'ಪಾಕ್‌ಗೆ ನೋ ಅಂತಾರೆ, ಆದರೆ ದುಡ್ಡಿನ ಮುಖ ನೋಡಿ ಭಾರತಕ್ಕೆ ಬೇಡ ಅನ್ನಲ್ಲ'

ಸಿಡ್ನಿ: ಪಾಕಿಸ್ತಾನಕ್ಕೆ ಪ್ರವಾಸ ಬಂದಿದ್ದ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಭದ್ರತೆಯ ಅಪಾಯದ ಕಾರಣ ಹೇಳಿ ಪ್ರವಾಸ ಸರಣಿಯನ್ನು ರದ್ದುಗೊಳಿಸಿ ವಾಪಸ್ ನ್ಯೂಜಿಲೆಂಡ್‌ಗೆ ಬಂದಿತ್ತು. ಇದರಿಂದ ಪಾಕಿಸ್ತಾನಕ್ಕೆ ದೊಡ್ಡ ಮಟ್ಟದ ನಷ್ಟವಾಗಿತ್ತಲ್ಲದೆ ಮುಂದೆ ಪಾಕ್‌ಗೆ ಪ್ರವಾಸ ಬರುವ ಬೇರೆ ತಂಡಗಳೂ ಹಿಂದೇಟು ಹಾಕಲು ಈ ಘಟನೆ ಪ್ರೇರೇಪಿಸುವಂತಿತ್ತು. ಕ್ರಿಕೆಟ್ ವಲಯದಲ್ಲಿ ಈ ಘಟನೆ ಬಗ್ಗೆ ಬಹಳ ಚರ್ಚೆಯಾಗುತ್ತಿವೆ.

ಐಸಿಸಿ ಟಿ20 ವಿಶ್ವಕಪ್ ರೋಮಾಂಚನಕಾರಿ ಅಧಿಕೃತ ಗೀತೆ ಬಿಡುಗಡೆಐಸಿಸಿ ಟಿ20 ವಿಶ್ವಕಪ್ ರೋಮಾಂಚನಕಾರಿ ಅಧಿಕೃತ ಗೀತೆ ಬಿಡುಗಡೆ

ಪಾಕಿಸ್ತಾನಕ್ಕೆ ನ್ಯೂಜಿಲೆಂಡ್ ಪ್ರವಾಸ ಸರಣಿಯ ವಿಚಾರದಲ್ಲಿ ಕೆಲವರು ನ್ಯೂಜಿಲೆಂಡ್ ಕ್ರಿಕೆಟ್ ತಂಡವನ್ನು ಬೆಂಬಲಿಸಿದರೆ, ಇನ್ನು ಕೆಲವರು ನ್ಯೂಜಿಲೆಂಡ್‌ನ ಸಮಯ ಸಾಧಕ ನಿಲುವಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನ್ಯೂಜಿಲೆಂಡ್ ತಂಡ ಹೀಗೆ ಮಾಡಬಾರದಿತ್ತು. ಇದು ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಕ್ರೀಡಾಸ್ಫೂರ್ತಿಯಲ್ಲ ಎಂದಿದ್ದಾರೆ.

ಪಾಕಿಸ್ತಾನಕ್ಕೆ ಪ್ರವಾಸ ಬಂದಿದ್ದ ನ್ಯೂಜಿಲೆಂಡ್, ಸರಣಿ ಆರಂಭವಾಗುವಷ್ಟರಲ್ಲಿ ತಮ್ಮ ಸರ್ಕಾರದಿಂದ ಭದ್ರತೆಯ ಎಚ್ಚರಿಕೆ ಬಂದಿದ್ದಾಗಿ ಹೇಳಿ ಸರಣಿ ಆಡದೆ ವಾಪಸ್ ಆಗಿತ್ತು. ಆದರೆ ಭದ್ರತೆ ಅಪಾಯಕ್ಕೆ ಸಂಬಂಧಿಸಿ ಪಾಕ್‌ನಲ್ಲಿ ಯಾವ ವಿಚಾರವೂ ಕಂಡು ಬಂದಿರಲಿಲ್ಲ. ಇದೇ ವಿಚಾರದಲ್ಲಿ ಆಸ್ಟ್ರೇಲಿಯಾದ ಅನುಭವಿ ಬ್ಯಾಟ್ಸ್‌ಮನ್ ಉಸ್ಮನ್ ಖವಾಜ ನ್ಯೂಜಿಲೆಂಡ್‌ಗೆ ಕುಟುಕಿದ್ದಾರೆ.

