For Quick Alerts
ALLOW NOTIFICATIONS  
For Daily Alerts
 

ಯುಎಇಗೆ ಐಪಿಎಲ್ ಸ್ಥಳಾಂತರಿಸಿದ್ದಕ್ಕೆ ಅಸಲಿ ಕಾರಣ ಹೇಳಿದ ಬಿಸಿಸಿಐ

For this IPL 2021 was moved outside India: Jay Shah explained reason

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ 2021ರ ಆವೃತ್ತಿಯ ಇನ್ನುಳಿದ ಪಂದ್ಯಗಳು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿದೆ ಎಂದು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಖಾತರಿಪಡಿಸಿದೆ. ಬಿಸಿಸಿಐ ಸಭೆಯ ಬಳಿಕ ಶನಿವಾರ ಈ ನಿರ್ಧಾರ ಅಧಿಕೃತವಾಗಿ ಪ್ರಕಟವಾಯಿತು.

ಕಳೆದ ವರ್ಷ ಅಂದರೆ 2020ರ ಐಪಿಎಲ್ ಸೀಸನ್ ಕೂಡ ಯುಎಇಯಲ್ಲಿ ಯಶಸ್ವಿಯಾಗಿ ನೆರವೇರಿತ್ತು. ಈ ಬಾರಿಯ ಐಪಿಎಲ್ ಅನ್ನು ಭಾರತದಲ್ಲಿ ಆರಂಭಿಸಲಾಗಿತ್ತಾದರೂ ಕೋವಿಡ್-19 ಪ್ರಕರಣಗಳು ಐಪಿಎಲ್ ಬಯೋ ಬಬಲ್ ಒಳಗೆ ಕಾಣಲಾರಂಭಿಸಿದ್ದರಿಂದ ಐಪಿಎಲ್ ಯುಎಇಗೆ ಸ್ಥಳಾಂತರವಾಗಿದೆ. ಆದರೆ ಪಂದ್ಯಗಳ ಆರಂಭದ ದಿನಾಂಕ ಇನ್ನೂ ಅಧಿಕೃತವಾಗಿ ಘೋಷಿಸಲ್ಪಟ್ಟಿಲ್ಲ.

ಈ ಬಾರಿಯ ಐಪಿಎಲ್ ಯುಎಇಗೆ ಸ್ಥಳಾಂತರಿಸುವ ನಿರ್ಧಾರ ತಾಳಿದ್ದೇಕೆ ಅನ್ನೋದನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ. ಐಪಿಎಲ್ ಮುಂದುವರೆಯಲಿರುವ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಭಾರತದಲ್ಲಿ ಮಳೆಯಾದಂತಹ ಉದಾಹರಣೆಗಳಿವೆ. ಹೀಗಾಗಿಯೇ ಯುಎಇಯಲ್ಲಿ ಪಂದ್ಯಗಳನ್ನು ನಡೆಸಲು ನಿರ್ಧರಿಸಿದೆವು ಎಂದು ಶಾ ತಿಳಿಸಿದ್ದಾರೆ.

'ನಾವು ಯುಎಇಯಲ್ಲಿ ಐಪಿಎಲ್ ನಡೆಸಲು ನಿರ್ಧರಿಸಿದೆವು ಯಾಕೆಂದರೆ, ಆ ವೇಳೆ ಭಾರತದಲ್ಲಿ ಮಾನ್ಸೂನ್ ಇರುತ್ತದೆ. ಹೀಗಾಗಿ ಸೆಪ್ಟೆಂಬರ್‌ನಲ್ಲಿ ಆ ವೇಳೆ ಪಂದ್ಯಗಳನ್ನು ಹಿಡಿದಿಟ್ಟುಕೊಳ್ಳಲಾಗದು. ಇದೇ ಕಾರಣಕ್ಕೆ ನಾವು ಐಪಿಎಲ್ ಅನ್ನು ಯುಎಇಗೆ ಸ್ಥಳಾಂತರಿಸಿದೆವು,' ಎಂದು ಶಾ ವಿವರಿಸಿದರು. ಐಪಿಎಲ್ 2021ರಲ್ಲಿ 29 ಪಂದ್ಯಗಳು ನಡೆದಿದ್ದು, 31 ಪಂದ್ಯಗಳು ಬಾಕಿ ಉಳಿದಿವೆ.

Story first published: Saturday, May 29, 2021, 22:00 [IST]
Other articles published on May 29, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+