ರವಿಚಂದ್ರನ್ ಅಶ್ವಿನ್ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದುಕೊಳ್ಳಲು ಪರದಾಡುವಂತಹ ಸ್ಥಿತಿ ಬಂದಿದೆ!

Ravichandran Ashwin ಅವರ ಪಾಲಿಗೆ ವಿಲನ್ ಆಗಿದ್ದಾರಾ Virat | Oneindia Kannada

ರವಿಚಂದ್ರನ್ ಅಶ್ವಿನ್, ಟೀಮ್ ಇಂಡಿಯಾ ಕಂಡ ಅತ್ಯದ್ಭುತ ಸ್ಪಿನ್ ಬೌಲರ್‌ಗಳಲ್ಲಿ ಒಬ್ಬರು. ಇತ್ತೀಚೆಗೆ ನಡೆದ ಹಲವಾರು ಟೆಸ್ಟ್ ಸರಣಿಗಳಲ್ಲಿ ಟೀಮ್ ಇಂಡಿಯಾ ಗೆಲುವಿನ ಹಿಂದಿನ ರೂವಾರಿಗಳಲ್ಲಿ ಅಶ್ವಿನ್ ಅವರು ಕೂಡ ಪ್ರಮುಖರಾಗಿದ್ದಾರೆ.

ಮೊದಲ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ಗೆ ಭಾರತ ರವಾನಿಸಿದ 5 ಕಠಿಣ ಸಂದೇಶಗಳಿವು!ಮೊದಲ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ಗೆ ಭಾರತ ರವಾನಿಸಿದ 5 ಕಠಿಣ ಸಂದೇಶಗಳಿವು!

ಕೇವಲ ಬೌಲಿಂಗ್ ವಿಭಾಗದಲ್ಲಿ ಮಾತ್ರವಲ್ಲದೆ ಬ್ಯಾಟಿಂಗ್ ವಿಭಾಗದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿರುವ ರವಿಚಂದ್ರನ್ ಅಶ್ವಿನ್ ಟೀಮ್ ಇಂಡಿಯಾ ಸಂಕಷ್ಟದಲ್ಲಿದ್ದಾಗ ಕೆಲವೊಂದಿಷ್ಟು ಇನ್ನಿಂಗ್ಸ್‌ನಲ್ಲಿ ಆಪದ್ಬಾಂಧವನಾಗಿ ಅತ್ಯುತ್ತಮ ಆಟವನ್ನು ಆಡಿದ್ದಾರೆ. ಹೀಗಾಗಿಯೇ ಯಾವುದಾದರೂ ಸರಣಿಗಳಿಗೆ ಟೀಮ್ ಇಂಡಿಯಾ ತಂಡ ಪ್ರಕಟವಾದಾಗ ಆ ಆಟಗಾರರ ಪಟ್ಟಿಯಲ್ಲಿ ರವಿಚಂದ್ರನ್ ಅಶ್ವಿನ್ ಹೆಸರನ್ನು ಕಡ್ಡಾಯವಾಗಿ ಸೇರಿಸಲಾಗಿರುತ್ತದೆ.

ಬ್ರಿಟಿಷ್‌ ರಾಯಭಾರಿಗೆ ಕನ್ನಡ ಕಲಿಸಿದ ರಾಹುಲ್ ದ್ರಾವಿಡ್; ವೈರಲ್ ವಿಡಿಯೋ ನೋಡಿಬ್ರಿಟಿಷ್‌ ರಾಯಭಾರಿಗೆ ಕನ್ನಡ ಕಲಿಸಿದ ರಾಹುಲ್ ದ್ರಾವಿಡ್; ವೈರಲ್ ವಿಡಿಯೋ ನೋಡಿ

ಪ್ರಸ್ತುತ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಗೂ ರವಿಚಂದ್ರನ್ ಅಶ್ವಿನ್ ಆಯ್ಕೆಯಾಗಿದ್ದಾರೆ. ಆದರೆ ಭಾರತ ಮತ್ತು ಇಂಗ್ಲೆಂಡ್ ನಡುವೆ ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆದ ಮೊದಲನೇ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಅವರನ್ನು ಟೀಮ್ ಇಂಡಿಯಾ ಆಡುವ ಬಳಗದಲ್ಲಿ ಸೇರಿಸಿಕೊಳ್ಳದೆ ತಂಡದಿಂದ ಹೊರಗಿಟ್ಟಿದ್ದರು. ರವಿಚಂದ್ರನ್ ಅಶ್ವಿನ್ ಅವರನ್ನು ತಂಡದಿಂದ ಹೊರಗಿಡುವ ಮೂಲಕ ಎಲ್ಲರಲ್ಲಿಯೂ ಭಾರೀ ಆಶ್ಚರ್ಯವನ್ನುಂಟುಮಾಡಿದ ವಿರಾಟ್ ಕೊಹ್ಲಿ ರವಿಚಂದ್ರನ್ ಅಶ್ವಿನ್ ಜಾಗಕ್ಕೆ ಮತ್ತೋರ್ವ ಸ್ಪಿನ್ನರ್ ಬದಲಾಗಿ ವೇಗಿ ಶಾರ್ದೂಲ್ ಠಾಕೂರ್‌ಗೆ ಅವಕಾಶ ನೀಡಿದರು.

