ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆರ್ ಸಿಬಿ ಸೋಲಿಗೆ ಕಾರಣವಾದ 5 ಪ್ರಮುಖ ಕಾರಣಗಳು

ಗಾಯಾಳುಗಳ ಸಮಸ್ಯೆಯನ್ನು ಎದುರಿಸುತ್ತಿರುವ ಆರ್ ಸಿಬಿಗೆ ಈ ಸೋಲು ಸಹಜವೆನಿಸುತ್ತದೆ. ಅದಲ್ಲದೆ, ಕೇವಲ ಬ್ಯಾಟಿಂಗ್ ಲೈನ್ ಅಪ್ ಮೇಲೆಯೇ ಅವಲಂಬಿತವಾಗಿರುವ ಆರ್ ಸಿಬಿ, ಎಂದಿನಂತೆ ಈ ಬಾರಿಯೂ ಬೌಲಿಂಗ್ ವಿಭಾಗದಲ್ಲಿ ದೌರ್ಬಲ್ಯ ಅನುಭವಿಸುತ್ತಿರುವುದು

ಹೈದರಾಬಾದ್, ಏಪ್ರಿಲ್ 6: ಕಳೆದ ಬಾರಿಯ ಐಪಿಎಲ್ ನಲ್ಲಿ ಪ್ರಶಸ್ತಿ ಗೆಲ್ಲುವ ಹೊಸ್ತಿಲಲ್ಲೇ ಎಡವಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡ ಈ ಬಾರಿಯಾದರೂ ಕಪ್ ಗೆಲ್ಲುತ್ತಾ ಎಂದು ಕಾದು ಕುಳಿತಿರುವ ಆ ತಂಡದ ಅಭಿಮಾನಿಗಳಿಗೆ ಮೊದಲ ಪಂದ್ಯದಲ್ಲೇ ನಿರಾಸೆ ಆವರಿಸಿದೆ.

ಬುಧವಾರ (ಏಪ್ರಿಲ್ 5) ರಾತ್ರಿ, ಹೈದರಾಬಾದ್ ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಈ ಬಾರಿಯ ಐಪಿಎಲ್ ನ ಉದ್ಘಾಟನಾ ಪಂದ್ಯದಲ್ಲಿ ಕಳೆದ ಬಾರಿಯ ಐಪಿಎಲ್ ನ ರನ್ನರ್ ಅಪ್ ತಂಡವಾದ ಆರ್ ಸಿಬಿ, ಹಾಲಿ ಚಾಂಪಿಯನ್ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 35 ರನ್ ಅಂತರದಲ್ಲಿ ಸೋಲು ಕಂಡಿದೆ.[ಐಪಿಎಲ್ 10 : ಬೆಂಗಳೂರು ವಿರುದ್ಧ ಹೈದರಾಬಾದಿಗೆ 35 ರನ್ ಗಳ ಜಯ]

ಗಾಯಾಳುಗಳ ಸಮಸ್ಯೆಯನ್ನು ಎದುರಿಸುತ್ತಿರುವ ಆರ್ ಸಿಬಿಗೆ ಈ ಸೋಲು ಸಹಜವೆನಿಸುತ್ತದೆ. ಏಕೆಂದರೆ, ತಂಡದ ನಾಯಕ ಹಾಗೂ ಆಕ್ರಮಣಕಾರಿ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್ ಜತೆಗೆ ಕಳೆದ ಐಪಿಎಲ್ ನಲ್ಲಿ ತಂಡದ ಪರವಾಗಿ ಗಮನಾರ್ಹ ಪ್ರದರ್ಶನ ನೀಡಿದ್ದ ಸರ್ಫರಾಜ್ ಖಾನ್, ಬುಧವಾರ ನಡೆದ ಆರ್ ಸಿಬಿ ಪಂದ್ಯದಲ್ಲಿ ಆಡಿರಲಿಲ್ಲ.[ಐಪಿಎಲ್ 10 : ಎಲ್ಲೆಲ್ಲಿ ನೋಡಬಹುದು? ಯಾವ ವೆಬ್ ಸೈಟಿನಲ್ಲಿ ಬರುತ್ತೆ?]

