ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ENG Vs PAK: ಪಾಕಿಸ್ತಾನದಲ್ಲಿ ಅನಾರೋಗ್ಯಕ್ಕೆ ತುತ್ತಾದ ಇಂಗ್ಲೆಂಡ್‌ ತಂಡದ ಆಟಗಾರರು

England Players Fell Ill The Day Before First Test Of The Series Against Pakistan

17 ವರ್ಷಗಳ ನಂತರ ಪಾಕಿಸ್ತಾನಕ್ಕೆ ಟೆಸ್ಟ್ ಸರಣಿ ಆಡಲು ಬಂದ ಇಂಗ್ಲೆಂಡ್ ಕ್ರಿಕೆಟಿಗರಿಗೆ ಅನಾರೋಗ್ಯ ಸಮಸ್ಯೆ ಉಂಟಾಗಿದೆ. ರಾವಲ್ಪಿಂಡಿಯಲ್ಲಿ ಡಿಸೆಂಬರ್ 1 ರಂದು ಮೊದಲನೇ ಟೆಸ್ಟ್ ಪಂದ್ಯ ಆರಂಭಕ್ಕೆ ಒಂದು ದಿನ ಮೊದಲು ಹಲವು ಆಟಗಾರರು ಅಸ್ವಸ್ಥಗೊಂಡಿದ್ದಾರೆ.

ವರದಿಗಳ ಪ್ರಕಾರ, 16 ಜನರ ಇಂಗ್ಲೆಂಡ್ ತಂಡದಲ್ಲಿ ಅರ್ಧದಷ್ಟು ಸದಸ್ಯರು ಅನಾರೋಗ್ಯಕ್ಕೆ ತುತ್ತಾಗಿದ್ದು, ಹೋಟೆಲ್ ಕೊಠಡಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಬುಧವಾರ ಅಭ್ಯಾಸದ ವೇಳೆಯಲ್ಲಿ ಇಂಗ್ಲೆಂಡ್‌ ತಂಡದ ಜೋ ರೂಟ್ ಸೇರಿದಂತೆ ಕೇವಲ 5 ಸದಸ್ಯರು ಮಾತ್ರ ಹಾಜರಾದರು.

ಆಟಗಾರರಿಗೆ ವಿಶ್ರಾಂತಿ ನೀಡಿರುವುದರಿಂದ ರಾವಲ್ಪಿಂಡಿ ಟೆಸ್ಟ್‌ ನಡೆಯುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಇಂಗ್ಲೆಂಡ್ ತಂಡದ ನಾಯಕ ಬೆನ್‌ ಸ್ಟೋಕ್ಸ್ ಬದಲಿಗೆ ಜೋ ರೂಟ್ ಹಾಜರಾದರು.

ಫಿಫಾ ವಿಶ್ವಕಪ್ 2022: ಈಕ್ವೆಡಾರ್ ಸೋಲಿಸಿ 20 ವರ್ಷಗಳ ನಂತರ ನಾಕೌಟ್ ಹಂತ ತಲುಪಿದ ಸೆನೆಗಲ್ಫಿಫಾ ವಿಶ್ವಕಪ್ 2022: ಈಕ್ವೆಡಾರ್ ಸೋಲಿಸಿ 20 ವರ್ಷಗಳ ನಂತರ ನಾಕೌಟ್ ಹಂತ ತಲುಪಿದ ಸೆನೆಗಲ್

"ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಸೇರಿದಂತೆ ಹಲವಾರು ಆಟಗಾರರು ಮತ್ತು ಸಿಬ್ಬಂದಿ ಸದಸ್ಯರು ಅಸ್ವಸ್ಥರಾಗಿದ್ದಾರೆ ಮತ್ತು ವಿಶ್ರಾಂತಿ ಪಡೆಯಲು ಹೋಟೆಲ್‌ನಲ್ಲಿ ಉಳಿಯಲು ಸಲಹೆ ನೀಡಲಾಗಿದೆ" ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ.

