ಸಿಎಸ್‌ಕೆ ಯಾವಾಗಲೂ ಬಲಿಷ್ಠ ತಂಡವೆನಿಸಲು ಆತನೇ ದೊಡ್ಡ ಕಾರಣ: ಫಾಪ್ ಡು ಪ್ಲೆಸಿಸ್

ಬೆಂಗಳೂರು, ಆಗಸ್ಟ್ 27: ಐಪಿಎಲ್ 2021ನೇ ಆವೃತ್ತಿಯ ಎರಡನೇ ಚರಣದ ಪಂದ್ಯಗಳ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಯುಎಇನಲ್ಲಿ ನಡೆಯಲಿರುವ ಈ ಬಾರಿಯ ಐಪಿಎಲ್‌ಗಾಗಿ ಎಲ್ಲಾ ತಂಡಗಳು ಕೂಡ ಈಗಾಗಲೇ ಸಿದ್ಧತೆಯನ್ನು ಆರಂಭಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾರತೀಯ ಆಟಗಾರರು ಈಗಾಗಲೇ ದುಬೈಗೆ ತೆರಳಿದ್ದು ಅಲ್ಲಿ ಅಭ್ಯಾಸವನ್ನು ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಆಟಗಾರ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಫಾಪ್ ಡು ಪ್ಲೆಸಿಸ್ ಈ ಬಾರಿಯ ಐಪಿಎಲ್‌ನಲ್ಲಿ ಭಾಗವಹಿಸುವುದು ಖಚಿತವಾಗಿದೆ. ದಿ ಹಂಡ್ರೆಡ್ ಟೂರ್ನಿಯಲ್ಲಿ ತಲೆಗೆ ಚೆಂಡು ಬಡಿದ ಕಾರಣ ಕನ್ಕೂಶನ್‌ಗೆ ಒಳಗಾಗಿದ್ದ ಡು ಪ್ಲೆಸಿಸ್ ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಸಂಪೂರ್ಣವಾಗಿ ಫಿಟ್ ಆಗಿದ್ದಾರೆ.

ಈ ಸಂದರ್ಭದಲ್ಲಿ ಫಾಪ್ ಡು ಪ್ಲೆಸಿಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬಗ್ಗೆ ಮಾತನಾಡಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಬಲಿಷ್ಠ ತಂಡ ತಂಡವಾಗಿರಲಿ ಓರ್ವ ಆಟಗಾರ ಪ್ರಮುಖ ಕಾರಣ ಎಂದಿದ್ದಾರೆ ಡು ಪ್ಲೆಸಿಸ್. ಆ ಓರ್ವ ಪ್ರಮುಖ ಆಟಗಾರನ ಕಾರಣದಿಂದಾಗಿಯೇ ತಂಡ ಪ್ತತಿ ಬಾರಿಯೂ ಟೂರ್ನಿಯಲ್ಲಿ ಬಲಿಷ್ಠ ತಂಡ ಎನಿಸುತ್ತದೆ ಎಂದು ಫಾಪ್ ಡು ಪ್ಲೆಸಿಸ್ ವಿವರಿಸಿದ್ದಾರೆ.

ಐಪಿಎಲ್‌ನಲ್ಲಿ ಆಡಲು ಸಜ್ಜಾಗಿದ್ದಾರೆ ಐಸಿಸಿ ಟಿ20ಐ ಟಾಪ್ 4 ಶ್ರೇಯಾಂಕಿತ ಬೌಲರ್ಸ್!ಐಪಿಎಲ್‌ನಲ್ಲಿ ಆಡಲು ಸಜ್ಜಾಗಿದ್ದಾರೆ ಐಸಿಸಿ ಟಿ20ಐ ಟಾಪ್ 4 ಶ್ರೇಯಾಂಕಿತ ಬೌಲರ್ಸ್!