ಹಾಗಾಗಿ, ಮೇಲ್ನೋಟಕ್ಕೆ ಇಡೀ ತಂಡಕ್ಕೆ ಕ್ರಿಸ್ ಗೇಲ್ ಹಾಗೂ ವಾಟ್ಸನ್ ಮಾತ್ರವೇ ಭರವಸೆಯ ಆಟಗಾರರಾಗಿದ್ದರು. ಮತ್ಯಾರಾದರೂ ಕೊಂಚ ಉತ್ತಮವಾಗಿ ಆಡಿದರೆ ಅದು ಬೋಸನ್ ಎನ್ನುವಂತಾಗಿತ್ತು. ತಂಡದ ಸೋಲಿಗೆ ಐದು ಪ್ರಮುಖ ಕಾರಣಗಳು ಹೀಗಿವೆ.[ಹರಾಜು ನಂತರ ವಿರಾಟ್ ಕೊಹ್ಲಿ ಆರ್ ಸಿಬಿ ಪಡೆ ಹೀಗಿದೆ]

 ಆದರೆ, ಪಂದ್ಯದ ಲೆಕ್ಕಾಚಾರ ತಲೆಕೆಳಗಾಯಿತು

ಆದರೆ, ಪಂದ್ಯದ ಲೆಕ್ಕಾಚಾರ ತಲೆಕೆಳಗಾಯಿತು

ರಾಯಲ್ ಚಾಲೆಂಜರ್ಸ್ ವಿರುದ್ಧದ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಹೈದರಾಬಾದ್ ತಂಡದ ತಂಡದ ಯುವರಾಜ್ ಸಿಂಗ್.

ಕ್ರಿಸ್ ಗೇಲ್ ಆರಂಭಿಕರಾಗಿ ಕಣಕ್ಕಿಳಿದರೆ, ವಾಟ್ಸನ್ ಮಧ್ಯಮ ಕ್ರಮಾಂಕದಲ್ಲಿ ಮಿಂಚುತ್ತಾರೆಂಬ ಭರವಸೆಯಿತ್ತು. ಇವರೊಂದಿಗೆ, ಸಚಿನ್ ಬೇಬಿ, ಸ್ಟುವರ್ಟ್ ಬಿನ್ನಿ, ಕೇದಾರ್ ಜಾಧವ್ ಕೊಂಚ ಬ್ಯಾಟ್ ಬೀಸಿದರೆ ಬ್ಯಾಟಿಂಗ್ ಲೈನ್ ಅಪ್ ಸದೃಢವಾಗುತ್ತದೆಂಬ ವಿಶ್ವಾಸವನ್ನೂ ಇಡಲಾಗಿತ್ತು.

ಆದರೆ, ಪಂದ್ಯ ಶುರುವಾಗುತ್ತಲೇ ಈ ಎಲ್ಲಾ ಲೆಕ್ಕಾಚಾರಗಳೂ ತಲೆಕೆಳಗಾಗದಿದ್ದರೂ ಏರು ಪೇರಾದವು. ಇದಕ್ಕೆ ಮುಖ್ಯವಾದ ಕಾರಣ, ಬೌಲಿಂಗ್ ವಿಭಾಗ ಹಾಗೂ ಫೀಲ್ಡಿಂಗ್ ನಲ್ಲಿ ವೈಫಲ್ಯ.

 ಬೌಲಿಂಗ್, ಫೀಲ್ಡಿಂಗ್ ವೈಫಲ್ಯ ಮುಳುವಾಯ್ತು

ಬೌಲಿಂಗ್, ಫೀಲ್ಡಿಂಗ್ ವೈಫಲ್ಯ ಮುಳುವಾಯ್ತು

ಬೆಂಗಳೂರು ತಂಡದ ವಿರುದ್ಧ ಅರ್ಧಶತಕ ಸಿಡಿಸಿದ ಹೆನ್ರಿಕ್ಸ್


ಯಾವ ಪಂದ್ಯವೇ ಆಗಿರಲಿ, ಟಾಸ್ ಗೆದ್ದು ಮೊದಲು ಎದುರಾಳಿ ತಂಡವನ್ನು ಬ್ಯಾಟಿಂಗ್ ಇಳಿಸಿದಾಗ ಮೈಯ್ಯೆಲ್ಲಾ ಕಣ್ಣಾಗಿರಬೇಕು. ವಿರೋಧಿ ತಂಡದ ಬ್ಯಾಟ್ಸ್ ಮನ್್ ಗಳನ್ನು ಗಟ್ಟಿಯಾಗಿ ಕ್ರೀಸ್ ನಲ್ಲಿ ತಳವೂರಲು ಬಿಡಕೂಡದು. ಇದು ಬೌಲಿಂಗ್ ವಿಭಾಗದ ಆದ್ಯ ಕರ್ತವ್ಯ.