14 ಸದಸ್ಯರಿಗೆ ಹೋಟೆಲ್‌ನಲ್ಲಿ ವಿಶ್ರಾಂತಿ

14 ಸದಸ್ಯರಿಗೆ ಹೋಟೆಲ್‌ನಲ್ಲಿ ವಿಶ್ರಾಂತಿ

ನಾಯಕ ಬೆನ್ ಸ್ಟೋಕ್ಸ್ ಸೇರಿದಂತೆ ಇಂಗ್ಲೆಂಡ್ ತಂಡದ ಆಟಗಾರರು ಮತ್ತು ಸಿಬ್ಬಂದಿ ವೈರಸ್‌ ದಾಳಿಗೆ ತುತ್ತಾಗಿದ್ದಾರೆ. ಆಟಗಾರರು ಮತ್ತು ತರಬೇತುದಾರರು ಸೇರಿ ಸುಮಾರು 14 ಸದಸ್ಯರು ಬುಧವಾರ ಹೋಟೆಲ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಹ್ಯಾರಿ ಬ್ರೂಕ್, ಝಾಕ್ ಕ್ರಾಲಿ, ಕೀಟನ್ ಜೆನ್ನಿಂಗ್ಸ್, ಓಲಿ ಪೋಪ್ ಮತ್ತು ಜೋ ರೂಟ್ ಮಾತ್ರ ಅಭ್ಯಾಸದಲ್ಲಿ ಪಾಲ್ಗೊಂಡಿದ್ದರು. 16 ಆಟಗಾರರ ತಂಡದಲ್ಲಿ ಕೇವಲ ಐವರು ಭಾಗವಹಿಸುವುದರೊಂದಿಗೆ, ಉಳಿದ ಆಟಗಾರರು ಅಭ್ಯಾಸದಿಂದ ತಪ್ಪಿಸಿಕೊಂಡಿದ್ದಾರೆ. ಪಂದ್ಯಕ್ಕೆ ಮುನ್ನಾ ದಿನವೇ ಈ ರೀತಿ ಆಗಿರುವುದರಿಂದ ಪಂದ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಪಂದ್ಯಕ್ಕೆ ಮುನ್ನ ಟ್ರೋಫಿ ಅನಾವರಣ

ಇಂಗ್ಲೆಂಡ್ ತಂಡದ ಮ್ಯಾನೇಜರ್ ಡ್ಯಾನಿ ರೂಬೆನ್ ಅನಾರೋಗ್ಯದ ಬಗ್ಗೆ ಹೆಚ್ಚಿನ ವಿವರ ನೀಡಲಿಲ್ಲ. ಆದರೆ, ಆಟಗಾರರಿಗೆ ವಿಶ್ರಾಂತಿ ನೀಡುವಂತೆ ಸೂಚಿಸಲಾಗಿದೆ ಎಂದು ಹೇಳಿದರು. ನಾಯಕ ಬೆನ್‌ ಸ್ಟೋಕ್ಸ್ ಅನುಪಸ್ಥಿತಿಯಲ್ಲಿ, ಪಿಸಿಬಿ ಸರಣಿ ಟ್ರೋಫಿ ಅನಾವರಣವನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಗಿದೆ. ಮೊದಲ ಟೆಸ್ಟ್‌ನಲ್ಲಿ ಟಾಸ್‌ಗೆ ಮುಂಚಿತವಾಗಿ ಟ್ರೋಫಿ ಅನಾವರಣ ಮಾಡಲು ನಿರ್ಧರಿಸಲಾಗಿದೆ.

ರಾವಲ್ಪಿಂಡಿಯಲ್ಲಿ ನಡೆಯಲಿರುವ ಮೊದಲ ಟೆಸ್ಟ್‌ಗೆ ಇಂಗ್ಲೆಂಡ್ ತಂಡ ಈಗಾಗಲೇ ತಮ್ಮ ಆಡುವ ಬಳಗವನ್ನು ಹೆಸರಿಸಿದೆ. ಆಲ್ ರೌಂಡರ್ ಲಿಯಾಮ್ ಲಿವಿಂಗ್ ಸ್ಟೋನ್ ಇಂಗ್ಲೆಂಡ್ ಪರ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಆರಂಭಿಕ ಆಟಗಾರ ಬೆನ್ ಡಕೆಟ್ ಆರು ವರ್ಷಗಳ ನಂತರ ಟೆಸ್ಟ್‌ಗೆ ಮರಳಿದ್ದಾರೆ.