ದಕ್ಷಿಣ ಆಫ್ರಿಕಾದ ಈ ಆರಂಭಿಕ ಆಟಗಾರ ಈ ರೀತಿಯಾಗಿ ಪ್ರಶಂಸೆಯ ಮಾತುಗಳನ್ನಾಡಿದ್ದು ಬೇರೆ ಯಾರ ಬಗ್ಗೆಯೂ ಅಲ್ಲ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿಯ ಬಗ್ಗೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯಶಸ್ಸಿಗೆ ಪ್ರಮುಖ ಕಾರಣವೇ ಎಂಎಸ್ ಧೋನಿ ಎಂಬ ಅಭಿಪ್ರಾಯವನ್ನು ಫಾಪ್ ಡು ಪ್ಲೆಸಿಸ್ ವ್ಯಕ್ತಪಡಿಸಿದ್ದಾರೆ. ಸದ್ಯ ಫಾಪ್ ಡು ಪ್ಲೆಸಿಸ್ ಕೆರೆಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಾಲ್ಗೊಂಡಿದ್ದಾರೆ. ಸಿಪಿಎಲ್‌ನಲ್ಲಿ ಡು ಪ್ಲೆಸಿಸ್ ಸೈಂಟ್ ಲೂಸಿಯಾ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಗುರುವಾರದಿಂದ ಈ ಪ್ರತಿಷ್ಠಿತ ಟೂರ್ನಿ ಆರಂಭವಾಗಿದೆ.

ಎಂಎಸ್ ಧೋನಿ ಅತ್ಯಂತ ಪ್ರಭಾವಿ ನಾಯಕ

ಎಂಎಸ್ ಧೋನಿ ಅತ್ಯಂತ ಪ್ರಭಾವಿ ನಾಯಕ

ಸ್ಪೋರ್ಟ್ಸ್ ಸ್ಟಾರ್ ಜೊತೆಗೆ ಮಾತನಾಡಿದ ದಕ್ಷಿಣ ಆಫ್ರಿಕಾ ಕ್ರಿಕೆಟ್ ಆಟಗಾರ ಫಾಪ್ ಡು ಪ್ಲೆಸಿಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿಯನ್ನು ಅತ್ಯಂತ ಪ್ರಭಾವಶಾಲಿ ನಾಯಕ ಎಂದು ಕರೆದಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್‌ನಲ್ಲಿ ಸುದೀರ್ಘ ಕಾಲದಿಂದ ಯಶಸ್ಸು ಸಾಧಿಸುತ್ತಾ ಬರಲು ಎಂಎಸ್ ಧೋನಿಯ ಪರಿಣಾಮಕಾರಿ ನಾಯಕತ್ವವೇ ಕಾರಣ ಎಂದಿದ್ದಾರೆ. ಐಪಿಎಲ್‌ನ ಆರಂಭದಿಂದಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎಂಎಸ್ ಧೋನಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಕಳೆದ 13 ಆವೃತ್ತಿಗಳ ಪೈಕಿ 11 ಆವೃತ್ತಿಯಲ್ಲಿ ಭಾಗಿಯಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ 3 ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ. 10 ಬಾರಿ ಪ್ಲೇಆಫ್ ಹಂತಕ್ಕೇರುವಲ್ಲಿ ಯಶಸ್ವಿಯಾಗಿತ್ತು.

