ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮತ್ತೆ ಆರ್‌ಸಿಬಿ ಆಟಗಾರರ ಕಾಲೆಳೆದರು ಟ್ವಿಟ್ಟಿಗರು

ಬೆಂಗಳೂರು, ಏಪ್ರಿಲ್ 18: ಆರ್‌ಸಿಬಿ ಪಂದ್ಯವೆಂದರೆ ಅಭಿಮಾನಿಗಳ ಪಾಲಿಗೆ ಕುತೂಹಲ, ಮನರಂಜನೆಯ ನಿರೀಕ್ಷೆಗಳು ಮಾತ್ರವಲ್ಲ, ಮೀಮ್‌ ಸೃಷ್ಟಿಯ ದೊಡ್ಡ ಮೂಲವೂ ಹೌದು.

ವಾಂಖೇಡೆ ಅಂಗಳದಲ್ಲಿ ಏಕಾಂಗಿಯಾದರು ವಿರಾಟ್ ಕೊಹ್ಲಿ ವಾಂಖೇಡೆ ಅಂಗಳದಲ್ಲಿ ಏಕಾಂಗಿಯಾದರು ವಿರಾಟ್ ಕೊಹ್ಲಿ

ಆರ್‌ಸಿಬಿಯನ್ನು ಬೆಂಬಲಿಸುವ ಮತ್ತು ತಮಾಷೆ ಮಾಡುವ ಮೀಮ್‌ಗಳು ಬೇರಾವ ತಂಡದ ಕುರಿತೂ ಸೃಷ್ಟಿಯಾಗುವುದಿಲ್ಲ. ಮಂಗಳವಾರ ನಡೆದ ಪಂದ್ಯದ ನಂತರವೂ ಇಂತಹ ಸಾಕಷ್ಟು ಮೀಮ್‌ಗಳು ತಯಾರಾಗಿವೆ. ಜತೆಗೆ ಟ್ವಿಟ್ಟರ್‌ನಲ್ಲಿ ಎಂದಿನಂತೆ ಆರ್‌ಸಿಬಿ ಆಟಗಾರರು ಮತ್ತು ಅಭಿಮಾನಿಗಳ ಕಾಲೆಳೆಯುವ ಪೋಸ್ಟ್‌ಗಳು ಹರಿಬಿಡುತ್ತಿದ್ದಾರೆ.

ಈ ಸಲ ಕಪ್‌ ಸಿಗುತ್ತಾ?
ಮುಂಬೈ ಇಂಡಿಯನ್ಸ್ ವಿರುದ್ಧ ಸೋತರೂ ಆರ್‌ಸಿಬಿ ಅಭಿಮಾನಿಗಳು, ಸೋಲಲಿ, ಗೆಲ್ಲಲಿ ಆರ್‌ಸಿಬಿಯನ್ನು ಕೈಬಿಡುವುದಿಲ್ಲ ಎನ್ನುತ್ತಿದ್ದಾರೆ. ಇನ್ನೂ ಕೆಲವು ಪಂದ್ಯಗಳಿವೆ. ಆರ್‌ಸಿಬಿ ಮತ್ತೆ ಗೆಲುವಿನ ಹಾದಿಗೆ ಮರಳುತ್ತದೆ ಎಂಬ ಭರವಸೆ ವ್ಯಕ್ತಪಡಿಸುತ್ತಿದ್ದಾರೆ.

ಅಂಪೈರ್ ವಿರುದ್ಧ ಆಕ್ರೋಶ

ಹಾರ್ದಿಕ್ ಪಾಂಡ್ಯ ಔಟ್ ಎಂದು ಘೋಷಿಸಿದ್ದ ಅಂಪೈರ್, ಮೂರನೇ ಅಂಪೈರ್ ಅಭಿಪ್ರಾಯ ಕೇಳಿದ ಬಳಿಕ ತಮ್ಮ ತೀರ್ಪನ್ನು ವಾಪಸ್ ಪಡೆದುಕೊಂಡಿದ್ದರು. ಚೆಂಡು ಪಾಂಡ್ಯ ಬ್ಯಾಟ್‌ಗೆ ಸವರಿಕೊಂಡು ಹೋಗಿದ್ದು ಸ್ನಿಕ್ಕೊ ಮೀಟರ್‌ನಲ್ಲಿ ಸ್ಪಷ್ಟವಾಗಿ ಗೋಚರಿಸಿತ್ತು. ಅಂಪೈರ್ ತೀರ್ಪಿನ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರ್‌ಸಿಬಿಗೆ ಕೃಣಾಲ್ ಪಾಂಡ್ಯ ಏಟು!

ಆರ್‌ಸಿಬಿಯ ಮಧ್ಯಮ ಕ್ರಮಾಂಕದ ಪ್ರಮುಖ ಮೂರು ವಿಕೆಟ್‌ಗಳನ್ನು ತೆಗೆದ ಕೃಣಾಲ್ ಪಾಂಡ್ಯ, ರನ್ ಗತಿಗೂ ಕಡಿವಾಣ ಹಾಕಿದ್ದರು. ಆರ್‌ಸಿಬಿ ವಿರುದ್ಧ ಕೃಣಾಲ್ ಆಡಿದ ಬಗೆ ಹೇಗಿದೆ ನೋಡಿ!

