For Quick Alerts
ALLOW NOTIFICATIONS  
For Daily Alerts
 

ಯೂಟ್ಯೂಬ್ ಚಾನೆಲ್ ಲಾಂಚ್ ಮಾಡಿದ ವಾರ್ನರ್, ಕಾಲೆಳೆದ ಯುವರಾಜ್ ಸಿಂಗ್

David Warner launches his youtube channel, gets trolled by Yuvraj Singh

ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ನಿಧಾನವಾಗಿ ಗೆಲುವಿನ ಲಯವನ್ನು ಕಂಡುಕೊಳ್ಳುತ್ತಿದೆ. ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಈ ಬಾರಿಯ ಟೂರ್ನಿಯಲ್ಲಿ ಉತ್ತಮ ಪ್ರದರ್ಶನವನ್ನು ನೀಡುತ್ತಿದ್ದಾರೆ. ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಸದ್ದು ಮಾಡುವ ವಾರ್ನರ್ ಯುಟ್ಯೂಬ್ ಚಾನೆಲ್ ಆರಂಭಿಸಿದ ಬಗ್ಗೆ ಘೋಷಣೆ ಮಾಡಿದ್ದಾರೆ.

ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯವನ್ನು ಭರ್ಜರಿಯಾಗಿ ಗೆದ್ದ ಬಳಿಕ ಶುಕ್ರವಾರ ಟ್ವಿಟ್ಟರ್‌ನಲ್ಲಿ ಡೇವಿಡ್ ವಾರ್ನರ್ ಯುಟ್ಯೂಬ್ ಚಾನೆಲ್ ಅರಂಭಿಸುತ್ತಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಜೊತೆಗೆ ಮೊದಲ ಎಪಿಸೋಡ್‌ನ ಬಗ್ಗೆಯೂ ಟ್ವಿಟ್ಟರ್‌ನಲ್ಲಿ ಮಾಹಿತಿಯನ್ನು ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ. ಆದರೆ ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಯುವರಾಜ್ ವಾರ್ನರ್ ಕಾಲೆಳೆದಿದ್ದಾರೆ.

ಯುವರಾಜ್ ಸಿಂಗ್ ವಾರ್ನರ್ ಟ್ವೀಟ್‌ಗೆ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. "ನಿಮ್ಮ ನೃತ್ಯದ ವಿಡಿಯೋಗಳು ಆ ಯುಟ್ಯೂಬ್ ಚಾನೆಲ್‌ನಲ್ಲಿ ಇರಲಿವೆ ಎಂದು ನಾನು ನಿಜಕ್ಕೂ ನಂಬಿಕೊಂಡಿದ್ದೇನೆ" ಎಂದು ಯುವರಾಜ್ ಸಿಂಗ್ ಕಾಲೆಳುವಂತೆ ಇಮೊಜಿ ಜೊತೆಗೆ ಟ್ವೀಟ್ ಮಾಡಿದ್ದಾರೆ.

ಯುವರಾಜ್ ಸಿಂಗ್ ಹೀಗೆ ಪ್ರತಿಕ್ರಿಯೆ ನೀಡುವುದಕ್ಕೂ ಕಾರಣವಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಡೇವಿಡ್ ವಾರ್ನರ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚಟುವಟಿಕೆಯಿಂದ ಇದ್ದರು. ಪತ್ನಿ ಹಾಗೂ ಮೂವರು ಮಕ್ಕಳ ಮುದ್ದಾದ ಕುಟುಂಬದ ಜೊತೆಗೆ ನೃತ್ಯ ಸೇರಿದಂತೆ ವಿಭಿನ್ನವಾಗಿ ವಾರ್ನರ್ ಸಾಕಷ್ಟು ವಿಡಿಯೋಗಳನ್ನು ಹಂಚಿಕೊಂಡಿದ್ದರು.

ಟ್ವಿಟ್ಟರ್‌ ಹಾಗೂ ಇನ್ಸ್ಟಾಗ್ರಾಮ್‌ನಲ್ಲಿ ಡೇವಿಡ್ ವಾರ್ನರ್ ಬಹಳಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಯಾವಾಗಲೂ ತಮ್ಮ ವಿಶೇಷ ವಿಭಿನ್ನ ವಿಡಿಯೋಗಳ ಮೂಲಕ ಡೇವಿಡ್ ವಾರ್ನರ್ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಈಗ ಯುಟ್ಯೂಬ್‌ನಲ್ಲೂ ಡೇವಿಡ್ ವಾರ್ನರ್ ಸದ್ದು ಮಾಡಲು ಸಿದ್ಧರಾಗಿದ್ದಾರೆ.

Story first published: Friday, October 9, 2020, 16:03 [IST]
Other articles published on Oct 9, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+