Eng Vs Pak Test: ಬೆನ್‌ ಸ್ಟೋಕ್ಸ್ ತೆಗೆದುಕೊಂಡ ಈ ನಿರ್ಧಾರಕ್ಕೆ ಅಭಿಮಾನಿಗಳು, ಕ್ರಿಕೆಟಿಗರ ಮೆಚ್ಚುಗೆ

17 ವರ್ಷಗಳ ನಂತರ ಪಾಕಿಸ್ತಾನ ನೆಲದಲ್ಲಿ ಟಿ20 ಸರಣಿ ಆಡಿದ್ದ ಇಂಗ್ಲೆಂಡ್, ಈಗ ಟೆಸ್ಟ್ ಸರಣಿಗಾಗಿ ಮತ್ತೆ ಪಾಕಿಸ್ತಾನಕ್ಕೆ ಪ್ರಯಾಣಿಸಿದೆ. ಈಗಾಗಲೇ ಬೆನ್‌ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ಐತಿಹಾಸಿಕ ಸರಣಿಗಾಗಿ ಪಾಕಿಸ್ತಾನಕ್ಕೆ ತೆರಳಿದ್ದು, ಸಿದ್ಧತೆ ಆರಂಭಿಸಿದೆ.

ಮೂರು ಪಂದ್ಯಗಳ ಟೆಸ್ಟ್ ಸರಣಿ ವಿಶ್ವ ಚಾಂಪಿಯನ್‌ಶಿಪ್‌ನ ಭಾಗವಾಗಲಿದೆ. ಡಿಸೆಂಬರ್ 1ರಂದು ಸರಣಿಯ ಮೊದಲನೇ ಪಂದ್ಯ ಆರಂಭವಾಗಲಿದೆ. ಆದರೆ, ಮೊದಲ ಪಂದ್ಯದ ಆರಂಭಕ್ಕೆ ಮುನ್ನವೇ ಬೆನ್‌ ಸ್ಟೋಕ್ಸ್ ತೆಗೆದುಕೊಂಡ ನಿರ್ಧಾರಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೆನ್‌ ಸ್ಟೋಕ್ಸ್ ತಾವು ಆಡಲಿರುವ ಮೂರು ಟೆಸ್ಟ್ ಪಂದ್ಯಗಳಿಂದ ಬರುವ ಹಣವನ್ನು ಪಾಕಿಸ್ತಾನದ ಪ್ರವಾಹ ನಿರಾಶ್ರಿತರಿಗಾಗಿ ನೀಡಲು ನಿರ್ಧರಿಸಿದ್ದಾರೆ. ಈ ಬಗ್ಗೆ ಸ್ವತಃ ಬೆನ್‌ ಸ್ಟೋಕ್ಸ್ ಟ್ವೀಟ್ ಮಾಡಿ ಖಚಿತಪಡಿಸಿದ್ದಾರೆ.

IND Vs NZ: 3ನೇ ಏಕದಿನ ಪಂದ್ಯಕ್ಕಾಗಿ ಟೀಂ ಇಂಡಿಯಾ ಅಚ್ಚರಿಯ ನಿರ್ಧಾರ, ಸಂಭಾವ್ಯ ಪ್ಲೇಯಿಂಗ್ ಇಲೆವೆನ್IND Vs NZ: 3ನೇ ಏಕದಿನ ಪಂದ್ಯಕ್ಕಾಗಿ ಟೀಂ ಇಂಡಿಯಾ ಅಚ್ಚರಿಯ ನಿರ್ಧಾರ, ಸಂಭಾವ್ಯ ಪ್ಲೇಯಿಂಗ್ ಇಲೆವೆನ್

"ನನಗೆ ಈ ಟೆಸ್ಟ್ ಸರಣಿಯಲ್ಲಿ ಬರುವ ಪಂದ್ಯದ ಶುಲ್ಕವನ್ನು ಪಾಕಿಸ್ತಾನದ ಪ್ರವಾಹ ನಿರಾಶ್ರಿತರಿಗಾಗಿ ನೀಡಲು ನಿರ್ಧರಿಸಿದ್ದೇನೆ" ಎಂದು ಹೇಳಿದ್ದಾರೆ.