ಅಂಗಳದಲ್ಲಿ ಸಿಎಸ್‌ಎ ಯಾವಾಗಲೂ ಬಲಿಷ್ಠ ತಂಡ

ಅಂಗಳದಲ್ಲಿ ಸಿಎಸ್‌ಎ ಯಾವಾಗಲೂ ಬಲಿಷ್ಠ ತಂಡ

"ಸಿಎಸ್‌ಕೆ ತಂಡ ಕ್ರಿಕೆಟ್ ಮೈದಾನದಲ್ಲಿ ಯಾವಾಗಲೂ ಬಲಿಷ್ಠ ತಂಡವಾಗಿದೆ. ಅವರು ಯಾವಾಗಲೂ ಉತ್ತಮ ನಾಯಕರ ಮೇಲೆಯೇ ಕಣ್ಣಿಟ್ಟಿರುತ್ತಾರೆ. ಒಂದು ಹಂತದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ನಾಲ್ವರು ಅಂತಾರಾಷ್ಟ್ರೀಯ ತಂಡದ ಆಟಗಾರರು ಇದ್ದರು. ಯಾವಾಗಲೂ ಬುದ್ದಿವಂತಿಕೆಯಿಂದ ಆಡಲು ಬಯಸುವ ತಂಡಕ್ಕೆ ಎಂಎಸ್ ಧೋನಿಯ ನಾಯಕತ್ವ ಅತಿ ದೊಡ್ಡ ಶಕ್ರಿಯಾಗಿದೆ ಬಹುಶಃ ಆತ ಆಟದ ಅತ್ಯಂತ ಪ್ರಭಾವಶಾಲಿ ನಾಯಕ ಎನಿಸುತ್ತದೆ. ಕಳೆದ 10 ವರ್ಷಗಳು ನನ್ನ ಪಾಲಿಗೆ ಅದ್ಭುತವಾಗಿತ್ತು. ಈ ಮೂಲಕ ಸಾಕಷ್ಟು ಸಂಗತಿಗಳನ್ನು ತಿಳಿದುಕೊಳ್ಳಲು ಸಾಧ್ಯವಾಗಿರುವುದಕ್ಕೆ ನಾನು ಬಹಳಷ್ಟು ಋಣಿಯಾಗಿರುತ್ತೇನೆ" ಎಂದು ಡು ಪ್ಲೆಸಿಸ್ ಹೇಳಿದ್ದಾರೆ.

ಉತ್ತಮ ಪ್ರದರ್ಶನ ಮುಂದುವರಿಸುವ ವಿಶ್ವಾಸ

ಉತ್ತಮ ಪ್ರದರ್ಶನ ಮುಂದುವರಿಸುವ ವಿಶ್ವಾಸ

"ನಾವು ಅತ್ಯುತ್ತಮ ಕ್ರಿಕೆಟ್ ಆಡಿದ್ದೇವೆ, ಈ ಪ್ರದರ್ಶನ ಮುಂದುವರಿಯುತ್ತದೆ ಎಂದು ನಾನು ವಿಶ್ವಾಸ ಹೊಂದಿದ್ದೇನೆ. ನಾನು ಮೊದಲಾರ್ಧದಲ್ಲಿ ಅತ್ಯುತ್ತಮ ಆಟವನ್ನು ಪ್ರದರ್ಶಿಸಿದ್ದೇನೆ. ಇದೇ ಪ್ರದರ್ಶನವನ್ನು ಮುಂದುವರಿಸುವ ವಿಶ್ವಾಸವನ್ನು ನಾನು ಹೊಂದಿದ್ದೇನೆ. ಕಳೆದ ಆವೃತ್ತಿಗಿಂತ ನಾವು ಸಮತೋಲಿತ ಹಾಗೂ ಅತ್ಯುತ್ತಮ ತಂಡವಾಗಿದ್ದೇವೆ" ಎಂದು ಫಾಪ್ ಡು ಪ್ಲೆಸಿಸ್ ಹೇಳಿಕೆ ನೀಡಿದ್ದಾರೆ. ಈ ಬಾರಿಯ ಐಪಿಎಲ್ ಆವೃತ್ತಿಯ ಮೊದಲ ಚರಣದ ಟೂರ್ನಿಯಲ್ಲಿ ಫಾಪ್ ಡು ಪ್ಲೆಸಿಸ್ 7 ಪಂದ್ಯಗಳಲ್ಲಿ ಆಡಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ 320 ರನ್‌ಗಳನ್ನು ಗಳಿಸಿದ್ದರು. ಈ ಮೂಲಕ ತಂಡದಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರನಾಗಿದ್ದಾರೆ.

ಅದ್ಭುತ ಪ್ರದರ್ಶನ ನೀಡುತ್ತಿರುವ ಸಿಎಸ್‌ಕೆ

ಅದ್ಭುತ ಪ್ರದರ್ಶನ ನೀಡುತ್ತಿರುವ ಸಿಎಸ್‌ಕೆ

ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅದ್ಭುತವಾದ ಪ್ರದರ್ಶನ ನೀಡುತ್ತಾ ಬಂದಿದೆ. ಆಡಿದ ಏಳು ಪಂದ್ಯಗಳಲ್ಲಿ ಎಂಎಸ್ ಧೋನಿ ನೇತೃತ್ವದ ತಂಡ ಐದು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಐಪಿಎಲ್ 2021ರ ಅಂಕಪಟ್ಟಿಯಲ್ಲಿ ಸಿಎಸ್‌ಗೆ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಇನ್ನು ಈ ಬಾರಿಯ ಐಪಿಎಲ್‌ನ ಉಳಿದ ಪಂದ್ಯಗಳು ಸೆಪ್ಟೆಂಬರ್-ಅಕ್ಟೋಬರ್ ತಿಂಗಳಿನಲ್ಲಿ ನಡೆಯಲಿದೆ. ಎರಡನೇ ಚರಣದ ಮೊದಲ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ಮಧ್ಯೆ ನಡೆಯಲಿದ್ದು ಸೆಪ್ಟೆಂಬರ್ 19ರಿಂದ ಈ ಟೂರ್ನಿಗೆ ಚಾಲನೆ ದೊರೆಯಲಿದೆ.