ಐಪಿಎಲ್‌ನಲ್ಲಿ ಆಡಿದ 8 ಪಂದ್ಯಗಳಲ್ಲಿ 7 ಪಂದ್ಯ ಸೋತ ತಂಡಗಳ ಪಟ್ಟಿಐಪಿಎಲ್‌ನಲ್ಲಿ ಆಡಿದ 8 ಪಂದ್ಯಗಳಲ್ಲಿ 7 ಪಂದ್ಯ ಸೋತ ತಂಡಗಳ ಪಟ್ಟಿ

"ನಾವು ಆಟ ಆಡುವುದಿಲ್ಲ ಎಂದು ಆಟಗಾರರು ಅಥವಾ ಆಯೋಜಕರು ಪಾಕಿಸ್ತಾನಕ್ಕೆ ಸುಲಭವಾಗಿ ಹೇಳಬಹುದು. ಯಾಕೆಂದರೆ ಅದು ಪಾಕಿಸ್ತಾನ. ಒಂದು ವೇಳೆ ಬಾಂಗ್ಲಾದೇಶಕ್ಕೆ ಸಂಬಂಧಿಸಿದ ಸಂಗತಿಯಾಗಿದ್ದರೆ ಇಲ್ಲೂ ಅದೇ ನಡೆಯುತ್ತಿತ್ತು. ಆದರೆ ಇದೇ ಪರಿಸ್ಥಿತಿ ಭಾರತದಲ್ಲಿ ಆಗಿದ್ದರೆ ಯಾರೂ ಕೂಡ ಭಾರತಕ್ಕೆ ಬೇಡ ಎನ್ನುತ್ತಿರಲಿಲ್ಲ. ಯಾಕೆಂದರೆ ಇಲ್ಲಿ ದುಡ್ಡು ಮಾತನಾಡುತ್ತದೆ. ಅಂದ್ಹಾಗೆ ಕ್ರಿಕೆಟ್‌ನಲ್ಲಿ ಸಹಜವಾಗೇ ದುಡ್ಡು ದೊಡ್ಡ ಮಟ್ಟದಲ್ಲಿ ಪಾತ್ರವಹಿಸುತ್ತದೆ," ಎಂದು ಬ್ರಿಸ್ಬೇನ್‌ನಲ್ಲಿ ಖವಾಜ ಹೇಳಿದ್ದಾರೆ.

KKR ತಂಡ MI ವಿರುದ್ಧ ಗೆಲುವು ಸಾಧಿಸಿದ್ದು ಹೇಗೆ | Oneindia Kannada

ಉಸ್ಮನ್ ಖವಾಜ ಮೂಲತಃ ಪಾಕಿಸ್ತಾನದವರು. ಐದು ವರ್ಷದ ಮಗುವಾಗಿದ್ದಾಗ ಖವಾಜ ಹೆತ್ತವರು ಆಸ್ಟ್ರೇಲಿಯಾಕ್ಕೆ ಬಂದು ನೆಲೆಸಿದ್ದರು. ಇತ್ತೀಚೆಗೆ ಮುಕ್ತಾಯಗೊಂಡಿರುವ ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲೂ ಖವಾಜ ಆಡಿದ್ದರು. "ಈಗಾಗಲೇ ಹಲವಾರು ಪಂದ್ಯಗಳನ್ನು ನಡೆಸಿ ಕ್ರಿಕೆಟ್ ಟೂರ್ನಿ ನಡೆಸಲು ಪಾಕಿಸ್ತಾನ ಸುರಕ್ಷಿತ ಸ್ಥಳ ಅನ್ನೋದನ್ನು ಪಾಕ್ ಸಾಬೀತುಪಡಿಸುತ್ತಲೇ ಇದೆ. ಹೀಗಾಗಿ ಅಲ್ಲಿ ಆಡಲು ಹಿಂದೇಟು ಹಾಕಲು ಕಾರಣವೇ ಇಲ್ಲ," ಎಂದು ಖವಾಜ ಅಭಿಪ್ರಾಯಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Thursday, September 23, 2021, 19:02 [IST]
Other articles published on Sep 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X