ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜಾತಿ ನಿಂದನೆ ವಿವಾದ: ಭಾವನಾತ್ಮಕ ಸಂದೇಶದ ಮೂಲಕ ಯುವಿ ಸ್ಪಷ್ಟನೆ

Former India cricketer Yuvraj Singh issues apology for Yuzvendra Chahal remark

ಬೆಂಗಳೂರು: 'ಜಾತೀವಾದಿ' ವಿವಾದಕ್ಕೆ ಸಂಬಂಧಿಸಿ ಭಾರತದ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ಯಾವುದೇ ರೀತಿಯ ಅಸಮಾನತೆಯ ಮೇಲೆ ನನಗೆ ಯಾವತ್ತಿಗೂ ನಂಬಿಕೆಯಿಲ್ಲ ಎಂದು ಸಿಕ್ಸರ್ ಕಿಂಗ್ ಯುವಿ ಹೇಳಿದ್ದಾರೆ. ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಜೊತೆ ವೀಡಿಯೋ ಚಾಟಿಂಗ್‌ನಲ್ಲಿ ತೊಡಗಿದ್ದಾಗ ಈ ವಿವಾದ ಸೃಷ್ಟಿಯಾಗಿತ್ತು. ಚಾಟ್‌ ವೇಳೆ ಭಾರತದ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಾಹಲ್‌ಗೆ ಯುವರಾಜ್ ಬಳಸಿದ ಪದ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು.

ಟಿ20 ವಿಶ್ವಕಪ್ ಆಯೋಜನಾ ಸಮಯದ ಬಗ್ಗೆ ವಾಸಿಮ್ ಅಕ್ರಮ್ ಪ್ರತಿಕ್ರಿಯೆಟಿ20 ವಿಶ್ವಕಪ್ ಆಯೋಜನಾ ಸಮಯದ ಬಗ್ಗೆ ವಾಸಿಮ್ ಅಕ್ರಮ್ ಪ್ರತಿಕ್ರಿಯೆ

ರೋಹಿತ್ ಶರ್ಮಾ, ಯುವರಾಜ್ ಸಿಂಗ್ ಮಾತನಾಡಿದ್ದ ಈ ಇನ್‌ಸ್ಟಾಗ್ರಾಮ್ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತಲ್ಲದೆ, ಯುವಿ ವಿರುದ್ಧ ಜಾತಿ ನಿಂದನೆಯ ದೂರು ಕೂಡ ದಾಖಲಾಗಿತ್ತು. ವಿವಾದಕ್ಕೆ ಸಂಬಂಧಿಸಿ ಯುವರಾಜ್ ಈಗ ಸ್ಪಷ್ಟನೆ ನೀಡಿದ್ದಾರೆ.

ಆಸೀಸ್-ಭಾರತ ಸೇರಿಸಿ ಫಿಂಚ್ ಪ್ರಕಟಿಸಿದ ತಂಡದಲ್ಲಿ ಸಚಿನ್, ರೋಹಿತ್ ಇಲ್ಲ!ಆಸೀಸ್-ಭಾರತ ಸೇರಿಸಿ ಫಿಂಚ್ ಪ್ರಕಟಿಸಿದ ತಂಡದಲ್ಲಿ ಸಚಿನ್, ರೋಹಿತ್ ಇಲ್ಲ!

ಶುಕ್ರವಾರ (ಜೂನ್ 5) ಟ್ವೀಟ್ ಮಾಡಿರುವ ಯುವಿ, ನಡೆದ ವಿವಾದಕ್ಕೆ ಕ್ಷಮೆಕೋರಿದ್ದಾರೆ. ವಿವಾದಕ್ಕೆ ಸಂಬಂಧಿಸಿ ಸಂಪೂರ್ಣ ವಿವರ, ಯುವಿ ಮಾಡಿರುವ ಟ್ವೀಟ್ ಇಲ್ಲಿದೆ.

ಏನೀ ವಿವಾದ?

ಏನೀ ವಿವಾದ?

ರೋಹಿತ್ ಶರ್ಮಾ ಜೊತೆ ಇನ್‌ಸ್ಟಾಗ್ರಾಮ್ ಲೈವ್ ಸಂವಾದಲ್ಲಿ ಪಾಲ್ಗೊಂಡಿದ್ದ ಯುವರಾಜ್, ಯಜುವೇಂದ್ರ ಚಾಹಲ್ ಹಾಗೂ ಕುಲದೀಪ್ ಯಾದವ್ ಅವರನ್ನು 'ಭಂಗಿ' ಎಂದು ಕರೆದಿದ್ದರು. ಯುವಿ ಬಳಸಿದ ಈ ಪದಕ್ಕೆ ದಲಿತ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಹರ್ಯಾಣದ ಕೆಲ ಸಂಘಟನೆಗಳು ಯುವಿ ಹೇಳಿಕೆಯನ್ನು ಖಂಡಿಸಿದ್ದಲ್ಲದೆ, ಹರ್ಯಾಣ ಪೊಲೀಸರಿಗೆ ದೂರು ನೀಡಿತ್ತು.