ಚಿನ್ನ ಗೆದ್ದ ನೀರಜ್ ಚೋಪ್ರಾಗೆ ಕರ್ನಾಟಕ ರಾಜ್ಯದಿಂದ ಸಿಕ್ಕ ವಿಶೇಷ ಗೌರವಗಳು ಯಾವುವು ಗೊತ್ತಾ?ಚಿನ್ನ ಗೆದ್ದ ನೀರಜ್ ಚೋಪ್ರಾಗೆ ಕರ್ನಾಟಕ ರಾಜ್ಯದಿಂದ ಸಿಕ್ಕ ವಿಶೇಷ ಗೌರವಗಳು ಯಾವುವು ಗೊತ್ತಾ?

ಐವರು ಬೌಲರ್‌ಗಳ ಪೈಕಿ ಕೇವಲ ಓರ್ವ ಸ್ಪಿನ್ನರ್‌ಗೆ ( ರವೀಂದ್ರ ಜಡೇಜಾ ) ಮಾತ್ರ ಇಂಗ್ಲೆಂಡ್ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಅವಕಾಶವನ್ನು ನೀಡಲಾಗಿತ್ತು. ಹೀಗೆ ರವಿಚಂದ್ರನ್ ಅಶ್ವಿನ್ ಅವರನ್ನು ತಂಡದಿಂದ ಕೈಬಿಟ್ಟು ಶಾರ್ದೂಲ್ ಠಾಕೂರ್‌ಗೆ ತಂಡದಲ್ಲಿ ಸ್ಥಾನ ನೀಡಿರುವುದು ಇದೀಗ ಎಲ್ಲೆಡೆ ಭಾರೀ ಚರ್ಚೆಗೆ ಕಾರಣವಾಗಿದೆ. ಹಾಗೂ ಮುಂದಿನ ದಿನಗಳಲ್ಲಿ ರವಿಚಂದ್ರನ್ ಅಶ್ವಿನ್ ಅವರು ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದುಕೊಳ್ಳಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಕ್ರೀಡಾಭಿಮಾನಿಗಳು ಲೆಕ್ಕಾಚಾರ ಹಾಕುತ್ತಿದ್ದಾರೆ.

ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ಶಾರ್ದೂಲ್ ಠಾಕೂರ್

ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ಶಾರ್ದೂಲ್ ಠಾಕೂರ್

ಇಂಗ್ಲೆಂಡ್ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ ಬದಲು ಟೀಮ್ ಇಂಡಿಯಾದ ಪರ ಆಡುವ ಅವಕಾಶವನ್ನು ಪಡೆದ ಶಾರ್ದೂಲ್ ಠಾಕೂರ್ ಆ ಅವಕಾಶವನ್ನು ಸರಿಯಾದ ರೀತಿಯಲ್ಲಿ ಸದುಪಯೋಗ ಪಡಿಸಿಕೊಂಡರು. ಮೊದಲನೇ ಇನ್ನಿಂಗ್ಸ್‌ನಲ್ಲಿ 2 ವಿಕೆಟ್ ಪಡೆದು ಮಿಂಚಿದ ಶಾರ್ದೂಲ್ ಠಾಕೂರ್ ಮೊದಲ ಇನ್ನಿಂಗ್ಸ್‌ನಲ್ಲಿ 64 ಬಾರಿಸಿ ಟೀಮ್ ಇಂಡಿಯಾಗೆ ತಲೆನೋವಾಗಿ ಪರಿಣಮಿಸಿದ್ದ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ವಿಕೆಟ್ ಪಡೆಯುವುದರ ಮೂಲಕ ಪಂದ್ಯಕ್ಕೆ ತಿರುವು ನೀಡಿದರು. ಶಾರ್ದೂಲ್ ಠಾಕೂರ್ ಮೊದಲ ಇನ್ನಿಂಗ್ಸ್‌ನಲ್ಲಿ ಜೋ ರೂಟ್ ವಿಕೆಟ್ ಪಡೆದದ್ದು ಠಾಕೂರ್ ಪಾಲಿಗೆ ದೊಡ್ಡ ಪ್ಲಸ್‌ ಪಾಯಿಂಟ್ ಎಂದರೆ ತಪ್ಪಾಗಲಾರದು. ಎರಡನೇ ಇನ್ನಿಂಗ್ಸ್‌ನಲ್ಲಿಯೂ ಲಾರೆನ್ಸ್ ಮತ್ತು ಜೋಸ್ ಬಟ್ಲರ್ ವಿಕೆಟ್ ಪಡೆಯುವುದರ ಮೂಲಕ ಶಾರ್ದೂಲ್ ಠಾಕೂರ್ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು.

