ಇಂಗ್ಲೆಂಡ್ ಆಲ್ ರೌಂಡರ್ ಡೇವಿಡ್ ವಿಲ್ಲೆಗೆ ಕೊರೊನಾವೈರಸ್ ಪಾಸಿಟಿವ್

ಲಂಡನ್: ಇಂಗ್ಲೆಂಡ್ ಆಲ್ ರೌಂಡರ್ ಡೇವಿಡ್ ವಿಲ್ಲೆಗೆ ಕೊರೊನಾವೈರಸ್ ಪಾಸಿಟಿವ್ ಬಂದಿದೆ. ಕೌಂಟಿ ಕ್ರಿಕೆಟ್‌ನಲ್ಲಿ ವಿಲ್ಲೆ ಆಡುವ ಯಾರ್ಕ್‌ಶೈರ್ ಕ್ಲಬ್ ಈ ವಿಚಾರವನ್ನು ಬುಧವಾರ (ಸೆಪ್ಟೆಂಬರ್ 16) ಖಾತರಿಪಡಿಸಿದೆ. ಅಲ್ಲದೆ ಇದೇ ಕ್ಲಬ್‌ನ ಇನ್ನೂ ಮೂವರು ಆಟಗಾರರಿಗೆ ಕೋವಿಡ್-19 ಸೋಂಕು ತಗುಲಿದೆ.
ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿಚಾರ ತಿಳಿಸಿರುವ ಯಾರ್ಕ್‌ಶೈರ್, ತಂಡದ ಮ್ಯಾಥ್ಯೂ ಫಿಶರ್, ಟಾಮ್ ಕೊಹ್ಲರ್-ಕ್ಯಾಡ್ಮೋರ್ ಮತ್ತು ಜೋಶ್ ಪಾಯ್ಸ್ಡೆನ್ ಮುಂದಿನ ವಿಟಾಲಿಟಿ ಬ್ಲಾಸ್ಟ್ ಗ್ರೂಪ್ ಪಂದ್ಯಗಳಲ್ಲಿ ಆಡುತ್ತಿಲ್ಲ ಎಂದಿದೆ.
'ಮ್ಯಾಥ್ಯೂ ಫಿಶರ್, ಟಾಮ್ ಕೊಹ್ಲರ್-ಕ್ಯಾಡ್ಮೋರ್, ಜೋಶ್ ಪಾಯ್ಸ್ಡೆನ್ ಮತ್ತು ಡೇವಿಡ್ ವಿಲ್ಲೆ ಮುಂದಿನ ವಿಟಾಲಿಟಿ ಬ್ಲಾಸ್ಟ್ ಗ್ರೂಪ್ ಪಂದ್ಯಗಳಲ್ಲಿ ಆಡುತ್ತಿಲ್ಲ. ಅವರ ಕೊರೊನಾ ಪರೀಕ್ಷಾ ಫಲಿತಾಂಶ ಪಾಸಿಟಿವ್ ಬಂದಿದೆ ಎಂದು ವೈಸಿಸಿಸಿ ಈ ಮೂಲಕ ಖಾತರಿ ಪಡಿಸುತ್ತಿದೆ,' ಎಂದು ಯಾರ್ಕ್‌ಶೈರ್ ಟ್ವೀಟ್‌ನಲ್ಲಿ ಬರೆಯಲಾಗಿದೆ.
ಡೇವಿಡ್ ವಿಲ್ಲೆ ಕೂಡ ಇದೇ ವಿಚಾರವನ್ನು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ. ತಾನು ತನ್ನ ಪತ್ನಿ ಕ್ಯಾರೊಲಿನ್ ಪೂಲೆ ಇಬ್ಬರೂ ಕೋವಿಡ್-19ಗೆ ಪಾಸಿಟಿವ್ ಇರುವುದಾಗಿ ವಿಲ್ಲೆ ಹೇಳಿಕೊಂಡಿದ್ದಾರೆ. 30ರ ಹರೆಯದ ವಿಲ್ಲೆ ಕಳೆದ ತಿಂಗಳು ಐರ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಆಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications