ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಧೋನಿಯನ್ನು ಟಿ20 ತಂಡದಿಂದ ಹೊರಗಿಟ್ಟಿರಬಹುದು, ನಮ್ಮ ಮನಸ್ಸಿನಿಂದಲ್ಲ!'

Dhoni not named in Indian T20I squads for West Indies: Twitter reactions

ನವದೆಹಲಿ, ಅಕ್ಟೋಬರ್ 27: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಆದರೆ ಪ್ರಕಟಿತ ತಂಡದಲ್ಲಿ ಎಂಎಸ್ ಧೋನಿ ಇಲ್ಲ. ಟಿ20 ಕ್ರಿಕೆಟ್ ನಲ್ಲಿ ಬೆಸ್ಟ್ ಫಿನಿಷರ್ ಎಂದು ಗುರುತಿಸಿಕೊಂಡಿರುವ ಕೂಲ್ ಕ್ಯಾಪ್ಟನ್ ಅವರನ್ನು ಹೊರಗಿಟ್ಟಿದ್ದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ವಿಂಡೀಸ್, ಆಸೀಸ್ ವಿರುದ್ಧದ ಟಿ20 ಸರಣಿಗೆ ತಂಡ ಪ್ರಕಟ, ಧೋನಿ ಔಟ್!ವಿಂಡೀಸ್, ಆಸೀಸ್ ವಿರುದ್ಧದ ಟಿ20 ಸರಣಿಗೆ ತಂಡ ಪ್ರಕಟ, ಧೋನಿ ಔಟ್!

ಮಾಜಿ ನಾಯಕ ಮಹೇಂದ್ರ ಸಿಂಗ್, ಫಾರ್ಮ್ ವಿಚಾರದಲ್ಲಿ ಇತ್ತೀಚೆಗೆ ಕೊಂಚ ಮಂಕಾದಂತೆ ಕಂಡಿದ್ದು ನಿಜ. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ನಲ್ಲಿ ಗಮನ ಸೆಳೆಯದಿದ್ದರೂ ಪುಣೆಯಲ್ಲಿ ನಡೆದಿದ್ದ ಮೂರನೇ ಪಂದ್ಯದಲ್ಲಿ ಅದ್ಭುತ ಕೀಪಿಂಗ್‌ಗಾಗಿ ಧೋನಿ ಎಲ್ಲ ಚಿತ್ತ ತನ್ನತ್ತ ಹರಿಯುವಂತೆ ಮಾಡಿದ್ದರು. ಈ ವೇಳೆ (ಟಿ20 ತಂಡದಲ್ಲಿ ಧೋನಿಗೆ ಸ್ಥಾನ ನೀಡದ್ದಕ್ಕೆ) ಅಭಿಮಾನಿಗಳ ಆಕ್ರೋಶವೂ ಜೋರಾಯಿತು.

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ, ರೋಹಿತ್ ಇನ್ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ, ರೋಹಿತ್ ಇನ್

ಈಗಿನ ಮಾಹಿತಿಯಂತೆ ಧೋನಿ ಅವರನ್ನು ಮುಂಬರಲಿರುವ ಆಸ್ಟ್ರೇಲಿಯಾ ಪ್ರವಾಸದ ಟ್ವಿ20 ತಂಡದಿಂದಲೂ ಹೊರಗಿಡಲಾಗಿದೆ. ಬ್ಯಾಟಿಂಗ್, ಕೀಪಿಂಗ್, ಕ್ಯಾಪ್ಟನಿಂಗ್ ಹೀಗೆ ಭಾರತ ತಂಡದ ಬಲವಾಗಿದ್ದ ನೆಚ್ಚಿನ ಆಟಗಾರನಿಗೆ ಟಿ20 ತಂಡದಲ್ಲಿ ಸ್ಥಾನ ನೀಡಿರುವುದಕ್ಕೆ ಕ್ರಿಕೆಟ್ ಅಭಿಮಾನಿಗಳು ಬೇಸರದಿಂದ ಮಾಡಿರುವ ಕೆಲ ಟ್ವೀಟ್ ಗಳು ಕೆಳಗಿವೆ.

ನೀವು ಕೈ ಬಿಟ್ಟರೂ, ಆತ ಬಿಡಲಾರ

ಶನಿವಾರ (ಅ.27) ವಿಂಡೀಸ್ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಬೂಮ್ರಾ ಓವರ್ ನಲ್ಲಿ ಚಂದ್ರಪೌಲ್ ಹೇಮರಾಜ್ ಅವರನ್ನು ಅದ್ಭುತ ಕ್ಯಾಚ್ ಮೂಲಕ ಧೋನಿ ಪೆವಿಲಿಯನ್ ಗೆ ಅಟ್ಟಿದ್ದರು. ಇದನ್ನು ಕೊಂಡಾಡಿರುವ ಕ್ರಿಕೆಟ್ ಅಭಿಮಾನಿಗಳು, ನೀವು (ಬಿಸಿಸಿಐ) ತಂಡದಿಂದ ಕೈ ಬಿಟ್ಟರೂ ಧೋನಿ ಕೈ (ಕ್ಯಾಚ್) ಬಿಡಲಾರ ಎಂದು ಬಹಳಷ್ಟು ಟ್ವೀಟ್ ಗಳನ್ನು ಮಾಡಿದ್ದಾರೆ.

