ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2020ರ ಐಪಿಎಲ್‌ನಲ್ಲಿ ವಿದೇಶಿ ಆಟಗಾರರು ಆಡೋದು ಅನುಮಾನ!

Foreign players IPL participation in doubt after fresh visa restrictions

ಮುಂಬೈ, ಮಾರ್ಚ್ 12: ಕೊರೊನಾ ವೈರಸ್‌ನಿಂದಾಗಿ ಕ್ರೀಡಾ ರಂಗವೂ ಸಮಸ್ಯೆಗೀಡಾಗಿದೆ. ಸಾಂಕ್ರಾಮಿಕ ಸೋಂಕಿನ ಕಾರಣ ಅನೇಕ ಕ್ರೀಡಾಕೂಟಗಳು ರದ್ದಾಗುತ್ತಿವೆ, ಮುಂದೂಡಲ್ಪಡುತ್ತಿವೆ. ಕೆಲವೆಡೆ ಪಂದ್ಯಗಳು ನಡೆದರೂ ಪ್ರೇಕ್ಷಕರಿಲ್ಲದೆ ಸ್ಟೇಡಿಯಂ ಬಿಕೋ ಎನ್ನುತ್ತಿದೆ. ಹಲವೆಡೆ ಪ್ರೇಕ್ಷಕರಿಗೆ ಸ್ಟೇಡಿಯಂನ ಬಾಗಿಲೇ ತೆರೆಯದೆ ಪ್ರಮುಖ ಟೂರ್ನಿಗಳನ್ನು ನಡೆಸಲಾಗುತ್ತಿದೆ. ಭಾರತದ ಅದ್ದೂರಿ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್‌ಗೂ ಕೊರೊನಾ ವೈರಸ್ ಕಂಟಕ ಎದುರಾಗಿದೆ.

ಖಾಲಿ ಮೈದಾನದಲ್ಲಿ ಭಾರತ vs ದಕ್ಷಿಣ ಆಫ್ರಿಕಾ ಮೊದಲ ಏಕದಿನ ಪಂದ್ಯ!ಖಾಲಿ ಮೈದಾನದಲ್ಲಿ ಭಾರತ vs ದಕ್ಷಿಣ ಆಫ್ರಿಕಾ ಮೊದಲ ಏಕದಿನ ಪಂದ್ಯ!

ಮಹಾರಾಷ್ಟ್ರದಲ್ಲಿ ಈ ಬಾರಿಯ ಐಪಿಎಲ್ ಟಿಕೆಟ್ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಐಪಿಎಲ್ ಪಂದ್ಯಗಳನ್ನು ನಡೆಸಕೂಡದು ಎಂದು ಕರ್ನಾಟಕ ಕೂಡ ಬಿಸಿಸಿಐ ಮೊರೆ ಹೋಗಿದೆ. ಐಪಿಎಲ್ ಪಂದ್ಯವನ್ನು ರದ್ದು ಮಾಡಬೇಕು ಎಂದು ಹೈ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ಪಠಾಣ್ ಸ್ಫೋಟಕ ಬ್ಯಾಟಿಂಗ್: ಶ್ರೀಲಂಕಾ ವಿರುದ್ಧ ಇಂಡಿಯಾಕ್ಕೆ ರೋಚಕ ಜಯ!ಪಠಾಣ್ ಸ್ಫೋಟಕ ಬ್ಯಾಟಿಂಗ್: ಶ್ರೀಲಂಕಾ ವಿರುದ್ಧ ಇಂಡಿಯಾಕ್ಕೆ ರೋಚಕ ಜಯ!

ಇಷ್ಟೆಲ್ಲ ತಾಪತ್ರಯದ ನಡುವೆಯೂ ಐಪಿಎಲ್ ನಡೆಯುತ್ತೆ, ಅಭಿಮಾನಿಗಳು ಪಂದ್ಯ ವೀಕ್ಷಿಸಬಹುದು ಎಂದುಕೊಂಡರೆ, ಈ ಬಾರಿ ವಿದೇಶಿ ಆಟಗಾರರು ಪಾಲ್ಗೊಳ್ಳೋದೇ ಅನುಮಾನ ಎಂಬಂತಾಗಿದೆ.