ಇನ್ನು, ಚುರುಕಾದ ಫೀಲ್ಡಿಂಗ್ ನ ಮೂಲಕ ಎದುರಾಳಿ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕುವತ್ತ ಗಮನ ಹರಿಸಬೇಕು. ಬುಧವಾರದ ಪಂದ್ಯದಲ್ಲಿ ಆರ್ ಸಿಬಿ, ಮೊದಲು ಈ ಎರಡೂ ವಿಭಾಗಗಳಲ್ಲಿ ಎಡವಿದ್ದೇ ಸೋಲಿಗೆ ಪ್ರಮುಖ ಕಾರಣವಾಯಿತು.

 ಹೆನ್ರಿಕ್ಸ್, ಯುವಿಯನ್ನು ಆಡಲು ಬಿಟ್ಟಿದ್ದು ಮಹಾ ತಪ್ಪು

ಹೆನ್ರಿಕ್ಸ್, ಯುವಿಯನ್ನು ಆಡಲು ಬಿಟ್ಟಿದ್ದು ಮಹಾ ತಪ್ಪು

ಭರ್ಜರಿ ಹೊಡೆತವೊಂದಕ್ಕೆ ಕೈ ಹಾಕಿರುವ ಸನ್ ರೈಸರ್ಸ್ ತಂಡದ ಆರಂಭಿಕ ಆಟಗಾರ ಶಿಖರ್ ಧವನ್

ಬೌಲರ್ ಗಳು ಆರಂಭಿಕ ಹಂತದಲ್ಲಿ ಹೈದರಾಬಾದ್ ತಂಡದ ಎರಡು ವಿಕೆಟ್ ಗಳನ್ನು (ಡೇವಿಡ್ ವಾರ್ನರ್, ಶಿಖರ್ ಧವನ್) ಚಕಚಕನೇ ಉರುಳಿಸಿದಷ್ಟು ಚುರುಕಿನ ಬೌಲಿಂಗ್ ಅನ್ನು ಆನಂತರ ಪ್ರದರ್ಶಿಸಲಿಲ್ಲ.

ಅದರಲ್ಲೂ ಆ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳಾದ ಹೆನ್ರಿಕ್ಸ್ ಹಾಗೂ ಯುವರಾಜ್ ಸಿಂಗ್ ಅವರನ್ನು ಕ್ರೀಸ್ ನಲ್ಲಿ ಗಟ್ಟಿಯಾಗಿ ತಳವೂರಲು ಬಿಟ್ಟಿದ್ದು ಮಹಾ ತಪ್ಪಾಗಿ ಪರಿಣಮಿಸಿತು.

 ವ್ಯಾಟ್ಸನ್ ಸಿಡಿಯಲಿಲ್ಲ

ವ್ಯಾಟ್ಸನ್ ಸಿಡಿಯಲಿಲ್ಲ

ಆರ್ ಸಿಬಿ ತಂಡದ ಪ್ರಮುಖ ಬ್ಯಾಟ್ಸ್ ಮನ್ ಹಾಗೂ ಆರಂಭಿಕ ಕ್ರಿಸ್ ಗೇಲ್ ಅವರ ಆಕರ್ಷಕ ಬ್ಯಾಟಿಂಗ್ಇನ್ನು, ಬ್ಯಾಟಿಂಗ್

ಇನ್ನು, ವಿಚಾರಕ್ಕೆ ಬರುವುದಾದರೆ, ಗೇಲ್ ಅವರಿಂದ ಹೊಮ್ಮಬೇಕಿದ್ದ ಸ್ಫೋಟಕ ಆಟ ಹೊರಹೊಮ್ಮಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಹೊಡೆತಗಳ ಮೂಲಕ ಕೇದಾರ್ ಜಾಧವ್ ಕೊಂಚ ಭರವಸೆ ಮೂಡಿಸಿದ್ದರೂ ಉತ್ತಮವಾಗಿ ಅವರು ಇನಿಂಗ್ಸ್ ಕಟ್ಟುತ್ತಿದ್ದಾಗಲೇ ರನೌಟ್ ಆಗಿದ್ದು (12ನೇ ಓವರ್ ನಲ್ಲಿ) ತಂಡಕ್ಕೆ ದುಬಾರಿಯಾಗಿ ಪರಿಣಮಿಸಿತು.

