ಈ ಇಬ್ಬರನ್ನು ಆಯ್ಕೆ ಮಾಡಬೇಕಿತ್ತು: ಟಿ20 ವಿಶ್ವಕಪ್ ಭಾರತ ತಂಡವನ್ನು ಟೀಕಿಸಿದ ಮಾಜಿ ಕ್ರಿಕೆಟಿಗ

ಮುಂದಿನ ತಿಂಗಳು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ 2022ರಲ್ಲಿ ರೋಹಿತ್ ಶರ್ಮಾ ಅವರು ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಅಕ್ಟೋಬರ್‌ನಲ್ಲಿ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (ಎಂಸಿಜಿ) ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ತನ್ನ ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸಲಿದೆ.

ಅಕ್ಟೋಬರ್- ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ 2022ಗಾಗಿ ಬಿಸಿಸಿಐ ಆಯ್ಕೆ ಸಮಿತಿ ಭಾರತ ತಂಡವನ್ನು ಪ್ರಕಟಿಸಿದರು. ಆರ್‌ಸಿಬಿ ಆಟಗಾರರಾದ ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್ ಮತ್ತು ಹರ್ಷಲ್ ಪಟೇಲ್ ಕೂಡ ಇರುವ ತಂಡದಿಂದ ಅಭಿಮಾನಿಗಳು ಸಾಕಷ್ಟು ಖುಷಿಯಾಗಿದ್ದಾರೆ.

ಟಿ20 ವಿಶ್ವಕಪ್‌ಗಾಗಿ ಬಲಿಷ್ಠ ತಂಡವನ್ನು ಪ್ರಕಟಿಸಿದ ಪಾಕಿಸ್ತಾನ; ಮೀಸಲು ಪಟ್ಟಿಯಲ್ಲಿ ಸ್ಟಾರ್ ಬ್ಯಾಟರ್ಟಿ20 ವಿಶ್ವಕಪ್‌ಗಾಗಿ ಬಲಿಷ್ಠ ತಂಡವನ್ನು ಪ್ರಕಟಿಸಿದ ಪಾಕಿಸ್ತಾನ; ಮೀಸಲು ಪಟ್ಟಿಯಲ್ಲಿ ಸ್ಟಾರ್ ಬ್ಯಾಟರ್

ಆದರೆ 2 ಹೆಸರು ಇಲ್ಲದಿರುವುದು ಭಾರತೀಯ ಅಭಿಮಾನಿಗಳ ಮನಗೆದ್ದಿಲ್ಲ. ಅವರ ಹೆಸರೆಂದರೆ ಮೊಹಮ್ಮದ್ ಶಮಿ ಮತ್ತು ಸಂಜು ಸ್ಯಾಮ್ಸನ್. ಭಾರತೀಯ ಪುರುಷರ ಕ್ರಿಕೆಟ್ ತಂಡದೊಂದಿಗೆ ಆಸ್ಟ್ರೇಲಿಯಾಕ್ಕೆ ಹಾರುವ ವಿಮಾನದಲ್ಲಿ ಮೊಹಮ್ಮದ್ ಶಮಿ ಇರಬೇಕು ಎಂದು ಕ್ರಿಕೆಟ್ ತಜ್ಞರು ಸಹ ಭಾವಿಸುತ್ತಾರೆ. ಸ್ಟ್ಯಾಂಡ್‌ಬೈ ಲಿಸ್ಟ್‌ನಲ್ಲಿ ಸ್ಯಾಮ್ಸನ್ ಇಲ್ಲ ಮತ್ತು ತಂಡದಲ್ಲಿ ಶ್ರೇಯಸ್ ಅಯ್ಯರ್ ಕೂಡ ಇಲ್ಲ ಎಂಬುದು ಮರೆಯುವಂತಿಲ್ಲ.

ಸ್ಯಾಮ್ಸನ್, ಶಮಿ ಆಯ್ಕೆ ಮಾಡಬೇಕಿತ್ತು

ಸ್ಯಾಮ್ಸನ್, ಶಮಿ ಆಯ್ಕೆ ಮಾಡಬೇಕಿತ್ತು

ಭಾರತದ ಮಾಜಿ ಆಟಗಾರ ಚಂದು ಬೋರ್ಡೆ ಅವರು ಸಂಜು ಸ್ಯಾಮ್ಸನ್ ಮತ್ತು ಮೊಹಮ್ಮದ್ ಶಮಿ ಅವರನ್ನು ಆಯ್ಕೆ ಮಾಡದ ನಿರ್ಧಾರವನ್ನು ಟೀಕಿಸಿದ್ದಾರೆ. ಶಮಿ ಅವರನ್ನು ಆಯ್ಕೆ ಮಾಡದಿರುವುದು ಆಶ್ಚರ್ಯ ತಂದಿದೆ ಮತ್ತು ಸ್ಯಾಮ್ಸನ್ ಇದ್ದರೆ ತಂಡಕ್ಕೆ ಸಾಕಷ್ಟು ಲಾಭವಾಗಬಹುದು ಎಂದು ಚಂದು ಬೋರ್ಡೆ ಹೇಳಿದರು.

