ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಿಸ್ವಾರ್ಥದ ವಿಷಯದಲ್ಲಿ ಆತನ ಮುಂದೆ ಯಾರೂ ಇಲ್ಲ; ಕೊಹ್ಲಿಯಿಂದ ಕಲಿಯಲು ಬಾಬರ್‌ಗೆ ಸಲಹೆ

Former Spinner Danish Kaneria Advises Babar Azam To Learn From Virat Kohli

ಪಾಕಿಸ್ತಾನ ತಂಡದ ಬಾಬರ್ ಅಜಂ ತಮ್ಮ ಹಠಮಾರಿ ಧೋರಣೆಯನ್ನು ನಿಲ್ಲಿಸಬೇಕು ಮತ್ತು ತಮ್ಮ ಆರಂಭಿಕ ಕ್ರಮಾಂಕವನ್ನು ಬೇರೆಯವರಿಗೆ ಬಿಟ್ಟುಕೊಡುವ ಮೂಲಕ ಪಾಕಿಸ್ತಾನ ಕ್ರಿಕೆಟ್‌ನ ಬೆಳವಣಿಗೆಯ ಬಗ್ಗೆ ಯೋಚಿಸಬೇಕು ಎಂದು ಮಾಜಿ ಸ್ಪಿನ್ನರ್ ಡ್ಯಾನಿಶ್ ಕನೇರಿಯಾ ತಿಳಿಸಿದ್ದಾರೆ.

28 ವರ್ಷದ ಬಾಬರ್ ಅಜಂ 2022ರ ಟಿ20 ವಿಶ್ವಕಪ್‌ನಲ್ಲಿ ಅತ್ಯಂತ ಕಳಪೆ ಫಾರ್ಮ್ ಅನ್ನು ಹೊಂದಿದ್ದರು. ಇದೇ ವೇಳೆ ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಐದು ವಿಕೆಟ್‌ಗಳ ಸೋಲಿನ ನಂತರ ಪಾಕಿಸ್ತಾನ ತಂಡ ರನ್ನರ್-ಅಪ್ ಆಗಿ ಪಂದ್ಯಾವಳಿಯನ್ನು ಮುಗಿಸಿದರು.

IPL 2023: ಪಂಜಾಬ್ ಕಿಂಗ್ಸ್ ತಂಡದ ಬ್ಯಾಟಿಂಗ್ ಕೋಚ್ ಆಗಿ ವಾಸಿಂ ಜಾಫರ್ ನೇಮಕIPL 2023: ಪಂಜಾಬ್ ಕಿಂಗ್ಸ್ ತಂಡದ ಬ್ಯಾಟಿಂಗ್ ಕೋಚ್ ಆಗಿ ವಾಸಿಂ ಜಾಫರ್ ನೇಮಕ

ಮೊದಲ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಗಳಿಸಿದ ಏಕೈಕ ಅರ್ಧಶತಕವನ್ನು ಹೊರತುಪಡಿಸಿ, ಪಾಕ್ ತಂಡದ ಆರಂಭಿಕ ಬ್ಯಾಟರ್ ಬಾಬರ್ ಅಜಂ ಪಂದ್ಯ ವಿಜೇತ ಪ್ರದರ್ಶನ ನೀಡುವಲ್ಲಿ ಸಂಪೂರ್ಣ ವಿಫಲರಾದರು.

"ಪಾಕಿಸ್ತಾನ ತಂಡದ ನಾಯಕ ಬಾಬರ್ ಆಜಂ ತಮ್ಮ ಆರಂಭಿಕ ಕ್ರಮಾಂಕವನ್ನು ಬಿಟ್ಟುಕೊಡದೆ ಹಠಮಾರಿ ಧೋರಣೆ ಅನುಸರಿಸುತ್ತಿದ್ದಾರೆ. ಅವರು ಕರಾಚಿ ಕಿಂಗ್ಸ್‌ನಲ್ಲಿದ್ದಾಗಲೂ ಇದೇ ರೀತಿಯಾಗಿತ್ತು. ಅವರು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಸಾಧ್ಯವಿಲ್ಲದ ಕಾರಣ, ಅವರ ಮೊಂಡುತನವು ಪಾಕಿಸ್ತಾನ ಕ್ರಿಕೆಟ್‌ಗೆ ಅಪಾರ ಹಾನಿಯನ್ನುಂಟು ಮಾಡುತ್ತಿದೆ," ಎಂದು ಡ್ಯಾನಿಶ್ ಕನೇರಿಯಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಉಲ್ಲೇಖಿಸಿದ್ದಾರೆ.