ಟಿ20 ಪಂದ್ಯಗಳನ್ನಾಡುತ್ತಿಲ್ಲ

ಧೋನಿಗೀಗ 37ರ ಹರೆಯ. ಒಂದರ್ಥದಲ್ಲಿ ಧೋನಿ ತಮ್ಮ ವೃತ್ತಿ ಜೀವನದ ಕೊನೆ ಕ್ಷಣಗಳಲ್ಲಿರುವುದೂ ಹೌದು. ಈ ಸಂದರ್ಭದಲ್ಲೇ ಅವರನ್ನು ಆರು (ವಿಂಡೀಸ್ ವಿರುದ್ಧ 3+ ಆಸೀಸ್ ವಿರುದ್ಧ 3) ಟಿ20 ಪಂದ್ಯಗಳಿಂದ ಹೊರಗಿಟ್ಟಿರುವುದಕ್ಕೆ ಇಲ್ಲೊಬ್ಬರು ನೊಂದು ಟ್ವೀಟ್ ಮಾಡಿದ್ದಾರೆ.

ಧೋನಿ ಮೇಲೆ ನಂಬಿಕೆ ಇಡಿ

ಧೋನಿ ಉತ್ತಮ ಪ್ರದರ್ಶನ ನೀಡದೆ ಸ್ವಲ್ಪ ಮಂಕಾಗಿದ್ದಾರೆ. ಆದರೆ ನಮಗಂತೂ ನಂಬಿಕೆಯಿದೆ. ನೀವೂ ಶಾಂತವಾಗಿ. ಧೋನಿ ಮೇಲೆ ನಂಬಿಕೆಯಿಡಿ. ಆತ ಮತ್ತೆ ಫಾರ್ಮ್ ಗೆ ಬಂದೇ ಬರುತ್ತಾರೆ ಎಂಬರ್ಥದಲ್ಲಿ ಇಲ್ಲೊಂದು ಟ್ವೀಟ್.

ನಮ್ಮ ಮನಸ್ಸಿನಿಂದ ಹೊರಗಿಟ್ಟಿಲ್ಲ

'ನನ್ನ ನಾಯಕ ಘರ್ಜನೆಯೊಂದಿಗೆ ಮತ್ತೆ ಫಾರ್ಮ್ ಗೆ ಮರಳುತ್ತಾರೆ. ಧೋನಿಯನ್ನು ನೀವು ಟಿ20 ತಂಡದಿಂದ ಹೊರಗಿಟ್ಟಿರಬಹುದು, ಆದರೆ ನಮ್ಮ ಮನಸ್ಸಿನಿಂದಲ್ಲ' ಎಂದು ಹೇಮನ್ ಟ್ವೀಟ್ ಮಾಡಿದ್ದಾರೆ.

ಟಿ20 ನೋಡೋದನ್ನು ನಿಲ್ಲಿಸುತ್ತಿದ್ದೇನೆ

ಸಚಿನ್ ನಿವೃತ್ತಿಯ ಬಳಿಕ ನನ್ನ ತಂದೆ ಕ್ರಿಕೆಟ್ ನೋಡೋದನ್ನೇ ಬಹುತೇಕ ನಿಲ್ಲಿಸಿದ್ರು. ಧೋನಿಯನ್ನು ಟೆಸ್ಟ್ ತಂಡದಿಂದ ಹೊರಗಿಟ್ಟಾಗ ನಾನೂ ಟೆಸ್ಟ್ ನೋಡೋದನ್ನು ನಿಲ್ಲಿಸಿದ್ದೆ. ಮತ್ತೀಗ ಟಿ20ಯನ್ನು ನೋಡದಿರಲು ನಿರ್ಧರಿಸಿದ್ದೇನೆ.

ಪ್ರದರ್ಶನದೊಂದಿಗೆ ಉತ್ತರಿಸುತ್ತಾರೆ

ದಿಗ್ಗಜರು ಯಾವತ್ತಿಗೂ ತಮ್ಮ ಸಾಧನೆಯ ಯಾ ಪ್ರದರ್ಶನದ ಮೂಲಕ ಉತ್ತರಿಸುತ್ತಾರೆ. ಟಿ20 ತಂಡದಿಂದ ಧೋನಿಯನ್ನು ಹೊರಗಿಟ್ಟಿದ್ದಕ್ಕೆ ಮನೀಷ್ ಅವರ ಟ್ವೀಟ್ ತಿರುಗೇಟು.

Story first published: Saturday, October 27, 2018, 22:52 [IST]
Other articles published on Oct 27, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X