ಟೀಕಾಕಾರರ ಬಾಯಿಮುಚ್ಚಿಸೋಕೆ ಕೊಹ್ಲಿ ಮತ್ತು ಪೂಜಾರ ಪ್ಲ್ಯಾನ್ | Oneindia Kannada
ಸಿಎಸ್‌ಕೆ ಪಾಲಿಗೆ 2020 ಅತಿ ಕೆಟ್ಟ ಆವೃತ್ತಿ

ಸಿಎಸ್‌ಕೆ ಪಾಲಿಗೆ 2020 ಅತಿ ಕೆಟ್ಟ ಆವೃತ್ತಿ

ಇನ್ನು 2020ರ ಐಪಿಎಲ್ ಆವೃತ್ತಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಿಗೆ ಅತ್ಯಂತ ಕೆಟ್ಟ ಆವೃತ್ತಿಯಾಗಿದೆ. ಪ್ರತಿ ಬಾರಿಯೂ ಐಪಿಎಲ್‌ನಲ್ಲಿ ಅಬ್ಬರಿಸುತ್ತಿದ್ದ ತಂಡ ಕಳೆದ ಆವೃತ್ತಿಯಲ್ಲಿ ಸಂಒಪೂರ್ಣವಾಗಿ ಮಂಕಾಗಿತ್ತು. ತಂಡದ ಪ್ರಮುಖ ಆಟಗಾರರು ಸೂಕ್ತ ಸಂದರ್ಭದಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದ್ದರು. ಅನುಭವು ಸುರೇಶ್ ರೈನಾ ಟೂರ್ನಿಯಿಂದ ಅನಿರೀಕ್ಷಿತ ರೀತಿಯಲ್ಲಿ ಹೊರಗುಳಿದಿದ್ದು ಕೂಡ ತಂಡದ ಪ್ರದರ್ಶನದ ಮೇಲೆ ದೊಡ್ಡ ಹಿನ್ನಡೆಯನ್ನುಂಟು ಮಾಡಿತ್ತು. ಸೋಲಿನ ಮೇಲೆ ಸೋಲು ಕಾಣುತ್ತಾ ಸಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಹೀನಾಯ ಪ್ರದರ್ಶನ ನೀಡಿತ್ತು. ಈ ಮೂಲಕ ಪ್ರಪ್ರಥಮ ಬಾರಿಗೆ ಪ್ಲೇಆಫ್ ಹಂತಕ್ಕೂ ಏರದೆ ಲೀಗ್ ಹಂತದಿಂದ ಹೊರಬಿದ್ದಿತ್ತು. ಅಂಕಪಟ್ಟಿಯಲ್ಲಿ 7ನೇ ಸ್ಥಾನಿಯಾಗಿ 2020ರ ಆವೃತ್ತಿಯನ್ನು ಮುಗಿಸಿತ್ತು ಚೆನ್ನೈ ಸೂಪರ್ ಕಿಂಗ್ಸ್. ಆದರೆ ಅದಾಗಿ ಆರು ತಿಂಗಳದಲ್ಲಿ ಆರಂಭವಾದ ಮತ್ತೊಂದು ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅದಕ್ಕೆ ವ್ಯತಿರಿಕ್ತ ಪ್ರದರ್ಶನ ನೀಡಿದ್ದು ಟೂರ್ನಿಯ ಅಗ್ರ ತಂಡಗಳಲ್ಲಿ ಒಂದೆನಿಸಿದೆ.

For Quick Alerts
ALLOW NOTIFICATIONS
For Daily Alerts
Story first published: Friday, August 27, 2021, 18:20 [IST]
Other articles published on Aug 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X