ಇದೇ ವೇಳೆ ಡ್ಯಾನಿಶ್ ಕನೇರಿಯಾ ಅವರು ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ನಿಸ್ವಾರ್ಥ ಆಟಗಾರ ಎಂದು ಶ್ಲಾಘಿಸಿದರು. ಅವರ ಬ್ಯಾಟಿಂಗ್ ಸಾಮರ್ಥ್ಯದ ಬಗೆಗಿನ ಪ್ರಶ್ನೆಗಳ ಹೊರತಾಗಿಯೂ ವಿರಾಟ್ ಕೊಹ್ಲಿ ಟವೆಲ್ ಎಸೆಯಲಿಲ್ಲ ಎಂದು ಪಾಕ್ ಅನುಭವಿ ಸ್ಪಿನ್ನರ್ ಹೇಳಿದರು.

Former Spinner Danish Kaneria Advises Babar Azam To Learn From Virat Kohli

"ನಿಸ್ವಾರ್ಥದ ವಿಷಯದಲ್ಲಿ ವಿರಾಟ್ ಕೊಹ್ಲಿಯನ್ನು ಮೀರಿಸುವವರು ಯಾರೂ ಇಲ್ಲ. ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡವು ವಿಶ್ವಕಪ್ ಅನ್ನು ಕಳೆದುಕೊಂಡಿತು ಮತ್ತು ನಂತರ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಯಿತು. ತಂಡದಲ್ಲಿ ಕೊಹ್ಲಿಯ ಸ್ಥಾನದ ಬಗ್ಗೆ ಹಲವರು ಪ್ರಶ್ನೆಗಳನ್ನು ಎತ್ತಿದ್ದರು. ಆದರೂ, ಅವರು ಹೊಸ ನಾಯಕನಿಗೆ ಸಂಪೂರ್ಣ ಬೆಂಬಲ ನೀಡಿದರು," ಎಂದು ಡ್ಯಾನಿಶ್ ಕನೇರಿಯಾ ಹೇಳಿದರು.

ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ 2022ರ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿ ಪಂದ್ಯಾವಳಿ ಮುಗಿಸಿದರು. ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಲ್ಲದೆ, 34 ವರ್ಷದ ವಿರಾಟ್ ಕೊಹ್ಲಿ ಟಿ20 ಪಂದ್ಯಗಳಲ್ಲಿ 4000 ರನ್ ಗಳಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದ್ದಾರೆ.

ಟಿ20 ವಿಶ್ವಕಪ್ 2022ರಲ್ಲಿ ಆಡಿದ ಆರು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ 98.66ರ ಸರಾಸರಿ ಮತ್ತು 136.40 ಸ್ಟ್ರೈಕ್ ರೇಟ್‌ನಲ್ಲಿ 296 ರನ್ ಗಳಿಸಿದರು. ಟೂರ್ನಿಯಲ್ಲಿ ನಾಲ್ಕು ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಎಂಸಿಜಿಯಲ್ಲಿ ನಡೆದ ಮೊದಲ ಲೀಗ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಔಟಾಗದೆ 82 ರನ್ ಗಳಿಸಿದ್ದು, ಅವರ ಗರಿಷ್ಠ ಸ್ಕೋರ್ ಆಗಿದೆ.

Story first published: Thursday, November 17, 2022, 4:45 [IST]
Other articles published on Nov 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X