ಟಿಕೆಟ್ ಮಾರಾಟಕ್ಕೆ ನಿಷೇಧ

ಟಿಕೆಟ್ ಮಾರಾಟಕ್ಕೆ ನಿಷೇಧ

ಮಹಾರಾಷ್ಟ್ರ ರಾಜ್ಯ ಕ್ಯಾಬಿನೆಟ್ ಮಾರ್ಚ್ 12ರ ಬುಧವಾರ ಸಭೆ ನಡೆಸಿ, ಐಪಿಎಲ್ 13ನೇ ಆವೃತ್ತಿಯ ಪಂದ್ಯಗಳ ಟಿಕೆಟ್ ಮಾರಾಟವನ್ನು ನಿಷೇಧಿಸಲು ಕರೆ ನೀಡಿದೆ. ಕೊರೊನಾ ವೈರಸ್‌ಗೆ ಮುನ್ನೆಚ್ಚರಿಕೆಯಾಗಿ ಒಂದೆಡೆ ಜನ ಸೇರುವುದನ್ನು ತಪ್ಪಿಸಲು ಈ ನಿರ್ಧಾರ ತಾಳಲಾಗಿದೆ ಎಂದು ಮಹಾರಾಷ್ಟ್ರ ಹೇಳಿದೆ.

ಐಪಿಎಲ್ ಮುಂದೂಡುವ ಸಾಧ್ಯತೆ

ಐಪಿಎಲ್ ಮುಂದೂಡುವ ಸಾಧ್ಯತೆ

ಕೊರೊನಾ ವೈರಸ್ ಬೇರೆ ಬೇರೆ ರೀತಿಯಲ್ಲಿ ನಷ್ಟವನ್ನುಂಟು ಮಾಡುತ್ತಿರುವುದರಿಂದ ಐಪಿಎಲ್ ಪಂದ್ಯಾವಳಿ ನಿಗದಿತ ದಿನಾಂಕದಂದು ಆರಂಭವಾಗುವ ಸಾಧ್ಯತೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ ಎಂದು ಮೂಲಗಳು ಹೇಳುತ್ತಿವೆ. ಪಂದ್ಯಾವಳಿ ನಡೆದರೂ ಪಂದ್ಯಗಳ ಸಂಖ್ಯೆ ಕಡಿಮೆಯಾಗುವ ಸಂಭವವೂ ಇದೆ. ಒಟ್ಟಿನಲ್ಲಿ ಮಾರ್ಚ್ ಕೊನೆಯಲ್ಲಿ ಈ ಬಗ್ಗೆ ಸ್ಪಷ್ಟ ಚಿತ್ರಣ ಲಭಿಸಲಿದೆ.

ವಿದೇಶಿಗರು ಆಡೋದು ಅನುಮಾನ

ವಿದೇಶಿಗರು ಆಡೋದು ಅನುಮಾನ

ಐಪಿಎಲ್ ಟೂರ್ನಿ ಮಾರ್ಚ್ 29ರಂದು ಆರಂಭಗೊಳ್ಳಲಿದೆಯಾದರೂ ಏಪ್ರಿಲ್ 15ರ ವರೆಗೂ ವಿದೇಶಿ ಕ್ರಿಕೆಟಿಗರು ಐಪಿಎಲ್ ಟೂರ್ನಿಗೆ ಲಭ್ಯರಿರುವುದಿಲ್ಲ ಎಂಬ ಮಾಹಿತಿ ಲಭಿಸಿದೆ. ಕೊರೊನಾ ವೈರಸ್ ಹಬ್ಬುವುದನ್ನು ತಪ್ಪಿಸಲು ಸರ್ಕಾರ ವೀಸಾದ ಮೇಲೆ ನರ್ಬಂಧ ಹೇರಿರುವುದರಿಂದ ವಿದೇಶಿ ಆಟಗಾರರು ಈ ಬಾರಿ ಆಡೋದೇ ಅನುಮಾನವೆಂಬಂತಾಗಿದೆ.

ಹೈಕೋರ್ಟ್‌ನಲ್ಲಿ ಅರ್ಜಿ

ಹೈಕೋರ್ಟ್‌ನಲ್ಲಿ ಅರ್ಜಿ

ಮಾರಕ ಸೋಂಕು ಕೊರೊನಾ ವೈರಸ್ ಹಬ್ಬುವುದನ್ನು ತಪ್ಪಿಸಲು ಐಪಿಎಲ್ ಟೂರ್ನಿ ನಡೆಯದಂತೆ ತಡೆಯಬೇಕು ಎಂದು ಮದ್ರಾಸ್ ಹೈ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕೂಡ ಸಲ್ಲಿಸಲಾಗಿದೆ. ಒಟ್ಟಿನಲ್ಲಿ ಮಾರ್ಚ್ 29ರಿಂದ ಮೇ 24ರ ವರೆಗೆ ನಡೆಸಲುದ್ದೇಶಿಸಿರುವ ಟೂರ್ನಿಗೆ ಎಲ್ಲಾ ಕಡೆಯಿಂದಲೂ ಸಮಸ್ಯೆ ಎದುರಾಗಿದೆ.

Story first published: Thursday, March 12, 2020, 11:45 [IST]
Other articles published on Mar 12, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X