ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿಗೆ 'ಬ್ಯಾಟಿಂಗ್‌ನ ಬಾಸ್' ಎಂದು ಕರೆದ ಪಾಕಿಸ್ತಾನ ಮಾಜಿ ಕ್ರಿಕೆಟಿಗ

Former Pakistan wicket keeper-batter Kamran Akmal Call Virat Kohli As Boss of Batting

ಜನವರಿ 15ರಂದು ತಿರುವನಂತಪುರಂನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ ಏಕದಿನ ಕ್ರಿಕೆಟ್‌ನ 46ನೇ ಶತಕ ಸಿಡಿಸಿ ಮಿಂಚಿದರು. ವಿರಾಟ್ ಕೊಹ್ಲಿ ಆಟಕ್ಕೆ ಜಗತ್ತಿನ ಮೂಲೆ ಮೂಲೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪಾಕಿಸ್ತಾನದ ಮಾಜಿ ವಿಕೆಟ್ ಕೀಪರ್-ಬ್ಯಾಟರ್ ಕಮ್ರಾನ್ ಅಕ್ಮಲ್ ಕೂಡ ವಿರಾಟ್ ಕೊಹ್ಲಿ ಬ್ಯಾಟಿಂಗ್‌ಗೆ ಮನಸೋತಿದ್ದಾರೆ. ವಿರಾಟ್ ಕೊಹ್ಲಿಯನ್ನು ಬ್ಯಾಟಿಂಗ್‌ನ ಬಾಸ್ ಎಂದು ಕರೆದಿರುವ ಕಮ್ರಾನ್ ಅಕ್ಮಲ್ ಕೊಹ್ಲಿ ಶೀಘ್ರದಲ್ಲೇ 50 ಏಕದಿನ ಶತಕ ಗಳಿಸುವ ಮೂಲಕ ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

ILT20: ಇಂಟರ್ನ್ಯಾಷನಲ್ ಲೀಗ್‌ ಟಿ20ಯಲ್ಲಿ ರಾಬಿನ್ ಉತ್ತಪ್ಪ ಭರ್ಜರಿ ಬ್ಯಾಟಿಂಗ್ILT20: ಇಂಟರ್ನ್ಯಾಷನಲ್ ಲೀಗ್‌ ಟಿ20ಯಲ್ಲಿ ರಾಬಿನ್ ಉತ್ತಪ್ಪ ಭರ್ಜರಿ ಬ್ಯಾಟಿಂಗ್

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ್ದ ಕೊಹ್ಲಿ, ಮೂರೇ ದಿನಗಳ ಅಂತರದಲ್ಲಿ ಎರಡನೇ ಶತಕ ಸಿಡಿಸಿದರು. ಸರಣಿಯ ಮೂರನೇ ಪಂದ್ಯದಲ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ಕೊಹ್ಲಿ, ಗಿಲ್ ಶತಕದ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 390 ರನ್ ಗಳಿಸಿತು. ಶ್ರೀಲಂಕಾ 73 ರನ್‌ಗಳಿಗೆ ಆಲೌಟ್ ಆಗುವ ಮೂಲಕ 317 ರನ್‌ಗಳ ಬೃಹತ್ ಸೋಲು ಕಂಡಿತು.

Former Pakistan wicket keeper-batter Kamran Akmal Call Virat Kohli As Boss of Batting

ಕೊಹ್ಲಿ 'ಬಾಸ್ ಆಫ್ ಬ್ಯಾಟಿಂಗ್'

ವಿರಾಟ್ ಕೊಹ್ಲಿ 150.91 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದರು. ಅವರು ಟಿ20 ಕ್ರಿಕೆಟ್ ಆಡಲೂ ಫಿಟ್ ಆಗಿದ್ದೇನೆ ಎಂದು ತೋರಿಸಿದ್ದಾರೆ. ಆದರೆ, ಏಕದಿನ ವಿಶ್ವಕಪ್ ಇರುವುದರಿಂದ 50 ಓವರ್ ಗಳ ಪಂದ್ಯದ ಕಡೆ ಮಾತ್ರ ಹೆಚ್ಚಿನ ಗಮನ ನೀಡಲಿದ್ದಾರೆ ಎಂದು ಕಮ್ರಾನ್ ಅಕ್ಮಲ್ ಹೇಳಿದರು.

"ವಿರಾಟ್ ಕೊಹ್ಲಿ ಶತಕ ಗಳಿಸಿದ ರೀತಿಯನ್ನು ನೋಡಿ ನಂಬಲಾಗಲಿಲ್ಲ. ಎಲ್ಲರೂ ಅವರನ್ನು ಕಿಂಗ್ ಎಂದು ಕರೆಯುತ್ತಾರೆ, ಆದರೆ ನಾನು ಅವರನ್ನು 'ಬಾಸ್ ಆಫ್ ಬ್ಯಾಟಿಂಗ್‌' ಎಂದೂ ಕರೆಯುತ್ತೇನೆ. 150 ಸ್ಟ್ರೈಕ್‌ರೇಟ್‌ನಲ್ಲಿ 166 ರನ್ ಗಳಿಸಿದ ರೀತಿ ಅವರು ಎಂತಹ ಟಿ20 ಬ್ಯಾಟರ್ ಎನ್ನುವುದನ್ನು ತೋರಿಸುತ್ತದೆ. ಟಿ20 ಕ್ರಿಕೆಟ್‌ನಿಂದ ದೂರವುಳಿಯುವ ಬಗ್ಗೆ ಅವರು ಮಾತನಾಡಿಲ್ಲ, ಅವರ ಗಮನ ಸದ್ಯ ಏಕದಿನ ವಿಶ್ವಕಪ್‌ ಕಡೆಗೆ ಇದೆ ಅದಕ್ಕಾಗಿ ಸಿದ್ಧರಾಗುತ್ತಿದ್ದಾರೆ. ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಇನ್ನೂ 6 ಏಕದಿನ ಪಂದ್ಯಗಳನ್ನು ಆಡಲಿದ್ದು, ಸಚಿನ್ ದಾಖಲೆಯನ್ನು ಮುರಿಯಬಹುದು" ಎಂದು ಹೇಳಿದ್ದಾರೆ.

Former Pakistan wicket keeper-batter Kamran Akmal Call Virat Kohli As Boss of Batting

ಹಿಂದಿನ ಪಂದ್ಯವನ್ನು ಕೊಹ್ಲಿ ಬೇಗನೆ ಮರೆಯುತ್ತಾರೆ, ಅವರು ಮುಂದಿನ ಪಂದ್ಯಗಳ ಬಗ್ಗೆ ಮಾತ್ರ ಗಮನ ಹರಿಸುತ್ತಾರೆ ಎಂದು ಹೇಳಿದರು. ಕೊಹ್ಲಿ ಬ್ಯಾಟಿಂಗ್ ಯುವ ಕ್ರಿಕೆಟಿಗರಿಗೆ ಅಭ್ಯಾಸ ಮಾಡುವ ಪಠ್ಯಪುಸ್ತಕವಿದ್ದಂತೆ ಎಂದು ಅಕ್ಮಲ್ ಹೇಳಿದ್ದಾರೆ.

Story first published: Monday, January 16, 2023, 23:30 [IST]
Other articles published on Jan 16, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X