ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ENG vs AUS: ಮಲಾನ್ ಶತಕ ವ್ಯರ್ಥ; ಇಂಗ್ಲೆಂಡ್ ವಿರುದ್ಧ ಪ್ರಚಂಡ ಗೆಲುವು ಸಾಧಿಸಿದ ಆಸೀಸ್

ENG vs AUS 1st ODI: Australia Beat England By 6 Wickets In Adelaide

ತವರಿನಲ್ಲಿ ನಡೆದ 2022ರ ಟಿ20 ವಿಶ್ವಕಪ್ ನಿರಾಸೆಯ ನಂತರ, ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಗೆಲುವಿನ ಮೂಲಕ ಶುಭಾರಂಭ ಮಾಡಿದೆ.

ನವೆಂಬರ್ 17ರ ಗುರುವಾರದಂದು ಅಡಿಲೇಡ್ ಓವಲ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ವಿಶ್ವಕಪ್ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ 6 ವಿಕೆಟ್‌ಗಳಿಂದ ಗೆಲುವು ಸಾಧಿಸಿದ್ದು, ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.

ಕಾರ್ತಿಕ್ ಮತ್ತೆ ಆಡುವುದು ಅನುಮಾನ; ಪಂತ್ ಈ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿ; ಉತ್ತಪ್ಪಕಾರ್ತಿಕ್ ಮತ್ತೆ ಆಡುವುದು ಅನುಮಾನ; ಪಂತ್ ಈ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿ; ಉತ್ತಪ್ಪ

ಮೊದಲು ಬ್ಯಾಟಿಂಗ್ ಮಾಡಿದ ಪ್ರವಾಸಿ ಇಂಗ್ಲೆಂಡ್ ತಂಡ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 287 ರನ್ ಗಳಿಸಿತು. 288 ರನ್‌ಗಳ ಮೊತ್ತ ಬೆನ್ನತ್ತಿದ ಆತಿಥೇಯ ಆಸ್ಟ್ರೇಲಿಯಾ ತಂಡ 46.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 291 ರನ್ ಗಳಿಸಿ ಗೆಲುವಿನ ಕೇಕೆ ಹಾಕಿದರು.

ಡೇವಿಡ್ ಮಲಾನ್ 128 ಎಸೆತಗಳಲ್ಲಿ 134 ರನ್ ಗಳಿಸಿ ಔಟ್

ಡೇವಿಡ್ ಮಲಾನ್ 128 ಎಸೆತಗಳಲ್ಲಿ 134 ರನ್ ಗಳಿಸಿ ಔಟ್

ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಅವಧಿಯಲ್ಲಿ ಸತತ ವಿಕೆಟ್‌ಗಳ ಪತನದ ನಡುವೆಯೂ ನೆಲಕಚ್ಚಿ ಆಡಿದ ಡೇವಿಡ್ ಮಲಾನ್ ಇಂಗ್ಲೆಂಡ್ ತಂಡದ ಮೊತ್ತ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಸ್ಫೋಟಕ ಆಟಗಾರ ಐದನೇ ಓವರ್‌ನಲ್ಲಿ ಬ್ಯಾಟಿಂಗ್‌ಗೆ ಬಂದು 46ನೇ ಓವರ್‌ವರೆಗೆ ಬ್ಯಾಟ್ ಬೀಸಿದರು. ಡೇವಿಡ್ ಮಲಾನ್ 64 ಎಸೆತಗಳಲ್ಲಿ ಅರ್ಧಶತಕವನ್ನು ಗಳಿಸಿದ ನಂತರ, 107 ಎಸೆತಗಳಲ್ಲಿ ಶತಕದ ಗಡಿ ದಾಟಿದರು.

ಡೇವಿಡ್ ಮಲಾನ್ ಅಂತಿಮವಾಗಿ 128 ಎಸೆತಗಳಲ್ಲಿ 12 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳ ನೆರವಿನಿಂದ 134 ರನ್ ಗಳಿಸಿ ಆಡಮ್ ಝಂಪಾ ಅವರಿಗೆ ವಿಕೆಟ್‌ ಒಪ್ಪಿಸಿದರು. ಇಂಗ್ಲೆಂಡ್ ತಂಡ 23.1 ಓವರ್‌ಗಳಲ್ಲಿ ಐದು ವಿಕೆಟ್‌ಗಳ ನಷ್ಟಕ್ಕೆ 118 ರನ್‌ಗಳಿಗೆ ಕುಸಿತಗೊಂಡಿತ್ತು. ನಂತರ ಡೇವಿಡ್ ಮಲಾನ್ ಅವರ ಬ್ಯಾಟಿಂಗ್ ನೆರವಿನಿಂದ ಒಂಬತ್ತು ವಿಕೆಟ್‌ಗೆ 287 ರನ್‌ಗಳಿಗೆ ಹೆಚ್ಚಿಸಿತು.

