'ಸಚಿನ್ ಬುದ್ಧಿವಂತ, ಸೆಹ್ವಾಗ್ ಹುಚ್ಚ'; ಮಾಜಿ ಆರಂಭಿಕ ಜೋಡಿಗಳ ಬಗ್ಗೆ ಗಂಗೂಲಿ ಹೀಗಂದಿದ್ದೇಕೆ?

ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಅವರು ಭಾರತೀಯ ಕ್ರಿಕೆಟ್ ತಂಡದ ನಾಯಕರಾದ ನಂತರ ಭಾರತ ತಂಡ ಉತ್ತುಂಗ ಸ್ಥಾನಕ್ಕೇರಿತು ಮತ್ತು ವಿಶ್ವದ ಬಲಿಷ್ಠ ತಂಡ ಎನಿಸಿಕೊಳ್ಳುವ ಮಟ್ಟಿಗೆ ಬೆಳಿಸಿದರು. ದೈತ್ಯ ತಂಡಗಳೆದುರು ನಡುಗುತ್ತಿದ್ದ ಭಾರತೀಯ ಆಟಗಾರರಲ್ಲಿ ಕೆಚ್ಚೆದೆಯ ಹೋರಾಟದ ಮನೋಭಾವ ತುಂಬಿದವರು ಸೌರವ್ ಗಂಗೂಲಿ ಎಂದರೆ ತಪ್ಪಾಗಲ್ಲ.

ಭಾರತ ತಂಡದ ಮಾಜಿ ನಾಯಕ ತಮ್ಮ ಕ್ರಿಕೆಟ್ ವೃತ್ತಿಜೀವನಕ್ಕೆ ಗುಡ್‌ಬೈ ಹೇಳಿದ ನಂತರ ಕ್ರಿಕೆಟ್ ಆಡಳಿತದಲ್ಲಿ ತೊಡಗಿಸಿಕೊಂಡರು. ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷರಾಗಿಯೂ ಸೌರವ್ ಗಂಗೂಲಿ ಕಾರ್ಯನಿರ್ವಹಿಸಿದ್ದಾರೆ.

ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಹೊರಬಿದ್ದ ಭಾರತಕ್ಕೆ ಸಿಗುವ ಬಹುಮಾನದ ಮೊತ್ತವೆಷ್ಟು?ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಹೊರಬಿದ್ದ ಭಾರತಕ್ಕೆ ಸಿಗುವ ಬಹುಮಾನದ ಮೊತ್ತವೆಷ್ಟು?

ಇದೀಗ ಮಾಜಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ತಮ್ಮ ಹಿಂದಿನ ಕ್ರಿಕೆಟ್ ದಿನಗಳನ್ನು ಮೆಲುಕು ಹಾಕಿದ್ದಾರೆ. ತಮ್ಮ ಸಹ ಆಟಗಾರರ ಬಗ್ಗೆ ಮತ್ತು ಅವರೊಂದಿಗಿನ ಒಡನಾಟದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ವೀರೇಂದ್ರ ಸೆಹ್ವಾಗ್ ಅತ್ಯಂತ ಬುದ್ಧಿವಂತ ಹುಚ್ಚರಾಗಿದ್ದರು

ವೀರೇಂದ್ರ ಸೆಹ್ವಾಗ್ ಅತ್ಯಂತ ಬುದ್ಧಿವಂತ ಹುಚ್ಚರಾಗಿದ್ದರು

ವಿಶ್ವ ಕ್ರಿಕೆಟ್‌ನ ದಾಖಲೆಗಳ ಸರದಾರ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಆಡಿದ ಅತ್ಯಂತ ಬುದ್ಧಿವಂತ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಎಂದು ಹೇಳಿದ್ದಾರೆ. ಇದೇ ವೇಳೆ ಶ್ರೀಲಂಕಾ ತಂಡದ ಮಾಜಿ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅವರು ವಯಸ್ಸಾದಾಗ ತಮಗೆ ಬ್ಯಾಟಿಂಗ್ ಆಡಲು ಕಷ್ಟವಾಗಿದ್ದರು ಎಂದು ಸೌರವ್ ಗಂಗೂಲಿ ತಿಳಿಸಿದ್ದಾರೆ.

ಕ್ರೆಡೈನ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿದ ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್ ಅವರೊಂದಿಗೆ ಬ್ಯಾಟಿಂಗ್ ತೆರೆಯುವುದನ್ನು ಹೆಚ್ಚು ಆನಂದಿಸುತ್ತಿದ್ದೆ, ಏಕೆಂದರೆ ಅವರು ವಿವೇಕಯುತ ಆಟಗಾರನಾಗಿದ್ದರೆಂದು ಹೇಳಿದರು.

"ಸಚಿನ್ ತೆಂಡೂಲ್ಕರ್ ಅತ್ಯಂತ ಬುದ್ಧಿವಂತರಾಗಿದ್ದರು ಮತ್ತು ವೀರೇಂದ್ರ ಸೆಹ್ವಾಗ್ ಅತ್ಯಂತ ಬುದ್ಧಿವಂತ ಹುಚ್ಚರಾಗಿದ್ದರು. ಸಚಿನ್ ತೆಂಡೂಲ್ಕರ್ ನನ್ನನ್ನು ಉತ್ತಮ ಕ್ರಿಕೆಟಿಗನನ್ನಾಗಿ ಮಾಡಿದರು ಮತ್ತು ನನ್ನ ಆಟವನ್ನು ಉತ್ತಗೊಳಿಸಿದವರಲ್ಲಿ ಒಬ್ಬರು," ಎಂದು ಸೌರವ್ ಗಂಗೂಲಿ ಬಹಿರಂಗಪಡಿಸಿದರು.