"ಐತಿಹಾಸಿಕ ಟೆಸ್ಟ್ ಸರಣಿಗಾಗಿ ಮೊದಲ ಬಾರಿಗೆ ಪಾಕಿಸ್ತಾನಕ್ಕೆ ಬಂದಿರುವುದು ಅದ್ಭುತ ಅನುಭವವಾಗಿದೆ. ಟೆಸ್ಟ್ ತಂಡವಾಗಿ 17 ವರ್ಷಗಳ ನಂತರಕ್ಕೆ ಪಾಕಿಸ್ತಾನಕ್ಕೆ ಕಾಲಿಟ್ಟಿದ್ದೇವೆ. ಇಲ್ಲಿ ಉತ್ತಮವಾಗಿ ಆಡಬೇಕಾದ ಜವಾಬ್ದಾರಿ ಇದೆ, ನಮ್ಮ ತಂಡಕ್ಕೆ ಇಲ್ಲಿ ಉತ್ತಮ ಬೆಂಬಲ ಕೂಡ ಸಿಗಲಿದೆ" ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಪ್ರವಾಹ ಪೀಡಿತರ ಸಂಕಷ್ಟಕ್ಕೆ ಮಿಡಿದ ಸ್ಟೋಕ್ಸ್

"2022ರ ಆರಂಭದಲ್ಲಿ ಪಾಕಿಸ್ತಾನದಲ್ಲಿ ಪ್ರವಾಹ ಲಕ್ಷಾಂತರ ಜನರ ಜೀವನದ ಮೇಲೆ ಪರಿಣಾಮ ಬೀರಿರುವುದು ದುಃಖದ ಸಂಗತಿಯಾಗಿದೆ. ಇದರಿಂದ ದೇಶದ ಮೇಲೆ ಕೂಡ ಪರಿಣಾಮ ಬೀರಿದೆ" ಎಂದು ಸ್ಟೋಕ್ಸ್ ಹೇಳಿದ್ದಾರೆ.

"ಕ್ರಿಕೆಟ್‌ ನನಗೆ ಬದುಕಿನಲ್ಲಿ ಸಾಕಷ್ಟು ನೀಡಿದೆ. ಕ್ರಿಕೆಟ್ ಹೊರತಾಗಿ ಬೇರೆ ಏನನ್ನಾದರೂ ಹಿಂದಿರುಗಿಸುಬೇಕು ಎಂದು ನಾನು ಭಾವಿಸುತ್ತೇನೆ. ಈ ಟೆಸ್ಟ್ ಸರಣಿಯಿಂದ ನನಗೆ ಬರುವ ಶುಲ್ಕವನ್ನು ಪಾಕಿಸ್ತಾನ ಪ್ರವಾಹ ಪರಿಹಾರಕ್ಕಾಗಿ ದಾನ ಮಾಡುತ್ತೇನೆ. ಈ ದೇಣಿಗೆ ಪ್ರವಾಹದಿಂದ ಹೆಚ್ಚು ಹಾನಿಗೊಳಗಾದ ಪಾಕಿಸ್ತಾನದ ಪ್ರದೇಶಗಳ ಸುಧಾರಣೆಗೆ ಬಳಕೆಯಾಗುತ್ತದೆ" ಎಂದು ಹೇಳಿದ್ದಾರೆ.

ಈತ ಟೀಮ್ ಇಂಡಿಯಾದ ಭವಿಷ್ಯದ ಆಕ್ರಮಣಕಾರಿ ನಾಯಕ: ಅಚ್ಚರಿ ಹುಟ್ಟಿಸಿದ ಗಂಭೀರ್ ಆಯ್ಕೆ!

