ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗೌತಮ್ ಗಂಭೀರ್ ಕಾಲುಗಳನ್ನ ಮುಟ್ಟಿ ನಮಸ್ಕರಿಸಿದ ಯುವ ಅಭಿಮಾನಿ: ಆಟೋಗ್ರಾಫ್ ನೀಡಿದ ಗಂಭೀರ್

Gautam gambhir

ಕ್ರಿಕೆಟ್ ಅನ್ನು ಭಾರತದಲ್ಲಿ ಧರ್ಮದಂತೆ ಪೂಜಿಸುವವರಿಗೇನು ಕಮ್ಮಿ ಇಲ್ಲ. ಈ ಆಟವನ್ನ ವೀಕ್ಷಿಸಲು ಸಾವಿರಾರು ಜನರು ಕ್ರೀಡಾಂಗಣದಲ್ಲಿ ಸೇರುತ್ತಾರೆ, ಅದೇ ಸಮಯದಲ್ಲಿ ಇಡೀ ದೇಶವು ಟಿವಿ ಪರದೆಯಲ್ಲಿ ಪಂದ್ಯವನ್ನ ವೀಕ್ಷಿಸುತ್ತದೆ. ಅಂತರಾಷ್ಟ್ರೀಯ ಕ್ರಿಕೆಟ್ ಆಗಿರಲಿ ಅಥವಾ ಗತಕಾಲದ ದಿಗ್ಗಜರೊಂದಿಗಿನ ಲೀಗ್ ಆಗಿರಲಿ, ಕ್ರಿಕೆಟ್ ಭಾರತೀಯರ ಹಬ್ಬವಾಗಿದೆ.

ಕಪಿಲ್ ದೇವ್‌ನಿಂದ ಹಿಡಿದು ಸಚಿನ್ ತೆಂಡೂಲ್ಕರ್‌ವರೆಗೆ ಮಾಜಿ ಕ್ರಿಕೆಟಿಗರು ಆಟವನ್ನು ತೊರೆದ ನಂತರವೂ ಅಭಿಮಾನಿಗಳ ಉನ್ಮಾದದಲ್ಲಿ ಯಾವುದೇ ಬದಲಾವಣೆ ಇರಲಿಲ್ಲ. ಇಂಡಿಯಾ ಕ್ಯಾಪಿಟಲ್ಸ್ ವಿರುದ್ಧ ಗುಜರಾತ್ ಜೈಂಟ್ಸ್ ನಡುವಿನ ಲೆಜೆಂಡ್ ಲೀಗ್ ಕ್ರಿಕೆಟ್ ಪಂದ್ಯದಲ್ಲಿ ಇಂತಹ ಒಂದು ಘಟನೆ ನಡೆದಿದೆ. ಅಲ್ಲಿನ ಹದಿಹರೆಯದ ಬಾಲಕನೊಬ್ಬ ಗೌತಮ್ ಗಂಭೀರ್ ಅವರ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿ ಅನೇಕ ಕ್ರಿಕೆಟ್ ಪ್ರೇಮಿಗಳ ಹೃದಯವನ್ನು ಗೆದ್ದಿದ್ದಾರೆ.

ಲೆಜೆಂಡ್ಸ್ ಲೀಗ್ ಕ್ರಿಕೆಟ್ (ಎಲ್‌ಎಲ್‌ಸಿ) ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಗಂಭೀರ್ ಡ್ರೆಸ್ಸಿಂಗ್ ರೂಮ್‌ನತ್ತ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಈ ವೇಳೆಯಲ್ಲಿ ಬಾಲಕನೊಬ್ಬ ಗೌತಮ್‌ ಗಂಭೀರ್‌ಗೆ ಕಾಲು ಮುಟ್ಟಿ ನಮಸ್ಕರಿಸಿದ್ದಾನೆ. ಜೊತೆಗೆ ತಾನು ತಂದಿದ್ದ ಕಾಗದದ ಮೇಲೆ ಗಂಭೀರ್ ಅವರ ಆಟೋಗ್ರಾಫ್‌ ಪಡೆದಿದ್ದಾರೆ. ತನ್ನ ಯುವ ಅಭಿಮಾನಿಗೆ ಆಟೋಗ್ರಾಫ್ ನೀಡಿದ ಖುಷಿಯಲ್ಲಿ ಭಾರತದ ಮಾಜಿ ಆರಂಭಿಕ ಆಟಗಾರ ಅಲ್ಲಿನ ಪೆವಿಲಿಯನ್ ಸೇರಿದ್ದಾರೆ.

ಟಿ20 ವಿಶ್ವಕಪ್‌ ಸಮೀಪಿಸುತ್ತಿದ್ದಂತೆ ಡೆತ್‌ ಓವರ್ ಬೌಲಿಂಗ್‌ ಕುರಿತು ತಲೆಕೆಡಿಸಿಕೊಂಡ ರೋಹಿತ್ ಶರ್ಮಾಟಿ20 ವಿಶ್ವಕಪ್‌ ಸಮೀಪಿಸುತ್ತಿದ್ದಂತೆ ಡೆತ್‌ ಓವರ್ ಬೌಲಿಂಗ್‌ ಕುರಿತು ತಲೆಕೆಡಿಸಿಕೊಂಡ ರೋಹಿತ್ ಶರ್ಮಾ

ಸೋಮವಾರ ಅರುಣ್ ಜೆಲ್ಟಿ ಸ್ಟೇಡಿಯಂನಲ್ಲಿ ಇಂಡಿಯಾ ಕ್ಯಾಪಿಟಲ್ಸ್ ಮತ್ತು ಗುಜರಾತ್ ಜೈಂಟ್ಸ್ ಮುಖಾಮುಖಿಯಾದವು. ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಇಂಡಿಯಾ ಕ್ಯಾಪಿಟಲ್ಸ್ 6 ವಿಕೆಟ್‌ಗಳಿಂದ ಗುಜರಾತ್ ಜೈಂಟ್ಸ್ ತಂಡವನ್ನು ಮಣಿಸಿತು.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳ ಮನ ಗೆದ್ದಿದೆ. 2011ರ ವಿಶ್ವಕಪ್ ವಿಜೇತ ತಂಡದ ಆಟಗಾರನ ನಡತೆ ಕ್ರಿಕೆಟ್ ಪ್ರೇಮಿಗಳನ್ನು ಪುಳಕಿತಗೊಳಿಸಿದೆ. ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ಇಂಡಿಯಾ ಕ್ಯಾಪಿಟಲ್ಸ್ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ನಾಲ್ಕು ಪಂದ್ಯಗಳಲ್ಲಿ ಎರಡರಲ್ಲಿ ಗೆಲುವು ಸಾಧಿಸಿದೆ. ಮತ್ತೊಂದೆಡೆ, ಭಿಲ್ವಾರ ಕಿಂಗ್ಸ್ ನಾಲ್ಕು ಪಂದ್ಯಗಳಲ್ಲಿ ಕೇವಲ ಒಂದು ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

Story first published: Tuesday, September 27, 2022, 19:18 [IST]
Other articles published on Sep 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X