್ ಶ್ರೀದೇವಿ ಸಾವಿನಿಂದ ತುಂಬಾ ನೋವುಂಟಾಗಿದೆ ಎಂದು ಅಕಾಲಿಕ ನಿಧನಕ್ಕೆ ಕ್ರಿಕೆಟ್ ದಿಗ್ಗಜ, ಮಾಜಿ ಕೋಚ್ ಅನಿಲ್ ಕುಂಬ್ಳೆ ಅವರು ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.

ದುಬೈನಲ್ಲಿ ಅರ್ಜುನ್ ಕಪೂರ್ ಅವರ ಕಸಿನ್ ಮೋಹಿತ್ ಮರ್ವಾಹ್ ಅವರ ವಿವಾಹ ಸಂಭ್ರಮದಲ್ಲಿ ಪಾಲ್ಗೊಂಡಿದ್ದ ಶ್ರೀದೇವಿ ಅವರು ತೀವ್ರ ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದರು.

ಮಾಜಿ ಕ್ರಿಕೆಟರ್ ಗಳಾದ ಅನಿಲ್ ಕುಂಬ್ಳೆ, ಮೊಹಮ್ಮದ್ ಕೈಫ್, ವೀರೇಂದ್ರ ಸೆಹ್ವಾಗ್, ಕಾಮೆಂಟೆಟರ್ ಹರ್ಷ ಭೋಗ್ಲೆ ಮುಂತಾದವರು ಟ್ವೀಟ್ ಮಾಡಿದ್ದಾರೆ.

ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದರು

ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದರು

ದುಬೈನಲ್ಲಿ ಅರ್ಜುನ್ ಕಪೂರ್ ಅವರ ಕಸಿನ್ ಮೋಹಿತ್ ಮರ್ವಾಹ್ ಅವರ ವಿವಾಹ ಸಂಭ್ರಮದಲ್ಲಿ ಪಾಲ್ಗೊಂಡಿದ್ದ ಶ್ರೀದೇವಿ ಅವರು ತೀವ್ರ ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದರು. ಮಾಜಿ ಕ್ರಿಕೆಟರ್ಸ್, ಕಾಮೆಂಟೆಟರ್ಸ್, ಹಾಲಿ ಕ್ರಿಕೆಟರ್ಸ್ ಗಳು ಶ್ರೀದೇವಿ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ಅನಿಲ್ ಕುಂಬ್ಳೆ ಟ್ವೀಟ್

ಶ್ರೀದೇವಿ ಸಾವಿನಿಂದ ತುಂಬಾ ನೋವುಂಟಾಗಿದೆ ಎಂದು ಅಕಾಲಿಕ ನಿಧನಕ್ಕೆ ಕ್ರಿಕೆಟ್ ದಿಗ್ಗಜ, ಮಾಜಿ ಕೋಚ್ ಅನಿಲ್ ಕುಂಬ್ಳೆ ಅವರು ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.

ವಿವಿಎಸ್ ಲಕ್ಷ್ಮಣ್

ಮಾಜಿ ಕ್ರಿಕೆಟರ್ ವಿವಿಎಸ್ ಲಕ್ಷ್ಮಣ್ ಅವರು ಶ್ರೀದೇವಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಸ್ಪಿನ್ನರ್ ಪ್ರಗ್ಯಾನ್ ಓಜಾ

ಭಾರತೀಯ ಚಿತ್ರರಂಗಕ್ಕೆ ನಿಮ್ಮ ಕೊಡುಗೆ ಅಪಾರ. ನಿಮ್ಮ ಸಾವಿನ ದುಃಖ ಭರಿಸುವ ಶಕ್ತಿಯನ್ನು ಎಲ್ಲರಿಗೂ ನೀಡಲಿ ಎಂದು ಸ್ಪಿನ್ನರ್ ಪ್ರಗ್ಯಾನ್ ಓಝಾ ಟ್ವೀಟ್ ಮಾಡಿದ್ದಾರೆ.

Story first published: Sunday, February 25, 2018, 18:07 [IST]
Other articles published on Feb 25, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