ಕೊರೊನಾ ವೈರಸ್‌ಗೆ ಪಾಕಿಸ್ತಾನದಲ್ಲಿ ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗ ಬಲಿ

ಪಾಕಿಸ್ತಾನದ ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗ ಜಾಫರ್ ಸರ್ಫರಾಜ್ ಎಂಬವರು ಕೊರೊನಾ ವೈಸರ್‌ಗೆ ಬಲಿಯಾಗಿದ್ದಾರೆ. ಕೊರೊನಾ ವೈರಸ್‌ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರನ್ನು ನಿಗಾದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ 50 ವರ್ಷದ ಜಾಫರ್ ಮೃತಪಟ್ಟಿದ್ದಾರೆ.

ಪೇಶಾವರದ ಖಾಸಗಿ ಆಸ್ಪತ್ರೆಯಲ್ಲಿ ಜಾಫರ್ ಸರ್ಫರಾಜ್ ಅವರಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ತೀವ್ರ ನಿಗಾ ಘಟಕದಲ್ಲಿ ಕಳೆದ ಮೂರು ದಿನಗಳಿಂದ ವೆಂಟಿಲೇಟರ್‌ನಲ್ಲಿದ್ದರು. ಜಾಫರ್ ಸರ್ಫರಾಜ್ ಕೊರೊನಾ ವೈರಸ್‌ನಿಂದ ಸಾವನ್ನಪ್ಪಿದ ಪಾಕಿಸ್ತಾನದ ಮೊದಲ ವೃತ್ತಿಪರ ಕ್ರಿಕೆಟಿಗನಾಗಿದ್ದಾರೆ.

'ಪಿಕಾಕ್ ಆಫ್‌ ದ ಫೇರ್‌ವೇಸ್' ಖ್ಯಾತಿಯ ಡೌಗ್ ಸ್ಯಾಂಡರ್ಸ್ ನಿಧನ'ಪಿಕಾಕ್ ಆಫ್‌ ದ ಫೇರ್‌ವೇಸ್' ಖ್ಯಾತಿಯ ಡೌಗ್ ಸ್ಯಾಂಡರ್ಸ್ ನಿಧನ

1969 ರಲ್ಲಿ ಜನಿಸಿದ ಸರ್ಫರಾಜ್ ಎಡಗೈ ಬ್ಯಾಟ್ಸ್‌ಮನ್ ಮತ್ತು ನಿಧಾನಗತಿಯ ಎಡಗೈ ಸಾಂಪ್ರದಾಯಿಕ ಬೌಲರ್. ಅವರು 1988 ರಿಂದ 1994 ರವರೆಗೆ ಪ್ರಥಮ ದರ್ಜೆ ಮತ್ತು 1990 ರಿಂದ 1992 ರವರೆಗೆ ಕ್ಲಾಸ್‌ಎ ಕ್ರಿಕೆಟ್ ಆಡಿದ್ದರು. ಸರ್ಫರಾಜ್ 1988 ರಲ್ಲಿ ಪಾದಾರ್ಪಣೆ ಮಾಡಿದರು ಮತ್ತು ಪೇಶಾವರ ಪರ 15 ಪ್ರಥಮ ದರ್ಜೆ ಪಂದ್ಯಗಳಿಂದ 616 ರನ್ ಗಳಿಸಿದರು.

1994 ರಲ್ಲಿ ನಿವೃತ್ತಿಯಾಗುವ ಮೊದಲು ಆರು ಏಕದಿನ ಪಂದ್ಯಗಳಲ್ಲಿ 96 ರನ್ ಗಳಿಸುವಲ್ಲಿ ಯಶಸ್ವಿಯಾದರು. ನಂತರ ಅವರು 2000 ರ ದಶಕದ ಮಧ್ಯಭಾಗದಲ್ಲಿ ಹಿರಿಯ ಮತ್ತು 19 ವರ್ಷದೊಳಗಿನ ಪೇಶಾವರ್ ತಂಡಗಳಿಗೆ ತರಬೇತುದಾರರಾಗಿದ್ದರು. ಜಾಫರ್ ಪಾಕಿಸ್ತಾನದ ಅಂತರರಾಷ್ಟ್ರೀಯ ಆಟಗಾರ ಅಖ್ತರ್ ಸರ್ಫರಾಜ್ ಅವರ ಸಹೋದರ. ಕರುಳಿನ ಕ್ಯಾನ್ಸರ್‌ನಿಂದ ಅಖ್ತರ್ 10 ತಿಂಗಳ ಹಿಂದೆಯಷ್ಟೇ ನಿಧನರಾದರು.

ಪಾಕಿಸ್ತಾನದಲ್ಲಿ ಈವರೆಗೆ 5700ಕ್ಕೂ ಅಧಿಕ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ ಪೇಶಾವರ ನಗರದಲ್ಲೇ 744 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು ಸ್ಥಳೀಯರನ್ನು ಆತಂಕಕ್ಕೆ ದೂಡಿದೆ.

For Quick Alerts
ALLOW NOTIFICATIONS
For Daily Alerts
Story first published: Tuesday, April 14, 2020, 13:52 [IST]
Other articles published on Apr 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X