ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

FIFA World cup 2022: ಫ್ರಾನ್ಸ್‌ಗೆ ಆಘಾತ, ಸ್ಟ್ರೈಕರ್ ಕರೀಮ್ ಬೆಂಜೆಮಾ ಟೂರ್ನಿಯಿಂದ ಔಟ್

Karim Benzema

ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್‌ 2022ರ ಚಾಲನೆಗೆ ಕ್ಷಣಗಣನೆ ಶುರುವಾಗಿದ್ದು, ಟೂರ್ನಿ ಆರಂಭಕ್ಕೂ ಮುನ್ನವೇ ಬಲಿಷ್ಟ ಫ್ರಾನ್ಸ್ ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಪ್ರಮುಖ ಸ್ಟ್ರೈಕರ್ ಕರೀಮ್ ಬೆಂಜೆಮಾ ಇಂಜ್ಯುರಿಯಿಂದಾಗಿ ವಿಶ್ವಕಪ್‌ನಿಂದ ಹೊರಬಿದ್ದಿದ್ದಾರೆ.

ಹಾಲಿ ಚಾಂಪಿಯನ್ ಫ್ರಾನ್ಸ್ ತಂಡದ ಪ್ರಮುಖ ಆಟಗಾರ ಹೊರಬಿದ್ದಿರುವುದು ತಂಡದ ಚಿಂತೆಯನ್ನ ಹೆಚ್ಚಿಸಿದೆ. ತೊಡೆಯ ಗಾಯದಿಂದಾಗಿ ಬೆಂಜೆಮಾ ಇಡೀ ವಿಶ್ವಕಪ್‌ಗೆ ಅಲಭ್ಯರಾಗಿದ್ದಾರೆ.

2022ರ ಬಾಲನ್ ಡಿ ಓರ್ ಪ್ರಶಸ್ತಿ ವಿಜೇತ ಕರೀಮ್ ಬೆಂಜೆಮಾ ಅಭ್ಯಾಸ ವೇಳೆಯಲ್ಲಿ ಇಂಜ್ಯುರಿಗೆ ತುತ್ತಾಗಿದ್ದಾರೆ. ಪರಿಣಾಮ ತಕ್ಷಣವೇ ತನ್ನ ಅಭ್ಯಾಸವನ್ನು ಮೊಟಕುಗೊಳಿಸಿದ್ದಾರೆ. ವರದಿಗಳ ಪ್ರಕಾರ ವಿಶ್ವಕಪ್‌ನಲ್ಲಿ ಆತ ಭಾಗಿಯಾಗುವುದು ಬಹುತೇಕ ಅನುಮಾನಗೊಂಡಿದೆ.

FIFA World cup 2022: ಇಂದು ಫುಟ್ಬಾಲ್ ವಿಶ್ವಕಪ್‌ಗೆ ವಿದ್ಯುಕ್ತ ಚಾಲನೆ, ಪಂದ್ಯದ ಸಮಯ, ನೇರಪ್ರಸಾರ, ಸ್ಕ್ವಾಡ್ ಮಾಹಿತಿFIFA World cup 2022: ಇಂದು ಫುಟ್ಬಾಲ್ ವಿಶ್ವಕಪ್‌ಗೆ ವಿದ್ಯುಕ್ತ ಚಾಲನೆ, ಪಂದ್ಯದ ಸಮಯ, ನೇರಪ್ರಸಾರ, ಸ್ಕ್ವಾಡ್ ಮಾಹಿತಿ

ಫ್ರಾನ್ಸ್ ಫುಟ್ಬಾಲ್ ಫೆಡರೇಶನ್ ಈ ಕುರಿತಾಗಿ ಟ್ವೀಟ್ ಮಾಡಿದ್ದು, ಬೆಂಜೆಮಾ ಈ ಬಾರಿಯ ವಿಶ್ವಕಪ್‌ನಲ್ಲಿ ಭಾಗಿಯಾಗುತ್ತಿಲ್ಲ ಎಂಬುದನ್ನು ಖಚಿತಪಡಿಸಿದೆ. ರಿಯಲ್ ಮ್ಯಾಡ್ರಿಡ್ ಸ್ಟ್ರೈಕರ್‌ ತೊಡೆಯಲ್ಲಿ ಗಾಯವಾಗಿದ್ದು, ಎಂಆರ್‌ಐ ಸ್ಕ್ಯಾನ್‌ನಲ್ಲಿ ಗಾಯವಾಗಿರುವುದು ದೃಢಪಟ್ಟಿದೆ. ಬೆಂಜೆಮಾ ಈ ಗಾಯದಿಂದ ಚೇತರಿಸಿಕೊಳ್ಳಲು ಕನಿಷ್ಠ ಮೂರು ವಾರಗಳ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಫ್ರಾನ್ಸ್ ಫುಟ್ಬಾಲ್ ಫೆಡರೇಶನ್ ತಿಳಿಸಿದೆ.