ಬಾಣಸಿಗನನ್ನು ಕರೆತಂದಿದ್ದ ಇಂಗ್ಲೆಂಡ್

ಬಾಣಸಿಗನನ್ನು ಕರೆತಂದಿದ್ದ ಇಂಗ್ಲೆಂಡ್

17 ವರ್ಷಗಳ ನಂತರ ಇಂಗ್ಲೆಂಡ್ ಟೆಸ್ಟ್ ಸರಣಿಗಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಿದೆ. ಇಂಗ್ಲೆಂಡ್ ಪಾಕಿಸ್ತಾನದಲ್ಲಿ ಕೊನೆಯ ಟೆಸ್ಟ್ ಸರಣಿಯನ್ನು2005ರಲ್ಲಿ ಆಡಿತ್ತು. ಟಿ20 ವಿಶ್ವಕಪ್‌ 2022ರ ಆರಂಭಕ್ಕೆ ಮುನ್ನ ಇಂಗ್ಲೆಂಡ್ 7 ಪಂದ್ಯಗಳ ಟಿ20 ಸರಣಿಗಾಗಿ ಪಾಕಿಸ್ತಾನಕ್ಕೆ ಪ್ರವಾಸ ಮಾಡಿದ್ದರು. ಈ ಸಮಯದಲ್ಲಿ ಪಾಕಿಸ್ತಾನದಲ್ಲಿ ನೀಡಿದ್ದ ಆಹಾರದ ಬಗ್ಗೆ ಇಂಗ್ಲೆಂಡ್ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದರು. ಹಲವು ಆಟಗಾರರು ಆಗಲೂ ಸಹ ಆಹಾರ ತಿಂದ ಬಳಿಕ ಅನಾರೋಗ್ಯಕ್ಕೆ ಒಳಗಾಗಿದ್ದರು.

ಟೆಸ್ಟ್ ಸರಣಿಗಾಗಿ ಪಾಕಿಸ್ತಾನಕ್ಕೆ ತೆರಳಿದ್ದ ವೇಳೆ ಇಂಗ್ಲೆಂಡ್ ತಂಡ ಅಲ್ಲಿಂದಲೇ ಬಾಣಸಿಗನನ್ನು ಕರೆತಂದಿದ್ದರು. 2018ರಲ್ಲಿ ರಷ್ಯಾದಲ್ಲಿ ನಡೆದ ಫುಟ್ಬಾಲ್ ವಿಶ್ವಕಪ್, 2022ರಲ್ಲಿ ಯೂರೋ ಕಪ್‌ನಲ್ಲಿ ಇಂಗ್ಲೆಂಡ್ ಫುಟ್ಬಾಲ್‌ ತಂಡದೊಂದಿಗೆ ಕೆಲಸ ಮಾಡಿದ್ದ ಬಾಣಸಿಗ ಒಮರ್ ಮೆಜಿಯಾನ್ ಇಂಗ್ಲೆಂಡ್ ಕ್ರಿಕೆಟ್ ತಂಡದ ಜೊತೆ ಪಾಕಿಸ್ತಾನಕ್ಕೆ ಬಂದಿದ್ದಾರೆ.

ಡಿಸೆಂಬರ್ 9 ರಿಂದ ಎರಡನೇ ಟೆಸ್ಟ್ ಪಂದ್ಯ ಮುಲ್ತಾನ್‌ನಲ್ಲಿ ನಡೆಯಲಿದೆ. 3ನೇ ಟೆಸ್ಟ್ ಪಂದ್ಯ ಕರಾಚಿಯಲ್ಲಿ ಡಿಸೆಂಬರ್ 17 ರಿಂದ 21ರವರೆಗೆ ನಡೆಯಲಿದೆ.

Story first published: Wednesday, November 30, 2022, 15:16 [IST]
Other articles published on Nov 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X