ಪ್ಯಾಟ್ ಕಮ್ಮಿನ್ಸ್ ತಮ್ಮ ಏಕದಿನ ನಾಯಕತ್ವದ ಚೊಚ್ಚಲ ಪಂದ್ಯ

ಪ್ಯಾಟ್ ಕಮ್ಮಿನ್ಸ್ ತಮ್ಮ ಏಕದಿನ ನಾಯಕತ್ವದ ಚೊಚ್ಚಲ ಪಂದ್ಯ

29 ರನ್ ಗಳಿಸಿದ್ದ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಅವರನ್ನೂ ಕೂಡ ಆಡಮ್ ಝಂಪಾ ಔಟ್ ಮಾಡಿದರು. ಇಂಗ್ಲೆಂಡ್ ತಂಡದ ಪರವಾಗಿ ಕೊನೆಯಲ್ಲಿ ಡೇವಿಡ್ ವಿಲ್ಲಿ 40 ಎಸೆತಗಳಲ್ಲಿ 34 ರನ್ ಗಳಿಸಿ ಅಜೇಯರಾಗಿ ಉಳಿದರು. ಆಡಮ್ ಝಂಪಾ ಮತ್ತು ಪ್ಯಾಟ್ ಕಮ್ಮಿನ್ಸ್ ತಲಾ ಮೂರು ವಿಕೆಟ್ ಪಡೆದು ಮಿಂಚಿದರು. ಪ್ಯಾಟ್ ಕಮ್ಮಿನ್ಸ್ ತಮ್ಮ ಏಕದಿನ ನಾಯಕತ್ವದ ಚೊಚ್ಚಲ ಪಂದ್ಯದಲ್ಲಿ ಅತ್ಯುತ್ತಮವಾಗಿ ಕಂಡುಬಂದರು. ಉಳಿದಂತೆ ಆಸೀಸ್ ಪರ ಮಿಚೆಲ್ ಸ್ಟಾರ್ಕ್ ಮತ್ತು ಮಾರ್ಕಸ್ ಸ್ಟೊಯ್ನಿಸ್ ತಲಾ ಒಂದು ವಿಕೆಟ್ ಪಡೆದರು.

ಇನ್ನು ಸವಾಲಿನ ಮೊತ್ತ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ ಉತ್ತಮ ಆರಂಭ ಪಡೆಯಿತು. ಡೇವಿಡ್ ವಾರ್ನರ್ ಮತ್ತು ಟ್ರಾವಿಸ್ ಹೆಡ್ ನಿಧಾನವಾಗಿ ಇನ್ನಿಂಗ್ಸ್ ಕಟ್ಟಿದರು. ಮೊದಲ ವಿಕೆಟ್‌ ಜೊತೆಯಾಟಕ್ಕೆ 19.4 ಓವರ್‌ಗಳಲ್ಲಿ 147 ರನ್ ಗಳಿಸಿ ಆತಿಥೇಯ ತಂಡವನ್ನು ಗೆಲುವಿನ ಕಡೆ ಸಾಗುವಂತೆ ನೋಡಿಕೊಂಡರು.

ಡೇವಿಡ್ ವಾರ್ನರ್ 84 ಎಸೆತಗಳಲ್ಲಿ 86 ರನ್

ಡೇವಿಡ್ ವಾರ್ನರ್ 84 ಎಸೆತಗಳಲ್ಲಿ 86 ರನ್

ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್ 57 ಎಸೆತಗಳಲ್ಲಿ 10 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 69 ರನ್ ಗಳಿಸಿದ್ದಾಗ ಕ್ರಿಸ್ ಜೋರ್ಡಾನ್ ಅವರ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಇನ್ನು ಡೇವಿಡ್ ವಾರ್ನರ್ 84 ಎಸೆತಗಳಲ್ಲಿ 10 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 86 ರನ್ ಬಾರಿಸಿ ಶತಕದ ಗಡಿಯಲ್ಲಿದ್ದಾಗ ಸ್ಯಾಮ್ ಬಿಲ್ಲಿಂಗ್ಸ್ ಅವರ ಅದ್ಭುತ ಡೈವಿಂಗ್ ಕ್ಯಾಚ್‌ಗೆ ಔಟಾದರು.

ಇನ್ನು ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಸ್ಟೀವ್ ಸ್ಮಿತ್ 47 ಎಸೆತಗಳಲ್ಲಿ ಅರ್ಧಶತಕದ ಗಡಿ ತಲುಪಿದರು ಕೊನೆಗೆ 78 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 80 ರನ್ ಗಳಿಸಿ ಅಜೇಯರಾಗುಳಿದರು. ಇದೇ ವೇಳೆ ಕ್ಯಾಮರೂನ್ ಗ್ರೀನ್ ಕೂಡ 20 ರನ್ ಗಳಿಸಿ ಔಟಾಗದೇ ಉಳಿದರು. ಅಂತಿಮವಾಗಿ ಆತಿಥೇಯ ಆಸ್ಟ್ರೇಲಿಯಾ ತಂಡ ಇನ್ನೂ 19 ಎಸೆತಗಳು ಬಾಕಿ ಇರುವಂತೆಯೇ ಗುರಿ ಬೆನ್ನಟ್ಟಿತು.

Story first published: Thursday, November 17, 2022, 19:32 [IST]
Other articles published on Nov 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X