ಅದಕ್ಕಿಂತಲೂ ದೊಡ್ಡ ಶೋಚನೀಯವೆಂದರೆ, ಮಧ್ಯಮ ಕ್ರಮಾಂಕದಲ್ಲಿ ವ್ಯಾಟ್ಸನ್ ಸಿಡಿಯದೇ ಇದ್ದದ್ದು ಹಾಗೂ ಕೆಳ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ಸಂಪೂರ್ಣ ವೈಫಲ್ಯಕ್ಕೊಳಗಾಗಿ ಎದುರಾಳಿಗಳ ಬೌಲಿಂಗ್ ದಾಳಿಗೆ ತರಗೆಲೆಗಳಂತೆ ಉದುರಿ ಹೋಗಿದ್ದು.

 ಬ್ಯಾಟಿಂಗ್ ಜತೆ ಬೌಲಿಂಗ್, ಫೀಲ್ಡಿಂಗ್ ಚೆನ್ನಾಗಿರಬೇಕು

ಬ್ಯಾಟಿಂಗ್ ಜತೆ ಬೌಲಿಂಗ್, ಫೀಲ್ಡಿಂಗ್ ಚೆನ್ನಾಗಿರಬೇಕು

ಬೆಂಗಳೂರು ತಂಡದ ಇನಿಂಗ್ಸ್ ನಲ್ಲಿ ಆರ್ಭಟಿಸಿದ ಮಧ್ಯಮ ಕ್ರಮಾಂಕದ ಆಟಗಾರ ಕೇದಾರ್ ಜಾಧವ್

ಒಟ್ಟಾರೆಯಾಗಿ ಹೇಳಬೇಕೆಂದರೆ, ತಂಡದ ಒಟ್ಟಾರೆ ಪರ್ಫಾಮೆನ್ಸ್ ಕಳಪೆಯಾಗಿತ್ತು. ಹೀಗಾಗಿಯೇ ಆರ್ ಸಿಬಿ ತಂಡವು ಪಂದ್ಯದಲ್ಲಿ ಸೋಲು ಕಾಣಬೇಕಾಯಿತು.
ಪಂದ್ಯ ಮುಗಿದ ಮೇಲೆ ಎಲ್ಲರಿಗೂ ಅನ್ನಿಸಿದ್ದು ಏನೆಂದರೆ, ವಿರಾಟ್ ಕೊಹ್ಲಿ, ಎಬಿಡಿ ಇದ್ದಿದ್ದರೆ ಪಂದ್ಯದ ಕತೆಯೇ ಬೇರೆಯೇ ಆಗಿರುತ್ತಿತ್ತು ಎಂಬುದು. ಆದರೆ, ಒಂದು ಮಾತು ನೆನಪಿರಲಿ, ಕೇವಲ ಬ್ಯಾಟ್ಸ್ ಮನ್ ಗಳಷ್ಟೇ ಪಂದ್ಯವನ್ನು ಗೆಲ್ಲಿಸಲಾಗುವುದಿಲ್ಲ. ಬೌಲಿಂಗ್ ಹಾಗೂ ಫೀಲ್ಡಿಂಗ್ ಕೂಡಾ ಅತ್ಯುತ್ತಮವಾಗಿರಬೇಕು. ಇದು ಈಗಾಗಲೇ ಕಳೆದ ಐಪಿಎಲ್ ನಲ್ಲೇ ಆರ್ ಸಿಬಿ ಪಾಲಿಗೆ ಪ್ರೂವ್ ಆಗಿದೆ. ಈ ಬಾರಿಯೂ ಬೌಲಿಂಗ್ ನಲ್ಲಿ ಎಡವುವ ಮೂಲಕ ತಂಡವು ಮತ್ತದೇ ತಪ್ಪನ್ನು ಮುಂದುವರಿಸಲು ಹೊರಟಿದೆ.

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X