"ಅವರು ದೋಹಾದ ಆಸ್ಪತ್ರೆಯಲ್ಲಿ MRI ಸ್ಕ್ಯಾನ್‌ಗಾಗಿ ತೆರಳಿದ್ದರು. ದುರದೃಷ್ಟವಶಾತ್ ತೊಡೆಯಲ್ಲಿನ ಗಾಯವು ದೃಢಪಟ್ಟಿದ್ದು, ಮೂರು ವಾರಗಳ ಚೇತರಿಕೆಯ ಅವಧಿಯ ಅಗತ್ಯವಿರುತ್ತದೆ.'' ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈಗಾಗಲೇ ಫ್ರಾನ್ಸ್ ತಂಡಕ್ಕೆ ಗಾಯಗೊಂಡವರ ಸಂಖ್ಯೆ ಹೆಚ್ಚಿದ್ದು, ಪೌಲ್ ಪೊಗ್ಬ, ಎನ್‌ ಗೋಲ್ ಕಂಟೆ ವಿಶ್ವಕಪ್‌ನಲ್ಲಿ ಭಾಗವಹಿಸುತ್ತಿಲ್ಲ. ಪ್ರೆಸ್ನೆಲ್ ಕಿಂಬೆಂಬೆ ಫಿಟ್ನೆಸ್ ಸಾಭೀತುಪಡಿಸುವಲ್ಲಿ ವಿಫಲರಾಗಿದ್ದಾರೆ. ಇದೀಗ ಕರೀಮ್ ಬೆಂಜೆಮಾ ಕೂಡ ವಿಶ್ವಕಪ್‌ನಿಂದ ಹೊರಬಿದ್ದಿರುವುದು ತಂಡಕ್ಕೆ ಭಾರೀ ಆಘಾತ ನೀಡಿದೆ.

ಇಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಆತಿಥೇಯ ಕತಾರ್ ಮತ್ತು ಈಕ್ವೆಡಾರ್ ಮುಖಾಮುಖಿಯಾಗಲಿವೆ. ಭಾರತೀಯ ಕಾಲಮಾನ ರಾತ್ರಿ 7.30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ 9.30ಕ್ಕೆ ಪಂದ್ಯ ಆರಂಭಗೊಳ್ಳಲಿದೆ.

ಇತ್ತೀಚೆಗಷ್ಟೇ ಬಾಲನ್ ಡಿ ಓರ್ ಪ್ರಶಸ್ತಿ ಗೆದ್ದಿದ್ದ ಬೆಂಜೆಮಾ
ರಿಯಲ್ ಮ್ಯಾಡ್ರಿಡ್‌ನ ಗೋಲು ಮಶೀನ್ ಕರೀಮ್ ಬೆಂಜೆಮಾ ಇತ್ತೀಚೆಗಷ್ಟೇ ವೃತ್ತಿಜೀವನದಲ್ಲಿ ಮೊದಲ ಬಾರಿಗೆ, 34 ನೇ ವಯಸ್ಸಿನಲ್ಲಿ, ಫುಟ್ಬಾಲ್‌ನ ಅತ್ಯುನ್ನತ ಪ್ರಶಸ್ತಿ ಬಾಲನ್ ಡಿ ಓರ್ ಗೆದ್ದಿದ್ದರು.

ಸೆನೆಗಲ್‌ನ ಬೇಯರ್ನ್ ಮ್ಯೂನಿಚ್ ಸೂಪರ್‌ಸ್ಟಾರ್ ಸ್ಯಾಡಿಯೊ ಮಾನೆ, ಬೆಲ್ಜಿಯಂನ ಮ್ಯಾಂಚೆಸ್ಟರ್ ಸಿಟಿ ಮಿಡ್‌ಫೀಲ್ಡ್ ಮಾಸ್ಟರ್ ಕೆವಿನ್ ಡಿ ಬ್ರೂಯ್ನೆ ಮತ್ತು ಪೋಲೆಂಡ್‌ನ ಬಾರ್ಸಿಲೋನಾ ಸ್ಟಾರ್ ಸ್ಟ್ರೈಕರ್ ರಾಬರ್ಟ್ ಲೆವಾಂಡೋಸ್ಕಿ ಅವರನ್ನು ಸೋಲಿಸಿದ ನಂತರ ಬೆಂಜೆಮಾ ಬ್ಯಾಲನ್ ಡಿ'ಓರ್ ಪ್ರಶಸ್ತಿ ಪಡೆದರು. ಜಿನೆಡಿನ್ ಜಿಡಾನೆ 1998 ರಲ್ಲಿ ಪ್ರಶಸ್ತಿ ಗೆದ್ದ ಬಳಿಕ ಈ ಸಾಧನೆ ಮಾಡಿದ ಮೊದಲ ಆಟಗಾರರಾಗಿದ್ದಾರೆ.

Story first published: Sunday, November 20, 2022, 16:11 [IST]
Other articles published on Nov 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X