ಯುವರಾಜ್ ಸ್ಪಷ್ಟನೆ

ಯುವರಾಜ್ ಸ್ಪಷ್ಟನೆ

ಟ್ವೀಟ್‌ನಲ್ಲಿ ಯುವಿ, 'ಈ ಮೂಲಕ ಸ್ಪಷ್ಟನೆ ನೀಡುವುದೇನಂದರೆ, ನನಗೆ ಜಾತಿ, ಬಣ್ಣ, ಧರ್ಮ ಅಥವಾ ಲಿಂಗ ಇಂಥ ಯಾವುದೇ ರೀತಿಯ ಅಸಮಾನತೆಯ ಬಗ್ಗೆ ನಂಬಿಕೆಯಿಲ್ಲ. ಜನ ಕಲ್ಯಾಣವನ್ನು ನಾನು ಪಾಲಿಸಿಕೊಂಡು ಬಂದಿದ್ದೇನೆ ಇನ್ನೂ ಮುಂದುವರೆಸುತ್ತೇನೆ. ನಾನು ಜೀವನದ ಘನತೆಯನ್ನು ನಂಬುತ್ತೇನೆ ಮತ್ತು ಪ್ರತಿಯೊಬ್ಬ ವ್ಯಕ್ತಿಯನ್ನೂ ಗೌರವಿಸುತ್ತೇನೆ,' ಎಂದು ಬರೆದುಕೊಂಡಿದ್ದಾರೆ.

ನೋವಾಗಿದ್ದರೆ ವಿಷಾದಿಸುತ್ತೇನೆ

ನೋವಾಗಿದ್ದರೆ ವಿಷಾದಿಸುತ್ತೇನೆ

ಯುವಿಯ ಮುಂದುವರೆದ ಟ್ವೀಟ್‌ನಲ್ಲಿ, 'ಸ್ನೇಹಿತರ ಜೊತೆ ಸಂವಾದ ನಡೆಸುವಾಗ ಅನಗತ್ಯವಾಗಿ ಅಪಾರ್ಥವಾಗಿದೆ ಎಂದು ನಾನು ಅರ್ಥ ಮಾಡಿಕೊಳ್ಳುತ್ತೇನೆ. ಏನೇ ಇರಲಿ, ಜವಾಬ್ದಾರಿಯುತ ಭಾರತೀಯನಾಗಿ ನಾನು ಹೇಳಬಯಸುವುದೇನಂದರೆ, ನಾನು ಉದ್ದೇಶಪೂರ್ವಕವಲ್ಲದೆ ಮಾತನಾಡುವಾಗ ಯಾರದೇ ಭಾವನೆಗಳಿಗೆ ನೋವುಂಟು ಮಾಡಿದ್ದರೆ, ಅದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತಿದ್ದೇನೆ' ಎಂದು ಬರೆದುಕೊಳ್ಳಲಾಗಿದೆ.

ಜಾತಿ ನಿಂದನೆಯ ದೂರು ದಾಖಲು

ಜಾತಿ ನಿಂದನೆಯ ದೂರು ದಾಖಲು

ಇನ್‌ಸ್ಟಾಗ್ರಾಮ್ ಲೈವ್ ಸಂವಾದಲ್ಲಿ ರೋಹಿತ್ ಶರ್ಮ, ಯುವರಾಜ್ ಸಿಂಗ್ ಜೊತೆಗೆ ಯುಜುವೇಂದ್ರ ಚಾಹಲ್, ಕುಲದೀಪ್ ಯಾದವ್ ಕೂಡಾ ಇದ್ದರು. ಆದರೆ ಯುವರಾಜ್ ಬಳಸಿದ್ದ 'ಭಂಗಿ' ಪದ ಉತ್ತರ ಭಾರತದ ಕಡೆ ಬಳಸುವ ಜಾತಿ ಸೂಚಕ ಪದವೆನ್ನಲಾಗುತ್ತಿದೆ. ಹೀಗಾಗಿ ಯುವಿ ಉದ್ದೇಶಪೂರ್ವಕವಾಗಿ ಜಾತಿ ನಿಂದಿಸಿದ್ದಾರೆ ಎಂದು, ರಜತ್ ಕಾಲ್ಸನ್ ಎಂಬ ವಕೀಲರು ಹಿಸಾರ್‌ನ ಹಂಸಿ ಪೊಲೀಸ್ ಠಾಣೆಯಲ್ಲಿ ಯುವಿ ವಿರುದ್ಧ ದೂರು ದಾಖಲಿಸಿದ್ದರು.

Story first published: Friday, June 5, 2020, 17:28 [IST]
Other articles published on Jun 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X