2005ರಲ್ಲಿ ಕೊನೆಯ ಬಾರಿ ಪಾಕಿಸ್ತಾನಕ್ಕೆ ಪ್ರವಾಸ

2005ರಲ್ಲಿ ಕೊನೆಯ ಬಾರಿ ಪಾಕಿಸ್ತಾನಕ್ಕೆ ಪ್ರವಾಸ

2005 ರಲ್ಲಿ ಇಂಗ್ಲೆಂಡ್ ತಂಡ ಕೊನೆಯ ಬಾರಿಗೆ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿತ್ತು. ಅದಾದ ನಂತರ 17 ವರ್ಷಗಳ ಕಾಲ ಭದ್ರತೆಯ ಕಾರಣದಿಂದ ಪಾಕಿಸ್ತಾನಕ್ಕೆ ಪ್ರವಾಸ ಮಾಡಿರಲಿಲ್ಲ. ಆದರೆ, ಟಿ20 ವಿಶ್ವಕಪ್‌ 2022ರ ಆರಂಭಕ್ಕೆ ಮುನ್ನ ಪಾಕಿಸ್ತಾನ 7 ಪಂದ್ಯಗಳ ಟಿ20 ಸರಣಿಗಾಗಿ ಪಾಕಿಸ್ತಾನಕ್ಕೆ ಪ್ರಯಾಣ ಮಾಡಿತ್ತು. ಇಂಗ್ಲೆಂಡ್ ಈ ಸರಣಿಯನ್ನು 4-3 ಅಂತರದಲ್ಲಿ ಗೆದ್ದುಕೊಂಡಿತ್ತು.

ವಿಶ್ವಕಪ್ ಮುಕ್ತಾಯದ ಬಳಿಕ ಇಂಗ್ಲೆಂಡ್ ಮತ್ತೆ ಟೆಸ್ಟ್ ಸರಣಿಯನ್ನು ಆಡಲು ಪಾಕಿಸ್ತಾನಕ್ಕೆ ಪ್ರಯಾಣ ಮಾಡಿದೆ. ಕಳೆದ ವರ್ಷ ಪಾಕಿಸ್ತಾನಕ್ಕೆ ಭೇಟಿ ನೀಡುವ ಅವಕಾಶ ಇದ್ದರೂ, ಭದ್ರತೆಯ ಕಾರಣ ನೀಡಿ ಹಿಂದೆ ಸರಿದಿತ್ತು.

ಮೂರು ಟೆಸ್ಟ್ ಪಂದ್ಯಗಳನ್ನಾಡಿದೆ ಇಂಗ್ಲೆಂಡ್

ಮೂರು ಟೆಸ್ಟ್ ಪಂದ್ಯಗಳನ್ನಾಡಿದೆ ಇಂಗ್ಲೆಂಡ್

ಇಂಗ್ಲೆಂಡ್ ಪಾಕಿಸ್ತಾನದ ವಿರುದ್ಧ ಮೂರು ಪಂದ್ಯಗಳನ್ನು ಆಡಲಿದೆ. ಇದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಾಗಿದೆ. ಮೊದಲನೇ ಟೆಸ್ಟ್ ಪಂದ್ಯ ಡಿಸೆಂಬರ್ 1 ರಿಂದ 5 ರವರೆಗೆ ರಾವಲ್ಪಿಂಡಿಯಲ್ಲಿ ನಡೆಯಲಿದೆ. 2ನೇ ಟೆಸ್ಟ್ ಡಿಸೆಂಬರ್ 9 ರಿಂದ 13 ರವರೆಗೆ ಮುಲ್ತಾನ್‌ನಲ್ಲಿ ನಡೆಯಲಿದೆ ಮತ್ತು ಸರಣಿಯ ಕೊನೆಯ ಪಂದ್ಯ ಡಿಸೆಂಬರ್ 17ರಿಂದ 21ರವರೆಗೆ ನಡೆಯಲಿದೆ.

ಇಂಗ್ಲೆಂಡ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ಜೇಮ್ಸ್ ಆಂಡರ್ಸನ್, ಹ್ಯಾರಿ ಬ್ರೂಕ್, ಝಾಕ್ ಕ್ರಾಲಿ, ಬೆನ್ ಡಕೆಟ್, ಬೆನ್ ಫೋಕ್ಸ್, ವಿಲ್ ಜ್ಯಾಕ್ಸ್, ಕೀಟನ್ ಜೆನ್ನಿಂಗ್ಸ್, ಜ್ಯಾಕ್ ಲೀಚ್, ಲಿಯಾಮ್ ಲಿವಿಂಗ್‌ಸ್ಟೋನ್, ಜೇಮೀ ಓವರ್‌ಟನ್, ಓಲೀ ಪೋಪ್, ಓಲೀ ರಾಬಿನ್ಸನ್, ಜೋ ರೂಟ್, ಮಾರ್ಕ್ ವುಡ್ , ರೆಹಾನ್ ಅಹ್ಮದ್.

For Quick Alerts
ALLOW NOTIFICATIONS
For Daily Alerts
Story first published: Monday, November 28, 2022, 17:53 [IST]
Other articles published on Nov 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X