"ಸರಿ, ತಂಡವನ್ನು ಘೋಷಿಸಲಾಯಿತು ಮತ್ತು ಹೆಚ್ಚಿನ ಆಟಗಾರರು ಮೊದಲಿನಂತೆಯೇ ಇದ್ದರು. ಆದರೆ ನನಗೆ ಆಶ್ಚರ್ಯವೆಂದರೆ ಮೊಹಮ್ಮದ್ ಶಮಿಯನ್ನು ಹೊರಗಿಟ್ಟಿರುವುದು. ಆಸ್ಟ್ರೇಲಿಯಾದಲ್ಲಿ ವಿಶ್ವಕಪ್ ಅನ್ನು ಪರಿಗಣಿಸಿ, ಮೊಹಮ್ಮದ್ ಶಮಿ ಅವರ ವೇಗ ಮತ್ತು ಸ್ವಿಂಗ್‌ನಿಂದ ಮಾರಕವಾಗಬಹುದು. ಅವರನ್ನು ಆಯ್ಕೆ ಮಾಡಿದ್ದರೆ ತಂಡಕ್ಕೆ ಸಾಕಷ್ಟು ಪ್ರಯೋಜನವಾಗುತ್ತಿತ್ತು," ಎಂದು ಭಾರತದ ಮಾಜಿ ಆಲ್‌ರೌಂಡರ್ ಚಂದು ಬೋರ್ಡೆ ತಿಳಿಸಿದರು.

ಪಂತ್ ಮತ್ತು ಕಾರ್ತಿಕ್ ಭಾರತ ತಂಡದ ಭಾಗವಾಗಿದ್ದಾರೆ

ಪಂತ್ ಮತ್ತು ಕಾರ್ತಿಕ್ ಭಾರತ ತಂಡದ ಭಾಗವಾಗಿದ್ದಾರೆ

"ಟಿ20 ವಿಶ್ವಕಪ್‌ಗೆ ಸಂಜು ಸ್ಯಾಮ್ಸನ್ ಕೂಡ ಆಯ್ಕೆಯಾಗಬೇಕಿತ್ತು. ಅವರು ಶ್ರೇಷ್ಠ ಬ್ಯಾಟ್ಸ್‌ಮನ್ ಮತ್ತು ಅವರಿಂದ ತಂಡಕ್ಕೆ ಸಾಕಷ್ಟು ಪ್ರಯೋಜನವಾಗಬಹುದಿತ್ತು," ಎಂದು ಬೋರ್ಡೆ ಅಭಿಪ್ರಾಯಪಟ್ಟರು.

ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದ ಇಬ್ಬರು ವಿಕೆಟ್ ಕೀಪರ್‌ಗಳೆಂದರೆ ದಿನೇಶ್ ಕಾರ್ತಿಕ್ ಮತ್ತು ರಿಷಭ್ ಪಂತ್. ಐಪಿಎಲ್ ನಂತರ ಕಳೆದೆರಡು ಸರಣಿಗಳಲ್ಲಿ ಪಂತ್ ಮತ್ತು ಕಾರ್ತಿಕ್ ಭಾರತ ತಂಡದ ಭಾಗವಾಗಿದ್ದಾರೆ ಮತ್ತು ಆಯ್ಕೆದಾರರು ಅವರೊಂದಿಗೆ ಹೋಗಿರುವುದು ತಾರ್ಕಿಕವಾಗಿದೆ. ವಿಶ್ವಕಪ್‌ಗೆ ಮೊದಲು ಸಂಜು ಆಡುವ ಹನ್ನೊಂದರ ಬಳಗದಲ್ಲಿ ಹೆಚ್ಚು ರನ್ ಗಳಿಸಬೇಕಾಗಿತ್ತು. ಆದರೆ ಆಯ್ಕೆಗಾರರು ಈ ಬಾರಿ ಕೆಲಸವನ್ನು ಮಾಡಲು ದಿನೇಶ್ ಕಾರ್ತಿಕ್ ಮತ್ತು ರಿಷಭ್ ಪಂತ್ ಅವರನ್ನು ನಂಬಿದ್ದಾರೆ. ವಿಶ್ವಕಪ್‌ನಲ್ಲಿ ಅವರು ಹೇಗೆ ಆಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಟಿ20 ವಿಶ್ವಕಪ್‌ಗಾಗಿ ಭಾರತ ತಂಡ ಪ್ರಕಟ

ಟಿ20 ವಿಶ್ವಕಪ್‌ಗಾಗಿ ಭಾರತ ತಂಡ ಪ್ರಕಟ

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಶ್‌ದೀಪ್ ಸಿಂಗ್.

ಸ್ಟ್ಯಾಂಡ್‌ಬೈ ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹಾರ್

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, September 15, 2022, 20:49 [IST]
Other articles published on Sep 15, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X