ಠಾಕೂರ್ ಉತ್ತಮ ಬೌಲಿಂಗ್ ಅಶ್ವಿನ್ ಸ್ಥಾನಕ್ಕೆ ಕುತ್ತು ತರಬಹುದು

ಠಾಕೂರ್ ಉತ್ತಮ ಬೌಲಿಂಗ್ ಅಶ್ವಿನ್ ಸ್ಥಾನಕ್ಕೆ ಕುತ್ತು ತರಬಹುದು

ಶಾರ್ದೂಲ್ ಠಾಕೂರ್ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿರುವುದರಿಂದ ಮುಂಬರುವ ಪಂದ್ಯಗಳಲ್ಲಿ ರವಿಚಂದ್ರನ್ ಅಶ್ವಿನ್ ಸ್ಥಾನಕ್ಕೆ ಕುತ್ತು ಬರಬಹುದು ಎಂದು ನೆಟ್ಟಿಗರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಅಶ್ವಿನ್ ತಂಡದಲ್ಲಿ ಸ್ಥಾನ ಪಡೆದುಕೊಳ್ಳಲು ಶಾರ್ದೂಲ್ ಠಾಕೂರ್ ಜೊತೆ ಪೈಪೋಟಿ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗುವುದು ಖಚಿತ ಎನ್ನಲಾಗುತ್ತಿದೆ.

ಶಾರ್ದೂಲ್ ಠಾಕೂರ್ ಜತೆ ಅಶ್ವಿನ್ ಪೈಪೋಟಿ ಎಂದ ದೀಪ್ ದಾಸ್ ಗುಪ್ತಾ

ಶಾರ್ದೂಲ್ ಠಾಕೂರ್ ಜತೆ ಅಶ್ವಿನ್ ಪೈಪೋಟಿ ಎಂದ ದೀಪ್ ದಾಸ್ ಗುಪ್ತಾ

ಇನ್ನು ಮಾಜಿ ಕ್ರಿಕೆಟಿಗ ದೀಪ್ ದಾಸ್ ಗುಪ್ತಾ ಕೂಡ ಈ ವಿಷಯವಾಗಿ ಚರ್ಚಿಸಿದ್ದು ರವಿಚಂದ್ರನ್ ಅಶ್ವಿನ್‌ಗೆ ಮುಂದಿನ ದಿನಗಳಲ್ಲಿ ತಂಡದಲ್ಲಿ ಸ್ಥಾನ ಸಿಗಬೇಕೆಂದರೆ ಶಾರ್ದೂಲ್ ಠಾಕೂರ್ ಜತೆ ಪೈಪೋಟಿ ನಡೆಸಬೇಕಾಗುತ್ತದೆ ಎಂದಿದ್ದಾರೆ. ಎಲ್ಲರೂ ರವಿಚಂದ್ರನ್ ಅಶ್ವಿನ್ ರವೀಂದ್ರ ಜಡೇಜಾ ಜತೆ ಪೈಪೋಟಿ ನಡೆಸುತ್ತಿದ್ದಾರೆ ಎಂದು ಮಾತನಾಡಿಕೊಳ್ಳುತ್ತಾರೆ, ಆದರೆ ನಿಜವಾಗಿಯೂ ರವಿಚಂದ್ರನ್ ಅಶ್ವಿನ್ ಪೈಪೋಟಿ ನಡೆಸುತ್ತಿರುವುದು ಶಾರ್ದೂಲ್ ಠಾಕೂರ್ ಜತೆ ಎಂದು ದೀಪ್ ದಾಸ್ ಗುಪ್ತಾ ಹೇಳಿಕೆ ನೀಡಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Monday, August 9, 2021, 21:21 [IST]
Other articles published on Aug 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X