ಕೊಹ್ಲಿ, ಧೋನಿ ಆಗಲಾರರು

ಕೊಹ್ಲಿ ಎಂದಿಗೂ ಧೋನಿಯಾಗಲಾರರು. ಆಶೀಶ್ ನೆಹ್ರಾ ಸಲಹೆ ಕೇಳಿದರೆ ಇಡೀ ಐಪಿಎಲ್ ಆವೃತ್ತಿಯಲ್ಲಿ ಇದನ್ನೇ ಅನುಣವಿಸಬೇಕಾಗುತ್ತದೆ ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ.

ಕೊಹ್ಲಿ ಬೇರೆ ತಂಡಕ್ಕೆ ಹೋಗಲಿ

ಮುಂದಿನ ಐಪಿಎಲ್ ವೇಳೆ ಕೊಹ್ಲಿ ಆರ್‌ಸಿಬಿ ಬಿಟ್ಟು ಹರಾಜಿಗೆ ಒಡ್ಡಿಕೊಳ್ಳಲಿ. ಅವರನ್ನು ಕೊಳ್ಳುವ ಯಾವ ತಂಡವಾದರೂ ಗೆಲ್ಲುತ್ತದೆ. ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಸ್ಕೋರರ್ ಎನಿಸಿದರೂ, ಅವರು ಸೋಲುವುದನ್ನು ನೋಡಿ ಸಾಕಾಗಿದೆ ಎಂದು ಅನೇಕರು ಟ್ವೀಟ್ ಮಾಡಿದ್ದಾರೆ.

ಶರ್ಮಾಗೆ ತಕ್ಕ ಪಿಚ್

ರೋಹಿತ್ ಶರ್ಮಾ ಮಿಂಚಬೇಕೆಂದರೆ ಅದಕ್ಕೆ ಮೂರು ಅಂಶಗಳು ಬೇಕು. ಒಂದು ಫ್ಲಾಟ್ ಪಿಚ್, ಮಧ್ಯಮ ವೇಗದ ಬೌಲರ್ ಮತ್ತೊಂದು ಯಾರಾದರೂ ಆಟಗಾರ ರನ್‌ಔಟ್ ಆಗಿ ತನ್ನ ವಿಕೆಟ್ ತ್ಯಾಗ ಮಾಡಬೇಕು.

ಕೊಹ್ಲಿಗೆ ಮೆಚ್ಚುಗೆ

ಏಕಾಂಗಿಯಾಗಿ ಹೋರಾಟ ನಡೆಸಿ ಪ್ರತಿರೋಧ ತೋರಿದ ನಾಯಕ ವಿರಾಟ್ ಕೊಹ್ಲಿ ಆಟಕ್ಕೆ ಕ್ರಿಕೆಟ್ ಅಭಿಮಾನಿಗಳೆಲ್ಲ ಮತ್ತೆ ಫಿದಾ ಆಗಿದ್ದಾರೆ. ಕೊಹ್ಲಿಯ ಸಾಮರ್ಥ್ಯಕ್ಕೆ ಈ ತಂಡ ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇನ್ನಾದರೂ ಕನ್ನಡಿಗರಿಗೆ ಅವಕಾಶ ಕೊಡಿ

ಕಳೆದ ಬಾರಿ ಉತ್ತಮ ಪ್ರದರ್ಶನ ನೀಡಿದ್ದರೂ ಕನ್ನಡಿಗ ಕೆ.ಎಲ್. ರಾಹುಲ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲು ಆರ್‌ಸಿಬಿ ಪ್ರಯತ್ನಿಸಿರಲಿಲ್ಲ. ಅದರ ವಿರುದ್ಧ ಈಗಲೂ ಟೀಕೆಗಳು ವ್ಯಕ್ತವಾಗುತ್ತಿದೆ.

ರಣಜಿಯಲ್ಲಿ ಗುರುತಿಸಿಕೊಂಡಿರುವ ಇನ್ನೂ ಮೂವರು ಆಟಗಾರರು ಆರ್‌ಸಿಬಿ ತಂಡದಲ್ಲಿ ಇದ್ದಾರೆ. ಆದರೆ, ಅವರಿಗೆ ಅವಕಾಶ ನೀಡುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಟೂರ್ನಿ ಮುಗಿಯೋಷ್ಟರಲ್ಲಿ ಅವರನ್ನು ಆಡಿಸಿ ಎಂದು ನಿರ್ದೇಶಕ ಸಿಂಪಲ್ ಸುನಿ ಟ್ವೀಟ್ ಮಾಡಿದ್ದಾರೆ.

ಇಶಾನ್‌ ಕಿಶಾನ್‌ಗೆ ಗಾಯ

ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ಎಸೆದ ಚೆಂಡು ಅನಿರೀಕ್ಷಿತವಾಗಿ ಪುಟಿದಿದ್ದರಿಂದ ವಿಕೆಟ್ ಕೀಪರ್ ಇಶಾನ್ ಕಿಶಾನ್‌ಗೆ ಅದನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಚೆಂಡು ಬಲಗಣ್ಣಿನ ಸಮೀಪ ಬಡಿದಿದ್ದರಿಂದ ಇಶಾನ್‌ಗೆ ಗಾಯ ಉಂಟಾಯಿತು. ಕೆಲ ಸಮಯ ಚಿಕಿತ್ಸೆ ನೀಡಿ ಬಳಿಕ ಅವರನ್ನು ಮೈದಾನದಿಂದ ಹೊರಕ್ಕೆ ಕರೆದೊಯ್ಯಲಾಯಿತು.

ಭರವಸೆಯ ಆಟಗಾರ ಇಶಾನ್ ಬೇಗ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.

Story first published: Wednesday, April 18, 2018, 11:48 [IST]
Other articles published on Apr 18, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X