ಪಕ್ಕೆಲುಬಿಗೆ ಬಾಲ್‌ನ ಹೊಡೆತ ಬಿದ್ದರೂ ಬ್ಯಾಟ್ ಬೀಸಿದ ಸಚಿನ್

ಪಕ್ಕೆಲುಬಿಗೆ ಬಾಲ್‌ನ ಹೊಡೆತ ಬಿದ್ದರೂ ಬ್ಯಾಟ್ ಬೀಸಿದ ಸಚಿನ್

ಸಚಿನ್ ಯಾವಾಗಲೂ ವಿಶೇಷ ಆಟಗಾರನಾಗಿದ್ದರು, ಏಕೆಂದರೆ ಒಮ್ಮೆ ಅವರ ಪಕ್ಕೆಲುಬಿಗೆ ಬಾಲ್‌ನ ಹೊಡೆತ ಬಿದ್ದಿತ್ತು. ಆದರೂ ಏನೂ ಆಗಿಲ್ಲವೆಂಬಂತೆ ಬ್ಯಾಟಿಂಗ್ ಮುಂದುವರೆಸಿ ರನ್ ಗಳಿಸಿದರು ಎಂದು ಮಾಜಿ ಬಿಸಿಸಿಐ ಮುಖ್ಯಸ್ಥ ನೆನಪಿಸಿಕೊಂಡರು.

"ಸಚಿನ್ ಅವರ ಪಕ್ಕೆಲುಬಿಗೆ ಹೊಡೆತ ಬಿದ್ದಾಗ ನಾನೂ ಕೂಡ ಕ್ರೀಸ್‌ನಲ್ಲಿದ್ದೆ. ಆದರೂ ಅವರು ಸ್ವಲ್ಪವೂ ಶಬ್ದ ಮಾಡದೆ ರನ್ ಗಳಿಸಿದರು. ನಾನು ಆಗ ಅವರ ಬಳಿ ಹೋಗಿ ವಿಚಾರಿಸಿದೆ, ತನಗೇನೂ ಆಗಿಲ್ಲವೆಂದರು. ಆದರೆ ಮರುದಿನ ಬೆಳಗ್ಗೆ ನೋಡಿದಾಗ ಅವರ ಪಕ್ಕೆಲುಬಿನಲ್ಲಿ ಮುರಿತ ಕಂಡುಬಂದಿತ್ತು, ಹಾಗಾಗಿ ಅವರು ವಿಶೇಷರಾಗಿದ್ದರು," ಎಂದು ಸೌರವ್ ಗಂಗೂಲಿ ಹಳೆಯ ದಿನಗಳನ್ನು ಮೆಲುಕು ಹಾಕಿದರು.

ಇನ್ನು ಶ್ರೀಲಂಕಾದ ಲೆಜೆಂಡ್ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅವರು ತಾವು ಬ್ಯಾಟಿಂಗ್ ಮಾಡುವಾಗ ಹೆಚ್ಚು ತೊಂದರೆ ನೀಡಿದವರು ಎಂದು ಸೌರವ್ ಗಂಗೂಲಿ ತಿಳಿಸಿದರು. ಮುರಳೀಧರನ್ ವಯಸ್ಸಾದಂತೆ ಬ್ಯಾಟ್ಸ್‌ಮನ್‌ಗಳಿಗೆ ಕಾಟ ನೀಡುತ್ತಿದ್ದರು ಎಂದರು.

ತಮ್ಮ ನಾಯಕತ್ವದ ತಂತ್ರಗಳ ಬಗ್ಗೆ ಮಾತನಾಡಿದ ಸೌರವ್ ಗಂಗೂಲಿ

ತಮ್ಮ ನಾಯಕತ್ವದ ತಂತ್ರಗಳ ಬಗ್ಗೆ ಮಾತನಾಡಿದ ಸೌರವ್ ಗಂಗೂಲಿ

ಇದೇ ವೇಳೆ ತಮ್ಮ ನಾಯಕತ್ವದ ತಂತ್ರಗಳ ಬಗ್ಗೆ ಮಾತನಾಡಿದ ಗಂಗೂಲಿ, "ಇತರರ ಮಾತು ಕೇಳುವುದು ಮುಖ್ಯ, ಕೇವಲ ತನ್ನ ವಿಧಾನವನ್ನು ಹೇರುವುದು ತಪ್ಪು. ಆಟಗಾರರು ತಮ್ಮ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ವಾತಾವರಣವನ್ನು ಸೃಷ್ಟಿಸಬೇಕು," ಎಂದು ತಿಳಿಸಿದರು.

"2001ರ ಕೋಲ್ಕತ್ತಾ ಟೆಸ್ಟ್ ಪಂದ್ಯ ಮತ್ತು ನ್ಯಾಟ್‌ವೆಸ್ಟ್ ಕಪ್ ಫೈನಲ್‌ನಲ್ಲಿನ ಗೆಲುವು ಭಾರತ ತಂಡವನ್ನು ವಿಶ್ವ ಕ್ರಿಕೆಟ್ ನೋಡುವ ದೃಷ್ಟಿಯನ್ನು ಬದಲಾಯಿಸಿತು. ಇದು ತಂಡದ ಮೇಲಿನ ನಂಬಿಕೆಯನ್ನು ಬಲಪಡಿಸಿತು," ಎಂದು ಮಾಜಿ ಎಡಗೈ ಬ್ಯಾಟ್ಸ್‌ಮನ್ ಸೌರವ್ ಗಂಗೂಲಿ ನೆನೆದರು.

For Quick Alerts
ALLOW NOTIFICATIONS
For Daily Alerts
Story first published: Saturday, November 12, 2022, 14:11 [IST]
Other articles published on Nov 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X